ಕಟೀಲು ಮೇಳ ದ ಯಕ್ಷಗಾನ ಕಲಾವಿದ ನೇಣು ಬಿಗಿದು ಅತ್ಮಹತ್ಯೆ

Thursday, August 18th, 2022
Shambu Kumar

ಕಿನ್ನಿಗೋಳಿ: ಕಟೀಲು ಮೇಳ ದಲ್ಲಿ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದ ಶಂಭು ಕುಮಾರ್ ಕಿನ್ನಿಗೋಳಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ, ಕಳೆದ ಹಲವು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಪುತ್ತೂರು, ಬಪ್ಪನಾಡು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಹೊಯಿಗೆಗುಡ್ಡೆ ಉಮಾಮಹೇಶ್ವರ ದೇವಸ್ಥಾನದ ಹೆಸರಿನೊಂದಿಗೆ ಕಳೆದ ಕೆಲ ವರ್ಷಗಳಿಂದ ಚಿಕ್ಕ ಮೇಳವನ್ನು ನಡೆಸುತ್ತಿದ್ದು ಈ ಬಾರಿ ಅದೇ ಹೆಸರಿನಲ್ಲಿ ಎರಡು ಚಿಕ್ಕ ಮೇಳವನ್ನು ನಡೆಸುತ್ತಿದ್ದರು. ಆರ್ಥಿಕ ಮುಗ್ಗಟ್ಟು ಅತ್ಮಹತ್ಯೆಗೆ ಕಾರಣವಾಗಿರಬೇಕು ಎನ್ನಲಾಗಿದೆ.

ಪತ್ನಿ ಮತ್ತು ಮೂವರು ಮಕ್ಕಳನ್ನು ಬಾವಿಗೆಸೆದು ತಾನು ಆತ್ಮಹತ್ಯೆಗೆ ಯತ್ನಿಸಿದ ಪತಿ

Thursday, June 23rd, 2022
Mulki Suicide

ಮುಲ್ಕಿ: ಪತ್ನಿ ಮತ್ತು ಮೂವರು ಮಕ್ಕಳನ್ನು ಬಾವಿಗೆಸೆದು ತಾನು ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ಕಿನ್ನಿಗೋಳಿ ಸಮೀಪದ ಹೊಸಕಾವೇರಿ ಬಳಿ ನಡೆದಿದ್ದು ಬಾವಿಗೆ ಬಿದ್ದ ಮಕ್ಕಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಿನ್ನಿಗೋಳಿ ಸಮೀಪದ ಹೊಸಕಾವೇರಿ ಶೆಟ್ಟಿಕಾಡು ನಿವಾಸಿ ಹಿತೇಶ್ ಶೆಟ್ಟಿಗಾರ್ (46) ಎಂಬಾತ ಮೊದಲು ತನ್ನ ಮಕ್ಕಳಾದ ರಶ್ಮಿತಾ,(13) ಉದಯ (11), ದಕ್ಷ(4) ಎಂಬವರನ್ನು ಬಾವಿಗೆಸೆದು ಬಳಿಕ ಪತ್ನಿ ಲಕ್ಷ್ಮಿ(38) ಎಂಬವರನ್ನು ಬಾವಿಯೊಳಗೆ ದೂಡಿ ನಂತರ ತಾನು ಆತ್ಮಹತ್ಯೆಗೆ ಯತ್ನಿಸಿ ಬಾವಿಗೆ ಹಾರಿದ್ದಾನೆ. ಈ ಸಂದರ್ಭ […]

