Blog Archive

ಮಂಗಳೂರು : ಇಲಿ ಜ್ವರದಿಂದ ಯುವಕ ಬಲಿ

Wednesday, September 11th, 2019
Anish

ಮಂಗಳೂರು : ಶಂಕಿತ ಇಲಿ ಜ್ವರಕ್ಕೆ ಕಡಬ ಮೂಲದ ಯುವಕನೋರ್ವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಹಳೆನೇರಂಕಿ ಗ್ರಾಮದ ಕುಕ್ಕೇಜಾಲು ನಿವಾಸಿ ಕುಂಞಿ ಮುಗೇರ ಎಂಬುವರ ಪುತ್ರ ಅನೀಶ್ ಕೆ. ಮೃತಪಟ್ಟಿರುವ ಯುವಕ. ಅನೀಶ್ ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಸಂಬಂಧ ಪಟ್ಟ ಮಲ್ಲಿಕಟ್ಟೆಯಲ್ಲಿರುವ ಪರಂಪರಾ ಕರಕುಶಲ ವಸ್ತುಗಳ ಮಾರಾಟ ಮಳಿಗೆಯಲ್ಲಿ ಉದ್ಯೋಗಿಯಾಗಿದ್ದರು. ಸೆ.5 ರಂದು ಆತನಿಗೆ ದಿಢೀರ್ ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಅನಿಶ್ನನ್ನು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಯುವಕ […]

ದ.ಕದಲ್ಲಿ ಭಾರಿ ಮಳೆ ಸಾಧ್ಯತೆ ಇದೆ : ಹವಾಮಾನ ಇಲಾಖೆ

Tuesday, September 3rd, 2019
havy-rain

ಮಂಗಳೂರು : ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಇನ್ನೂ ಮೂರು ಕಾಲ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಜಿಲ್ಲೆಯಲ್ಲಿ, 115ರಿಂದ 200 ಮಿ.ಮೀ ವರೆಗೂ ಮಳೆ ಸುರಿಯುವುದಾಗಿ ನಿರೀಕ್ಷಿಸಲಾಗಿದೆ. ದ. ಕನ್ನಡ ಜಿಲ್ಲೆಯ ಬೆಳ್ಳಾರೆ, ಕಡಬ ಭಾಗದಲ್ಲಿ ಗುಡುಗು ಸಹಿತ ಮಳೆಯಾದರೆ ಸುಬ್ರಹ್ಮಣ್ಯದಲ್ಲೂ ಉತ್ತಮ ಮಳೆಯಾಗಿದೆ. ಸುಳ್ಯದಲ್ಲಿ ಎರಡು ದಿನಗಳಿಂದ ಮಳೆ ಚುರುಕಾಗಿದ್ದು, ಇನ್ನೂ ಮುಂದುವರಿದಿದೆ. ಮೂಡುಬಿದಿರೆ, […]

ಪುತ್ತೂರಿನಲ್ಲಿ ಕಾಣೆಯಾಗಿದ್ದ ವಿದ್ಯಾರ್ಥಿನಿ, ವಿವಾಹವಾಗಿ ಪತ್ತೆ

Wednesday, August 21st, 2019
Raksha

ಪುತ್ತೂರು : ಸೋಮವಾರ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ, ಮರುದಿನ ಮುಂಜಾನೆ ಪ್ರಿಯಕನ ಜೊತೆ ಮದುವೆಯಾಗಿ ಪುತ್ತೂರು ಪೊಲೀಸ್ ಠಾಣೆಯಲ್ಲಿ ಹಾಜರಾದ ಘಟನೆ ಆ. 20 ರ ಮಂಗಳವಾರ ರಂದು ನಡೆದಿದೆ. ರಕ್ಷಾ ಮತ್ತು ಕೋಡಿಂಬಾಳದ ದೇವಪ್ಪ ನ್ಯಾಕ್ ಅವರ ಪುತ್ರ ರಾಜೇಶ್ ನನ್ನು ಪ್ರೀತಿಸುತ್ತಿದ್ದು, ಮಂಗಳವಾರದಂದು ನಗರದ ಹೊರವಲಯದ ಮಜಲುಮಾರು ಉಮಾಮಹೇಶ್ವರಿ ದೇವಾಲಯದಲ್ಲಿ ವಿವಾಹವಾಗಿ ಬಳಿಕ ಮಹಿಳಾ ಠಾಣೆಗೆ ಹಾಜರಾಗಿದ್ದಾರೆ. ನಾವಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಸ್ವ ಇಚ್ಛೆಯಿಂದ ಮದುವೆಯಾಗುತ್ತಿರುವುದಾಗಿ ಠಾಣೆಯಲ್ಲಿ ಹೇಳಿದ್ದಾರೆ. ಪುತ್ತೂರಿನ ಕಾನೂನು ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ […]

