Blog Archive

ಸಿಎಂ ಕುಮಾರಸ್ವಾಮಿಗೆ ಮತ ಹಾಕಿದ ಜನ ಉಗಿಯುತ್ತಿದ್ದಾರೆ: ಕಾಂಗ್ರೆಸ್ ಮುಖಂಡ

Wednesday, July 18th, 2018
congres-party

ಮಂಡ್ಯ: ಸಿಎಂ ಕುಮಾರಸ್ವಾಮಿಗೆ ಮತ ಹಾಕಿದ ಜನ ಉಗಿಯುತ್ತಿದ್ದಾರೆ ಎಂದು ಮಂಡ್ಯದ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಬಿ.ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಯಾದ ಕೆ.ಬಿ.ಚಂದ್ರಶೇಖರ್, ಕೆ.ಆರ್.ಪೇಟೆಯ ಪ್ರವಾಸಿ ಮಂದಿರದಲ್ಲಿ‌ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಏಕವಚನದಲ್ಲಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡ್ತಾರೆ ಅಂದುಕೊಂಡು ಜನ ಮತ ಹಾಕಿದ್ರು. ಸಿಎಂ‌ ಆದ ಮೇಲೆ ಕುಮಾರಸ್ವಾಮಿ ಏನು ಮಾಡಿದರು ಅನ್ನೋದು ಜನಕ್ಕೆ […]

ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ..!

Wednesday, July 18th, 2018
congress

ಬೆಂಗಳೂರು: ಮುಂಬರಲಿರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಕೊಳ್ಳಲು ನಿರ್ಧರಿಸಿವೆ. 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಲಿದ್ದು, 8 ಸ್ಥಾನಗಳು ಜೆಡಿಎಸ್ ಪಾಲಿಗೆ ಸಿಗಲಿವೆ ಎನ್ನುವ ಎಕ್ಸ್ಕ್ಲ್ಯೂಸಿವ್ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ನಡೆಸುತ್ತಿರುವ ದೋಸ್ತಿ ಪಕ್ಷಗಳು ಮುಂಬರುವ ಲೋಕಸಭಾ ಚುಮಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿ ಬಿಜೆಪಿಯನ್ನು ಮಣಿಸಲು ನಿರ್ಧರಿಸಿವೆ. ಇದಕ್ಕೆ ಪೂರಕ ಎನ್ನುವಂತೆ ಸ್ಥಾನಗಳ ಹಂಚಿಕೆ ಕಾರ್ಯದ ಮೊದಲ ಸುತ್ತಿನ ಮಾತುಕತೆಯನ್ನು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ […]

ಹಿಂದೂ ಸಂಘಟನೆಗಳ ವತಿಯಿಂದ ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಹಿಂದೂ ಆಂದೋಲನ

Saturday, July 14th, 2018
protest

ಮಂಗಳೂರು: ಹಿಂದೂ ಜನಜಾಗೃತಿ ಸಮಿತಿ ಹಾಗೂ ಇತರ ಹಿಂದೂ ಸಂಘಟನೆಗಳ ವತಿಯಿಂದ ಮಹಾನಗರದ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಗೌರಿ ಲಂಕೇಶ್ ಹತ್ಯಾ ಪ್ರಕರಣದಲ್ಲಿ ಅಮಾಯಕ ಯುವಕರನ್ನು ಬಂಧಿಸಿ ಚಿತ್ರಹಿಂಸೆ ನೀಡಿ ಹೇಳಿಕೆಯನ್ನು ಪಡೆಯುವ ವಿಶೇಷ ತನಿಖಾ ದಳದ ತನಿಖೆಯನ್ನು ಖಂಡಿಸಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ಮಾಡುವಂತೆ, ಹಜ್ ಹೌಸ್ ಗೆ ಹಿಂದೂಗಳ ಮೇಲೆ ಅಪರಿಮಿತ ಅತ್ಯಾಚಾರ ಮಾಡಿರುವ ಟಿಪ್ಪು ಸುಲ್ತಾನನ ಹೆಸರನ್ನು ಕೊಟ್ಟು ಅವನ ಉದಾತ್ತೀಕರಣ ಮಾಡುವ ನಿರ್ಣಯವನ್ನು ಸರ್ಕಾರವು ರದ್ದು ಪಡಿಸಬೇಕು ಹಾಗೂ […]

ಸಾಲ ಮನ್ನಾ ವಿಚಾರಕ್ಕೆ ಕಾಂಗ್ರೆಸ್ ಶಾಸಕರಿಂದಲೇ ವಿರೋಧ ವ್ಯಕ್ತ..!

