ಸ್ವಚ್ಛಮೇವ ಜಯತೆ ಎಂಬ ಘೋಷವಾಕ್ಯದಡಿ ಘನ ತ್ಯಾಜ್ಯ ವಿಲೇವಾರಿ

Wednesday, May 1st, 2019
swacha-meva

ಮಂಗಳೂರು: ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಸ್ವಚ್ಛಮೇವ ಜಯತೆ ಎಂಬ ಘೋಷವಾಕ್ಯದಡಿ ಘನ ತ್ಯಾಜ್ಯ ವಿಲೇವಾರಿ ಕಾರ್ಯಕ್ರಮದ ಕುರಿತು ನಿರಂತರ ಅರಿವು ಮೂಡಿಸುವ ಹಿನ್ನಲೆಯಲ್ಲಿ ಆಯ-ವ್ಯಯದಲ್ಲಿ ಘೋಷಣೆಯಾದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜೂನ್ 5 ರಿಂದ 30 ರವರೆಗೆ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇ, ನಿರ್ವಹಣೆ ಕುರಿತು ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಆರ್ ಸೆಲ್ವಮಣಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ […]

ಎಸ್‍ಎಸ್‍ಎಲ್‍ಸಿ: ಆಳ್ವಾಸ್ ಶಾಲೆಗಳ ಸಾಧನೆ

Wednesday, May 1st, 2019
Alvas Sslc

ಮೂಡುಬಿದಿರೆ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯು ಶೇ.100 ಹಾಗೂ ಆಂಗ್ಲ ಮಾಧ್ಯಮ ಶಾಲೆ ಶೇ.98.43 ಫಲಿತಾಂಶ ದಾಖಲಿಸಿದೆ. ಆಳ್ವಾಸ್‍ನ ಮೂವರು ವಿದ್ಯಾರ್ಥಿಗಳು 623 ಅಂಕಗಳನ್ನು ಪಡೆದ ರಾಜ್ಯದಲ್ಲಿ ತೃತೀಯ ಸ್ಥಾನ ಹಾಗೂ ದ.ಕ ಜಿಲ್ಲೆಯ ಟಾಪ್ 10ರಲ್ಲಿ ನಾಲ್ವರು ಸ್ಥಾನವನ್ನು ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆಳ್ವಾಸ್ […]

ರಿಕ್ಷಾ ಢಿಕ್ಕಿ ಹೊಡೆದು ಕೆ.ಎಂ.ಸಿ ಉದ್ಯೋಗಿ ಮೃತ

Tuesday, April 30th, 2019
Margarate

ಉಡುಪಿ :  ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಕಸ್ತೂರ್ಬಾ ಆಸ್ಪತ್ರೆಯ ಉದ್ಯೋಗಿ ಯೊಬ್ಬರು ಮೃತಪಟ್ಟ ಘಟನೆ ಮಣಿಪಾಲದಲ್ಲಿ ಸೋಮವಾರ ನಡೆದಿದೆ. ಮೃತರನ್ನು ಮಣಿಪಾಲದ ಸರಳೆಬೆಟ್ಟು ನಿವಾಸಿ ವಿನಯಾ ಮಾರ್ಗರೇಟ್ ಮಾಬೆನ್ (54) ಎಂದು ಗುರುತಿಸಲಾಗಿದೆ. ಭಾನುವಾರದಂದು ಈಶ್ವರ ನಗರದ ಉಮಾ ಮಹೇಶ್ವರಿ ದೇವಸ್ಥಾನದ ತಿರುವು ಬಳಿ ವಿನಯಾ ಮಾರ್ಗರೇಟ್ ನಡೆದುಕೊಂಡು ಹೋಗುತ್ತಿದ್ದಾಗ ರಿಕ್ಷಾ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾರೆ. 1988ರಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸ್ಟಾಫ್‌ […]

ಆಳ್ವಾಸ್ ತುಳು ಸಂಘದಿಂದ ವಿಶೇಷ ಉಪನ್ಯಾಸ

Monday, April 29th, 2019
Alvas-TULU-Sangha

ಮೂಡುಬಿದಿರೆ: ತುಳು ಸಂಸ್ಕøತಿ, ಭಾಷೆ, ಆಚಾರ-ವಿಚಾರ, ಊಟೋಪಾಚಾರ, ಉಡುಗೆ-ತೊಡುಗೆ, ಆಟೋಟಗಳು ಇದರಲ್ಲಿ ಭಾಷೆ ಅಡಗಿದೆ ಅದ್ದರಿಂದ ಈ ಭಾಷೆಯ ಸಂಸ್ಕøತಿಯನ್ನು ಉಳಿಸಿ ಮುಂದೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಗಣೇಶ್ ಅಮೀನ್ ಸಂಕಮಾರು ಹೇಳಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ತುಳು ಸಂಘದ ವತಿಯಿಂದ ಎಂ.ಬಿ.ಎ ಸೆಮಿನಾರ್ ಹಾಲ್‍ನಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕರಾವಳಿ ಭಾಗದ ತಿಂಡಿ-ತಿನಸುಗಳು ವಿದೇಶದಲ್ಲಿ ಪ್ರಾಮುಖ್ಯತೆಯನ್ನು ಪಡೆಯಲು […]