ನೇತ್ರಾವತಿ ಸೇತುವೆಯಿಂದ ಹಾರಿ ಯುವಕನೋರ್ವ ಆತ್ಮಹತ್ಯೆ

Saturday, August 17th, 2019
sadaashiva

ಮಂಗಳೂರು : ನೇತ್ರಾವತಿ ಸೇತುವೆಯಿಂದ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿರುವ ಘಟನೆ ಆ.16 ರ ಶುಕ್ರವಾರ ತಡರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿರುವ ಯುವಕ ಕಡಬದ ನಿವಾಸಿ 29 ವರ್ಷದ ಸದಾಶಿವ ಎಂದು ತಿಳಿದುಬಂದಿದೆ. ಈತ ನಿನ್ನೆ ರಾತ್ರಿ 9.30 ರ ಸುಮಾರಿಗೆ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಕಡಬದಲ್ಲಿ ಸರಣಿ ಅಪಘಾತ, ಆರು ಮಂದಿಗೆ ಗಾಯ

Wednesday, June 19th, 2019
kadaba-accident

ಉಪ್ಪಿನಂಗಡಿ : ಕಡಬದ ಹಳೇಸ್ಟೇಷನ್ ಸಮೀಪದ ತಿರುವಿನಲ್ಲಿ ಲಾರಿ, ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿ ಆರು ಮಂದಿ ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ . ಕಡಬದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಲಾರಿ ಹಾಗೂ ವಿರುದ್ಧ ದಿಕ್ಕಿನಿಂದ ಸಾಗುತ್ತಿದ್ದ ಕಾರು, ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಐವರು ಗಂಭೀರ ಗಾಯಗೊಂಡಿದ್ದು, ದ್ವಿಚಕ್ರ ವಾಹನ ಸವಾರರೂ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಳ್ಳಾರಿ ಮೂಲದವರೆಂದು ಗುರುತಿಸಲಾಗಿದ್ದು, ಕಡಬದ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. […]

ಕೆಎಸ್ಸಾರ್ಟಿಸಿ ಬಸ್- ಬೈಕ್ ಢಿಕ್ಕಿ, ಬೈಕ್ ಸವಾರ ಮೃತ

Thursday, June 13th, 2019
Mokshith

ಉಪ್ಪಿನಂಗಡಿ : ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯದಲ್ಲಿ ಸಂಭವಿಸಿದೆ. ಮೃತ ಸವಾರನನ್ನು ಬಲ್ಯ ಮದ್ರಾಡಿ ನಿವಾಸಿ ರಾಮಚಂದ್ರ ಗೌಡ ಎಂಬವರ ಪುತ್ರ ಮೋಕ್ಷಿತ್(21) ಎಂದು ಗುರುತಿಸಲಾಗಿದೆ. ಮೋಕ್ಷಿತ್ ತನ್ನ ಪಲ್ಸರ್ ಬೈಕಿನಲ್ಲಿ ಬಲ್ಯದಿಂದ ಕಡಬಕ್ಕೆ ತೆರಳುತ್ತಿದ್ದಾಗ ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿಯುಂಟಾಗಿ ಈ ದುರ್ಘಟನೆ ಸಂಭವಿಸಿದೆ‌. ಮೃತದೇಹವನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಟ್ಯಾಂಕರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

Saturday, November 24th, 2018
kadaba

ಕಡಬ: ಟ್ಯಾಂಕರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬದ ನೆಲ್ಯಾಡಿ ಗ್ರಾಮದ ಆರ್ಲದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ಡಿಕ್ಕಿಯ ರಭಸಕ್ಕೆ ಟ್ಯಾಂಕರ್ ಲಾರಿಯು ಮಗುಚಿ ಬಿದ್ದಿದೆ. ಕೊನಾಲು ಗ್ರಾಮದ ಕಡೆಂಬಿಲ ನಿವಾಸಿ ಅಣ್ಣಿ ಪೂಜಾರಿ ಎಂಬುವರ ಪುತ್ರ ಜಗದೀಶ್ (44) ಮೃತರು. ಜಗದೀಶ್ ಬೈಕ್ನಲ್ಲಿ ನೆಲ್ಯಾಡಿಯಿಂದ ಮನೆಗೆ ಹೋಗುತ್ತಿದ್ದಾಗ ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಟ್ಯಾಂಕರ್ ಬೈಕ್ಗೆ ಗುದ್ದಿದೆ. ಪರಿಣಾಮ ಜಗದೀಶ್ ಅವರ ದೇಹ ಛಿದ್ರಗೊಂಡು ಅವರು ಸ್ಥಳದಲ್ಲೇ […]

ಅತ್ಯಾಚಾರ ಆರೋಪಿಗಳ ಬದಲಿಗೆ ಅಮಾಯಕರ ಬಂಧನ..!