ಆನ್‌ಲೈನ್ ಸಾಲದ ಫೋನ್ ಕಿರಿಕಿರಿ – ಕಚೇರಿಯಲ್ಲಿ ಯುವಕ ಆತ್ಮಹತ್ಯೆ

Monday, January 10th, 2022
Sushath

ಮಂಗಳೂರು :  ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ  ಯುವಕನೊಬ್ಬ ಆನ್‌ಲೈನ್ ಸಾಲದ ಫೋನ್ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು  ಕಿನ್ನಿಗೋಳಿ ಪಕ್ಷಿಕೆರೆ ಮೂಲದ ಸುಶಾಂತ್(26) ಎಂದು ಗುರುತಿಸಲಾಗಿದೆ. ಸೋಮವಾರ ತಾನು ಕೆಲಸ ಮಾಡಿಕೊಂಡಿದ್ದ ಸುರತ್ಕಲ್‌ನ ಕುಳಾಯಿಯ ಕಚೇರಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸಾವಿನ ಕುರಿತಂತೆ ತುಳುವಿನಲ್ಲಿ ಡೆತ್‌ನೋಟ್ ಬರೆದಿದ್ದಾರೆ. ‘ಸಾರಿ ಮಾತೆರೆಗ್ಲಾ. ಎಂಕ್ ಏರ‌್ನಲಾ ನಂಬಿಕೆ ಒರಿಪಾರೆ ಆಯಿಜಿ. ಕಾಸ್‌ದ ವಿಷಯೊಡ್ ತೊಂದರೆ ಆಂಡ್. ಸಾರಿ, ಆನ್‌ಲೈನ್ ಲೋನ್‌ದಕುಲ್ ಕಾಲ್ ಮಲ್ತೆರ್‌ಡ ಡೆತ್ ಆತೆ ಪನ್ಲೆ. […]

ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳ ಮೇಲೆ ಹೆಜ್ಜೇನು ದಾಳಿ, 8 ಮಂದಿ ಆಸ್ಪತ್ರೆಗೆ

Tuesday, December 21st, 2021
Bee Attack

ಕಿನ್ನಿಗೋಳಿ: ವಸತಿ ಸಮುಚ್ಚಯದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನು ದಾಳಿಯಿಂದ  8 ಮಂದಿ ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಗಾಯಗೊಂಡು ಕಿನ್ನಿಗೋಳಿ ಆಸ್ಪತ್ರೆಗೆ ದಾಖಲಾದ ಘಟನೆ  ಕಿನ್ನಿಗೋಳಿಯ  ಮೂರುಕಾವೇರಿಯ ಮುಖ್ಯ ರಸ್ತೆಯಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ  ಕೆನರಾ ಲೈಟಿಂಗ್ ಸಿಬ್ಬಂದಿ ಬೈಕ್‌ನಲ್ಲಿ ತೆರಳುತ್ತಿರುವಾಗ ನೊಣಗಳ ಹಿಂಡು ದಾಳಿ ಮಾಡಿದೆ. ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗೋಳಿಜೋರ ನೀರಳಿಕೆ ನಿವಾಸಿ ರವಿ, ಮೂರುಕಾವೇರಿ ರೋಟರಿ ಶಾಲೆ ಶಿಕ್ಷಕ ಸೂರ್ಯಕಾಂತ್ ತೀವ್ರ ಗಾಯಗೊಂಡು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಉಳಿದಂತೆ ರಿಚರ್ಡ್ ನಝರತ್ ಮೂರುಕಾವೇರಿ, […]

ಮಹಿಳಾ ಗ್ರಾಹಕಿಗೆ ಚಪ್ಪಲಿ ತೋರಿಸುವುದಾಗಿ ಹೇಳಿ ಭುಜ ಮತ್ತು ಎದೆ ಮುಟ್ಟಿ ಲೈಂಗಿಕ ಕಿರುಕುಳ, ಆರೋಪಿ ಬಂಧನ

Sunday, December 12th, 2021
shamshudin

ಮುಲ್ಕಿ : ಚಪ್ಪಲಿ ಖರೀದಿಗೆ ಹೋಗಿದ್ದ ಮಹಿಳಾ ಗ್ರಾಹಕಿ ಯೊಬ್ಬರನ್ನು ಚಪ್ಪಲಿ ತೋರಿಸುವುದಾಗಿ ಹೇಳಿ ಭುಜ ಮತ್ತು ಎದೆಯ ಭಾಗಕ್ಕೆ ಮುಟ್ಟಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಭಾನುವಾರ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಂಗಡಿ ಮಾಲಕ ಸಂಶುದ್ದೀನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾನುವಾರ  ಮಧ್ಯಾಹ್ನ ಮುಲ್ಕಿ ಠಾಣಾ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಎಂಬಲ್ಲಿರುವ ಚಪ್ಪಲಿ ಅಂಗಡಿಯಲ್ಲಿ ಅದರ ಮಾಲಿಕರು ಮಹಿಳಾ ಗ್ರಾಹಕಿಗೆ ವಿವಿಧ ಚಪ್ಪಲಿಗಳನ್ನು ತೋರಿಸಿದ್ದು ಮಹಿಳಾ ಗ್ರಾಹಕಿ ಗೆ ಅವರು ತೋರಿಸಿದ […]

