Blog Archive

ಜಿಲ್ಲೆಯ ವಿವಿಧ ನೆರೆಪೀಡಿತ ಪ್ರದೇಶಗಳಿಗೆ ಯು.ಟಿ.ಖಾದರ್ ಭೇಟಿ..!

Saturday, August 18th, 2018
u-t-kadher

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ನೆರೆಪೀಡಿತ ಪ್ರದೇಶಗಳಿಗೆ ನಗರಾಭಿವೃದ್ಧಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹಾಗೂ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೊದಲು ಬಂಟ್ವಾಳ ತಾಲೂಕಿನ ಗೂಡಿನಬಳಿ, ಆಲಡ್ಕ ಮತ್ತು ಪಾಣೆಮಂಗಳೂರಿಗೆ ಭೇಟಿ ನೀಡಿ ನೇತ್ರಾವತಿ ಹಳೆ ಸೇತುವೆ ಸಮೀಪ ನೆರೆ ನೀರನ್ನು ವೀಕ್ಷಿಸಿದ ಸಚಿವರು, ಬಳಿಕ ಆಲಡ್ಕ ಪ್ರದೇಶದಲ್ಲಿ ನೆರೆ ನೀರಿನಿಂದ ಮುಳುಗಿದ ಜನ ವಸತಿ ಪ್ರದೇಶಗಳನ್ನು ವೀಕ್ಷಿಸಿ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ ಅಹವಾಲು ಆಲಿಸಿದರು. ಬಳಿಕ […]

ಶಿರಾಡಿ ಘಾಟ್​ನಲ್ಲಿ ಆ.25 ರವರೆಗೆ ರಸ್ತೆ ಸಂಚಾರ ನಿಷೇಧ: ಸಸಿಕಾಂತ್ ಸೆಂಥಿಲ್

Friday, August 17th, 2018
sesikanth-senthil

ಮಂಗಳೂರು: ಪಶ್ಚಿಮ ಘಟ್ಟದಲ್ಲಿ ಸುರಿದ ಭಾರಿ ಮಳೆ ಹಿನ್ನೆಲೆಯಲ್ಲಿ ಗುಡ್ಡ ಕುಸಿತ ಸಂಭವಿಸಿರುವುದರಿಂದ ಆ.25 ರವರೆಗೆ ಶಿರಾಡಿ ಘಾಟ್ನಲ್ಲಿ ಸಂಚಾರ ನಿಷೇಧಿಸಿ ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ. ಮಂಗಳೂರಿನಿಂದ ಹಾಸನ ಮಾರ್ಗವಾಗಿ ಬೆಂಗಳೂರು ತಲುಪಲು ಹತ್ತಿರದ ರಸ್ತೆಯಾಗಿರುವ ಶಿರಾಡಿ ಘಾಟ್ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದವು. ಪಶ್ಚಿಮ ಘಟ್ಟದಲ್ಲಿ ಹಾದು ಹೋಗುವ ಈ ರಸ್ತೆಯಲ್ಲಿ ಕಳೆದ ಮೂರು ದಿನಗಳಿಂದ ಹಲವು ಬಾರಿ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದಿರುವುದರಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಳೆ […]