Thursday, July 12th, 2018
kumarswamy

ಬೆಂಗಳೂರು: ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ಜೆಡಿಎಸ್ ಶಾಸಕಾಂಗ ಸಭೆ ನಡೆಯಿತು. ಅನ್ನಭಾಗ್ಯದ 2 ಕೆಜಿ ಅಕ್ಕಿ ಕಡಿತ ಮತ್ತು ಸಾಲ ಮನ್ನಾ ವಿಚಾರಕ್ಕೆ ಮೈತ್ರಿ ಪಕ್ಷ ಕಾಂಗ್ರೆಸ್ ಶಾಸಕರಿಂದಲೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಜೆಡಿಎಸ್ ಶಾಸಕರಿಂದ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಅನ್ನಭಾಗ್ಯದ ಅಕ್ಕಿ 7 ಕೆಜಿ ಏರಿಸುವ ಬಗ್ಗೆ ಅಭಿಪ್ರಾಯ ಪಡೆದುಕೊಂಡಿರುವ ಸಿಎಂ, ಅಲ್ಲದೆ ಸಾಲ ಮನ್ನಾ ವ್ಯಾಪ್ತಿ ವಿಸ್ತರಿಸುವ ಬಗ್ಗೆಯೂ ಶಾಸಕರಿಂದ ಅಭಿಪ್ರಾಯ ಪಡೆದಿದ್ದಾರೆ ಎನ್ನಲಾಗಿದೆ. […]

ಕಾಂಗ್ರೆಸ್ ಶಾಸಕರು ಕೊಟ್ಟ ಸಹಕಾರದಿಂದ ಸಿಎಂ ಆಗಿದ್ದೇನೆ: ಹೆಚ್.ಡಿ. ಕುಮಾರಸ್ವಾಮಿ

Monday, July 9th, 2018
kumarswmy

ಬೆಂಗಳೂರು: ತಾವು ಮತ್ತು ಮಹಾಭಾರತದ ಕರ್ಣ ಇಬ್ಬರೂ ಸಾಂದರ್ಭಿಕ ಶಿಶುಗಳು, ಎಂಬ ಮಾತನ್ನು ಸದನದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳುವ ಮೂಲಕ ಕರ್ಣನಿಗೆ ತಮ್ಮನ್ನು ತಾವು ಹೋಲಿಸಿಕೊಂಡರು. ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುತ್ತಿದ್ದ ವೇಳೆ ಮಾತನಾಡಿದ ಸಿಎಂ, ಕರ್ಣ ಕೂಡ ಸಾಂದರ್ಭಿಕ ಶಿಶುವೇ ಎಂದಿದ್ದಾರೆ. ಪ್ರತಿಪಕ್ಷದ ನಾಯಕರು ಈ ಸರ್ಕಾರಕ್ಕೆ ಮತ್ತು ಸಿಎಂ ಆದ ತಮಗೆ ಅಪ್ಪ – ಅಮ್ಮ ಇಲ್ಲವೆಂದು ಹೀಗಳೆಯುತ್ತಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರೇ […]

ಕಾಂಗ್ರೆಸ್ ಪಕ್ಷದ ನಾಯಕರ ಸಭೆಯಲ್ಲಿ ಮಾಜಿ ಸಿಎಂ.. ಸಿಎಂ, ಡಿಸಿಎಂಗಿಂತ ಹೆಚ್ಚು ಹೈಲೈಟ್ !