ಕಣಜದ ಹುಳುಗಳ ದಾಳಿ, ವಿದ್ಯಾರ್ಥಿಗಳನ್ನು ರಕ್ಷಿಸಿ ಪ್ರಾಣ ಬಿಟ್ಟ ಗೃಹರಕ್ಷಕ ದಳದ ಸಿಬ್ಬಂದಿ

Friday, November 19th, 2021
Santhosh

ಮಂಗಳೂರು: ಕಣಜದ ಹುಳುಗಳ ದಾಳಿಯಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಬಂದಿದ್ದ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ತನ್ನ ಪ್ರಾಣವನ್ನೇ ಬಿಟ್ಟ ಘಟನೆ ಕಿನ್ನಿಗೋಳಿ ಎಂಬಲ್ಲಿ ಶುಕ್ರವಾರ ನಡೆದಿದೆ. ಕಟೀಲು ಬಳಿಯ ಎಕ್ಕಾರು ದೇವರಗುಡ್ಡೆ ನಿವಾಸಿ ಸಂತೋಷ್(35) ಮೃತ ದುರ್ದೈವಿ. ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿ ಸಂತೋಷ್ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚಿಗೆ ಮಂಗಳೂರು ಹೊರವಲಯದ ಕಿನ್ನಿಗೋಳಿ ಎಂಬಲ್ಲಿ ಕಣಜದ ಹುಳುಗಳ ದಾಳಿಯಿಂದ ಶಾಲಾ ಮಕ್ಕಳನ್ನು ರಕ್ಷಿಸಿದ್ದರು. ಈ ವೇಳೆ ಸಂತೋಷ್ಗೆ ಕಣಜದ ಹುಳುಗಳ ಕಡಿದಿದ್ದವು. ಕಣಜದ ಹುಳುಗಳ ಕಡಿತಕ್ಕೆ […]

ಸುರೇಂದ್ರ ಬಂಟ್ವಾಳ್ ಕೊಲೆ ಆರೋಪಿ ಸತೀಶ್ ಕುಲಾಲ್ ಮತ್ತು ಇನ್ನೊಬ್ಬ ಸಹಚರನ ಬಂಧನ

Sunday, October 25th, 2020
Surendra Bantwal

ಬಂಟ್ವಾಳ : ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆ.20ರಂದು ರಾತ್ರಿ ಸುರೇಂದ್ರ ಬಂಟ್ವಾಳ್ ನನ್ನು ಬಿ.ಸಿ.ರೋಡಿನ ಪ್ಲ್ಯಾಟ್ ನಲ್ಲಿ ಚೂರಿಯಿಂದ ಇರಿದು ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿಗಳಾದ ಸುರೇಂದ್ರನ ಆಪ್ತ ಸ್ನೇಹಿತ ಬಂಟ್ವಾಳ ನಿವಾಸಿ ಸತೀಶ್ ಕುಲಾಲ್ ಮತ್ತು ಕಿನ್ನಿಗೋಳಿ ನಿವಾಸಿ ಗಿರೀಶ್ ಯಾನೆ ಗಿರಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಬ್ಬರು ಕಾಸರಗೋಡು ಕಡೆಯಿಂದ ಬಾಡಿಗೆ ವಾಹನದಲ್ಲಿ ಬಂಟ್ವಾಳ ಕಡೆ ಶನಿವಾರ ರಾತ್ರಿ ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಡಿವೈಎಸ್ಪಿ […]

