Blog Archive

ಹೆಚ್‌‌ಡಿಕೆ, ಬಿಎಸ್‌‌ವೈಯನ್ನು ನಾನು ಸೋಲಿಸುತ್ತೇನೆ: ಸಿಎಂ

Friday, April 6th, 2018
siddaramaih

ಮೈಸೂರು: ಮಾಜಿ ಸಿಎಂಗಳಾದ ಹೆಚ್‌‌.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್‌‌‌. ಯಡಿಯೂರಪ್ಪರನ್ನ ನಾನು ಸೋಲಿಸುತ್ತೇನೆ. ನನಗೂ ಆ ಶಕ್ತಿ ಇದೆ. ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯನವರು ಮೂರು ಬಾರಿ ಮಾಧ್ಯಮದವರಿಗೆ ಒತ್ತಿ ಒತ್ತಿ ಹೇಳಿದ ಪ್ರಸಂಗ ನಡೆಯಿತು. ಇಂದು ಸಿಎಂ ಸ್ವಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಈ ಬಾರಿ ಸಿದ್ದರಾಮಯ್ಯನವರನ್ನ ಸೋಲಿಸುತ್ತೇವೆ ಎಂದು ಕುಮಾರಸ್ವಾಮಿ, ಯಡಿಯೂರಪ್ಪ ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದರು. ಕುಮಾರಸ್ವಾಮಿ ಮತ್ತು ಯಡಿಯೂರಪ್ಪನನ್ನ ಚುನಾವಣೆಯಲ್ಲಿ ನಾನು ಸೋಲಿಸುತ್ತೇನೆ. ಅವರೊಬ್ಬರಿಗೆ ಶಕ್ತಿ ಇರುವುದಾ? ಆ […]

ಕುತೂಹಲ ಮೂಡಿಸಿದೆ ಸಿಎಂ ಸಿದ್ದರಾಮಯ್ಯ-ನಟ ಸುದೀಪ್ ಭೇಟಿ

Thursday, April 5th, 2018
sudeep

ಬೆಂಗಳೂರು: ಚಿತ್ರನಟ ಸುದೀಪ್ ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಈ ಭೇಟಿ ಸಂದರ್ಭ ಯಾವುದೇ ರಾಜಕೀಯ ಚರ್ಚೆ ಅಥವಾ ಪ್ರಚಾರ ಸಂಬಂಧ ಮಾತುಕತೆ ನಡೆದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಪಕ್ಷದ ಪರ ಪ್ರಚಾರ ಸಂಬಂಧ ಸಿಎಂ ಈ ಸಂದರ್ಭ ಪ್ರಸ್ತಾಪಿಸಿದ್ದು, ಸುದೀಪ್ ಅದಕ್ಕೆ ಯಾವ ಪ್ರತಿಕ್ರಿಯೆ ನೀಡಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಕಳೆದ ವಾರವಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದ […]

ಊಟ ಮಾಡುತ್ತಿದ್ದಾಗ ಪ್ಲಾಸ್ಟಿಕ್‌ ಕುರ್ಚಿ ಮುರಿದು ಸಿಎಂ ತಲೆಗೆ ಗಾಯ

Tuesday, April 3rd, 2018
congress

ಮೈಸೂರು: ಸ್ಥಳೀಯ ಮುಖಂಡರ ಮನೆಯಲ್ಲಿ ಸಿಎಂ ಸಿದ್ದರಾಮಯ್ಯ ಊಟ ಮಾಡುವಾಗ ಪ್ಲಾಸ್ಟಿಕ್ ಕುರ್ಚಿ ಮುರಿದು ತಲೆಗೆ ಸಣ್ಣ ಗಾಯವಾಗಿರುವ ಘಟನೆ ಚಾಮುಂಡೇಶ್ವರಿ ಕ್ಷೇತ್ರದ ಮಾವಿನ ಹಳ್ಳಿಯಲ್ಲಿ ನಡೆದಿದೆ ಎನ್ನಲಾಗಿದೆ. ಸಿಎಂ 5 ದಿನಗಳಿಂದ ಚಾಮುಂಡೇಶ್ವರಿ ಕ್ಷೇತ್ರದ ಸುಮಾರು 100 ಹಳ್ಳಿಗಳಲ್ಲಿ ಪ್ರಚಾರ ಕೈಗೊಂಡಿದ್ದರು. ನಿನ್ನೆ ಕಡೆಯ ದಿನದ ಪ್ರಚಾರ ಸಂದರ್ಭದಲ್ಲಿ ಸಂಜೆ ಮಾವಿನಹಳ್ಳಿ ಗ್ರಾಮದ ಮುಖಂಡ ರಾಮೇಗೌಡ ಮನೆಗೆ ತೆರಳಿದ್ದರು. ಅಲ್ಲಿ ಡೈನಿಂಗ್ ಹಾಲ್‌‌ನಲ್ಲಿ ಊಟ ಮಾಡುವ ವೇಳೆ ಸಿಎಂ ಕುಳಿತಿದ್ದ ಪ್ಲಾಸ್ಟಿಕ್ ಚೇರ್‌‌ನ ಕಾಲು ಮುರಿದು […]

