Blog Archive

ಉದ್ದೇಶ ಪೂರ್ವಕವಾಗಿ ಜೆಡಿಎಸ್ ಬಾವುಟ ಹಿಡಿದಿಲ್ಲ : ಡಿ.ಕೆ. ಶಿವಕುಮಾರ್​ ಸ್ಪಷ್ಟನೆ

Monday, October 28th, 2019
DKShi

ಬೆಂಗಳೂರು : ತಾವು ಉದ್ದೇಶಪೂರ್ವಕವಾಗಿ ಜೆಡಿಎಸ್ ಬಾವುಟ ಹಿಡಿದಿಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ರಾಜ್ಯಕ್ಕೆ ವಾಪಸ್ ಬಂದ ದಿನ ಕನ್ನಡ ಬಾವುಟ ಸೇರಿದಂತೆ ಹಲವಾರು ಬಾವುಟಗಳನ್ನು ಕೊಟ್ಟಿದ್ದರು. ಅದನ್ನ ನಾನು ಹಿಡಿದುಕೊಂಡಿದ್ದೆ. ಉದ್ದೇಶಪೂರ್ವಕವಾಗಿ ಜೆಡಿಎಸ್ ಬಾವುಟ ಹಿಡಿದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನಮ್ಮ ಹಿರಿಯ ನಾಯಕರು. ನನ್ನ ಹಿತೈಷಿ, ಅವರು ಆ ರೀತಿ ಮಾತನಾಡಿಲ್ಲ ಅನಿಸುತ್ತೆ. ಮಿಸ್ಟೇಕ್ ಮಾಡಿಕೊಂಡಿರಬೇಕು. ನಾನು ಹುಟ್ಟುತ್ತಲೇ ಕಾಂಗ್ರೆಸ್ ಮನುಷ್ಯ. […]

ಇಂದು ದೆಹಲಿ ಹೈಕೋರ್ಟ್ ನಲ್ಲಿ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ

Monday, October 14th, 2019
DKShi

ನವ ದೆಹಲಿ : ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ದೆಹಲಿ ಹೈಕೋರ್ಟ್ ನಲ್ಲಿ ನಡೆಯಲಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಡಿ ಕೆ ಶಿವಕುಮಾರ್ ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ. ಸೋಮವಾರ ಬೆಳಿಗ್ಗೆ ದೆಹಲಿ ಉಚ್ಛ ನ್ಯಾಯಾಲಯದ ಎದುರು ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದ್ದು, ಮಾಜಿ ಸಚಿವರ ಪರ ಮೂರು ಹಿರಿಯ ವಕೀಲರು ವಾದ ಮಂಡಿಸುವ ಸಾಧ್ಯತೆ ಇದೆ […]

ಡಿ ಕೆ ಶಿವಕುಮಾರ್ ಗೆ ಅಕ್ಟೋಬರ್ 15 ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

Tuesday, October 1st, 2019
DKShi

ನವದೆಹಲಿ : ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 15 ವರೆಗೆ ವಿಸ್ತರಿಸಲಾಗಿದೆ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಗೆ ಇಡಿ ಅಧಿಕಾರಿಗಳು ಇಂದು ಡಿಕೆ ಶಿವಕುಮಾರ್ ಅವರನ್ನು ಹಾಜರುಪಡಿಸಿದರು. ಕೋರ್ಟ್ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿದೆ. ಅಕ್ಟೋಬರ್ 4 ಮತ್ತು 5ರಂದು ಇಡಿ ಅಧಿಕಾರಿಗಳು ಡಿಕೆಶಿ ಅವರನ್ನು ವಿಚಾರಣೆ ನಡೆಸಲು ಕೋರ್ಟ್ ಅವಕಾಶ ನೀಡಿದೆ.  

