Blog Archive

ಮರು ಮೌಲ್ಯಮಾಪನ: ಆಳ್ವಾಸ್‍ನ ಸುಜ್ಞಾನ್ ಆರ್. ಶೆಟ್ಟಿ ರಾಜ್ಯಕ್ಕೆ ಪ್ರಥಮ

Friday, May 24th, 2019
Alvas

ಮೂಡುಬಿದಿರೆ: ಎಸ್‍ಎಸ್‍ಎಲ್‍ಸಿ ಮರು ಮೌಲ್ಯಮಾಪನದಲ್ಲಿ ಆಳ್ವಾಸ್‍ನ ಸುಜ್ಞಾನ್ ಆರ್.ಶೆಟ್ಟಿ ಅವರು 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ಅದರಲ್ಲಿ ಆಳ್ವಾಸ್‍ನ ಸುಜ್ಞಾನ್ ಆರ್.ಶೆಟ್ಟಿ ಕನ್ನಡ ಮತ್ತು ಇಂಗ್ಲೀಷ್ ವಿಷಯಗಳಲ್ಲಿ ತಲಾ ಒಂದೊಂದು ಅಂಕ ಕಡಿಮೆ ಬಂದಿತ್ತು. ಒಟ್ಟು 623 ಅಂಕಗಳನ್ನು ಗಳಿಸಿ 2ನೇ ರ್ಯಾಂಕನ್ನು ಪಡೆದುಕೊಂಡಿದ್ದರು. ತಾನು ಎಲ್ಲಾ ಪ್ರಶ್ನೆಗಳಿಗೂ ಸರಿಯಾದ ಉತ್ತರವನ್ನು ನೀಡಿದ್ದೇನೆ ತನಗೆ […]

ನಿಜವಾದ ದೇಶಪ್ರೇಮದ ಭಾವನೆ ಕೆಲವೇ ಕೆಲವು ಜನರಲ್ಲಿ ಮಾತ್ರ ಇದೆ : ಕಮಾಂಡರ್

Saturday, March 23rd, 2019
ncc

ಮೂಡಬಿದಿರೆ: ಭಾರತದ ರಾಷ್ಟ್ರೀಯ ಸೈನ್ಯ ದಳವು ಯುವಜನತೆಯನ್ನು ಸರಿಯಾದ ಮಾರ್ಗದಲ್ಲಿ ಮುಂದುವರಿ ಯಲು ಅವಕಾಶ ಕಲ್ಪಿಸಿಕೊಡುವ ಅತ್ಯುತ್ತಮ ವೇದಿಕೆಯಾಗಿದೆ ಎಂದು ಕಮಾಂಡರ್ ಮಹೇಶ್ ಎನ್ ನಾಯಕ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ರಾಷ್ಟ್ರೀಯ ಸೈನ್ಯ ದಳದ ಮೂರು ದಳಗಳ ವಾರ್ಷಿಕ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಮ್ಮ ದೇಶದಲ್ಲಿ ನಿಜವಾದ ದೇಶಪ್ರೇಮದ ಭಾವನೆ ಕೆಲವೇ ಕೆಲವು ಜನರಲ್ಲಿ ಮಾತ್ರ ಇದ್ದು, ವಿವಿಧ ಧರ್ಮ, ಜಾತಿ, ಪಂಗಡ ಹಾಗೂ ವರ್ಗಗಳಿರುವ ಭಾರತದಂತಹ ದೇಶಕ್ಕೆ ಇದು ಅತ್ಯಂತ ಆತಂಕಕಾರಿಯಾಗಿದೆ. ಇಂದಿನ […]

