Blog Archive

ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ತಬ್ಧ

Thursday, November 30th, 2017
kinnigoli

ಕಿನ್ನಿಗೋಳಿ: ಮಂಗಳೂರು ತಾಲೂಕಿನ ಕಿನ್ನಿಗೋಳಿಯಲ್ಲಿ 2010ರಲ್ಲಿ ಆರಂಭವಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುಂಟುತ್ತ ಸಾಗಿದ್ದು, ಜೂನ್‌ ತಿಂಗಳಿನಿಂದ ಘಟಕವೂ ಸ್ತಬ್ಧಗೊಂಡಿದೆ. ಪೊದಗಳಿಂದ ಕೂಡಿರುವ ನೀರಿನ ಟ್ಯಾಂಕ್‌ ಪ್ರದೇಶ ಹದಿನೆಂಟು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ 16.80 ಕೋಟಿ ರೂ. ವೆಚ್ಚದ ಈ ಯೋಜನೆ ಏಳು ವರ್ಷ ಆಗುತ್ತ ಬಂದರೂ ಪೂರ್ಣವಾಗಿಲ್ಲ. ಮಂಗಳೂರು ತಾಲೂಕಿನ ಮೂಲ್ಕಿ ವಿಭಾಗದಲ್ಲಿ ಹರಿಯುವ ಶಾಂಭವಿ ನದಿಗೆ ಬಳಕುಂಜೆ ಗ್ರಾಮದ ಬಳಿ ಜಾಕ್‌ವೆಲ್‌ ನಿರ್ಮಿಸಿ ಕೊಲ್ಲೂರು ಪದವಿನಲ್ಲಿ ಟ್ಯಾಂಕ್‌ ರಚಿಸಿ ಗುರುತ್ವಾಕರ್ಷಣೆಯ ಶಕ್ತಿಯಿಂದ […]

ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಗ್ರಾಹಕ ಮಾಹಿತಿ

Saturday, November 11th, 2017
grahaka mahiti

ಮಂಗಳೂರು: ಕಿನ್ನಿಗೋಳಿಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಭಗತ್ ಸಿಂಗ್ ಗ್ರಾಹಕ ಕ್ಲಬ್ ನ ವಿದ್ಯಾರ್ಥಿಗಳಿಗ ಗ್ರಾಹಕ ಮಾಹಿತಿ ಕಾರ‍್ಯಕ್ರಮ ನವೆಂಬರ್ 11, 2017 ರಂದು ನಡೆಯಿತು. ದ.ಕ. ಜಿಲ್ಲಾಗ್ರಾಹಕ ಸಂಘಟನೆಗಳ ಒಕ್ಕೂಟದ ಉಪಾಧ್ಯಕ್ಷ ಎಡ್ವಿನ್ ಡಿ ಮೆಲ್ಲೊ ಅಧ್ಯಕ್ಷತೆ ವಹಿಸಿದ್ದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಒಕ್ಕೂಟದ ಜತೆ ಕಾರ್ಯದರ್ಶಿ ರಾಯೀರಾಜಕುಮಾರ್‌ರವರು ಗ್ರಾಹಕರ ಬಗೆಗೆ ವಿವರಿಸಿ, 1986 ರ ಗ್ರಾಹಕ ಹಿತರಕ್ಷಣಾ ಕಾಯಿದೆ, ಗ್ರಾಹಕ ಪರಿಹಾರ ಕ್ರಮಗಳು ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡಿದರು.ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನೀತಾ ಸ್ವಾಗತಿಸಿ ವಂದಿಸಿದರು.

ಕಿನ್ನಿಗೋಳಿ:ಟಿಪ್ಪು ಸುಲ್ತಾನ್‌ ಆಕ್ರಮಣ, ಕ್ರೈಸ್ತ ಕುಟುಂಬಗಳನ್ನು ರಕ್ಷಿಸಿದ ಹಿಂದೂ ಕುಟುಂಬಗಳ ಇತಿಹಾಸ

Tuesday, November 7th, 2017
tippu jayanti

ಮಂಗಳೂರು: ಟಿಪ್ಪು ಜಯಂತಿ ಆಚರಿಸಲು ರಾಜ್ಯ ಸರ್ಕಾರದಿಂದ ಎಲ್ಲ ಸಿದ್ಧತೆಗಳು ಭರದಿಂದ ಸಾಗಿವೆ. ಈ ಮಧ್ಯೆ ಟಿಪ್ಪು ಸುಲ್ತಾನ್‌ ಆಕ್ರಮಣಕ್ಕೆ ಕ್ರೈಸ್ತರು ಒಳಗಾಗಿದ್ದಾಗ ಹಿಂದೂ ಕುಟುಂಬಗಳು ಅವರಿಗೆ ಸಹಾಯ ಮಾಡಿದ್ದರು. ಈ ಹಿನ್ನಲೆಯಲ್ಲಿ ಇಂದಿಗೂ ಕೂಡ ಕ್ರೈಸ್ತರು ಈ ಹಿಂದೂ ಕುಟುಂಬಗಳಿಗೆ ಗೌರವ ಸಲ್ಲಿಸುತ್ತಾ ಬಂದಿದ್ದಾರೆ. ನಗರದಲ್ಲೊಂದು ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಟಿಪ್ಪು ಇತಿಹಾಸ ಕುರಿತು ಹೇಳುತ್ತದೆ. ನಗರದ ಹೊರಲಯದಲ್ಲಿರುವ ಕಿನ್ನಿಗೋಳಿ ಸಮೀಪದಲ್ಲಿ ಕ್ರೈಸ್ತರು ಪ್ರತಿ ವರ್ಷ ಹಿಂದೂ ಕುಟುಂಬಗಳಿಗೆ ಹೊರೆಕಾಣಿಕೆ ಸಲ್ಲಿಸುವ ಕಾರ್ಯವನ್ನು ಅನೇಕ ವರ್ಷಗಳಿಂದ ಸದ್ದಿಲ್ಲದೆ […]

ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವವರನ್ನು ಗೌರವಿಸಿ : ಸಾಹಿತಿ ಕೆ.ಗಣೇಶ್‌ ಮಲ್ಯ

Thursday, October 5th, 2017
kinnigoli

ಮಂಗಳೂರು: ಸದ್ದಿಲ್ಲದೆ ತನ್ನ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವವರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಹಿರಿಯ ಸಾಹಿತಿ ಕೆ.ಗಣೇಶ್‌ ಮಲ್ಯ ಹೇಳಿದರು. ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಅಂಬಾ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಧಾರ್ಮಿಕತೆಗೆ ಹೆಚ್ಚಿನ ಒತ್ತುಕೊಟ್ಟು ಕಿನ್ನಿಗೋಳಿಯಲ್ಲಿ ಜಿಎಸ್‌ಬಿ ಸಮಾಜದವರನ್ನು ಸಂಘಟಿಸುವಲ್ಲಿ ಹಾಗೂ ಸಮಾಜದ ಬಗ್ಗೆ ಕಳಕಳಿಯ ಸೇವಾ ಮನೋಭಾವ ಮೂಲಕ ಗುರುತಿಸಿ ಕೊಂಡವರು ಅಂತಹ ವ್ಯಕ್ತಿಗಳನ್ನು ಗೌರವಿಸುತ್ತಿರುವುದು ಇತರರಿಗೂ ಪ್ರೇರಣೆ ಆಗಲಿ ಎಂದು ಹೇಳಿದರು. ಕಿನ್ನಿಗೋಳಿಯ ಜಿಎಸ್‌ಬಿ ಹಿರಿಯ ಮುಂದಾಳು ಕೆ. […]