Blog Archive

ಮಹಿಳೆಯರ ಸುರಕ್ಷತೆಗಾಗಿ 751 ದ್ವಿಚಕ್ರ ವಾಹನಗಳ ಹಸ್ತಾಂತರ

Wednesday, November 11th, 2020
bicycle

ಬೆಂಗಳೂರು : ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಹಾಗೂ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ನಿರ್ಭಯ ಯೋಜನೆಯಡಿ 751 ದ್ವಿಚಕ್ರ  ವಾಹನಗಳನ್ನು ರಾಜ್ಯ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮುಂಭಾಗದಲ್ಲಿ ಇಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿರ್ಭಯ ಯೋಜನೆಯಡಿ ರಾಜ್ಯ ಪೊಲೀಸ್ ಇಲಾಖೆಗೆ 751 ದ್ವಿ-ಚಕ್ರ ವಾಹನಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು ಪೊಲೀಸ್ ಇಲಾಖೆಗೆ ಇದರಿಂದ ಮತ್ತಷ್ಟು ವೇಗವನ್ನು ನೀಡಿದಂತಾಗುತ್ತದೆ. ಬೆಂಗಳೂರಿನಂತ ಬೃಹತ್ […]

ನೂತನ ಪ್ರವಾಸೋದ್ಯಮ ನೀತಿಯು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸಹಕಾರಿ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 

Sunday, September 27th, 2020
Tourism day

ಬೆಂಗಳೂರು : ನೂತನ ಪ್ರವಾಸೋದ್ಯಮ ನೀತಿಯು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹಾಗೂ ರಾಜ್ಯ ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ತಿಳಿಸಿದರು. ಅವರು ಇಂದು ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೂತನ ಪ್ರವಾಸೋದ್ಯಮ ನೀತಿ 2020-25 ರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿಯ ಗುರಿ ಸಾಧಿಸಬೇಕಾದರೆ ಸಮರ್ಪಕ ರೂಪುರೇಷೆಗಳು ಹಾಗೂ ಯೋಜನೆಗಳನ್ನು ಒಳಗೊಂಡ ಒಂದು ನೀತಿಯನ್ನು ರೂಪಿಸಿಕೊಳ್ಳುವುದು ಅನಿವಾರ್ಯವಾಗಿದ್ದು, ಪ್ರವಾಸೋದ್ಯಮದ ಸಮಗ್ರ […]

ಸಿದ್ಧಗಂಗಾ ಶ್ರೀಗಳಿಗೆ ಚಿಕಿತ್ಸೆ ಸಂಬಂಧ ಸರ್ಕಾರದಿಂದ ಸೂಕ್ತ ವ್ಯವಸ್ಥೆ ಮಾಡಲಾಗಿದೆ: ಜಿ.ಪರಮೇಶ್ವರ್

Friday, December 7th, 2018
parameshwar

ಬೆಂಗಳೂರು: ಸಿದ್ಧಗಂಗಾ ಶ್ರೀಗಳ ಚಿಕಿತ್ಸೆಗಾಗಿ ಸರ್ಕಾರದ ವತಿಯಿಂದ ಏನು ವ್ಯವಸ್ಥೆ ಮಾಡಬೇಕೋ ಅದನ್ನೆಲ್ಲಾ ಮಾಡಿದ್ದೇವೆ ಎಂದು ಡಿಸಿಎಂ‌ ಜಿ.ಪರಮೇಶ್ವರ್ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿದ್ಧಗಂಗಾ ಶ್ರೀಗಳನ್ನು ನಿನ್ನೆ ಭೇಟಿ ಮಾಡಿದ್ದೇನೆ. ಅವರ ಆರೋಗ್ಯ ಸ್ಥಿರವಾಗಿದೆ. ಆದರೆ, ಚೆನ್ನೈನಿಂದ ಬಂದ ವೈದ್ಯರು ಇನ್ನೂ ಹೆಚ್ಚಿನ ಚಿಕಿತ್ಸೆ ನೀಡಬೇಕು ಅಂತ ತೀರ್ಮಾನಿಸಿದ್ದಾರೆ. ಈ ಬಗ್ಗೆ ಶ್ರೀಮಠದ ಸ್ವಾಮಿಗಳು ಚರ್ಚೆ ಮಾಡಿ ನನಗೂ ತಿಳಿಸಿದರು ಎಂದರು. ಸಿಎಂ ಕುಮಾರಸ್ವಾಮಿ ಅವರು ಸಹ ಇದರ ಬಗ್ಗೆ ಗಮನ ಹರಿಸಲು ನನಗೆ ತಿಳಿಸಿದ್ದಾರೆ. […]