ನಾಳೆಯಿಂದ ಆಳ್ವಾಸ್ ಪ್ರಗತಿ-ಬೃಹತ್ ಉದ್ಯೋಗಮೇಳ

Thursday, July 5th, 2018
ನಾಳೆಯಿಂದ ಆಳ್ವಾಸ್ ಪ್ರಗತಿ-ಬೃಹತ್ ಉದ್ಯೋಗಮೇಳ

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಜುಲೈ 6 ಹಾಗೂ 7ರಂದು `ಆಳ್ವಾಸ್ ಪ್ರಗತಿ 2018′-10ನೇ ವರ್ಷದ ಬೃಹತ್ ಉದ್ಯೋಗ ಮೇಳವು ವಿದ್ಯಾಗಿರಿಯ ಆಳ್ವಾಸ್ ಕಾಲೇಜಿನ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ. 600 ಹೆಸರಾಂತ ಕಂಪೆನಿಗಳು ಭಾಗವಹಿಸಲಿದ್ದು, 2 ಸಾವಿರಕ್ಕೂ ಅಧಿಕ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ಉಚಿತ ನೋಂದಾವಣೆ, ಅತ್ಯಂತ ಪಾರದರ್ಶಕತೆ, ವ್ಯವಸ್ಥಿತ ರೀತಿಯಲ್ಲಿ ನಡೆಯಲಿರುವ ಉದ್ಯೋಗ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 12 ಸಾವಿರ ಅಭ್ಯರ್ಥಿಗಳು ಪ್ರಗತಿಯಲ್ಲಿ ಭಾಗಹಿಸುವ ನಿರೀಕ್ಷೆಯಿದೆ ಎಂದು ಆಳ್ವಾಸ್ ಶಿಕ್ಷಣ […]

ಕರಾವಳಿಯಲ್ಲಿ ಭಾರಿ ಮಳೆ ಇಂದು ಮತ್ತು ನಾಳೆ ಶಾಲೆಗಳಿಗೆ ರಜೆ ಘೋಷಣೆ..!

Friday, June 8th, 2018
dakshina-kannada

ಮಂಗಳೂರು: ಕರಾವಳಿಯಲ್ಲಿ ಭಾರಿ ಮಳೆ ಮುಂದುವರೆದಿದ್ದು ಮುಂಜಾಗೃತಾ ಕ್ರಮವಾಗಿ ಇಂದು ಮತ್ತು ನಾಳೆ (ಜೂನ್ 08, ಜೂನ್ 9) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ನಿನ್ನೆ ರಾತ್ರಿಯಿಂದಲೂ ಎಡಬಿಡದೆ ಮಳೆ ಸುರಿಯುತ್ತಿದ್ದು, ಬೆಳಿಗ್ಗೆ ಸಹ ಜೋರು ಮಳೆ ಬರುತ್ತಲೇ ಇರುವ ಕಾರಣ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಈ ನಿರ್ಣಯ ತೆಗೆದುಕೊಂಡಿದ್ದಾರೆ. ರಜೆಯನ್ನು ಶಾಲೆಗಳಿಗೆ ಮಾತ್ರವೇ ನೀಡಲಾಗಿದ್ದು ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಮುಂಬೈನಲ್ಲಿ ಭಾರಿ ಮಳೆ ನಿರೀಕ್ಷೆ, ಕಡಲಿಗೆ ಇಳಿಯದಂತೆ ಕೇರಳ ಮೀನುಗಾರರಿಗೆ […]

ವಿಧಾನಪರಿಷತ್ ಚುನಾವಣೆ: ನಿಷೇಧಾಜ್ಞೆ

Thursday, June 7th, 2018
Sasikanth Senthil

ಮಂಗಳೂರು : ವಿಧಾನಪರಿಷತ್ ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಮುಕ್ತ ಮತ್ತು ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆಯನ್ನು ನಡೆಸುವ ನಿಟ್ಟಿನಲ್ಲಿ ದ.ಕ ಜಿಲ್ಲೆಯ ಒಟ್ಟು 37 (ಪದವೀಧರ ಕ್ಷೇತ್ರ-23 ಮತ್ತು ಶಿಕ್ಷಕರ ಕ್ಷೇತ್ರ-17) ಮತದಾನ ಕೇಂದ್ರಗಳ 500 ಮೀಟರ್ ವ್ಯಾಪ್ತಿಯಲ್ಲಿ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರನ್ವಯ ನಿಷೇಧಾಜ್ಞೆಯನ್ನು ವಿಧಿಸಿ ಜಿಲ್ಲಾಧಿಕಾರಿ ಡಾ. ಸಸಿಕಾಂತ್ […]