ವಿಶ್ವಕರ್ಮ ಬಂಧುಗಳು ಸಂಘಟನೆಯ ವತಿಯಿಂದ ಉಚಿತ ಸಾಮೂಹಿಕ ಉಪನಯನ

Monday, April 29th, 2019
upanayana

ಮಂಗಳೂರು  : ನಗರದರಥಬೀದಿ, ಭವಂತಿಸ್ಟ್ರೀಟ್‌ನ ವಿಶ್ವಕರ್ಮ ಬಂಧುಗಳು ಸಂಘಟನೆಯ ದಶಮಾನೋತ್ಸವ ಆಚರಣೆಯ ಸಲುವಾಗಿ ವಿಶ್ವಕರ್ಮ ಸಮಾಜದ 19 ಮಂದಿ ವಟುಗಳಿಗೆ ’ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ಜರಗಿದ ಸಮಾರಂಭದಲ್ಲಿ ಸಾನಿಧ್ಯವಹಿಸಿದ್ದ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧಿಪತಿ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಆಶೀರ್ವಚನವಿತ್ತರು. ನಿತ್ಯ ಸಂಧ್ಯಾವಂದನೆ ಹಾಗೂ ಇತರ ಅನುಷ್ಠಾನಗಳ ಬಗೆಗಿನ ಮಹತ್ವವನ್ನು ಸ್ವಾಮೀಜಿಯವರು ತಿಳಿಸಿದರಲ್ಲದೆ, ಗಾಯತ್ರಿ ಮಂತ್ರದಕುರಿತಾಗಿಯೂ ವಿವರಿಸಿ ಸಂಧ್ಯಾವಂದನೆ ಪುಸ್ತಕ ಹಾಗೂ […]

ತುರವೇ ಸೇರಿದ ವಿವಿಧ ಸಂಘಟನೆಯ ಪ್ರಮುಖರು

Monday, April 29th, 2019
trv

ಮಂಗಳೂರು  : ತುಳುನಾಡ ರಕ್ಷಣಾ ವೇದಿಕೆ ಕೇಂದ್ರ ಕಚೇರಿಯಲ್ಲಿ ವಿವಿಧ ಸಂಘಟನೆಯ ಪ್ರಮುಖರು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರಿಂದ ತುರವೇ ಸದಸ್ಯತ್ವ ಪಡೆದು  ರವಿವಾರ 28-04-2019 ಸಂಜೆ 5. ಘಂಟಗೆ ಸೇರ್ಪಡೆಗೊಂಡರು. ಸಭೆಯಲ್ಲಿ ಉದ್ಯಮಿ ಸುಕೇಶ್ ಜಿ.ಕೆ. , ತುರವೇ ಮುಖಂಡರು ಗಳಾದ ಇಬ್ರಾಹಿಂ ಜಪ್ಪು, ಆನಂದ್ ಅಮೀನ್ ಅಡ್ಯಾರ್, ರಮೇಶ್ ಪೂಜಾರಿ ಶೀರೂರ್, ಸುಪ್ರೀತ್ ಪೂಜಾರಿ, ರಂಜಿತ್ ಕುಡ್ಲ್, ಸುಲಾತ ಹರೀಶ್, ರಾದೀಕಾ ಗಟ್ಟಿ, ಜ್ಯೋತಿ ಎಡಪದವು, ಶಿವಪ್ರಶಾದ್, […]

ನಿರ್ಮಯ್ ವೈ.ಎನ್ ಗೆ ಚಿನ್ನದ ಪದಕ

Monday, April 29th, 2019
Nirmay

ಮಂಗಳೂರು  : ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ 2019 ರಲ್ಲಿ ಮಂಗಳೂರಿನ ಸ್ಕೇಟಿಂಗ್ ಪಟು ನಿರ್ಮಯ್ ವೈ.ಎನ್ ಒಂದು ಚಿನ್ನದ ಪದಕ ಪಡೆದಿದ್ದಾರೆ. ಇವರು 9 ರಿಂದ 11 ವರ್ಷ ವಿಭಾಗದ 500 ಮೀ ರೋಡ್ ರೇಸ್ ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ನಿರ್ಮಯ್ ವೈ.ಎನ್ (9 ವರ್ಷ) ಇವರು ನಗರದ ಉರ್ವ ಹೊಯ್ಗೆಬೈಲು ನಿವಾಸಿಯಾದ ಯದುನಂದನ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರನಾಗಿದ್ದು, ನಗರದ ಡೊಂಗರಿಕೇರಿಯ […]

