Blog Archive

ಕೃಷ್ಣಾ; ಸುಪ್ರೀಂಗೆ ಮೊರೆ

Wednesday, February 19th, 2014
Siddaramaiah

ಬೆಂಗಳೂರುಃ ಕೃಷ್ಣಾ ನದಿ ನೀರು ಹಂಚಿಕೆ ವಿಷಯದಲ್ಲಿ ಕೃಷ್ಣಾ ಜಲವಿವಾದ ನ್ಯಾಯಾಧಿಕರಣ ಮುಂದುವರಿದ ವರದಿಯಲ್ಲಿ ನೀಡಿರುವ ಕೆಲವು ಸ್ಪಷ್ಟೀಕರಣ ಹಾಗೂ ಮಾರ್ಪಾಡುಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ನ್ಯಾಯಾಧಿಕರಣದ ತೀರ್ಪಿನ ನಂತರ ರಾಜ್ಯ ಸರ್ಕಾರ ಕಾನೂನು ಮತ್ತು ತಾಂತ್ರಿಕ ಪರಿಣಿತರೊಂದಿಗೆ ಚರ್ಚೆ ನಡೆಸಿದ ನಂತರ ವಿಶೇಷ ಅನುಮತಿಗೆ ಸುಪ್ರೀಂಕೋರ್ಟ್‌ಗೆ ಹೋಗುವುದು ಸೂಕ್ತ ಎಂಬ ಸಲಹೆ ಬಂದಿದೆ. ಹೀಗಾಗಿ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಿಳಿಸಿದರು. ಕೃಷ್ಣಾ […]

ಇಂದು ಧಾರಾಳತನದ ರಾಜ್ಯ ಬಜೆಟ್‌ !

Friday, February 14th, 2014
Siddaramaiah

ಬೆಂಗಳೂರು: ತನ್ನ ಪಾಲಿನ ಸತ್ವ ಪರೀಕ್ಷೆ ಎನಿಸಿದ ಲೋಕಸಭಾ ಚುನಾವಣೆಯ ಸಾಮೀಪ್ಯ ಹಾಗೂ ಇತ್ತೀಚಿನ ವರ್ಷಗಳಿಗೆ ಹೋಲಿಸಿದಾಗ ಕುಸಿದ ರಾಜಸ್ವ ಸಂಗ್ರಹ ಎಂಬ ಎರಡು ಅಲಗಿನ ಕತ್ತಿಯ ಮೇಲೆ ನಿಂತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಧ್ಯಾಹ್ನ 12.30ಕ್ಕೆ 2014-15ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಲು ಸಜ್ಜಾಗಿದ್ದಾರೆ. ಕಾಂಗ್ರೆಸ್‌ ಮತಬ್ಯಾಂಕ್‌ ಎನಿಸಿದ ಅಹಿಂದ ವರ್ಗವನ್ನು ಓಲೈಸುವುದರ ಜತೆಗೆ ತಾನೇ ಘೋಷಿಸಿದಂತೆ ಎಲ್ಲರನ್ನೂ ಒಳಗೊಳ್ಳುವ ಬಜೆಟ್‌ ಮಂಡಿಸುವ ಒತ್ತಡಕ್ಕೆ ಸಿಲುಕಿರುವ ಸಿದ್ದರಾಮಯ್ಯಗೆ ಈ ಬಾರಿ ರಾಜಸ್ವ ಸಂಗ್ರಹ ಶೇ. 76ಕ್ಕೆ […]

ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯ್ಕೆ ಹಿನ್ನಲೆಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ನಿಂದ ಸಂಭ್ರಮಾಚರಣೆ

Saturday, May 11th, 2013
DK celebration victory

ಮಂಗಳೂರು : ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಸಿಹಿತಿಂಡಿ ವಿತರಿಸಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಿಸಿದರು. ಬಿಜೆಪಿ ಯ ಆಡಳಿತದಿಂದ ಬೇಸತ್ತ ಜನ ಈ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ  ರಾಜ್ಯ ರಾಜಕೀಯದಲ್ಲಿ ಅಭಿವೃದ್ದಿಯ ಶಕೆ ಆರಂಭವಾಗುವಂತೆ ಮಾಡಿದ್ದಾರೆ ಎಂದು ಅಶ್ರಫ್ ಹೇಳಿದರು. ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಪೂರ್ ಮಾತನಾಡಿ, ಹಿಂದುಳಿದ ವರ್ಗದ […]