ಇರುವೈಲಿನಲ್ಲಿ ಮಹಿಳಾ ದಿನಾಚರಣೆ

Tuesday, March 19th, 2019
Mahila-dinacharane

ಮೂಡುಬಿದಿರೆ :  ಹೆಣ್ಣು-ಗಂಡು ಎಂಬ ತಾರತಮ್ಯದ ಅಸಮಾನತೆಯ ಭಾವನೆಯನ್ನು ನಮ್ಮ ಮನೆಯಿಂದಲೇ ಹೊಗಲಾಡಿಸಬೇಕು. ನಮ್ಮ ಜೀವನದ ನಿರ್ಧಾರವನ್ನು ಮತ್ತೊಬ್ಬರು ನಿರ್ಧಾರಿಸಲು ಅವಕಾಶವನ್ನು ನೀಡಬಾರದು. ನಮ್ಮ ಜೀವನದಲ್ಲಿ ಮುಂದೆ ಏನಾಗಬೇಕೆಂಬ ದೃಢ ಸಂಕಲ್ಪವನ್ನು ಮಾಡಬೇಕೆಂದು ಆಳ್ವಾಸ್ ಕಾಲೇಜಿನ ಸಮಾಜಶಾಸ್ತ್ರದ ಮುಖ್ಯಸ್ಥ ಡಾ.ಮಧುಮಾಲ ತಿಳಿಸಿದರು. ಇರುವೈಲಿನ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಆಳ್ವಾಸ್ ಕಾಲೇಜಿನ ಅಂತಿಮ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಅಂಕಿತಾ ಸಂಯೋಜನೆಯಲ್ಲಿ ಆಯೋಜಿಸಲಾದ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮತ್ತು ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ […]

ಜಪಾನ್ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಆಳ್ವಾಸ್‌ನ ಶಿಖರ್.ವಿ. ಜೈನ್ ಆಯ್ಕೆ

Thursday, March 14th, 2019
Shikar-Jain

ಮೂಡುಬಿದಿರೆ : ‘ಸ್ರಿಂಗ್ ಇಂರ್ಟನ್‌ಶಿಪ್ ಪ್ರೋಗ್ರಾಮ್ 2019’ ಕಾರ್ಯಕ್ರಮದ ಯೋಜನೆಯಡಿ ಜಪಾನ್ ಸರ್ಕಾರ ನೀಡುವ 80,000 ಯೆನ್ ವಿದ್ಯಾರ್ಥಿ ವೇತನಕ್ಕೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಶಿಖರ್.ವಿ. ಜೈನ್ ಆಯ್ಕೆಯಾಗಿದ್ದಾರೆ. ಪ್ರಸಕ್ತ ವರ್ಷದಲ್ಲಿ ಭಾರತದಿಂದ ಜಪಾನ್ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಎನ್ನುವ ಹೆಗ್ಗಳಿಕೆ ಪಾತ್ರವಾಗಿದ್ದಾರೆ.

ಎಂ.ಬಿ.ಎ ವಿಭಾಗದಲ್ಲಿ ಆಳ್ವಾಸ್‍ನ ರಿನು ಥೋಮಸ್‍ಗೆ 2ನೇ ರ‍್ಯಾಂಕ್

Tuesday, March 12th, 2019
Rinu Thomas

ಮೂಡುಬಿದಿರೆ: ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‍ಮೆಂಟ್ ಕಾಲೇಜಿನ ರಿನು ಥೋಮಸ್, ಎಂಬಿಎ ವಿಭಾಗದ ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಗಳಿಸಿದ್ದಾರೆ. ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟ ಎಂಬಿಎ ಕಾಲೇಜುಗಳ ಪರೀಕ್ಷೆ ಕಳೆದ ಜುಲೈ ಮತ್ತು ಆಗಷ್ಟ್ ತಿಂಗಳಲ್ಲಿ ನಡೆದಿದ್ದು, ಆಳ್ವಾಸ್‍ನ ಎಂ.ಬಿ.ಎ ವಿದ್ಯಾರ್ಥಿನಿ ರಿನು, ಸಿ.ಜಿ.ಪಿ.ಎ 8.67 ಗ್ರೇಡ್ ನೊಂದಿಗೆ ಉತ್ತೀರ್ಣರಾಗಿದ್ದಾರೆ. ವಿಶ್ವವಿದ್ಯಾನಿಲಯದ ಸುಮಾರು 150 ಕಾಲೇಜ್‍ಗಳಿಂದ 6021 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದು, ಅದರಲ್ಲಿ 2ನೇ ರ್ಯಾಂಕ್ ಪಡೆದಿದ್ದಾರೆ. ಮೂಲತಃ […]