ಬಿಡುವಿಲ್ಲದ ಪ್ರಚಾರ… ಸುಸ್ತಾದ ಸಿಎಂಗೆ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ

Tuesday, April 3rd, 2018
siddaramaih

ಬೆಂಗಳೂರು: ಬಿಡುವಿಲ್ಲದ ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಂದಾಗಿ ಅನಾರೋಗ್ಯಕ್ಕೆ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದ ವಿಕ್ರಂ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಸುಸ್ತು, ಅಸಿಡಿಟಿ‌ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ವಿಕ್ರಮ್ ಆಸ್ಪತ್ರೆ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡರು. ಬಿಪಿ, ಶುಗರ್ ಚೆಕಪ್ ಮಾಡಿದ ವೈದ್ಯರು ಮೈಸೂರು ಪ್ರಚಾರದ ವೇಳೆ ತಲೆಗೆ ಏಟು ಬಿದ್ದು ತಲೆ ನೋವು ಕಾಣಿಸಿಕೊಂಡ ಮಾಹಿತಿ ಪಡೆದು ತಲೆಗೆ ಗಾಯವಾಗಿದ್ದನ್ನ ಪರಿಶೀಲಿಸಿದರು. ನಂತರ ಅದು ಸಣ್ಣ ಗಾಯ ಏನೂ ಆಗೋದಿಲ್ಲ ಎಂದು ಮುಲಾಮು […]

ಬಿಜೆಪಿ ನಾಯಕನ ಕೊಲೆ ಯತ್ನ ಪ್ರಕರಣ: ಇತರ ಆರೋಪಿಗಳ ಬಂಧನಕ್ಕೆ ಕಟೀಲು ಆಗ್ರಹ

Saturday, March 31st, 2018
nalin-kumar

ಮಂಗಳೂರು: ಬಿಜೆಪಿ ನಾಯಕ ಈಶ್ವರ್ ಕಟೀಲು ಕೊಲೆಗೆ ಯತ್ನಿಸಿದ ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದೆ. ಆದರೆ ರಾಜಕೀಯ ಒತ್ತಡದಿಂದ ಉಳಿದ ಮೂವರನ್ನು ಬಂಧಿಸಲು ವಿಳಂಬ ಮಾಡಲಾಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಆರೋಪಿಸಿದ್ದಾರೆ. ಮಾಧ್ಯದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸುಖಾನಂದ ಶೆಟ್ಟಿಯವರ ಮೇಲೆ ಹಲ್ಲೆ ಯತ್ನ ನಡೆದ ಸಂದರ್ಭದಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರೆ ಸುಖಾನಂದ ಶೆಟ್ಟಿಯವರನ್ನು ಉಳಿಸಿಕೊಳ್ಳಲು ಸಾಧ್ಯವಿತ್ತು. ಇದೀಗ ಕಾಂಗ್ರೆಸ್ ನಾಯಕರುಗಳ ಬೆಂಬಲದಿಂದ ಈಶ್ವರ್ ಕಟೀಲು ಮೇಲೆ ಹಲ್ಲೆ ಯತ್ನ ನಡೆಸಲಾಗಿದೆ ಎಂದು ಆರೋಪಿಸಿದರು. […]

‘ನನ್ನ ಬಾಯಿಂದ ತಪ್ಪು ಮಾತು ಬಂದಿರಬಹುದು, ಆದ್ರೆ ಕರ್ನಾಟಕದ ಜನ ತಪ್ಪು ನಿರ್ಣಯ ಮಾಡಲ್ಲ’

Friday, March 30th, 2018
bjp-amit-shah

ಮೈಸೂರು: ನಾನು ಮಾತನಾಡುವಾಗ ಬಾಯ್ತಪ್ಪಿ ಮಾತನಾಡಿದ್ದೇನೆ. ಅದನ್ನೇ ಇಟ್ಟುಕೊಂಡು ರಾಹುಲ್ ಗಾಂಧಿ, ಸಿದ್ದರಾಮಯ್ಯ ಸಂಭ್ರಮಿಸಿದರು. ನನ್ನ ಬಾಯಿಯಿಂದ ತಪ್ಪು ಮಾತು ಬಂದಿರಬಹುದು. ಆದರೆ, ಕರ್ನಾಟಕದ ಜನತೆ ತಪ್ಪು ನಿರ್ಣಯ ಮಾಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಜನಶಕ್ತಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್‌‌ಗೆ ಜೆಡಿಎಸ್ ಪ್ರತಿಸ್ಪರ್ಧಿಯಲ್ಲ. ಜೆಡಿಎಸ್ ಒಂದಷ್ಟು ಶಾಸಕರನ್ನು ಗೆಲ್ಲಬಹುದು. ಆದರೆ, ಕಾಂಗ್ರೆಸ್ ಸರ್ಕಾರ […]

