Blog Archive

ಕೊಲ್ಲೂರು : ದೇವಳದ ಸಾಕಾನೆ ಇಂದಿರಾ ಸಾವು

Wednesday, August 14th, 2019
indira-elephant

ಕೊಲ್ಲೂರು : ದೇವಳದ ಸಾಕಾನೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಜ್ವರದಿಂದ ಬಳಲುತ್ತಿದ್ದ ಸಾಕಾನೆ ಇಂದಿರಾ ಮೃತಪಟ್ಟಿದೆ. ಕಳೆದ 20 ದಿನಗಳಿಂದ 62 ವರ್ಷ ಪ್ರಾಯದ ಆನೆ ಇಂದಿರಾ ಜ್ವರದಿಂದ ಬಳಲುತ್ತಿತ್ತು. ಆನೆ ಜ್ವರದಿಂದ ಬಳಲುತ್ತಿದ್ದರೂ ಕೂಡ ಮಾವುತ ಬಾಬಣ್ಣ ವಿಶೇಷವಾದ ಮುತುವರ್ಜಿಯನ್ನು ವಹಿಸಿಕೊಂಡಿರಲಿಲ್ಲ. ಅಲ್ಲದೆ, ದೇವಾಲಯದ ಆಡಳಿತಮಂಡಳಿಯೂ ಕೂಡ ಯಾವುದೇ ಲಕ್ಷ್ಯವನ್ನು ವಹಿಸಿಕೊಂಡಿರಲಿಲ್ಲ ಎಂದು ಸ್ಥಳೀಯ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದಿರಾ ಆನೆಯನ್ನು ಬಾಳೆಹೊನ್ನೂರಿನಿಂದ ತರಲಾಗಿತ್ತು. ಕೇರಳ ಮೂಲದ ಟಿಂಬರ್ ಮರ್ಚೆಂಟ್ ಈ ಆನೆಯನ್ನು ದಾನ ನೀಡಿದ್ದರು. […]

ಕೊಲ್ಲೂರು : ಚಂಡಿಕಾ ಯಾಗದಲ್ಲಿ ಭಾಗವಹಿಸಿದ ಶ್ರೀಲಂಕಾ ಪ್ರಧಾನಿ

Friday, July 26th, 2019
Ranela

ಕೊಲ್ಲೂರು :  ಶ್ರೀಲಂಕಾ ಪ್ರಧಾನಿ ರನೇಲ ವಿಕ್ರಂ ಸಿಂಘೆ 11:10ರ ಸುಮಾರಿಗೆ ಆಗಮಿಸಿ ಕೊಲ್ಲೂರು ಶ್ರೀಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಹಾಗೂ ನವ ಚಂಡಿಕಾ ಯಾಗದಲ್ಲಿ ಪೂರ್ಣಾಹುತಿ ಸಲ್ಲಿಸಿದರು. ಹವಾಮಾನ ವೈಫರಿತ್ಯದ ಕಾರಣದಿಂದ ಹೆಲಿಕಾಫ್ಟರ್ ಬದಲು ಬಿಗು ಭದ್ರತಾ ವ್ಯವಸ್ಥೆ ನಡುವೆ ಕಾರಿನಲ್ಲಿ ಕೊಲ್ಲೂರಿಗೆ ಆಗಮಿಸಿದ ಪ್ರಧಾನಿ ವಿಕ್ರಂ ಸಿಂಘೆ, ಆರ್‌ಎನ್ ಶೆಟ್ಟಿ ಗೆಸ್ಟ್ ಹೌಸ್‌ಗೆ ಆಗಮಿಸಿದಾಗ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಎಸ್ಪಿ ನಿಶಾ ಜೇಮ್ಸ್ ಅವರು ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಿದರು. ಅಲ್ಲಿಂದ  ದೇವಸ್ಥಾನಕ್ಕೆ ಆಗಮಿಸಿ […]

ಕೊಲ್ಲೂರಿನ ಸಮೀಪ ಶಿಲಾಯುಗ ಕಾಲದ ಆದಿಮ ಚಿತ್ರಗಳು ಪತ್ತೆ

Tuesday, February 26th, 2019
Kolluru

ಮಂಗಳೂರು  : ಭಾರತದ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾದ ಕೊಲ್ಲೂರಿನ ಸಮೀಪ, ಅವಲಕ್ಕಿ ಪಾರೆ ಎಂಬ ವನ್ಯಜೀವಿ ಸಂರಕ್ಷಿತಾರಣ್ಯದ ಸ್ಥಳದಲ್ಲಿ ಸೂಕ್ಷ್ಮ ಶಿಲಾಯುಗ ಕಾಲದ ಮಾನವ ಬೇಟೆಯ ಚಿತ್ರಗಳು ಪತ್ತೆಯಾಗಿವೆ. ಹಂದಿ ಬೇಟೆ, ಹಕ್ಕಿ ಬೇಟೆ, ಕಾಡುಗೂಳಿಗಳ ಬೇಟೆ, ಜಿಂಕೆ ಬೇಟೆಯ ವಿವಿಧ ಆದಿಮ ಚಿತ್ರಗಳು ಕಂಡು ಬಂದಿವೆ. ಬೇಟೆಯ ವಿವಿಧ ಭಾವ-ಭಂಗಿಗಳಲ್ಲಿ ನಿಂತ ಮಾನವರ ಹಾಗೂ ಪ್ರಾಣಿಗಳ ಚಿತ್ರಗಳು ತಮ್ಮ ನೈಜತೆಯಿಂದ ಆಕರ್ಷಕವಾಗಿವೆ. ಈ ಚಿತ್ರಗಳಲ್ಲಿ ಪ್ರಧಾನವಾದ ಚಿತ್ರ ಓರ್ವ ಮಹಿಳೆಯದ್ದೆಂದು ಗುರುತಿಸಲಾಗಿದ್ದು, ಆಕೆಯ ಚಿತ್ರವನ್ನು […]