ಡಿಕೆಶಿ ಅಕ್ರಮ ಆಸ್ತಿ ಪ್ರಕರಣ : ಇಂದು ಲಕ್ಷ್ಮಿ ಹೆಬ್ಬಾಳ್ಕರ್​ ವಿಚಾರಣೆ

Friday, September 20th, 2019
Lakshimi-hebbalkar

ಬೆಳಗಾವಿ : ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಜತೆಗಿನ ವ್ಯಾವಹಾರಿಕ ಸಂಬಂಧ ಆರೋಪದಡಿ, ಬೆಳಗಾವಿ ಗ್ರಾಮೀಣ ‌ಶಾಸಕಿ‌‌ ಲಕ್ಷ್ಮಿ‌ ಹೆಬ್ಬಾಳ್ಕರ್ ಎರಡನೇ ದಿನವಾದ ಇವತ್ತೂ ಜಾರಿ ನಿರ್ದೇಶನಾಲಯ ಕಚೇರಿಗೆ ತೆರಳಿ ವಿಚಾರಣೆ ಎದುರಿಸಲಿದ್ದಾರೆ. ಬೆಂಗಳೂರಿನಿಂದ ನಿನ್ನೆ ಬೆಳಗ್ಗೆ ದೆಹಲಿಗೆ ಹೋಗಿದ್ದ ಹೆಬ್ಬಾಳ್ಕರ್ ಇಡಿ ಅಧಿಕಾರಿಗಳು ನಡೆಸಿದ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಅಗತ್ಯತೆ ಇನ್ನೂ ಇದ್ದು, ಶನಿವಾರ ಮಧ್ಯಾಹ್ನ 12ಕ್ಕೆ ಆಗಮಿಸುವಂತೆ ಹೆಬ್ಬಾಳ್ಕರ್ಗೆ ಇಡಿ ಅಧಿಕಾರಿಗಳು ನಿರ್ದೇಶನ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಾಳ್ಕರ್ ಇಂದು ಕೂಡಾ ಇಡಿ […]

ಸಚಿವ ಡಿ.ಕೆ ಶಿವಕುಮಾರ್ ಮುಂಬಯಿ ಪೊಲೀಸರು ವಶಕ್ಕೆ

Wednesday, July 10th, 2019
DKSHI

ಮುಂಬಯಿ : ಅತೃಪ್ತ ಶಾಸಕರನ್ನು ಭೇಟಿ ಮಾಡಲೇಬೇಕೆಂದು ಹಠ ಹಿಡಿದು ಬೆಳಗ್ಗೆಯಿಂದ ಮುಂಬಯಿಯ ಹೋಟೆಲ್ ಮುಂದೆ ಕಾದು ಕುಳಿತಿದ್ದ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಮುಂಬಯಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅತೃಪ್ತ ಶಾಸಕರನ್ನು ಭೇಟಿ ಮಾಡಲು ಬೆಳಗ್ಗೆ 8 ಗಂಟೆಯಿಂದ ಡಿಕೆಶಿ ಬಿಗಿ ಪಟ್ಟು ಹಿಡಿದು ರಿನೈಸೆನ್ಸ್ ಹೋಟೆಲ್ ಬಳಿ ಕಾದು ಕುಳಿತಿದ್ದರು, ಹೋಟೆಲ್ ಮುಂಬಾಗ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಹೋಟೆಲ್ ಸುತ್ತಮುತ್ತ ನಿಷೇದಾಜ್ಞೆ ಜಾರಿ ಗೊಳಿಸಿತ್ತು. ನಿಷೇದಾಜ್ಞೆಯ ನಡುವೆಯೂ ಹೋಟೆಲ್ ಮುಂದೆ […]

ಮಧುಕರ್ ಶೆಟ್ಟಿ ನಿಧನ ಆಘಾತ ತಂದಿದೆ.. ಸಾವಿನ ಬಗ್ಗೆ ತನಿಖೆ ಅಗತ್ಯವಿದೆ: ಡಿ.ಕೆ. ಶಿವಕುಮಾರ್

Saturday, December 29th, 2018
congress

ಬೆಂಗಳೂರು: ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನ ಆಘಾತ ತಂದಿದೆ. ಸಾವಿನ ಬಗ್ಗೆ ತನಿಖೆ ಅಗತ್ಯವಿದೆ. ಯಾಕೆ, ಏನಾಯ್ತು ಅನ್ನೋದು ತಿಳಿಯಬೇಕು ಎಂದು ಸಚಿವ ಡಿ.ಕೆ. ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿ, ಅವರು ನನಗೆ ಬಹಳ ಹತ್ತಿರದಿಂದ ಪರಿಚಯ. ರಾತ್ರಿ ಸುದ್ದಿ ಕೇಳಿ ದುಖಃವಾಯ್ತು. ಅವರು ನಮ್ಮ ಪೊಲೀಸ್ ಇಲಾಖೆಗೆ ದೊಡ್ಡ ಆಸ್ತಿ. ಸಾವಿನ ತನಿಖೆಯಿಂದ ಸಾಕಷ್ಟು ಸತ್ಯಗಳು ಹೊರಬರಬಹುದು ಎಂದು ಹೇಳಿದ್ದಾರೆ. ಸಚಿವ ಸ್ಥಾನ, ನಿಗಮ ಮಂಡಳಿಯಲ್ಲಿ ಅವಕಾಶ ಸಿಗಲಿಲ್ಲವೆಂದು ಅಸಮಾಧಾನಗೊಂಡಿರುವವರ ಬಗ್ಗೆ ಮಾತನಾಡಿ, […]

ಡ್ರಿಪ್ಸ್​ ಹಾಕಿಕೊಂಡೇ ಸಿಎಂ ಜೊತೆಗೆ ಚರ್ಚೆ ನಡೆಸಿದ ಡಿ.ಕೆ. ಶಿವಕುಮಾರ್​

Thursday, September 20th, 2018
d-k-shivkumar

ಬೆಂಗಳೂರು: ಅನಾರೋಗ್ಯದಿಂದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಇಂದು ಆಸ್ಪತ್ರೆಗೆ ಭೇಟಿ ಮಾಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ. ಶಿವಕುಮಾರ್ ಅವರ ಆರೋಗ್ಯವನ್ನು ವಿಚಾರಿಸಿದ ಸಿಎಂ ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ ಶಿವಕುಮಾರ್ ಡ್ರಿಪ್ಸ್ ಹಾಕಿಕೊಂಡೆ ಸಿಎಂ ಜೊತೆ ಮಾತನಾಡಿದ್ದಾರೆ. ಸ್ವಲ್ಪ ಯಾಮಾರಿದ್ದರೂ ಮೈತ್ರಿ ಸರ್ಕಾರ ಪತನವಾಗುತ್ತಿತ್ತು. ಈಗಲೂ ಸರ್ಕಾರವನ್ನು ಬೀಳಿಸಲು ಬಿಜೆಪಿ […]

ಡಿ.ಕೆ. ಶಿವಕುಮಾರ್ ಅನಾರೋಗ್ಯ ಹಿನ್ನೆಲೆ: ಸಿಎಂ ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ!

Thursday, September 20th, 2018
kumarswamy

ಬೆಂಗಳೂರು: ಡಿ.ಕೆ. ಶಿವಕುಮಾರ್ ಅನಾರೋಗ್ಯ ಹಿನ್ನೆಲೆ ಸಿಎಂ ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ‌ ಡಿಕೆಶಿ ಅಪೋಲೊ‌ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ಕುಮಾರಸ್ವಾಮಿ ಆರೋಗ್ಯದ ಕುರಿತು ವಿಚಾರಿಸಿದ್ದಾರೆ. ಅಲ್ಲದೇ ಡಿಕೆಶಿ ಜೊತೆ ಇಡಿ ಪ್ರಕರಣ ದಾಕಲಿಸಿರುವ ಕುರಿತು ಕೂಡ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಡಿಕೆಶಿ ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಹಿನ್ನೆಲೆಯಲ್ಲಿ, ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ.