ಸರ್ಕಾರದಿಂದ ಕಾರ್ಮಿಕರಿಗೆ ಮನೆ ನಿರ್ಮಾಣ ವೆಚ್ಚದಲ್ಲಿ ಹೆಚ್ಚಳ..!

Friday, July 20th, 2018
venkatramanappa

ಬೆಂಗಳೂರು: ಕಾರ್ಮಿಕರಿಗೆ ಮನೆ ನಿರ್ಮಾಣ ವೆಚ್ಚದಲ್ಲಿ ಹೆಚ್ಚಳ ಮಾಡಿದ್ದು, ೨ ಲಕ್ಷ ರೂ.ನಿಂದ ೫ ಲಕ್ಷಕ್ಕೆ ಮನೆ ನಿರ್ಮಾಣ ವೆಚ್ಚ ಹೆಚ್ಚಳ ಮಾಡಲು ನಿರ್ಧರಿಸಿದ್ದೇವೆ ಎಂದು ಕಾರ್ಮಿಕ ಸಚಿವ ವೆಂಕಟ್ರಮಣಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, 9ಲಕ್ಷಕ್ಕೆ ಮನೆ ಕಟ್ಟಲು ಆಗುವುದಿಲ್ಲ. ಹಾಗಾಗಿ ವೆಚ್ಚ ಹೆಚ್ಚಳ ಮಾಡಿದ್ದೇವೆ. ನಿವೇಶನ ಇರುವ ಕಾರ್ಮಿಕರಿಗೆ ಮಾತ್ರ ಮನೆ ನಿರ್ಮಾಣ ಮಾಡಿಕೊಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ರಾಜೀವ್ ಗಾಂಧಿ ವಸತಿ ನಿಗಮದಡಿ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಹಂತ ಹಂತವಾಗಿ ಕಾರ್ಮಿಕರಿಗೆ ಮನೆಗಳ ನಿರ್ಮಾಣ […]

ಜಾತಿ ಗಣತಿಗೆ ಹೆಚ್ಚುವರಿ ಹಣ ಕೇಳುತ್ತಿದ್ದಾರೆ: ಸಚಿವ ಪುಟ್ಟರಂಗ ಶೆಟ್ಟಿ

Friday, June 22nd, 2018
puttaranag-shetty

ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ ಕೈಗೊಂಡಿರುವ ಆರ್ಥಿಕ ಮತ್ತು ಸಾಮಾಜಿಕ ಗಣತಿಗೆ ಅಧಿಕಾರಿಗಳು ಹೆಚ್ಚುವರಿ ಹಣ ಕೇಳುತ್ತಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ತಮ್ಮ ಕಚೇರಿ ಪ್ರವೇಶಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಆರ್ಥಿಕ ಮತ್ತು ಸಾಮಾಜಿಕ ಗಣತಿಗೆ ಈಗಾಗಲೇ 150 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಆ ಹಣ ಸಾಲದು ಎಂದು ಹೆಚ್ಚುವರಿಯಾಗಿ ಇನ್ನೂ ಹಣ ಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮನವಿ ಸಲ್ಲಿಸಿದ್ದಾರೆ. […]

ರಾಜ್ಯ ಮತ್ತು ಜಿಲ್ಲಾ ಹೆದ್ದಾರಿ ಗುಂಡಿ ಮುಚ್ಚಲು ಒಂದು ಕಿ.ಮೀ.ಗೆ 25-30 ಸಾವಿರ ರೂಪಾಯಿ ಬಿಡುಗಡೆ: ಹೆಚ್.ಡಿ.ರೇವಣ್ಣ

Thursday, June 21st, 2018
H-D-Revanna

ಬೆಂಗಳೂರು: ರಾಜ್ಯ ಮತ್ತು ಜಿಲ್ಲಾ ಹೆದ್ದಾರಿ ಗುಂಡಿ ಮುಚ್ಚಲು ಒಂದು ಕಿ.ಮೀ.ಗೆ 25-30 ಸಾವಿರ ರೂಪಾಯಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸದ್ಯ ಜಲ್ಲಿ ಹಾಕಿ ಮುಚ್ಚಲಾಗುವುದು. ಮಳೆಗಾಲ ಬಳಿಕ ಅದಕ್ಕೆ ಟಾರ್ ಹಾಕಲಾಗುವುದು. ಈ ನಿಟ್ಟಿನಿಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು. ರಸ್ತೆ ಗುಂಡಿಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಪ್ರದಾನ ಕಾರ್ಯದರ್ಶಿ, ಚೀಫ್ ಇಂಜಿನಿಯರ್‌ಗಳ ಜೊತೆ ಸಭೆ ಮಾಡಿದ್ದೇನೆ. […]

ವಿಧಾನಸೌಧದಲ್ಲಿನ ಕಚೇರಿಗೆ ಸಚಿವ‌ ಡಿ.ಕೆ. ಶಿವಕುಮಾರ್ ಇಂದು ಎಂಟ್ರಿ.. ಪೂಜೆ ಸಲ್ಲಿಕೆ!

Monday, June 18th, 2018
d-k-shivkumar

ಬೆಂಗಳೂರು: ವಿಧಾನಸೌಧದಲ್ಲಿನ ಕಚೇರಿಗೆ ಸಚಿವ‌ ಡಿ.ಕೆ. ಶಿವಕುಮಾರ್ ಇಂದು ಎಂಟ್ರಿ ಕೊಟ್ಟರು. ಮೂರನೇ ಮಹಡಿಯಲ್ಲಿನ 336 ಸಂಖ್ಯೆಯ ಕೊಠಡಿಗೆ ಪ್ರವೇಶಿಸಿದ ಡಿಕೆಶಿ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೊಸ ಇಲಾಖೆ ತೆಗೆದುಕೊಂಡ ಮೇಲೆ ಚಿಕ್ಕಚೊಕ್ಕ ಕಚೇರಿಯನ್ನೇ ಇಟ್ಟುಕೊಂಡಿದ್ದೇನೆ. ದೊಡ್ಡ ಕಚೇರಿಗೆ ಹೋಗಿಲ್ಲ. ಸ್ವವಿಶ್ವಾಸವುಳ್ಳ ಮನುಷ್ಯ ನಾನು ಎಂದು ತಿಳಿಸಿದರು. ಈ ಬಾರಿ ವರುಣನ ಕೃಪೆ ಚೆನ್ನಾಗಿದೆ. 114 ಟಿಎಂಸಿಯಷ್ಟು ಕಬಿನಿ ಜಲಾಶಯದಲ್ಲಿ ನೀರು ತುಂಬಿದೆ. 6.2 ಟಿಎಂಸಿ ಹೊರ ಹರಿವು ಇದ್ದು, ಮೆಟ್ಟೂರಿಗೆ […]

ನಾನು ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾದರೆ ಒಂದು ಕ್ಷಣವೂ ಅಧಿಕಾರದಲ್ಲಿರುವುದಿಲ್ಲ: ಎಚ್ ಡಿ ಕುಮಾರಸ್ವಾಮಿ

Tuesday, June 12th, 2018
kumarswamy

ಬೆಂಗಳೂರು: ‘ನಾನು ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾದರೆ ಒಂದು ಕ್ಷಣವೂ ಅಧಿಕಾರದಲ್ಲಿರುವುದಿಲ್ಲ’ ಎಂದು ಮುಖ್ಯಮಮತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ಸಾಕಷ್ಟಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಬೆಂಗಳೂರಿನ ಗಾಂಧಿ ಭವನದಲ್ಲಿ ಜೂನ್ 11 ರಂದು ಮಾತನಾಡುತ್ತಿದ್ದ ಅವರು, ‘ಭ್ರಷ್ಟಾಚಾರದ ಬೇರು ತುಂಬಾ ಆಳವಾಗಿದೆ. ಅದನ್ನು ಸ್ವಚ್ಛಗೊಳಿಸಬೇಕು ಎಂದರೂ ಸಾಧ್ಯವಾಗುತ್ತಿಲ್ಲ. ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಲು ಪ್ರಯತ್ನಿಸಿದರೆ ನನಗೇ ಅಪಾಯ’ ಎಂದು ಅವರು ಕಳವಳ ವ್ಯಕ್ತಪಡಿಸಿದರು. ವಿಧಾನಸೌಧದ ಕಾರಿಡಾರ್ ಗಳಲ್ಲಿ ಮಧ್ಯವರ್ತಿಗಳು ಅಡ್ಡಾಡುತ್ತಾ ಜನರಿಂದ […]