Tuesday, July 3rd, 2018
siddaramaih

ಬೆಂಗಳೂರು: ಮಾಜಿ ಸಿಎಂ ಆದರೂ ಕೂಡ ಸಿದ್ದರಾಮಯ್ಯ ಅದೇ ಖದರ್ ಉಳಿಸಿಕೊಂಡಿದ್ದಾರೆ. ಇದು ಸೋಮವಾರ ಆರಂಭವಾದ ವಿಧಾನಸಭೆ ಅಧಿವೇಶನದಲ್ಲಿ ಸಾಬೀತಾಯಿತು. ಪ್ರಕೃತಿ ಚಿಕಿತ್ಸೆಗೆ ತೆರಳಿದ್ದಾಗ ಹಲವು ಶಾಸಕರು, ಸಚಿವರು, ಮಾಜಿ ಸಚಿವರು ಸಿದ್ದರಾಮಯ್ಯರನ್ನು ಭೇಟಿ ಮಾಡಿ ಬಂದಿದ್ದರು. ಅಲ್ಲದೇ ಬೆಂಗಳೂರಿಗೆ ವಾಪಸಾದ ಮೇಲೆ ಕೂಡ ಭೇಟಿ ಮಾಡಿ ಚರ್ಚಿಸಿದ್ದರು. ವಿವಿಧ ಸಭೆಗಳಲ್ಲಿ ಪಾಲ್ಗೊಂಡಿದ್ದಾಗಲೂ ಸಿದ್ದರಾಮಯ್ಯನವರೇ ಹೈಲೈಟ್ ಆಗಿದ್ದರು. ಸಮನ್ವಯ ಸಮಿತಿ ಸಭೆ, ಕಾಂಗ್ರೆಸ್ ಪಕ್ಷದ ನಾಯಕರ ಸಭೆಯಲ್ಲಿ ಇವರು ಸಿಎಂ, ಡಿಸಿಎಂಗಿಂತ ಹೆಚ್ಚು ಹೈಲೈಟ್ ಆಗಿದ್ದರು. ಸ್ವಂತ […]

ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಚತುರ್ವೇದಿ ಅವರ ಪುತ್ರಿಗೆ ಅತ್ಯಾಚಾರದ ಬೆದರಿಕೆ..!

Tuesday, July 3rd, 2018
priyanka-chaturvedy

ಮುಂಬೈ: ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಚತುರ್ವೇದಿ ಅವರ ಪುತ್ರಿಗೆ ಟ್ವಿಟ್ಟರ್ ನಲ್ಲಿ ಕಿಡಿಗೇಡಿಯೊಬ್ಬ ಅತ್ಯಾಚಾರದ ಬೆದರಿಕೆ ಒಡ್ಡಿದ್ದು, ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಿಯಾಂಕಾ ಚತುರ್ವೇದಿ ಅವರ 10 ವರ್ಷದ ಮಗಳನ್ನು ಅತ್ಯಾಚಾರ ಮಾಡುವುದಾಗಿ @GirishK1605 ಎಂಬ ಖಾತೆಯಿಂದ ಬೆದರಿಕೆ ಬಂದಿದೆ. ‘ನಾವು ರಾಜಕಾರಣಿಗಳು ಪ್ರತಿದಿನ ಟ್ರೋಲ್ ಆಗುತ್ತೇವೆ. ಅದೇನು ಹೊಸತಲ್ಲ. ಆದರೆ ನನ್ನ ಮಗಳ ಬಗ್ಗೆ ಮಾತನಾಡುವುದು ಸರಿಯೇ? ಅದೂ ಇಷ್ಟು ಅವಾಚ್ಯವಾಗಿ? ಅದಕ್ಕೆಂದೇ ನಾನು ಅವರ ವಿರುದ್ಧ ದೂರು ನೀಡಬೇಕೆಂದು ನಿರ್ಧರಿಸಿದ್ದೇನೆ’ […]

ತಮ್ಮ ಸೋಲಿಗೆ ಇವಿಎಂ ಕಾರಣ…ದ.ಕ. ಜಿಲ್ಲೆಯ ನಾಲ್ವರು ಕಾಂಗ್ರೆಸ್ ಅಭ್ಯರ್ಥಿಗಳು ದೂರು!