ಹಿಂದಿನ ಸರ್ಕಾರದ ಕೆಲ ಜನಪ್ರಿಯ ಕಾರ್ಯಕ್ರಮಗಳನ್ನು ತಡೆಯಲು ಅವಕಾಶ ಮಾಡಿಕೊಡಬೇಡಿ: ಸಿದ್ದರಾಮಯ್ಯ

Friday, June 29th, 2018
siddaramaih

ಬೆಂಗಳೂರು: ಆರ್ಥಿಕ ಹೊರೆ ನೆಪವೊಡ್ಡಿ ಇಂದಿರಾ ಕ್ಯಾಂಟೀನ್ ಸೇರಿದಂತೆ ಹಿಂದಿನ ಸರ್ಕಾರದ ಕೆಲ ಜನಪ್ರಿಯ ಕಾರ್ಯಕ್ರಮಗಳನ್ನು ತಡೆಯಲು ಮುಂದಾದರೆ ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಮನ್ವಯ ಸಮಿತಿ ಕಾಂಗ್ರೆಸ್ ಸದಸ್ಯರಿಗೆ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ. ಸಂಜೆ ನಡೆಯುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರಚನಾ ಸಮಿತಿ ಸಭೆಗೆ ಮುನ್ನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಸದಸ್ಯರಾದ ವೀರಪ್ಪ ಮೊಯ್ಲಿ, ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್ ಜತೆಗಿನ ಸಭೆಯಲ್ಲಿ ಈ ವಿಚಾರವಾಗಿ ಸಿದ್ದರಾಮಯ್ಯ ಗಮನ ಸೆಳೆದರು. […]

ವಿಧಾನಸೌಧದಲ್ಲಿನ ಕಚೇರಿಗೆ ಸಚಿವ‌ ಡಿ.ಕೆ. ಶಿವಕುಮಾರ್ ಇಂದು ಎಂಟ್ರಿ.. ಪೂಜೆ ಸಲ್ಲಿಕೆ!

Monday, June 18th, 2018
d-k-shivkumar

ಬೆಂಗಳೂರು: ವಿಧಾನಸೌಧದಲ್ಲಿನ ಕಚೇರಿಗೆ ಸಚಿವ‌ ಡಿ.ಕೆ. ಶಿವಕುಮಾರ್ ಇಂದು ಎಂಟ್ರಿ ಕೊಟ್ಟರು. ಮೂರನೇ ಮಹಡಿಯಲ್ಲಿನ 336 ಸಂಖ್ಯೆಯ ಕೊಠಡಿಗೆ ಪ್ರವೇಶಿಸಿದ ಡಿಕೆಶಿ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೊಸ ಇಲಾಖೆ ತೆಗೆದುಕೊಂಡ ಮೇಲೆ ಚಿಕ್ಕಚೊಕ್ಕ ಕಚೇರಿಯನ್ನೇ ಇಟ್ಟುಕೊಂಡಿದ್ದೇನೆ. ದೊಡ್ಡ ಕಚೇರಿಗೆ ಹೋಗಿಲ್ಲ. ಸ್ವವಿಶ್ವಾಸವುಳ್ಳ ಮನುಷ್ಯ ನಾನು ಎಂದು ತಿಳಿಸಿದರು. ಈ ಬಾರಿ ವರುಣನ ಕೃಪೆ ಚೆನ್ನಾಗಿದೆ. 114 ಟಿಎಂಸಿಯಷ್ಟು ಕಬಿನಿ ಜಲಾಶಯದಲ್ಲಿ ನೀರು ತುಂಬಿದೆ. 6.2 ಟಿಎಂಸಿ ಹೊರ ಹರಿವು ಇದ್ದು, ಮೆಟ್ಟೂರಿಗೆ […]