ಅತ್ಯಾಚಾರ ಪ್ರಕರಣ; 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Thursday, March 22nd, 2018
uppinangadi

ಉಪ್ಪಿನಂಗಡಿ: ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ. 34ನೆ ನೆಕ್ಕಿಲಾಡಿ ಗ್ರಾಮದ ಬೀತಲಪ್ಪು ನಿವಾಸಿ ಹಿತೇಶ್ ಬಂಧಿತ ಆರೋಪಿ. ಈತ ಹಾಗು 34ನೆ ನೆಕ್ಕಿಲಾಡಿ ಗ್ರಾಮದ ಪೆಟ್ರೋಲ್ ಪಂಪ್ ಬಳಿಯ ನಿವಾಸಿ ಗಿರೀಶ್ ಎಂಬಾತ 2004ರಲ್ಲಿ ಬೆಳ್ತಂಗಡಿ ತಾಲೂಕಿನ ಕರಾಯದ ಮನೆಯೊಂದಕ್ಕೆ ನುಗ್ಗಿ ಪತಿ ಮತ್ತು ಮಕ್ಕಳ ಎದುರೇ ಮಹಿಳೆಯನ್ನು ಅತ್ಯಾಚಾರ ನಡೆಸಿದ್ದು, ಬಳಿಕ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದರು. ಈ ಪ್ರಕರಣದ ಬೆನ್ನು ಹತ್ತಿದ್ದ ಉಪ್ಪಿನಂಗಡಿ ಪೊಲೀಸರು ಬೆಂಗಳೂರಿನಲ್ಲಿ ನೆಲೆಸಿದ್ದ ಆರೋಪಿ […]

ಹಳೆ ಮಾರುಕಟ್ಟೆ ಧರಾಶಾಹಿ ಕಾಮಗಾರಿ ಆರಂಭ

Thursday, March 22nd, 2018
surathkal

ಸುರತ್ಕಲ್: ಇಲ್ಲಿ ಹೊಸ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಕಾಮಗಾರಿಗಾಗಿ ಹಳೆ ಮಾರುಕಟ್ಟೆ ಧರಾಶಾಹಿ ಕಾಮಗಾರಿ ಆರಂಭಿಸಲಾಗಿದೆ. ಗುರುವಾರ ಪೊಲೀಸ್ ಬಿಗಿಭದ್ರತೆಯಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ಪಾಲಿಕೆ ಕಂದಾಯ ಡಿ ಸಿ ಗಾಯತ್ರಿ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾಮಾಗಾರಿ ಆರಂಭದ ವೇಳೆ ಸ್ಥಳಕ್ಕಾಗಮಿಸಿದ ಶಾಸಕ ಮೊಯಿದೀನ್ ಬಾವಾ ಬಂದ ಸಂದರ್ಭ ವ್ಯಾಪಾರಿಗಳ ತೀವ್ರ ಆಕ್ರೋಶ ಹೊರ ಹಾಕಿದರು. ಕಾರ್ಪೋರೇಟರ್‌ ಪ್ರತಿಭಾ ಕುಳಾಯಿ ಅವರು ಕಾಮಗಾರಿ ಆರಂಭದ ವೇಳೆ ಹಾಜರಿದ್ದರು.

ಬೇಟೆಗೆ ತೆರಳಿದ್ದ ಯುವಕರಿಬ್ಬರು ನಾಪತ್ತೆ, ಮೂಡಬಿದ್ರೆ ಅರಣ್ಯದಲ್ಲಿ ಶೋಧ

Thursday, March 22nd, 2018
moodbidre

ಮಂಗಳೂರು: ಬೇಟೆಗೆಂದು ತೆರಳಿದ್ದ ಇಬ್ಬರು ಯುವಕರು ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದಿದೆ. ಮೂಡುಬಿದ್ರೆ ನಿವಾಸಿಗಳಾದ ಪ್ರವೀಣ್ ತೌರೋ (33) ಹಾಗೂ ಗ್ರೆಷನ್ (32) ನಾಪತ್ತೆಯಾದವರಾಗಿದ್ದಾರೆ. ಮೂಡುಬಿದ್ರೆಯಿಂದ 10 ಕಿ.ಮೀ ದೂರದ ಕರಿಂಜೆ ಕಾಡಿಗೆ ಸೋಮವಾರ ರಾತ್ರಿ ತೆರಳಿದ್ದರು. ಬೇಟೆಗೆಂದು ತೆರಳಿದ್ದ ಈ ಯುವಕರು ಆ ಬಳಿಕ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಪ್ರವೀಣ್ ಹಾಗೂ ಗ್ರೆಷನ್ ಬೇಟೆಗೆ ತೆರಳುವ ಸಂದರ್ಭದಲ್ಲಿ ಬಳಸಿದ್ದ ಜೀಪ್ ಕರಿಂಜೆ ಕಾಡಂಚಿನಲ್ಲಿ ಪತ್ತೆಯಾಗಿದೆ. ಆದರೆ ಕಾಡಿಗೆ ತೆರಳಿದ್ದ […]

ದಶಕಗಳಿಂದ ಪಾಳುಬಿದ್ದಿದ್ದ ಕಾವೂರು ಕೆರೆ ಪುನಃಶ್ಚೇತನ

Thursday, March 22nd, 2018
kavoor

ಮಂಗಳೂರು: ಪಾಳು ಬಿದ್ದಿರುವ ಕೆರೆಗಳ ಪುನಃಶ್ಚೇತನಕ್ಕೆ ಮುಂದಾಗುವುದು ಬಹಳ ಅಪರೂಪ. ಈ ಕಾರಣದಿಂದಲೇ ಪಾಳು ಬಿದ್ದಿದ್ದ ಎಷ್ಟೋ ಕೆರೆಗಳು ಈಗ ಕಣ್ಮರೆಯಾಗಿವೆ. ಹೀಗಿರುವಾಗ, ಹಲವು ದಶಕಗಳಿಂದ ಪಾಳು ಬಿದ್ದಿರುವ ಕಾವೂರಿನಲ್ಲಿರುವ ಬೃಹತ್‌ ಕರೆಯೊಂದನ್ನು ಪುನಃಶ್ಚೇತನಗೊಳಿಸಿ ಅಂತರ್ಜಲ ಮಟ್ಟ ವೃದ್ಧಿಸಲು ಸ್ಥಳೀಯರೇ ಮುಂದಾಗಿದ್ದಾರೆ. ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಬೃಹದಾಕಾರದ ಕೆರೆಯ ಪುನಃ ಶ್ಚೇತನದ ದೃಷ್ಟಿಯಿಂದ ಯೋಜನೆಯೊಂದು ಸಿದ್ಧಗೊಳ್ಳುತ್ತಿದ್ದು, ಮೊದಲ ಹಂತವಾಗಿ ಮಾ. 25ರಂದು ಬೆಳಗ್ಗೆ 6.30ರಿಂದ ಸುಮಾರು 100 ಮಂದಿ ಸ್ವಯಂ ಸೇವಕರು ಶ್ರಮದಾನ […]

ಮಂಗಳೂರಿನಲ್ಲಿ ಕೋಸ್ಟ್‌ಗಾರ್ಡ್‌ ರಾಷ್ಟ್ರೀಯ ತರಬೇತಿ ಅಕಾಡೆಮಿ

Thursday, March 22nd, 2018
mangaluru

ಮಂಗಳೂರು: ಕೋಸ್ಟ್‌ ಗಾರ್ಡ್‌ (ಕರಾವಳಿ ತಟ ರಕ್ಷಣಾ ಪಡೆ) ರಾಷ್ಟ್ರೀಯ ತರಬೇತಿ ಅಕಾಡೆಮಿ ಕೇರಳದಿಂದ ಮಂಗಳೂರಿಗೆ ಸ್ಥಳಾಂತರಗೊಂಡಿದ್ದು, ಇದಕ್ಕೆ ರಾಜ್ಯ ಸರಕಾರ 200 ಎಕರೆಗೂ ಅಧಿಕ ಜಾಗ ಮೀಸಲಿರಿಸಿದೆ ಹಾಗೂ ಈ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಖಾದರ್‌ ತಿಳಿಸಿದ್ದಾರೆ. ಈ ಅಕಾಡೆಮಿ ಮಂಗಳೂರಿಗೆ ಬರುವುದರಿಂದ ಕೋಸ್ಟ್‌ ಗಾರ್ಡ್‌ಗೆ ಎಲ್ಲ ರೀತಿಯ ಸವಲತ್ತುಗಳೂ ಲಭ್ಯವಾಗ‌ಲಿವೆ. ಸುಸಜ್ಜಿತ ಸೌಲಭ್ಯಗಳಿಂದ ಅತ್ಯುತ್ತಮವಾಗಿ ರಕ್ಷಣಾ ಕಾರ್ಯ ನಡೆಸಲು ಅನುಕೂಲವಾಗಲಿದೆ. ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ತರಬೇತಿ ನೀಡಲು ಮತ್ತು […]