ಅಮಿತ್ ಶಾ ಗೆ ನನ್ನ ಕಂಡರೆ ಭಯವಿದೆ : ಸಿದ್ದರಾಮಯ್ಯ

Thursday, March 29th, 2018
siddaramaih

ಮೈಸೂರು: ಅಮಿತ್ ಶಾ ಗೆ ನನ್ನನ್ನು ಕಂಡರೆ ಭಯವಿದೆ. ಹಾಗಾಗಿ ನಾನೂ ಹೋದಲೆಲ್ಲ ಅವರು ಹಿಂಬಾಲಿಸುತ್ತಿದ್ದಾರೆ ಎಂದು ಮೈಸೂರಿನಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾ ಯಾವ ಮಠಕ್ಕಾದರೂ ಹೋಗಲಿ, ಎಲ್ಲಿಗೆ ಬೇಕಾದರೂ ಹೋಗಲಿ. ಅದು ಅವರ ವೈಯಕ್ತಿಕ ಸ್ವಾತಂತ್ರ್ಯ. ಆ ಬಗ್ಗೆ ನಾನೂ ಏನನ್ನು ಹೇಳುವುದಿಲ್ಲ. ಅಮಿತ್ ಶಾ ನನ್ನನ್ನು ಅಹಿಂದು ಎಂದು ಹೇ‌ಳಿದ್ದಾರೆ. ಆದರೆ ಮಿತ್ ಶಾ ಜೈನ ಧರ್ಮದವರು. ಅವರು ಹಿಂದೂನಾ ಅಥವಾ […]

ನಟಿ ಜಯಂತಿ ಆರೋಗ್ಯ ವಿಚಾರಿಸಿದ‌ ಸಿಎಂ ಸಿದ್ದರಾಮಯ್ಯ

Thursday, March 29th, 2018
jayanthi

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ ಜಯಂತಿ ಶೀಘ್ರ ಗುಣಮುಖರಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರೈಸಿದ್ದಾರೆ. ಮೈಸೂರು‌ ಪ್ರವಾಸಕ್ಕೂ ಮುನ್ನ ನಗರದ ವಿಕ್ರಮ್‌‌‌ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಂತಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ನಂತರ ಪುತ್ರ ಕೃಷ್ಣಕುಮಾರ್ ಹಾಗೂ ವೈದ್ಯರಿಂದ ಚಿಕಿತ್ಸೆ ಮತ್ತು ಆರೋಗ್ಯದ ಪರಿಸ್ಥಿತಿ ಕುರಿತು ಮಾಹಿತಿ ಪಡೆದು ಜಯಂತಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

ಯಡಿಯೂರಪ್ಪ – ನಾನು ರಾಮ-ಲಕ್ಷ್ಮಣರಂತೇ ಸಹೋದರರು: ಈಶ್ವರಪ್ಪ

Wednesday, March 28th, 2018
eshwarappa

ಶಿವಮೊಗ್ಗ: ಕಳೆದ ಚುನಾವಣೆ ಸಂದರ್ಭದಲ್ಲಿ ಹಲವಾರು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಅಹಿಂದ ವರ್ಗಕ್ಕೆ ದ್ರೋಹ ಎಸಗಿದೆ. ಬಿಜೆಪಿ ಸರ್ಕಾರ ಹಾಗೂ ಸಿದ್ದರಾಮಯ್ಯ ಸರ್ಕಾರ ಈ ವರ್ಗದ ಜನರಿಗೆ ಎಷ್ಟು ಅನುದಾನ ನೀಡಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಕಳೆದ ನಾಲ್ಕೂವರೆ ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸಮಾಜದಲ್ಲಿ ಗೊಂದಲ ಮೂಡಿಸುವ ಅನೇಕ ಪ್ರಯತ್ನ ನಡೆಸಿದ್ದಾರೆ. ಹಿಂದುಳಿದ […]

ಅವ್ರು ಕೊನೆಗೂ ನಿಜ ಹೇಳಿದ್ದಾರೆ: ಶಾ ಯಡವಟ್ಟು ಕೈ ನಾಯಕರಿಗೆ ವರಪ್ರಸಾದ!

Tuesday, March 27th, 2018
rahul-gandhi

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಷಣ ಸಂದರ್ಭ ಸಿಎಂ ಸಿದ್ದರಾಮಯ್ಯ ಸರ್ಕಾರ ಅನ್ನುವ ಬದಲು ಬಿ.ಎಸ್. ಯಡಿಯೂರಪ್ಪ ಸರ್ಕಾರ ಅತ್ಯಂತ ಭ್ರಷ್ಟ ಎಂದು ಹೇಳಿ ಮಾಡಿಕೊಂಡಿರುವ ಯಡವಟ್ಟು, ಕಾಂಗ್ರೆಸ್ ನಾಯಕರಿಗೆ ವರವಾಗಿ ಲಭಿಸಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಅಮಿತ್ ಶಾ ಸುದ್ದಿಗೋಷ್ಟಿಯಲ್ಲಿ ನೀಡಿದ ಹೇಳಿಕೆ ಇದೀಗ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಅಸ್ತ್ರವಾದಂತಾಗಿದೆ. ಬಿ.ಎಸ್. ಯಡಿಯೂರಪ್ಪ ಭ್ರಷ್ಟಾಚಾರಿ […]