ವಿ.ಟಿ.ಯು ಗುಡ್ಡಗಾಡು ಓಟ: ಆಳ್ವಾಸ್‍ಗೆ ಅವಳಿ ಪ್ರಶಸ್ತಿ

Monday, March 11th, 2019
VTU-Crosscountry

ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಿಂಗಲ್ ಜೋನ್ ಗುಡ್ಡಗಾಡು ಓಟದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಅವಳಿ ಪ್ರಶಸ್ತಿಯನ್ನು ಪಡೆದಿದೆ. ಭಟ್ಕಳದ ಅಂಜಮಾನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಗುಡ್ಡಗಾಡು ಓಟದಲ್ಲಿ ಪುರುಷರ ವಿಭಾಗದಲ್ಲಿ ಪ್ರಥಮ ಮತ್ತು ಮಹಿಳಾ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಗೆದ್ದಿದೆ. ವೈಯಕ್ತಿಕ ಪುರುಷರ ವಿಭಾಗದಲ್ಲಿ ಅಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ದ್ವಿತೀಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸುಜನ್ ಶೇಖರ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಆಳ್ವಾಸ್ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಮ್ಯಾನೇಜಿಂಗ್ ಟ್ರಸ್ಟಿ […]

ಆಳ್ವಾಸ್‌ನ ಡಾ. ವಿಷ್ಣುಗೆ 2 ಬಂಗಾರದ ಪದಕ

Saturday, February 23rd, 2019
Vishnu

ಮೂಡಬಿದಿರೆ: ಆಳ್ವಾಸ್ ಆಯುರ್ವೇದ ಕಾಲೇಜಿನ ಡಾ. ವಿಷ್ಣು ಆಯುರ್ವೇದ ಹಾಗೂ ವೈದ್ಯಕೀಯ ವಿಜ್ಞಾನ ಪದವಿ ವಿಭಾಗದಲ್ಲಿ ನಗದು ಬಹುಮಾನ ಸಹಿತ ಎರಡು ಚಿನ್ನದ ಪದಕವನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಮಾರ್ಚ್ 26, 2019 ರಂದು ನಡೆಯಲಿರುವ ರಾಜೀವ್‌ಗಾಂಧಿ ವಿವಿ ಆಫ್ ಹೆಲ್ತ್ ಸೈನ್ಸಸ್ (ಆರ್‌ಜಿಯುಎಚ್‌ಎಸ್)ನ 21ನೇ ವಾರ್ಷಿಕ ಘಟಿಕೋತ್ಸವದಲ್ಲಿ ಈ ಗೌರವಕ್ಕೆ ಅವರು ಪಾತ್ರರಾಗಲಿದ್ದಾರೆ. ಡಾ. ವಿಷ್ಣು ಪ್ರಸ್ತುತ ಆಳ್ವಾಸ್ ವೈದ್ಯಕೀಯ ಕಾಲೇಜಿನ ಶಲ್ಯತಂತ್ರ(ಆಳ್ವಾಸ್ ಶಸ್ತ್ರಚಿಕಿತ್ಸಾ ವಿಭಾಗ) ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದು, ಆರ್‌ಜಿಯುಎಚ್‌ಎಸ್ ಗೆ ದ್ವಿತೀಯ […]