ಕಿನ್ನಿಗೋಳಿಯ ಯುವಕ ಕುವೈಟ್‌ನ ಸಾಲ್ಮಿಯಾ ಬೀಚ್‌ನಲ್ಲಿ ನೀರು ಪಾಲು

Sunday, July 19th, 2020
Mohammed Anish

ಮಂಗಳೂರು : ಕಿನ್ನಿಗೋಳಿಯ ಯುವಕನೊಬ್ಬ ಕುವೈಟ್‌ನ ಸಾಲ್ಮಿಯಾ ಬೀಚ್‌ನಲ್ಲಿ ಮುಳುಗುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವನ ರಕ್ಷಣೆ ಮಾಡಲು ಮುಂದಾದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶನಿವಾರ ಸಂಜೆ  ನಡೆದಿದೆ. ಮೃತ ವ್ಯಕ್ತಿಯನ್ನು ಮಂಗಳೂರು ಹೊರವಲಯದ ಕಿನ್ನಿಗೋಳಿ ನಿವಾಸಿ ಮೊಹಮ್ಮದ್ ಅನೀಸ್ (28) ಎಂದು ಗುರುತಿಸಲಾಗಿದೆ. ಭಾರತೀಯ ಕಾಲಮಾನ 8.30 ಕ್ಕೆ ಕುವೈಟ್ ರಾಷ್ಟ್ರದ ಸಾಲ್ಮಿಯಾ ಬೀಚ್‌ನಲ್ಲಿ ಅನೀಸ್ ತನ್ನ ಸ್ನೇಹಿತರ ಜೊತೆಗೂಡಿ ಈಜಲು‌ ತೆರಳಿದ್ದು ಸಮುದ್ರ ಪಾಲಾಗುತ್ತಿದ್ದ ಈಜಿಪ್ಟ್‌ನ ಅಪರಿಚಿತ ಯುವಕನ ರಕ್ಷಣೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಅನೀಸ್‌ ನೀರಿನಲ್ಲಿ ಮುಳುಗಿದ್ದು […]

ಪಿಕ್ಕಾಸು ಹಾಗೂ ಹಾರೆಯಿಂದ ಹೊಡೆದು ನಿವೃತ್ತ ಸೈನಿಕ ಮತ್ತು ಆತನ ಪತ್ನಿಯ ಹತ್ಯೆ

Wednesday, April 29th, 2020
Kinnigoli

ಕಿನ್ನಿಗೋಳಿ :   ದಂಪತಿಯನ್ನು ನೆರೆಮನೆಯ ವ್ಯಕ್ತಿಯೊಬ್ಬ ಪಿಕ್ಕಾಸು ಹಾಗೂ ಹಾರೆಯಿಂದ ಬಡಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಿನ್ನಗೋಳಿ ಏಳಿಂಜೆಯಲ್ಲಿ ಬುಧವಾರ ನಡೆದಿದೆ. ಮೃತರನ್ನು ವಿನ್ಸೆಂಟ್‌ ಡಿಸೋಜ (50) ಹಾಗೂ ಅವರು ಪತ್ನಿ ಹೆಲಿನ್‌ ಡಿಸೋಜ (45) ಎಂದು ಗುರುತಿಸಲಾಗಿದೆ. ವಿನ್ಸೆಂಟ್‌ ಡಿಸೋಜರವರು ನಿವೃತ್ತ ಸೈನಿಕರಾಗಿದ್ದಾರೆ . ಕೊಲೆ ಮಾಡಿದ ಆರೋಪಿ ಅಲ್ಫನ್ಸ್‌ ಸಲ್ಡಾನ ನೆರೆಮನೆಯ ವ್ಯಕ್ತಿ ಎಂದು ತಿಳಿದು ಬಂದಿದ್ದು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿನ್ಸೆಂಟ್‌ ಡಿಸೋಜರವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಅವರ ಪತ್ನಿ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯದಲ್ಲಿ […]

ರಾತ್ರಿ ಹೊತ್ತು ನಿಲ್ಲಿಸಿದ್ದ ಬಸ್ಸಿಗೆ ಕಲ್ಲು : ಮೂವರ ಬಂಧನ

Wednesday, September 18th, 2019
Mulky

ಮಂಗಳೂರು : ನಗರದ ಹೊರವಲಯದ ಕಿನ್ನಿಗೋಳಿ ಹಾಗೂ ಕಟೀಲು ಪರಿಸರದಲ್ಲಿ ರಾತ್ರಿ ಹೊತ್ತು ನಿಲ್ಲಿಸಿದ್ದ ಒಟ್ಟು 5 ಬಸ್ಸುಗಳಿಗೆ ಕಳೆದ ಸೆ.4ರ ಮುಂಜಾನೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ಮುಲ್ಕಿ ಹಾಗೂ ಬಜ್ಪೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಟ್ವಾಳ ತಾಲ್ಲೂಕಿನ ಬುಡೋಳಿ ಪೆರಾಜೆ ನಿವಾಸಿಗಳಾದ ಶಂಶೀರ್(27), ಅಬ್ದುಲ್ ಸತ್ತಾರ್(21) ನರಿಕೊಂಬು ನೆಹ್ರೂ ನಗರ ನಿವಾಸಿ ಮಹಮ್ಮದ್ ರಿಯಾಝ್(28) ಬಂಧಿತ ಆರೋಪಿಗಳು. ಬಂಧಿತರಿಂದ ಕಲ್ಲು ತೂರಾಟಕ್ಕೆ ಬಳಸಿದ್ದರೆನ್ನಲಾದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೆ.4ರಂದು […]