ನಿನ್ನೆ ಜಿಲ್ಲೆಯಾದ್ಯಂತ ಸುರಿದ ಮಹಾಮಳೆಗೆ ದ.ಕ.ಜಿಲ್ಲೆಯಲ್ಲಿ 20 ಕೋಟಿ ರೂ. ನಷ್ಟ: ಸಸಿಕಾಂತ್ ಸೆಂಥಿಲ್

Wednesday, May 30th, 2018
sesikanth-senthil.-2

ಮಂಗಳೂರು: ನಿನ್ನೆ ಜಿಲ್ಲೆಯಾದ್ಯಂತ ಸುರಿದ ಮಹಾಮಳೆಗೆ ದ.ಕ. ಜಿಲ್ಲೆಯಲ್ಲಿ 20 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಆಸ್ತಿಗಳಾದ ರಸ್ತೆ ಮತ್ತು ಸೇತುವೆ ಡ್ಯಾಮೆಜ್ ನಿಂದ 4 ಕೋಟಿ ನಷ್ಟ ಸಂಭವಿಸಿದೆ. ಖಾಸಗಿ ಆಸ್ತಿಗಳಾದ ಮನೆ 3.7 ಕೋಟಿ ‌ನಷ್ಟ, ವಿದ್ಯುತ್ ಸಂಪರ್ಕ 1.9 ಕೋಟಿ ಮತ್ತು ಇತರ ಸೇರಿದಂತೆ 20 ಕೋಟಿ ನಷ್ಟ ಸಂಭವಿಸಿದೆ. ರಾಜಾಕಾಲುವೆ ಯಿಂದ ನೀರು […]

ವಾಟ್ಸಪ್ ,ಫೇಸ್‌ಬುಕ್‌ ನಲ್ಲಿ ಬರುವ ಇಂತಹ ಸುದ್ದಿಗಳನ್ನು ನಂಬಬೇಡಿ: ಸಸಿಕಾಂತ್ ಸೆಂಥಿಲ್

Thursday, May 24th, 2018
sesikanth-senthil

ಮಂಗಳೂರು: ನಿಪಾಹ್ ವೈರಸ್ ಕಾಣಿಸಿಕೊಂಡ ನಂತರ ವಾಟ್ಸಪ್ ಫೇಸ್‌ಬುಕ್‌ ನಲ್ಲಿ ನಿಪಾಹ್ ವೈರಸ್ ಗೆ ಗಿಡ ಮೂಲಿಕೆ ಮದ್ದು ಇದೆ. ಯಾವುದೋ ಗಿಡಮೂಲಿಕೆ ಸೇವಿಸಿದರೆ ನಿಪಾಹ್ ವೈರಸ್ ಗುಣವಾಗುತ್ತದೆ ಎಂಬ ಸುದ್ದಿಯೊಂದು‌ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ವಾಟ್ಸಪ್ , ಫೇಸ್‌ಬುಕ್‌ ನಲ್ಲಿ ಬರುವ ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ.