Saturday, June 30th, 2018
jr-lobo

ಮಂಗಳೂರು: ವಿಧಾನ ಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಹಿನ್ನಡೆಗೆ ಇವಿಎಂ ದುರ್ಬಳಕೆಯೇ ಕಾರಣ ಎಂದು ಪರಾಜಿತರಾದ ದ.ಕ. ಜಿಲ್ಲೆಯ ನಾಲ್ವರು ಕಾಂಗ್ರೆಸ್ ಅಭ್ಯರ್ಥಿಗಳು ದೂರು ನೀಡಿದ್ದು, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಜೆ ಆರ್ ಲೋಬೊ, ತಮ್ಮ ಸೋಲಿಗೆ ಇವಿಎಂ ಕಾರಣ ಎಂದು ಆರೋಪಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ನಂತರ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ ಕೆ ಸೋಮಶೇಖರ್, ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಸೋತ ವಾಸು […]

ನಾಯಕರುಗಳ ಭೇಟಿಗೆ ಹೊಸ ಶಕ್ತಿ ಕೇಂದ್ರವಾಯಿತು ಕಾವೇರಿ!

Friday, June 29th, 2018
siddaramaih

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಚಟುವಟಿಕೆ ಇದುವರೆಗೂ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸದ ಜತೆಗೆ ಅಲ್ಪಸ್ವಲ್ಪ ಪ್ರಮಾಣದಲ್ಲಿ ವಿಧಾನಸೌಧದಲ್ಲಿ ನಡೆಯುತ್ತಿತ್ತು. ಆದರೆ ಇದೀಗ ಹೊಸದೊಂದು ಶಕ್ತಿ ಕೇಂದ್ರ ರಚನೆ ಆಗಿದೆ. ಅದು ಮಾಜಿ ಸಿಎಂ ಸಿದ್ದರಾಮಯ್ಯರ ಹಾಲಿ ನಿವಾಸ ಕಾವೇರಿ. ಕಾವೇರಿ ಇದೀಗ ಸಿದ್ಧವಾಗಿರುವ ಹೊಸ ಶಕ್ತಿ ಕೇಂದ್ರ. ಇದೀಗ ಹಲವು ಶಾಸಕರು, ಕಾಂಗ್ರೆಸ್ ನಾಯಕರು ಭೇಟಿ ಮಾಡುತ್ತಿದ್ದಾರೆ. ಕಳೆದ ರಾತ್ರಿ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ವಾಪಾಸಾಗಿರುವ […]

ರಾಜ್ಯ ಕಾಂಗ್ರೆಸ್‍ನಲ್ಲಿ ಸದ್ಯ ಉಳಿದೆಲ್ಲಾ ಅಸಮಾಧಾನ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ!

Friday, June 22nd, 2018
dinesh-gundurao

ಬೆಂಗಳೂರು: ರಾಜ್ಯ ಕಾಂಗ್ರೆಸ್‍ನಲ್ಲಿ ಸದ್ಯ ಉಳಿದೆಲ್ಲಾ ಅಸಮಾಧಾನ, ಅತೃಪ್ತಿ ತಾತ್ಕಾಲಿಕವಾಗಿ ಶಮನವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆದಿರುವ ಹೋರಾಟ ಸದ್ಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಉಪ ಮುಖ್ಯಮಂತ್ರಿ, ಗೃಹ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಕಡೆಗೂ ತಮ್ಮ 8 ವರ್ಷದ ಕೆಪಿಸಿಸಿ ಸಾರಥ್ಯವನ್ನು ಮುಗಿಸಬೇಕಿದೆ. ಹಲವು ಹುದ್ದೆ ಒಬ್ಬರಿಗೇ ನೀಡುವ ಪರಿಪಾಠ ಕಾಂಗ್ರೆಸ್‍ನಲ್ಲಿ ಇಲ್ಲ. ಪಕ್ಷ ಇಲ್ಲವೇ ಸರ್ಕಾರ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಸದ್ಯ ಈ ಆಯ್ಕೆ ವಿಚಾರ ಬಂದಾಗ […]