Blog Archive

ಪಣಂಬೂರು ಕಡಲ ತೀರದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಹಮ್ಮಿಕೊಂಡ ಬೀಚ್ ಉತ್ಸವ

Saturday, December 31st, 2016
Beach-festival-

ಮಂಗಳೂರು: ಪಣಂಬೂರು ಕಡಲ ತೀರದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಹಮ್ಮಿಕೊಂಡ ಮೂರು ದಿನಗಳ ಬೀಚ್ ಉತ್ಸವವನ್ನು ಮಂಗಳೂರು ಸಹಾಯಕ ಕಮೀಶನರ್ ರೇಣುಕಾ ಪ್ರಸಾದ್ ಗಾಳಿ ಪಟ ಹಾರಿಸುವ ಮೂಲಕ ಉದ್ಘಾಟಿಸಿದರು. ಜಿಲ್ಲೆಯಲ್ಲಿ ಕರಾವಳಿ ಉತ್ಸವ ನಡೆಯುತ್ತಿದ್ದು, ಇದರ ಜೊತೆಗೆ ನಿನ್ನೆ ಬೀಚ್ ಉತ್ಸವಕ್ಕೆ ಚಾಲನೆ ದೊರೆತಿದೆ. ಜ.1ರವರೆಗೆ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಬೀಚ್ ಉತ್ಸವ ನಡೆಯಲಿದೆ. ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಬೀಚ್ ವಾಲಿಬಾಲ್, ನೃತ್ಯ, ಸ್ಕೇಟಿಂಗ್, ಬೀಚ್ ತ್ರೋಬಾಲ್, ಯೋಗ, ಉದಯ […]

ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವಕ್ಕೆ ಚಾಲನೆ

Saturday, December 24th, 2016
Karavali-Uthsava

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವಕ್ಕೆ ನಗರದ ಕದ್ರಿ ಉದ್ಯಾನವನದಲ್ಲಿ ನಿನ್ನೆ ಸಂಜೆ ಚಾಲನೆ ದೊರೆಯಿತು. ಉತ್ಸವಕ್ಕೆ ಕಲಾಮಾಮಣಿ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಾವು ನಮ್ಮ ಜೀವನಶೈಲಿ ಹಾಗೂ ನಾವು ಮಾಡುವ ಕಾರ್ಯಗಳಲ್ಲಿ ಪರಿಪೂರ್ಣತೆ ಮತ್ತು ನ್ಯಾಯವನ್ನು ಪಾಲಿಸಿದರೆ ನ್ಯಾಯ ಮತ್ತು ಯಶಸ್ಸು ನಮ್ಮದಾಗುತ್ತದೆ. ಅನೇಕ ಸೌಂದರ್ಯಭರಿತ ಕಲೆಗಳನ್ನು ಹೊಂದಿರುವ ಅವಿಭಜಿತ ಜಿಲ್ಲೆಯಲ್ಲಿ ಕಲಾಪ್ರಕಾರಗಳ ಉತ್ಸವವನ್ನಾಚರಿಸುತ್ತಿರುವುದು ಸಂತೋಷದ ವಿಚಾರ ಎಂದರು. ರಾಜ್ಯ ಮತ್ತು ಪಶ್ಚಿಮ ಕರಾವಳಿಯನ್ನು ಪ್ರತಿಬಿಂಬಿಸುವ […]

ಸಮಾಜಕ್ಕಾಗಿ ದುಡಿಯುವ ಯುವಕರಿಗೆ ಬೆಂಬಲ, ಪ್ರೋತ್ಸಾಹ ಅಗತ್ಯವಾಗಿದೆ: ಎಂ.ಬಿ.ಸದಾಶಿವ

Monday, December 19th, 2016
Yuvajana Mahothsava

ಸುಳ್ಯ: ಎರಡು ದಿನಗಳ ಕಾಲ ನಡೆದ ಯುವಜನ ಮೇಳ, ಯುವಜನ ಹಬ್ಬ ಮತ್ತು ಕರಾವಳಿ ಉತ್ಸವದ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಎಂ.ಬಿ.ಸದಾಶಿವ ಸಮಾಜಕ್ಕಾಗಿ ದುಡಿಯುವ ಯುವಕರಿಗೆ ಬೆಂಬಲ, ಪ್ರೋತ್ಸಾಹ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಮಾಜಮಖಿ ಯುವ ಸಮೂಹವನ್ನು ರೂಪಿಸಲು ಯುವಜನ ಇಲಾಖೆಗೆ ಸರ್ಕಾರ ಇನ್ನಷ್ಟು ಅನುದಾನಗಳನ್ನು ನೀಡಿ ಹೆಚ್ಚು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು. ದ.ಕ. ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ. […]

ಉತ್ಸವಗಳು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುತ್ತವೆ : ಸಿ.ಟಿ. ರವಿ

Saturday, December 22nd, 2012
Karavali Utsav 2012

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಶುಕ್ರವಾರ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಹಬ್ಬ ಕರಾವಳಿ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯು ಹಲವು ಸಾಂಸ್ಕೃತಿಕ ಆಚರಣೆಗಳನ್ನು ಹೊಂದಿರುವ ಪ್ರದೇಶವಾಗಿದ್ದು ಉತ್ಸವಗಳು ನಮ್ಮಲ್ಲಿ ಸಾಮುದಾಯಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುತ್ತವೆ. ಈ ಉದ್ದೇಶದಿಂದಲೇ ನಮ್ಮ ಪೂರ್ವಿಕರು ಉತ್ಸವಗಳನ್ನು ಆಯೋಜಿಸಿದ್ದಾರೆ ಎಂದು ಅವರು ಹೇಳಿದರು. […]

ಬೀಚ್ ಉತ್ಸವ ಜನವರಿ 21, 22

Monday, January 17th, 2011
ಬೀಚ್ ಉತ್ಸವ

ಮಂಗಳೂರು: ಕರಾವಳಿ ಉತ್ಸವ 2010-11ರ ಅಂಗವಾಗಿ ಇದೇ ತಿಂಗಳ 21, 22 ಮತ್ತು 23 ಈ ಮೂರು ದಿನಗಳಂದು ಪಣಂಬೂರು ಬೀಚ್ನಲ್ಲಿ ಬೀಚೋತ್ಸವವು ಜರಗಲಿರುವುದು ಎಂದು ಸಹಾಯಕ ಆಯುಕ್ತ  ಪ್ರಭುಲಿಂಗ ಕಾವಳಿಕಟ್ಟಿ ತಿಳಿಸಿದರು. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಬೀಚ್ ಉತ್ಸವದ ಕಾರ್ಯಕ್ರಮಗಳ ವಿವರಗಳನ್ನು ಅವರು ತಿಳಿಸಿದರು. 21ರಂದು ಸಂಜೆ 4 ಗಂಟೆಗೆ ಬೀಚ್ ಉತ್ಸವವನ್ನು ಮಾನ್ಯ ಮೇಯರ್ ರವರು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದ ಬೀಚ್ ವಾಲಿಬಲ್ ಹಾಗೂ ತ್ರೋಬಾಲ್ ಪಂದ್ಯಾಟಗಳು […]