Blog Archive

ಮಂಗಳೂರು : ಕೊರೋನಾ ಪರೀಕ್ಷೆ ನಡೆಸುವಂತೆ ಶಿಕ್ಷಕರಿಂದ ಒತ್ತಡ ; ದೂರು

Wednesday, March 4th, 2020
Corona

ಮಂಗಳೂರು : ಜಿಲ್ಲೆಯ ಕೆಲವು ಖಾಸಗೀ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ವರ ಬಂದರೂ, ಕೊರೋನಾ ಪರೀಕ್ಷೆ ನಡೆಸುವಂತೆ ಶಿಕ್ಷಕರು ಒತ್ತಡ ಹೇರುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇದನ್ನು ನಿಲ್ಲಿಸಲು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೂಚಿಸಿದ್ದಾರೆ. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋರೋನಾ ರೋಗ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯಕೀಯ ಕಾಲೇಜುಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊರೋನಾ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಈಗಾಗಲೇ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. […]

ಶಿಕ್ಷಕರಿಗೆ ವೃತ್ತಿಯಲ್ಲಿ ಸಾರ್ವತ್ರಿಕ ಮಾನವ ಮೌಲ್ಯಗಳು ಮತ್ತು ನೈತಿಕತೆ ವಿಷಯದಲ್ಲಿ ಬೋಧನಾ ಅಭಿವೃದ್ಧಿ ಕಾರ್ಯಕ್ರಮ

Saturday, September 8th, 2018
FDP-Programme

ಮಂಗಳೂರು :ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ನ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಇಲಾಖೆ, ಎಲ್ಲಾ ಪದವಿಪೂರ್ವ ಕಾಲೇಜು ಶಿಕ್ಷಕರಿಗೆ ಒಂದು ದಿನದ ಫ್ಯಾಕಲ್ಟಿ ಡೆವಲಪ್ಮೆಂಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮತ್ತು ಶಿವಮೊಗ್ಗ ಜಿಲ್ಲೆಗಳ 31 ಪದವಿಪೂರ್ವ ಕಾಲೇಜುಗಳಿಂದ 71 ಶಿಕ್ಷಕರು ಭಾಗವಹಿಸಿದರು. ಮಂಗಳೂರಿನ ಎಸ್ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ನ ಪ್ರೊಫೆಸರ್ ಅರುಣಾ ಕಾಮತ್ ಮುಖ್ಯ ಅತಿಥಿಯ ಉದ್ಘಾಟನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. MBA ವಿಭಾಗದ ನಿರ್ದೇಶಕ ಡಾ. ವಿಶಾಲ್ […]

ವಾಕಿಂಗ್ ಮಾಡುತ್ತಿದ್ದ ಶಿಕ್ಷಕರೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವು

Tuesday, December 20th, 2016
Dinakar-hegde

ಮಂಗಳೂರು: ವಾಕಿಂಗ್ ಮಾಡುತ್ತಿದ್ದ ಶಿಕ್ಷಕರೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ನಡೆದಿದೆ. ವಾಹನ ಡಿಕ್ಕಿಯಿಂದ ಶಿಕ್ಷಕ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಸರ್ಕಾರಿ ಶಾಲೆಯ ಶಿಕ್ಷಕ ದಿನಕರ್‌ ಹೆಗ್ಡೆ (48) ಮೃತ ದುರ್ದೈವಿ. ಎಂದಿನಂತೆ ದಿನಕರ್‌‌ ಹೆಗ್ಡೆ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಯಮಸ್ವರೂಪಿಯಾಗಿ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ ಎನ್ನಲಾಗಿದೆ. ಈ ಸಂಬಂಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ […]

ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ವಿಧಿ ವಶ

Thursday, September 16th, 2010
ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ವಿಧಿ ವಶ

ಮೂಡುಬಿದಿರೆ:  ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ಅವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಬುಧವಾರ ಸಂಜೆ ನಿಧನರಾದರು ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಅವರು ಐವರು ಗಂಡು ಮತ್ತು ಐವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಕ್ರಷಿಕರಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದ ಅಪ್ರತಿಮ ಸಾಧಕ ಕೆಜೆ.ಶೆಟ್ಟಿ ಕಡಂದಲೆ ಶಿಕ್ಷಕರಾಗಿ, ಸಾಹಿತಿಯಾಗಿ,  ಅಪ್ರತಿಮ ಹೋರಾಟಗಾರರಾಗಿ, ಹರಿತವಾದ ಬರಹಗಳಿಂದ ಜನರ ಮನ ಮುಟ್ಟಿದ್ದರು. ಕಡಂದಲೆಯಲ್ಲಿ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಟ್ಟು.  ಸ್ವತಃ ತಾವೇ ಸಂಪಾದಕರಾಗಿ ಚಂದನ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದರು. ಸ್ಥಳೀಯ ಪತ್ರಿಕೆಗಳಿಗೆ ಅಂಕಣ […]