ಬೆಂಗಳೂರಲ್ಲಿ ಜೋರು ಮಳೆ, ಇನ್ನೂ ನಾಲ್ಕು ದಿನ ಛತ್ರಿ ಮರೆಯುವಂತಿಲ್ಲ..!

Wednesday, May 23rd, 2018
bangaluru

ಬೆಂಗಳೂರು: ರಾಜಕೀಯ ಕಾವಿನಿಂದ ಕುದಿಯುತ್ತಿರುವ ರಾಜ್ಯ ರಾಜಧಾನಿಗೆ ಬುಧವಾರ ಮಧ್ಯಾಹ್ನ ಬಂದ ಮಳೆ ತಂಪೆರಿದಿದೆ. ಮಧ್ಯಾಹ್ನ ಬಂದ ಜೋರು ಮಳೆ ವಾತಾವರಣಕ್ಕೆ ತಂಪು ಪೂಸಿದರೆ, ರಸ್ತೆಗಳಿಗೆ ಟ್ರಾಫಿಕ್ ಕಿರಿ-ಕಿರಿ ಹೆಚ್ಚಿಸಿದೆ. ಹಠಾತ್‌ನೆ ಬಂದ ಮಳೆಗೆ ರಸ್ತೆಗಳು ತುಂಬಿ ಹರಿಯುತ್ತಿವೆ. ಜಯನಗರ, ವಿಧಾನಸೌಧ, ಮಲ್ಲೇಶ್ವರ, ಇನ್ನೂ ಹಲವು ಕಡೆ ಜೋರು ಮಳೆಯಾಗಿದೆ. ಕುಮಾರಸ್ವಾಮಿ ಅವರ ಪಟ್ಟಾಭಿಷೇಕಕ್ಕೆ ಅಣಿಯಾಗಿದ್ದ ವಿಧಾನಸೌಧದ ಬಳಿಯೂ ಜೋರು ಮಳೆ ಆಗಿದೆ. ಮಳೆ ಮೊರೆತಕ್ಕೆ ಜನ ಚದುರಿ ಹೋಗಿದ್ದಾರೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ನಗರದಲ್ಲಿ ಇನ್ನೂ […]

ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿರುವ ರಾಷ್ಟ್ರಪತಿ ಕೋವಿಂದ್

Wednesday, October 25th, 2017
ram nath kovind

ಬೆಂಗಳೂರು: ಪ್ರಜಾಪ್ರಭುತ್ವ ಇತಿಹಾಸದಲ್ಲಿ ಇದೊಂದು ಸ್ಮರಣೀಯ ದಿನವಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬುಧವಾರ ಹೇಳಿದ್ದಾರೆ. ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿರುವ ರಾಷ್ಟ್ರಪತಿ ಕೋವಿಂದ್ ಅವರು, ರಾಜ್ಯದ ಶಕ್ತಿ ಸೌಧ ವಿಧಾನಸೌಧಕ್ಕೆ 60 ವರ್ಷ ತುಂಬಿರುವ ಹಿನ್ನಲೆಯಲ್ಲಿ ಇಂದು ನಡೆಯುತ್ತಿರುವ ವಿವಿಧ ವಿಶೇಷ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಅಂತೆಯೇ ಇಂದು ವಿಧಾನಮಮಂಡಲ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಕೋವಿಂದ್ ಅವರು, ಪ್ರಜಾಪ್ರಭುತ್ವ ಇತಿಹಾಸದಲ್ಲಿ ಇದೊಂದು ಸ್ಮರಣೀಯ ದಿನವಾಗಿದೆ. 3 ತಿಂಗಳ ಹಿಂದೆ […]