ಕಳವಾದ ಸ್ವತ್ತುಗಳನ್ನು ಮಾಲೀಕರುಗಳಿಗೆ ಮರಳಿಸಿದ ನಗರ ಪೊಲೀಸರು

Friday, April 26th, 2019
police property

ಮಂಗಳೂರು : 2018-19 ನೇ ಸಾಲಿನಲ್ಲಿ ವಿವಿಧ ಪ್ರಕರಣಗಳಲ್ಲಿ ಪತ್ತೆಯಾದ 3 ಕೋಟಿ 72 ಲಕ್ಷ ರೂಪಾಯಿ ಮೌಲ್ಯದ ಸೊತ್ತು ಮಾಲೀಕರುಗಳಿಗೆ ಪ್ರಾಪರ್ಟಿ ರಿಟರ್ನ್‌ ಪರೇಡ್‌ನಲ್ಲಿ ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಏ.26 ರ ನಗರದ ನೆಹರು ಮೈದಾನದಲ್ಲಿ ಶುಕ್ರವಾರ ಬೆಳಗ್ಗೆ ಹಿಂತಿರುಗಿಸಿದರು. 2018 ನೇ ಸಾಲಿನಲ್ಲಿ ಒಟ್ಟು, 4 ಕೋಟಿಯ 30 ಲಕ್ಷದ ಮೌಲ್ಯದ ಸೊತ್ತು ಕಳವಾಗಿದ್ದು, ಅದರಲ್ಲಿ ಒಟ್ಟು 3 ಕೋಟಿ 40 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಹಾಗೂ […]

ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ಡಿಕ್ಕಿ ಇಬ್ಬರು ಮೃತ್ಯು

Friday, April 26th, 2019
accident

ಬಂಟ್ವಾಳ  : ಪಾಣೆಮಂಗಳೂರಿನ ಹಳೆಟೋಲ್ ಗೇಟ್ ಸಮೀಪ ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿ ಮತ್ತಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ  ಏ.26 ರ ಶುಕ್ರವಾರ 3 ಗಂಟೆ ವೇಳೆಗೆ ನಡೆದಿದೆ. ಪುತ್ತೂರಿನಿಂದ ಕಡೆಯಿಂದ ವೇಗವಾಗಿ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಹಾಗೂ ಬಂಟ್ವಾಳ ಕಡೆಯಿಂದ ಹೋಗುತ್ತಿದ್ದ ಕಾರಿನ ನಡುವೆ ಮುಖಮುಖಿ ಢಿಕ್ಕಿ ಸಂಭವಿಸಿದ್ದು, ಕಾರಿನಲ್ಲಿದ್ದ ಪ್ರಯಾಣಿಕರಾದ ಸರೋಜಿನಿ ಮತ್ತು ರುಕ್ಮಿಣಿ ಎಂಬಿಬ್ಬರು ಸಾವನ್ನಪ್ಪಿದ್ದಾರೆ. ಕಾರು ಚಾಲಕ ಹಾಗೂ ಅನುಷಾ ಎಂಬವರು […]

ಡಾ. ರಾಜ್‍ಕುಮಾರ್ 91ನೇ ಜನ್ಮದಿನಾಚರಣೆ

Wednesday, April 24th, 2019
rajkumar-jayanthi

ಮಂಗಳೂರು : ಕನ್ನಡದ ಮೇರುನಟ ಡಾ ರಾಜ್ ಕುಮಾರ್ ತಮ್ಮ ಬದುಕಿನುದ್ದಕ್ಕೂ ಶ್ರದ್ಧೆ, ಸರಳತೆ ಮತ್ತು ಮಾನವೀಯತೆಯಿಂದ ಕನ್ನಡಿಗರ ಮನಗೆದ್ದವರು; ನಟನೆಯ ಜೊತೆಗೆ ಸಮಾಸೇವೆಯಲ್ಲಿ ತನ್ನನ್ನು ತಾನೂ ತೊಡಗಿಸಿಕೊಂಡವರೆಂಬುದನ್ನು ಸ್ಮರಿಸಿದ ದಕ್ಷಿಣ ಕನ್ನಡ ಜಿಲ್ಲಾ ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಮೈಸೂರಿನಲ್ಲಿ ಡಾ ರಾಜ್ ಅವರು ಆರಂಭಿಸಿದ ಅಬಲಾಶ್ರಮ ಇಂದಿಗೂ ಸೇವಾಮುಖಿಯಾಗಿರುವುದನ್ನು ವಿವರಿಸಿದರು. ಕಲಾ ಸೇವೆಯ ಜೊತೆಗೆ ಕನ್ನಡಕ್ಕಾಗಿ ಇವರು ನೀಡಿದ ಕೊಡುಗೆ ಸದಾ ಸ್ಮರಣೀಯ ಎಂದು ಹೇಳಿದರು. ಇವರು ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ […]