ದೂರು ಸ್ವೀಕರಿಸದ ಪೊಲೀಸರು: ಆರೋಪ

Saturday, February 8th, 2014
Police-accused

ಪುತ್ತೂರು: ಖಾಸಗಿ ಬಡ್ಡಿ ಲೇವಾದೇವಿಯೊಬ್ಬರಿಂದ ಸಾಲ ಪಡೆದು ದುಪ್ಪಟ್ಟು ಹಣ ಪಾವತಿಸಿದರೂ ಹಣ ನೀಡುವಂತೆ ಪೀಡಿಸುತ್ತಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ದಾಖಲಿಸದೆ ಅನ್ಯಾಯ ಎಸಗಿದ್ದಾರೆ ಎಂದು ಪುತ್ತೂರು ತಾಲೂಕಿನ ಕೊಡಿಪ್ಪಾಡಿ ನಿವಾಸಿ ಅಟೋ ಚಾಲಕ ಚಂದ್ರಶೇಖರ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಅನಿವಾರ್ಯ ಕಾರಣಕ್ಕಾಗಿ ಲೇವಾದೇವಿದಾರರೊಬ್ಬರಿಂದ ರು. 20 ಸಾವಿರ ಸಾಲ ಪಡೆದಿದ್ದೆ. ಇದಕ್ಕೆ ತಲಾ ರು. 2 ಸಾವಿರದಂತೆ 20 ಮಾಸಿಕ ಕಂತುಗಳಲ್ಲಿ ಪಾವತಿಸಿ ಸಂದಾಯ ಮಾಡಿದ್ದೆ. ಆದರೆ ಆ ಬಳಿಕವೂ ಆತ […]

ದಿಢೀರ್ ಪ್ರತಿಭಟನೆ: ಆಸ್ಪತ್ರೆ ವೈದ್ಯನ ಬಂಧನ

Saturday, February 8th, 2014
Fast-to-protest

ಬಂಟ್ವಾಳ: ಬಿ.ಸಿ.ರೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ತುಂಬು ಗರ್ಭಿಣಿ ಚಂಚಲಾಕ್ಷಿ ಹಾಗೂ ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾವಿರಾರು ಸಾರ್ವಜನಿಕರು ಶುಕ್ರವಾರ ಸಂಜೆ ಆಸ್ಪತ್ರೆ ಮುಂಭಾಗ ದಿಢೀರನೆ ಪ್ರತಿಭಟನೆ ನಡೆಸಿದರು. ಮುಂದೆ ನಡೆಯಬಹುದಾದ ಅಪಾಯವನ್ನು ತಪ್ಪಿಸಲು ಪೊಲೀಸರು ಆಸ್ಪತ್ರೆ ವೈದ್ಯನನ್ನು ಬಂಧಿಸಿದ್ದಾರೆ. ಆಕ್ರೋಶಿತ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಆಸ್ಪತ್ರೆಯ ವಠಾರದಲ್ಲಿ ಜಮಾಯಿಸಿ ವೈದ್ಯನ ಬಂಧನಕ್ಕೆ ಬಂಟ್ವಾಳ ನಗರ ಪೊಲೀಸರು ವಿಳಂಬ ಧೋರಣೆ ಅನುಸರಿಸಿದ್ದಾರೆಂದು ಆರೋಪಿಸಿ ಧಿಕ್ಕಾರ ಕೂಗಿದರು. ಈ ಹಂತದಲ್ಲಿ ಆಸ್ಪತ್ರೆ ವಠಾರದೊಳಗೆ ಉದ್ವಿಗ್ನ […]

ಕೆಂಪೇಗೌಡ ಬಡಾವಣೆ 5000 ನಿವೇಶನ ಹಂಚಿಕೆಗೆ ಬಿಡಿಎ ಶೀಘ್ರ ಅರ್ಜಿ ಆಹ್ವಾನ

Saturday, February 8th, 2014
siddaramaiah

ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜಧಾನಿ ಜನತೆಗೆ ನಿವೇಶನ ಭಾಗ್ಯ ದೊರಕಿಸಲು ತೀರ್ಮಾನಿಸಿದೆ. ಬಿಡಿಎ ನಿರ್ಮಿಸುತ್ತಿರುವ ಕೆಂಪೇಗೌಡ ಬಡಾವಣೆಯಲ್ಲಿ 5000 ನಿವೇಶನ ಹಂಚಿಕೆ ಮಾಡಲು ಮಾರ್ಚ್ ಅಂತ್ಯದೊಳಗೆ ಅರ್ಜಿ ಅಹ್ವಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದಲ್ಲಿ ಬಿಡಿಎ ನಿರ್ಮಿಸಿದ ವಿವಿಧ ಪ್ರಮುಖ ರಸ್ತೆಗಳ ಕೆಳ ಸೇತುವೆಗಳನ್ನು ಶುಕ್ರವಾರ ಉದ್ಘಾಟಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿಡಿಎ ಕಳೆದ 10 ವರ್ಷಗಳಿಂದ ನಗರದ ಜನತೆಗೆ ನಿವೇಶನ ನೀಡಿಲ್ಲ. ಇನ್ನುಮುಂದೆ ಹೀಗಾಗ ಬಾರದೆಂದು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ […]

ಹುಷಾರ್… ಚಳಿ – ಬೇಸಿಗೆ ಮಧ್ಯೆ ಈಗ ಕಾಯಿಲೆ ಕಾಲ

Saturday, February 8th, 2014
Winter---summer

ಬೆಂಗಳೂರು: ಬೆಳ್ಳಂಬೆಳಗ್ಗೆ ಕೊರೆವ ಚುಮು ಚುಮು ಚಳಿ, ಮಧ್ಯಾಹ್ನವಾಗುತ್ತಿದ್ದಂತೆ ನೆತ್ತಿಮೇಲೆ ನಿಗಿನಿಗಿ ಸುಡುವ ಬಿಸಿಲು, ಇದೊಂದು ರೀತಿ ಬೆಳಗ್ಗೆ ಅತಿಯಾದ ಚಳಿ, ಮಧ್ಯಾಹ್ನ ಒಣ ಹವೆ ಹಾಗೂ ಧೂಳಿನಿಂದ ಕೂಡಿದ ವಾತಾವರಣ. ಚಳಿಗಾಲ ಮುಕ್ತಾಯದ ದಿನಗಳು. ಈ ವೇಳೆ ಜನಸಾಮಾನ್ಯರಲ್ಲಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಚರ್ಮ ಕಾಯಿಲೆ ಹಾಗೂ ಕೆಮ್ಮು, ಗಂಟಲುನೋವು, ನೆಗಡಿಯಂತಹ ಕಾಯಿಲೆಗಳೇ ಹೆಚ್ಚು. ನೆಗಡಿ, ಕೆಮ್ಮು, ಗಂಟಲುನೋವು, ತುರಿಕೆ, ತಲೆಹೊಟ್ಟು ಕಾಣಿಸಿಕೊಳ್ಳುವುದು, ಚರ್ಮರೋಗ, ಅಲರ್ಜಿ, ಅಟೊಟಿಕ್ ಡರ್ಮಟೈಟಿಸ್‌ನಂತಹ ಸಮಸ್ಯೆಗಳಿಂದ ನಗರದಲ್ಲಿ ಸಾಕಷ್ಟು ಜನ ಬಳಲುತ್ತಿದ್ದಾರೆ. ಹಾಗಾಗಿ […]

ಬ್ಯಾಂಕ್ ಉದ್ಯೋಗಿಗಳ ವೇತನ ಪರಿಷ್ಕರಣೆಗೆ ಆಗ್ರಹ

Friday, February 7th, 2014
Indian-bank

ಮಂಗಳೂರು : ಸುಮಾರು 10 ಲಕ್ಷ ಬ್ಯಾಂಕ್ ಉದ್ಯೋಗಿಗಳ ವೇತನ ಪರಿಷ್ಕರಣೆ ನವಂಬರ್ 2012 ರಿಂದ ಜ್ಯಾರಿಗೆ ಬರಬೇಕಾಗಿದ್ದು, ಈ ಕುರಿತು ಕಳೆದ 15 ತಿಂಗಳುಗಳಲ್ಲಿ ಕೆಲವು  ಬಾರಿ ಮಾತುಕತೆ ನಡೆದರೂ ಯಾವುದೇ ಯಶಸ್ಸನ್ನು ಕಾಣಲಿಲ್ಲ. ಪ್ರಾರಂಭದಲ್ಲಿ ಶೇಕಡಾ 5 ರಷ್ಟು ಹೆಚ್ಚಳವನ್ನು ಕೊಡುವುದಾಗಿ ಹೇಳಿದ ಇಂಡಿಯನ್ ಬ್ಯಾಂಕ್ ಅಸೋಸಿಯೇಶನ್ ತದನಂತರ ಬ್ಯಾಂಕ್ ಉದ್ಯೋಗಿಗಳು ಒಂದು ದಿನದ ಮುಷ್ಕರ ಹೂಡಿದ ಬಳಿಕ ಶೇಕಡ 10 ಹೆಚ್ಚಳವನ್ನು ಕೊಡಲು ಮುಂದೆ ಬಂದಿದೆ. 9ನೇ ವೇತನ ಒಪ್ಪಂದದಲ್ಲಿ ಬ್ಯಾಂಕ್ ಉದ್ಯೋಗಿಗಳಿಗೆ […]

ದೇವಸ್ಥಾನಗಳಲ್ಲಿ ಸನಾತನ ಗ್ರಂಥಾಲಯದ ಉದ್ಘಾಟಣೆ

Friday, February 7th, 2014
Temple-Shree

ಮಂಗಳೂರುಃ   ಮಂಗಳೂರಿನ  ಶ್ರೀ ಮಾರಿಯಮ್ಮ ದೇವಸ್ಥಾನ ಉರ್ವ ದಿನಾಂಕ 04 ಫೆಬ್ರವರಿ 2014 ರಂದು ಇಲ್ಲಿನ ಆಡಳಿತ ಮೊಕ್ತೇಸರರಾದ ಶ್ರೀ ಮೋಹನ ಬೋಳೂರು ಇವರು  ದೀಪಪ್ರಜ್ವಲನೆ ಮಾಡಿ  ಸನಾತನ ಗ್ರಂಥಾಲಯದ ಉದ್ಘಾಟಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಸಹ ಮೊಕ್ತೇಸರರಾದ ಶ್ರೀ ಗಂಗಾಧರ ಪಾಂಗಲ್ ಬೈಕಂಪಾಡಿ, ಶ್ರೀ ಪುರಂದರ ಗುರಿಕಾರ ಹೋಸಬೆಟ್ಟು,ಶ್ರೀ ಭಾಸ್ಕರ ಸಾಲಿಯಾನ ಬೋಳೂರು,ಶ್ರೀ ದಯಾನಂದ ಪುತ್ರನ್ ಕುದ್ರೋಳಿ, ಸನಾತನ ಸಂಸ್ಥೆಯ ಕು ವಿಜಯಲಕ್ಷ್ಮೀ ಹಿಂದೂ ಜನಜಾಗ್ರತಿ ಸಮಿತಿಯ ಶ್ರೀ ಪ್ರಸನ್ನ್ ಕಾಮತ ಮತ್ತಿತರ ಗಣ್ಯ ವ್ಯಕ್ತಿಗಳು […]

ವಿಚ್ಛೇದನಕ್ಕೆ ಲೈಂಗಿಕತೆ ಕೊರತೆ ಕಾರಣ

Friday, February 7th, 2014
Divorce-cases

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಲು ದಾಂಪತ್ಯದಲ್ಲಿ ಲೈಂಗಿಕ ಕ್ರಿಯೆ ಕೊರತೆಯೇ ಕಾರಣ..! ಅಚ್ಚರಿ ಎಂದರೂ ಇದು ನಿಜ. ವಿಚ್ಛೇದನ ಪ್ರಕರಣಗಳಲ್ಲಿ ದಂಪತಿಗಳ ಕೌನ್ಸಿಲಿಂಗ್ ನಡೆಸುವ ಸಮಾಲೋಚಕರ ಅಂಕಿ- ಅಂಶದಿಂದಲೇ ಈ ವಿಷಯ ಹೊರಬಿದ್ದಿದೆ. ಅಷ್ಟೇ ಅಲ್ಲ, ದೇಶದಲ್ಲಿ ಅತಿ ಹೆಚ್ಚು ವಿಚ್ಛೇದನ ಪ್ರಕರಣಗಳ ದಾಖಲಿನಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಇಲ್ಲಿ ಪ್ರತಿ ವರ್ಷ ಸರಾಸರಿ 5ರಿಂದ 6 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ದೆಹಲಿ, ಮುಂಬಯಿ ನಗರಗಳಲ್ಲಿ ದಾಖಲಾಗುವ ವಿಚ್ಛೇದನ ಪ್ರಕರಣಗಳು ಹೆಚ್ಚಿದ್ದು, ಸರಾಸರಿ 10 […]

ಯುವಿಸಿಇಗೆ ವಿವಿ ಮಾನ್ಯತೆ ಬಯಕೆ

Friday, February 7th, 2014
Bangalore-University

ಬೆಂಗಳೂರು: ಖಾಸಗಿ ಕಾಲೇಜುಗಳಿಗೆ ಮಾತ್ರವಲ್ಲ ಬೆಂಗಳೂರು ವಿವಿ ವ್ಯಾಪ್ತಿಯ ಕಾಲೇಜಿಗೂ ‘ವಿಶ್ವವಿದ್ಯಾಲಯ’ ಎಂಬ ನಾಮಫಲಕ ಧರಿಸಬೇಕೆಂಬ ಆಕಾಂಕ್ಷೆ ಮೂಡಿದೆ. ಮಹಾನಗರದಲ್ಲಿರುವ ಸಾಕಷ್ಟು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ‘ವಿಶ್ವವಿದ್ಯಾಲಯ’ ಎಂಬ ಮಾನ್ಯತೆ ಪಡೆದುಕೊಳ್ಳುತ್ತಿವೆ. ಈ ಸಂದರ್ಭವನ್ನೇ ಬಳಸಿಕೊಳ್ಳುತ್ತಿರುವ ಬೆಂಗಳೂರು ವಿವಿ ವ್ಯಾಪ್ತಿಯ ‘ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್‌’ (ಯುವಿಸಿಇ) ಪ್ರತ್ಯೇಕ ವಿಶ್ವವಿದ್ಯಾಲಯ ಮ್ಯಾನತೆ ಪಡೆದುಕೊಳ್ಳಲು ಚಿಂತಿಸಿದೆ. ಇದೀಗ ಈ ಕಾಲೇಜು ಬೆಂಗಳೂರು ವಿವಿ ವ್ಯಾಪ್ತಿಯಲ್ಲಿದ್ದು ನೂತನ ಕೋರ್ಸ್‌ಗಳ ಪರಿಚಯಿಸಿ ಹಾಗೂ ಹಾಲಿ ಇರುವ ಕಟ್ಟಡಗಳ ರಿಪೇರಿ ಸೇರಿದಂತೆ ನೂತನ […]

ದೂರು ಬರಲಿ ಎಂದು ಕೈಕಟ್ಟಿ ಕೂರಬೇಡಿ: ಮೆಸ್ಕಾಂ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ

Thursday, February 6th, 2014
Mescom

ಬಂಟ್ವಾಳ: ಯಾವುದೇ ಸಮಸ್ಯೆ ಬಗೆಹರಿಸಲು ಗ್ರಾಹಕರಿಂದ ದೂರು ಬರಲಿ ಎಂದು ಕಾದು ಕುಳಿತುಕೊಳ್ಳದೆ, ಸಮಸ್ಯೆಗಳಿಗೆ ಸ್ವತಃ ತಾವೇ ಮುಂದಾಗಿ ಪರಿಹಾರ ಕ್ರಮ ಕೈಗೊಳ್ಳಿ ಎಂದು ಬಂಟ್ವಾಳ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಮೆಸ್ಕಾಂ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಬುಧವಾರ ಬಂಟ್ವಾಳ ತಾಪಂ ಸಭಾಂಗಣದಲ್ಲಿ ತಾಪಂ ಉಪಾಧ್ಯಕ್ಷ ಆನಂದ ಶಂಭೂರು ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖಾ ಪ್ರಗತಿ ವೇಳೆ ಅಧಿಕಾರಿಗಳಿಗೆ  ಈ ಮೇಲಿನ ಸೂಚನೆ ನೀಡಿದರು. ರಾಜೀವ್ ಗಾಂಧಿ […]

ಶಾಲೆಗಳಿಗೆ ಮಕ್ಕಳ ದಾಖಲು; ರಾಜ್ಯಾದ್ಯಂತ ಅಭಿಯಾನವಾಗಲಿ

Thursday, February 6th, 2014
Enroll-children

ಬೆಂಗಳೂರು: ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದಿರುವ 1.70 ಲಕ್ಷ ಮಕ್ಕಳನ್ನು ಶಾಲೆಗೆ  ಕರೆತರುವ ಸಲುವಾಗಿ ಪೋಲಿಯೋ ತಡೆ ಅಭಿಯಾನದ ಮಾದರಿಯಲ್ಲೇ ರಾಜ್ಯಾದ್ಯಂತ ಶಿಬಿರಗಳನ್ನು ನಡೆಸಿ ಮಕ್ಕಳನ್ನು ದಾಖಲು ಮಾಡಿಕೊಳ್ಳುವಂತೆ ಸರ್ಕಾರಕ್ಕೆ  ಹೈಕೋರ್ಟ್ ಸೂಚಿಸಿದೆ. ಮುಂದಿನ ಸಾಲಿಗೆ ದಾಖಲು ಆರಂಭಿಸಲು ಇದು ಸೂಕ್ತ ಸಮಯ. ರಾಜ್ಯಾದ್ಯಂತ ಶಿಬಿರ ನಡೆಸಿ ಮಕ್ಕಳನ್ನು ಅಲ್ಲಿಯೇ ನೇರ ದಾಖಲು ಮಾಡಿಕೊಳ್ಳಬೇಕು. ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಜೊತೆಗೆ, 6 ವರ್ಷ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳನ್ನು ಕೂಡ ಸೇರಿಸಿಕೊಳ್ಳಬೇಕು ಎಂದು ತಿಳಿಸಿದೆ. ಈ ಯೋಜನೆಗೆ ಸ್ಥಳೀಯ ಸಂಸ್ಥೆಗಳು […]