ಕೊಲ್ಲೂರು ಶ್ರೀ ಮೂಕಾಂಬಿಕೆಗೆ 1 ಕೆ.ಜಿ ತೂಕದ ಚಿನ್ನದ ಖಡ್ಗ ಸಮರ್ಪಣೆ ಮಾಡಿದ ಭಕ್ತ

Thursday, October 4th, 2018
kolluru

ಕುಂದಾಪುರ: ಕೊಯಮತ್ತೂರು ಮೂಲದ ಭಕ್ತರೋರ್ವರು ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕೆಗೆ 1 ಕೆ.ಜಿ ತೂಕದ ಚಿನ್ನದ ಖಡ್ಗವನ್ನು ಸಮರ್ಪಣೆ ಮಾಡಿದ್ದಾರೆ. ಕೊಯಮತ್ತೂರು ಮೂಲದ ಡಾ. ನಳಿನ್ ವಿಮಲ್ ಕುಮಾರ್ ಈ ಹರಕೆ ಸಲ್ಲಿಸಿದ್ದು, ಇವರು ಅಲ್ಲಿನ ವಿದ್ಯಾಸಂಸ್ಥೆಯಲ್ಲಿ ಆಡಳಿತ ನಿರ್ದೇಶಕರಾಗಿದ್ದಾರೆ. ಸುಮಾರು 29 ಲಕ್ಷ ಅಂದಾಜು ಮೌಲ್ಯದ ಸ್ವರ್ಣ ಖಡ್ಗವನ್ನು ಕೊಲ್ಲೂರು ತಾಯಿಗೆ ಸಮರ್ಪಿಸಿದ್ದಾರೆ. ಖಡ್ಗವನ್ನು ದೇಗುಲದ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಅವರಿಗೆ ಹಸ್ತಾಂತರಿಸಲಾಗಿದೆ. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಇದ್ದರು.

ಕಾಲೇಜಿಗೆ ತೆರಳಿದ ವಿದ್ಯಾರ್ಥಿ ನಾಪತ್ತೆ..!

Wednesday, July 4th, 2018
udupi

ಉಡುಪಿ: ಕಾಲೇಜಿಗೆ ತೆರಳಿದ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ಕುಂದಾಪುರದ ಜಡ್ಕಲ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಅಜಿತ್ ಜೋಸೆಫ್ (17) ನಾಪತ್ತೆಯಾಗಿರುವ ವಿದ್ಯಾರ್ಥಿ. ಅಜಿತ್ ಕಾಳಾವರದ ವರದರಾಜ್ ಶೆಟ್ಟಿ ಪದವಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿಗೆ ತೆರಳಿದ್ದ ಈತ ಪುನಃ ಮನೆಗೆ ತೆರಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಿಲ್ಲೆಯಲ್ಲಿ ಧಾರಾಕಾರ ಮಳೆ..ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಮೀನುಗಾರರಿಗೆ ಎಚ್ಚರಿಕೆ!

Thursday, June 21st, 2018
rain-udupi

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ರಾತ್ರಿಯಿಂದಲೇ ವರುಣನ ಆರ್ಭಟವಿದ್ದು, ಯೋಗ ದಿನಾಚರಣೆಗೆ ಅಡ್ಡಿಯಾಗಿದೆ. ಕುಂದಾಪುರ, ಕಾರ್ಕಳ, ಕೊಲ್ಲೂರು ಬೈಂದೂರಿನಲ್ಲೂ ಎಡೆಬಿಡದೇ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೆರೆ ಹಾವಳಿ ಭೀತಿ ಎದುರಾಗಿದೆ. ನಿರಂತರ ಮಳೆಯಿಂದ ಜಿಲ್ಲೆಯಲ್ಲಿ ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ದಿನವಿಡಿ ಮಳೆ ಮುಂದುವರೆಯುವ ಸಾಧ್ಯತೆ ಇದೆ.

ನಟ ಜಗ್ಗೇಶ್ 55ನೇ ಹುಟ್ಟುಹಬ್ಬದ ಪ್ರಯುಕ್ತ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ

Saturday, March 17th, 2018
jaggesh-2

ಉಡುಪಿ: ಚಿತ್ರ ನಟ ಜಗ್ಗೇಶ್ ಇಂದು ತಮ್ಮ 55ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಕುಟುಂಬ ಸಮೇತರಾಗಿ ಉಡುಪಿ ಜಿಲ್ಲೆಯ ಕುಂದಾಪುರದ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಜಗ್ಗೇಶ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇನ್ನೂ ಜಗ್ಗೇಶ್ ಚಂಡಿಕಾ ಹೋಮದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.