ಮತ ಚಲಾವಣೆ ಪ್ರತಿ ಭಾರತೀಯನ ಮೂಲಭೂತ ಕರ್ತವ್ಯ: ಪ್ರೊ. ಪಿ. ಎಲ್. ಧರ್ಮ

Thursday, March 22nd, 2018
election

ಮಂಗಳೂರು : ಡಾ. ಪಿ. ದಯಾನಂದ ಪೈ – ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಇಲ್ಲಿ ಯುವ ರೆಡ್‍ಕ್ರಾಸ್, ‘ಮತದಾನ ಸಾಕ್ಷರತಾ ಕ್ಲಬ್’ ವತಿಯಿಂದ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಹಳೇ ವಿದ್ಯಾರ್ಥಿ ಸಂಘ, ಅಮ್ಕಾ ಹಾಗೂ ದ.ಕ ಜಿಲ್ಲಾ ಸ್ವೀಪ್ ಸಮಿತಿಯ ಸಂಯುಕ್ತಾಶ್ರಯದಲ್ಲಿ’ಮತದಾನದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ವಿಶೇಷ ಭಾಷಣಕಾರರಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಎಲ್. ಧರ್ಮ ವಿದ್ಯಾರ್ಥಿಗಳನ್ನು ಉದ್ದೇಶಿಸಿ ‘ಹದಿನೆಂಟು ವರ್ಷ […]

ರಾಹುಲ್‌ ಭೇಟಿಯಿಂದ ಪಕ್ಷಕ್ಕೆ ಬಲ… ದ.ಕ. 8 ಸ್ಥಾನಗಳಲ್ಲೂ ಗೆಲ್ಲುತ್ತೇವೆ: ಖಾದರ್‌‌‌‌‌‌

Thursday, March 22nd, 2018
u-t-kader

ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ದಕ್ಷಿಣ ಕನ್ನಡ ಜಿಲ್ಲೆಗೆ ಬೇಟಿ ನೀಡಿದ್ದರಿಂದ ಪಕ್ಷಕ್ಕೆ ಬಲ ಬಂದಿದೆ. ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಜಯಿಸಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಭೇಟಿಯಿಂದ ಕಾರ್ಯಕರ್ತರಲ್ಲಿ ಹುರುಪು ಬಂದಿದೆ. ಮಂಗಳವಾರ ನಡೆದ ಕಾರ್ಯಕ್ರಮ ಯಶಸ್ವಿಯಾಗಿದ್ದು, ಈಗ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್ ಶಾಸಕರಿದ್ದು, ಈ ಸಲದ ಚುನಾವಣೆಯಲ್ಲಿ ಎಂಟೂ ಸ್ಥಾನಗಳಲ್ಲೂ ಕಾಂಗ್ರೆಸ್ […]