ರಾಷ್ಟ್ರಮಟ್ಟದ ಅಂತರ್ ವಿ.ವಿ ಯುವಜನೋತ್ಸವ ಆಳ್ವಾಸ್ ಗೆ ಪ್ರಶಸ್ತಿ

Thursday, February 7th, 2019
Alvas

ಮೂಡುಬಿದಿರೆ: ಚಂಡಿಗಡ್ ವಿಶ್ವವಿದ್ಯಾಲಯ ಮತ್ತು ಆಲ್ ಇಂಡಿಯಾ ವಿಶ್ವವಿದ್ಯಾಲಯ ಆಶ್ರಯದಲ್ಲಿ ಫೆ.1ರಿಂದ 5ವರೆಗೆ ನಡೆದ 34ನೇ ರಾಷ್ಟ್ರಮಟ್ಟದ ಅಂತರ್ ವಿ.ವಿ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ಏಕಾಂಕ ನಾಟಕ ಧೂತ ವಾಕ್ಯ ದ್ವಿತೀಯ, ಜಾನಪದ ನೃತ್ಯ ತೃತೀಯ ಸ್ಥಾನವನ್ನು ಪಡೆಯುವುದರ ಮೂಲಕ 10ನೇ ಬಾರಿ ಪ್ರಶಸ್ತಿ ಗಳಿಸಿ ಆಳ್ವಾಸ್ ದಾಖಲೆ ನಿರ್ಮಿಸಿದೆ. ತಂಡದಲ್ಲಿರುವ 26 ಮಂದಿ ವಿದ್ಯಾರ್ಥಿಗಳು ಕೂಡ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ […]

ರಾಷ್ಟ್ರಮಟ್ಟದ ವೇಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್ ಆಳ್ವಾಸ್‍ನ ಲಾವಣ್ಯ ರೈಗೆ ಬೆಳ್ಳಿ

Wednesday, January 16th, 2019
Lavanya-Rai

ಮೂಡುಬಿದಿರೆ: ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಭಾರತ್ ರಾಷ್ಟ್ರಮಟ್ಟದ ವೇಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಲಾವಣ್ಯ ರೈ 71 ಕೆ.ಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಈಕೆ ನಾಗ್ಪುರದಲ್ಲಿ ನಡೆದ ಜ್ಯೂನಿಯರ್ ನ್ಯಾಶನಲ್ ಚಾಂಪಿಯನ್‍ಶಿಪ್‍ನಲ್ಲಿ ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಪಡೆದಿದ್ದರು.

ಮಲ್ಲಕಂಬ : ರಾಷ್ಟ್ರಮಟ್ಟಕ್ಕೆ ಆಳ್ವಾಸ್‌ನ ಆರು ವಿದ್ಯಾರ್ಥಿಗಳು ಆಯ್ಕೆ

Friday, January 11th, 2019
Alvas veera Kamba

ಮೂಡುಬಿದಿರೆ: ಬಾಗಲಕೋಟೆಯ ತುಳಸಿಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಅಮೆಚ್ಯೂರ್ ಮಲ್ಲಕಂಬ ಅಸೋಶಿಯೇಶನ್ ನಡೆಸಿದ ರಾಜ್ಯಮಟ್ಟದ ಮಲ್ಲಕಂಬದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆರು ಮಂದಿ ವಿದ್ಯಾರ್ಥಿಗಳು ಸಾಧನೆ ಮಾಡಿ, ಜ.11ರಂದು ಗೋವಾದ ಪಾಂಡದಲ್ಲಿ ನಡೆಯುವ ರಾಷ್ಟ್ರಮಟ್ಟದ ಮಲ್ಲಕಂಬ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. 18 ವರ್ಷದೊಳಗಿನ ಹಾಗೂ ಮೇಲ್ಪಟ್ಟ ಹುಡುಗರ ವಿಭಾಗ, 16 ವರ್ಷದೊಳಗಿನ ಹಾಗೂ ಮೇಲ್ಪಟ್ಟ ಹುಡುಗರ ವಿಭಾಗದಲ್ಲಿ ಸ್ಪರ್ಧೆಗಳು ನಡೆದಿದ್ದು, ಆಳ್ವಾಸ್ ವಿದ್ಯಾರ್ಥಿಗಳಾದ ಶಶಿಧರ್ ಬಿ.ಪೂಜಾರ್, ವೀರಭದ್ರ ಎನ್.ಎಮ್, ದೀಪಕ್ ಗೌಳಿ, ಶಂಕರಪ್ಪ, ಶಶಿಧರ್ ಎಸ್. ಪಾಟೀಲ್, ಲಕ್ಷ್ಮವ್ವ ಟಿ. ರಾಷ್ಟ್ರಮಟ್ಟಕ್ಕೆ […]