Wednesday, September 26th, 2018
kankanady

ಮಂಗಳೂರು: ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಗಳನ್ನು ಹುಡುಕುತ್ತಿದ್ದ ಪೊಲೀಸರು ಆಸ್ಪತ್ರೆಯಲ್ಲಿ ಸಂಬಂಧಿಕರನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಗಳಿಬ್ಬರನ್ನು ವಶಕ್ಕೆ ಪಡೆದು ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ನಡೆದಿದೆ. ಕಡಬ ನಿವಾಸಿ ಜೋಬಿನ್ ಮತ್ತು ಶಿರಾಡಿಯ ವರ್ಗಿಸ್ ಅವರ ಚಿಕ್ಕಪ್ಪ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ನೋಡಿಕೊಳ್ಳಲು ಆಸ್ಪತ್ರೆಗೆ ಜೋಬಿನ್ ಮತ್ತು ವರ್ಗೀಸ್ ಬಂದಿದ್ದರು. ಇವರು ಆಸ್ಪತ್ರೆಯಿಂದ ಹೊರಬಂದು ಹೋಟೆಲ್ನಲ್ಲಿ ಊಟ ಮಾಡಿ ಮತ್ತೆ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. […]

ಇಂದು ಕೂಡ ದ.ಕ ಜಿಲ್ಲೆಯಲ್ಲಿ ವರುಣನ ಅಬ್ಬರ..ಜನಜೀವನ ಅಸ್ತವ್ಯಸ್ತ!

Friday, August 17th, 2018
heavy-rain

ಮಂಗಳೂರು: ಇಂದು ಕೂಡ ದ.ಕ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗಿದ್ದರೂ ನೆರೆ ಹಾವಳಿ ಮುಂದುವರಿದಿದೆ. ನೇತ್ರಾವತಿ, ಕುಮಾರಧಾರ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ನೆರೆ ಹಾವಳಿಯಿಂದ ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ನೆರೆಯಿಂದ ಸಂತ್ರಸ್ತರಾದ 101 ಮನೆಗಳ 539 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಜಿಲ್ಲೆಯ ಆಲಡ್ಕ, ಕಡಬ, ಕೂಟೇಲು, ಉಪ್ಪಿನಂಗಡಿ, ಗುಂಡ್ಯ, ಶಿರಾಡಿ, ಉದನೆ, ಇಚಿಲಂಪಾಡಿ, ಕುರಿಯಾಳಕೊಪ್ಪ, ಪಡುಬೆಟ್ಟು, ಪಟ್ರಮೆ, ಶಿಶಿಲ, ಶಿಬಾಜೆ ಹಾಗೂ ಸುಳ್ಯ ಭಾಗಗಳಲ್ಲಿ […]

ಟೆಂಪೋ ಮಗುಚಿ ಬಿದ್ದು ಇಬ್ಬರು ಸಾವು..!

Thursday, August 9th, 2018
tampo-accident

ಕಡಬ: ಕಡಬ ಸಮೀಪದ ಸುಬ್ರಹ್ಮಣ್ಯ- ಇಂಚ್ಲಂಪಾಡಿ ರಸ್ತೆಯ ಮರ್ದಾಳ ಎಂಬಲ್ಲಿ ಟೆಂಪೋ ಮಗುಚಿ ಬಿದ್ದು ಇಬ್ಬರು ಸಾವನ್ನಪ್ಪಿದ ದಾರುಣ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ. ಓರ್ವನ ಪರಿಸ್ಥಿತಿ ಗಂಭಿರವಾಗಿದೆ. ಮೃತರನ್ನು ಚಿನ್ನಮ್ಮ ( 55) ಮತ್ತು ಹರೀಶ್ ( 30) ಎಂದು ಗುರುತಿಸಲಾಗಿದೆ. ಕೊಕ್ಕಡ ಮೂಲದವರಾದ ಇವರು ಬೆಳಗ್ಗೆ ಕಾಂಕ್ರಿಟ್ ಕೆಲಸಕ್ಕೆಂದು ಹೊರಟವರು ಎಂದು ತಿಳಿದು ಬಂದಿದೆ.