ಕೆಐಓಸಿಎಲ್‌ಗೆ ಮರುಜೀವ

Wednesday, March 21st, 2018
kiocl-limited

ಮಂಗಳೂರು: ಹಲವು ವರ್ಷಗಳಿಂದ ಎದುರಿಸುತ್ತಿದ್ದ ಕಬ್ಬಿಣ ಅದಿರು ಸಮಸ್ಯೆಗಳನ್ನು ಮೇಕ್ ಇನ್ ಇಂಡಿಯಾ ಮೂಲಕ ಬಗೆಹರಿಸಿಕೊಂಡ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (ಕೆಐಒಸಿಎಲ್) ಇದೀಗ ಹೊಸ ಅಧ್ಯಾಯದೊಂದಿಗೆ ವಿದೇಶಗಳಿಗೆ ಅದಿರು ಉಂಡೆಗಳನ್ನು ರಫ್ತು ಮಾಡುವತ್ತ ದಾಪುಗಾಲು ಹಾಕುತ್ತಿದೆ. ಉತ್ಕೃಷ್ಟ ಅದಿರು ಲಭ್ಯವಾಗದ ಕಾರಣ ಹಲವು ವರ್ಷಗಳಿಂದ ಅದಿರು ಉಂಡೆಗಳ ಉತ್ಪಾದನೆಗೆ ಭಾರಿ ಹಿನ್ನಡೆಯಾಗಿತ್ತು. ಹೀಗಾಗಿ ವಿದೇಶಗಳಿಗೆ ಅದಿರು ಉಂಡೆಗಳ ರಫ್ತಿಗೆ ತೊಡಕಾಗಿತ್ತು. ಇದೀಗ ಉತ್ತಮ ಗುಣಮಟ್ಟದ ಅದಿರು ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ವಿದೇಶಿ ಮಾರುಕಟ್ಟೆಯಲ್ಲಿ ಸಂಸ್ಥೆಯು ಅದಿರು ಉಂಡೆಗಳಿಗೆ […]

ಕದ್ರಿ ಸ್ಮಶಾನ ಭೂಮಿ ಉದ್ಘಾಟನೆಗೆ ಅಡ್ಡಿ

Wednesday, March 21st, 2018
mayor-bhaskar

ಮಂಗಳೂರು: ಕದ್ರಿಯಲ್ಲಿರುವ ಹಿಂದೂ ಸ್ಮಶಾನದ ಉದ್ಘಾಟನೆಗೆ ಬಂದಿದ್ದ ಜನಪ್ರತಿನಿಧಿಗಳಿಗೆ ಸ್ಥಳೀಯರು ಅಡ್ಡಿಪಡಿಸಿದರು. ತಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಇರುವುದರಿಂದ ಉದ್ಘಾ ಟನೆಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಮಶಾನದ ಸುತ್ತ ಇಂಟರ್‌ಲಾಕ್‌ ಅಳವಡಿಸಿರುವುದಕ್ಕೆ ಸ್ಥಳೀಯ ಜೋಗಿ ಸಮಾಜದವರು ಆಕ್ಷೇಪ ವ್ಯಕ್ತಪಡಿಸಿದರು. ಇಂಟರ್‌ಲಾಕ್‌ ಅನ್ನು ತೆರವುಗೊಳಿಸಬೇಕು. ಜೋಗಿ ಸಮಾಜದ ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಬಂದ ಶಾಸಕ ಜೆ.ಆರ್‌. ಲೋಬೊ, ಮೇಯರ್ ಭಾಸ್ಕರ್‌ ಮೊಯಿಲಿ, ಸ್ಥಳೀಯರ ಬೇಡಿಕೆಗಳನ್ನು ಆಲಿಸಿದರು. ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಶಾಸಕ ಲೋಬೊ ಭರವಸೆ ನೀಡಿದರು. […]

ಭಾಸ್ಕರ್‌ ಶೆಟ್ಟಿ ಕೊಲೆ ಪ್ರಕರಣ ಜು. 2-6: ವಿಚಾರಣೆಗೆ ದಿನ ನಿಗದಿ

Wednesday, March 21st, 2018
bhaskar-shetty

ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ವಿಚಾರಣೆಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ. ವೆಂಕಟೇಶ ನಾಯ್ಕ ಅವರು ಮಾ. 20ರಂದು ದಿನಾಂಕ ನಿಗದಿಪಡಿಸಿದ್ದು, ಜು. 2, 3, 4, 5, 6ರಂದು ವಿಚಾರಣೆ ನಡೆಸಲಾಗುವುದು ಎನ್ನುವ ತೀರ್ಮಾನವನ್ನು ನ್ಯಾಯಾಧೀಶರು ಪ್ರಕಟಿಸಿದರು. ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್‌ ಶೆಟ್ಟಿ ಮತ್ತು ನಂದಳಿಕೆ ನಿರಂಜನ ಭಟ್‌ ಅವರ ವೀಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರು ವಿಚಾರಣಾ ಪ್ರಕ್ರಿಯೆ ನಡೆಸಿದರು. ಸಾಕ್ಷ್ಯನಾಶದ ಆರೋಪಿಗಳು ಹಾಜರಿದ್ದರು. ಆರೋಪಿ ಪರ ವಕೀಲ […]