ದೇಶವನ್ನೇ ಬಿಚ್ಚಿಬೀಳಿಸಿದ್ದ ಮಂಗಳೂರು ವಿಮಾನ ದುರಂತಕ್ಕೆ 8 ವರ್ಷ, ಮಡಿದವರಿಗೆ ಶ್ರದ್ಧಾಂಜಲಿ

Tuesday, May 22nd, 2018
aeroplane

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಬಜ್ಪೆಯ ಕೆಂಜಾರಿನಲ್ಲಿ ಸಂಭವಿಸಿದ್ದ ವಿಮಾನ ದುರಂತದ ಕಹಿ ಘಟನೆಗೆ ಇಂದಿಗೆ 8 ವರ್ಷ. ಅಂತೆಯೇ ದುರಂತದಲ್ಲಿ ಮಡಿದವರಿಗೆ ಇಂದು ಮಂಗಳೂರಿನ ಕೂಳೂರು ಸೇತುವೆ ಪಕ್ಕದ ಉದ್ಯಾನವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ದ.ಕ. ಜಿಲ್ಲಾಡಳಿತ, ನವಮಂಗಳೂರು ಬಂದರು ಮಂಡಳಿ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ವೈಶಾಲಿ, ದ.ಕ. ಜಿಪಂ ಸಿಇಒ ಡಾ. ಎಂ.ಆರ್.ರವಿ, ಮಂಗಳೂರು ಸಹಾಯಕ ಆಯುಕ್ತ ಮಹೇಶ್ ಕರ್ಜಗಿ, […]

ದ.ಕ. ಜಿಲ್ಲೆಯಲ್ಲಿ 5,000ಕ್ಕೂ ಅಧಿಕ ಅಂಚೆ ಮತದಾನ: ಸಸಿಕಾಂತ್ ಸೆಂಥಿಲ್

Thursday, May 10th, 2018
election

ಮಂಗಳೂರು: ಚುನಾವಣಾ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾದ ಮತಗಟ್ಟೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿ/ ಸಿಬ್ಬಂದಿಗೆ ಅಂಚೆ ಮತಪತ್ರಗಳನ್ನು ರವಾನಿಸಲಾಗಿದೆ. ಈಗಾಗಲೇ 5,000ಕ್ಕೂ ಅಧಿಕ ಮಂದಿ ಅಂಚೆ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಆಯುಕ್ತ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಅವರು ಚುನಾವಣೆಗೆ ಸಂಬಂಧಿಸಿದ ಮಾಹಿತಿ ನೀಡಿದರು. 12,837 ಮತಗಟ್ಟೆ ಅಧಿಕಾರಿಗಳು, 1,295 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ, 43 ಮಂದಿ […]

‘ಮೇ 10ರ ಸಂಜೆ 6ರ ಬಳಿಕ ‘ಹೊರಗಿನವರು’ ಕ್ಷೇತ್ರ ವ್ಯಾಪ್ತಿಯಲ್ಲಿರುವಂತಿಲ್ಲ’

Monday, May 7th, 2018
election

ಮಂಗಳೂರು: ಮತದಾನ ಪ್ರಕ್ರಿಯೆ ಮುಗಿಯುವ 48 ಗಂಟೆಗೆ ಮುನ್ನ ಅಂದರೆ ಮೇ 10ರ ಸಂಜೆ 6 ಗಂಟೆಯ ಬಳಿಕ ಹೊರಗಿನ ಯಾವೊಬ್ಬ ಚುನಾವಣಾ ತಾರಾ ಪ್ರಚಾರಕ, ಕ್ಷೇತ್ರದ ಮತದಾರರಲ್ಲದ ಕಾರ್ಯಕರ್ತರು, ಪಕ್ಷದ ನಾಯಕರು ಜಿಲ್ಲೆಯ ಯಾವೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವಂತಿಲ್ಲ. ಎಲ್ಲರೂ ಕ್ಷೇತ್ರ ಬಿಟ್ಟು ಸ್ವಸ್ಥಾನ ಸೇರಬೇಕು. ನಿಗದಿತ ಸಮಯದ ಬಳಿಕ ಹೊರಗಿನ ಪ್ರಚಾರಕ ಸಹಿತ ಕ್ಷೇತ್ರ ವ್ಯಾಪ್ತಿಯಲ್ಲದವರಿಗೆ ವಸತಿ ವ್ಯವಸ್ಥೆ ಕಲ್ಪಿಸದಂತೆ ಹೊಟೇಲ್, ಛತ್ರ, ವಸತಿಗೃಹದ ಮಾಲಕರಿಗೆ ಸೂಚಿಸಲಾಗಿದೆ. ಈ ಸೂಚನೆ ಮೀರಿ ಜಿಲ್ಲೆಯಲ್ಲಿ ಉಳಕೊಂಡರೆ […]