Blog Archive

ಆಗಸ್ಟ್ 16 ಕ್ಕೆ ಕೆಂಪೇಗೌಡ ದಿನಾಚರಣೆ..!

Friday, August 10th, 2018
kempegowda

ಬೆಂಗಳೂರು: ಬಿಬಿಎಂಪಿ ವತಿಯಿಂದ ಆಚರಿಸಲಾಗುವ ಕೆಂಪೇಗೌಡ ದಿನಾಚರಣೆಗೆ ದಿನಾಂಕ ಮರುನಿಗದಿಯಾಗಿದೆ. ಆಗಸ್ಟ್ 16 ರಸಂಜೆ 6-30 ಕ್ಕೆ ಕೆಂಪೇಗೌಡ ದಿನಾಚರಣೆಗೆ ಸಿಎಂ ಕುಮಾರಸ್ವಾಮಿ ದಿನಾಂಕ ನೀಡಿರುವ ಹಿನ್ನಲೆಯಲ್ಲಿ ಆಗಸ್ಟ್ 16 ರಂದು ಕೆಂಪೇಗೌಡ ದಿನಾಚರಣೆ ನಡೆಯಲಿದೆ. ಈಗಾಗಲೆ ಮೂರು ಬಾರಿ ಮುಂದೂಡಿಕೆಯಾಗಿದೆ. ಚುನಾವಣಾ ನೀತಿ ಸಹಿಂತೆಯಿಂದಾಗಿ, ಸಿಎಂ ದೆಹಲಿ ಪ್ರವಾಸದ ಹಿನ್ನೆಲೆ, ಮಾಜಿ ಸಿಎಂ ಕರುಣಾನಿಧಿ ನಿಧನ ಹಿನ್ನೆಲೆ ಒಟ್ಟು ಮೂರು ಬಾರಿ ಮುಂದೂಡಿಕೆಯಾಗಿದ್ದ ದಿನಾಚರಣೆಗೆ ಕಡೆಗೂ ದಿನಾಂಕ ನಿಗದಿಯಾಗಿದೆ. ಸ್ವಾತಂತ್ರ್ಯ ದಿನಾಚರಣೆ ಮರುದಿನವೇ ನಾಡಪ್ರಭು ಕೆಂಪೇಗೌಡ […]

ತಿರುಪತಿಯಲ್ಲಿ ಗೌಡರ ಕುಟುಂಬ..ತಿಮ್ಮಪ್ಪನ ದರ್ಶನ ಪಡೆದ ಸಿಎಂ!

Friday, July 27th, 2018
kumarswamy

ವಿಜಯವಾಡ: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಕುಟುಂಬಸ್ಥರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸಮೇತರಾಗಿ ದೇವೇಗೌಡರು ತಮ್ಮ ಕುಟುಂಬಸ್ಥರೊಂದಿಗೆ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ದೇವರ ಸನ್ನಿಧಿಗೆ ಬಂದು, ವೆಂಕಟೇಶ್ವರನ ದರ್ಶನ ಪಡೆದರು. ದೇವೇಗೌಡರ ಪತ್ನಿ ಚೆನ್ನಮ್ಮ, ಹಾಗೂ ರೇವಣ್ಣ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೇರಿದಂತೆ ಗೌಡರ ಇತರ ಕುಟುಂಬ ಸದಸ್ಯರು ದೇವರ ಕೃಪೆಗೆ ಪಾತ್ರರಾದರು. ತಿಮ್ಮಪ್ಪನ ದರ್ಶನದ ಬಳಿಕ ಗೌಡರ ಕುಟುಂಬಸ್ಥರಿಗೆ ಅರ್ಚರು ಪ್ರಸಾದ, ತೀರ್ಥ ವಿತರಿಸಿದರು. ಇದಕ್ಕೂ ಮುನ್ನ […]

ಗ್ರಹಣದ ಮುನ್ನಾದಿನ ತಿರುಪತಿಗೆ ತೆರಳಲಿದೆ ದೇವೇಗೌಡರ ಕುಟುಂಬ..!

Tuesday, July 24th, 2018
revanna

ಬೆಂಗಳೂರು: ಜುಲೈ 27 ರಂದು ಸಂಭವಿಸಲಿರುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ, ಗ್ರಹಣದ ಮುನ್ನಾದಿನ (ಜುಲೈ 26) ರಂದು ಗುರುವಾರ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಸ್ಥರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ಹೆಚ್. ಡಿ. ಕುಮಾರಸ್ವಾಮಿ ಅವರು ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ್ದರು. ಅದೇ ರೀತಿ ಸಿಎಂ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರೊಂದಿಗೆ ತಿರುಪತಿ ತೆರಳಿ, ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ […]

ಡಿ.ಕೆ.ಶಿವಕುಮಾರ್ ಅತ್ಯಾಪ್ತ ಬೆಂಬಲಿಗರ ಜೊತೆಗೆ ಶಬರಿ ಮಲೆಗೆ ಪಯಣ..!

Saturday, July 21st, 2018
shivkumar

ರಾಮನಗರ: ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಹುಟ್ಟೂರಿನ ಅತ್ಯಾಪ್ತ ಬೆಂಬಲಿಗರ ಜೊತೆಗೆ ಶಬರಿ ಮಲೆಗೆ ಪಯಣ ಬೆಳೆಸಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದಿಂದ ಸಚಿವರು ಪ್ರಯಾಣ ಆರಂಭಿಸಿದ್ದಾರೆ. ನಿನ್ನೆ ಸಿಎಂ ಕುಮಾರಸ್ವಾಮಿ ಜೊತೆ ಕೆಆರ್ಎಸ್ಗೆ ಬಾಗಿನ ಅರ್ಪಿಸಿದ ನಂತರ ಮೈಸೂರಿನಲ್ಲಿ ಅಯ್ಯಪ್ಪನ ಮಾಲೆ ಧರಿಸಿ ಶಬರಿ ಮಲೆಗೆ ತಡರಾತ್ರಿ ಡಿಕೆಶಿ ಹೊರಟಿದ್ದಾರೆ. ಐಟಿ ಅಧಿಕಾರಿಗಳಿಂದ ಮುಕ್ತಗೊಂಡರೆ ಶಬರಿ ಮಲೆಗೆ ಬರೋದಾಗಿ ಹರಕೆ ಹೊತ್ತಿದ್ದ ಡಿಕೆಶಿ, ಈಗ ಹರಕೆ ತೀರಿಸಲು ಬೆಂಬಲಿಗರೊಂದಿಗೆ ಹೊರಟಿದ್ದಾರೆ. ಡಿಕೆಶಿ ಜೊತೆಗೆ ಅವರ […]

ಸಿಎಂ ಕುಮಾರಸ್ವಾಮಿಗೆ ಮತ ಹಾಕಿದ ಜನ ಉಗಿಯುತ್ತಿದ್ದಾರೆ: ಕಾಂಗ್ರೆಸ್ ಮುಖಂಡ

Wednesday, July 18th, 2018
congres-party

ಮಂಡ್ಯ: ಸಿಎಂ ಕುಮಾರಸ್ವಾಮಿಗೆ ಮತ ಹಾಕಿದ ಜನ ಉಗಿಯುತ್ತಿದ್ದಾರೆ ಎಂದು ಮಂಡ್ಯದ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಬಿ.ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಯಾದ ಕೆ.ಬಿ.ಚಂದ್ರಶೇಖರ್, ಕೆ.ಆರ್.ಪೇಟೆಯ ಪ್ರವಾಸಿ ಮಂದಿರದಲ್ಲಿ‌ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಏಕವಚನದಲ್ಲಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡ್ತಾರೆ ಅಂದುಕೊಂಡು ಜನ ಮತ ಹಾಕಿದ್ರು. ಸಿಎಂ‌ ಆದ ಮೇಲೆ ಕುಮಾರಸ್ವಾಮಿ ಏನು ಮಾಡಿದರು ಅನ್ನೋದು ಜನಕ್ಕೆ […]

ನಾನು ಕೊಡಗು, ದಕ್ಷಿಣ ಕನ್ನಡ, ಉತ್ತರ ಕರ್ನಾಟಕ ಎಲ್ಲಾ ಜಿಲ್ಲೆಗಳ ಮುಖ್ಯಮಂತ್ರಿ: ಕುಮಾರಸ್ವಾಮಿ

Saturday, July 14th, 2018
kumarswamy

ಬೆಂಗಳೂರು : ನಾನು ಜನರ ಮಧ್ಯೆ ಬದುಕುವ ಸಿಎಂ, ವಿಧಾನಸೌದದ ಮೂರನೇ ಮಹಡಿಯಲ್ಲಿ ಕೂರುವವನಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಕರ್ನಾಟಕ ರಾಜ್ಯ ವಿಕಲಚೇತನರ ಸೇವಾಸಂಸ್ಥೆಗಳ ಒಕ್ಕೂಟದಿಂದ ಆಯೋಜನೆಗೊಂಡಿರು ಮೈಸೂರು ಬ್ಯಾಂಕ್ ಸರ್ಕಲ್ನ ಕಾವೇರಿ ಭವನದಲ್ಲಿ ನಡೆಯುತ್ತಿರುವ ಸ್ಪಂದನ 2018 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಹಾಗೂ ಜನರ ಮಧ್ಯೆ ಎತ್ತಿಕಟ್ಟಲು ನೋಡಬೇಡಿ ಯಾರು ಬೇಕಾದರೂ ಬಂದು ನನ್ನ ಬಳಿ ಸಮಸ್ಯೆ ಹೇಳಿಕೊಳ್ಳಬಹುದು. ನನ್ನ ಶರ್ಟ್ ಹಿಡಿದು ಕೇಳಲಿ ಏನಾದರೂ ಅಗತ್ಯ ಇದ್ದರೆ. 86% ಅಂಕದೊಂದಿಗೆ […]

ಸಂವಿಧಾನ ರಕ್ಷಣೆ ಮತ್ತು ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಿಜೆಪಿ ಹಾವಳಿ ನಿಯಂತ್ರಿಸಬೇಕು: ಖರ್ಗೆ

Friday, July 13th, 2018
mallikarjun-karge

ಕಲಬುರಗಿ: ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕೆಂದು ಮುಂದಾಗಿರುವ ಎನ್ಡಿಎಗೆ ಸಡ್ಡು ಹೊಡೆಯಲು ತೃತಿಯ ರಂಗ ರಚನೆ ಮಾಡುವ ಪ್ರಯತ್ನದ ಬಗ್ಗೆ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಥರ್ಡ್ ಫ್ರಂಟ್, ಫೋರ್ಥ್ ಫ್ರಂಟ್ ರಚನೆ ಬಗ್ಗೆ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತದೆ ಎಂದು ಹೇಳಿದರು. ದೇಶದಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿ ಹಾವಳಿ ಹೆಚ್ಚಾಗಿದೆ. ಸಂವಿಧಾನ ರಕ್ಷಣೆ ಮತ್ತು ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಿಜೆಪಿ […]

ಸಾಲ ಮನ್ನಾ ವಿಚಾರಕ್ಕೆ ಕಾಂಗ್ರೆಸ್ ಶಾಸಕರಿಂದಲೇ ವಿರೋಧ ವ್ಯಕ್ತ..!

Thursday, July 12th, 2018
kumarswamy

ಬೆಂಗಳೂರು: ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ಜೆಡಿಎಸ್ ಶಾಸಕಾಂಗ ಸಭೆ ನಡೆಯಿತು. ಅನ್ನಭಾಗ್ಯದ 2 ಕೆಜಿ ಅಕ್ಕಿ ಕಡಿತ ಮತ್ತು ಸಾಲ ಮನ್ನಾ ವಿಚಾರಕ್ಕೆ ಮೈತ್ರಿ ಪಕ್ಷ ಕಾಂಗ್ರೆಸ್ ಶಾಸಕರಿಂದಲೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಜೆಡಿಎಸ್ ಶಾಸಕರಿಂದ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಅನ್ನಭಾಗ್ಯದ ಅಕ್ಕಿ 7 ಕೆಜಿ ಏರಿಸುವ ಬಗ್ಗೆ ಅಭಿಪ್ರಾಯ ಪಡೆದುಕೊಂಡಿರುವ ಸಿಎಂ, ಅಲ್ಲದೆ ಸಾಲ ಮನ್ನಾ ವ್ಯಾಪ್ತಿ ವಿಸ್ತರಿಸುವ ಬಗ್ಗೆಯೂ ಶಾಸಕರಿಂದ ಅಭಿಪ್ರಾಯ ಪಡೆದಿದ್ದಾರೆ ಎನ್ನಲಾಗಿದೆ. […]

ಮಾಜಿ ಸಚಿವ ಮೊಹಿದೀನ್ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಸಂತಾಪ

Tuesday, July 10th, 2018
kumarswamy

ಬೆಂಗಳೂರು: ಮಾಜಿ ಉನ್ನತ ಶಿಕ್ಷಣ ಸಚಿವ ಹಾಗೂ ಹಿರಿಯ ರಾಜಕಾರಣಿ ಬಿ.ಎ. ಮೊಹಿದೀನ್ ಅವರ ನಿಧನ ಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದೇವರಾಜ ಅರಸು ಅವರ ಒಡನಾಡಿಯಾಗಿದ್ದ ಮೊಹಿದೀನ್ ಅವರು ನಂತರದ ವರ್ಷಗಳಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. 2016 ರಲ್ಲಿ ರಾಜ್ಯ ಸರ್ಕಾರದ ದೇವರಾಜ ಅರಸು ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ನಿಧನದಿಂದ ನಾಡು ಹಿರಿಯ ಮುತ್ಸದ್ಧಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಿಎಂ ಕುಮಾರಸ್ವಾಮಿ ಸ್ಮರಿಸಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ […]

ಬೆಲೆ ಕುಸಿತದಿಂದ ಕಂಗಾಲಾಗಿರುವ ಮಾವು ಬೆಳೆಗಾರರಿಗೆ ಸಿಎಂ ಅಭಯ

Monday, July 9th, 2018
kumarswamy

ಬೆಂಗಳೂರು: ಮಾವು ಬೆಳೆಗಾರರ ಸಮಸ್ಯೆ ಬಗೆಹರಿಸಲು ಮುಂದಾಗಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನೆರೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ನೆರೆಯ ರಾಜ್ಯ ಕೇರಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್‌ ಆತಂಕದಿಂದ ಮಾವಿಗೆ ಬೇಡಿಕೆ ಕುಸಿದು ರೈತರು ಸಂಕಟಕ್ಕೆ ಸಿಲುಕಿದ್ದರು. ರೈತರು ಬೆಳೆದ ಟನ್‌ಗಟ್ಟಲೆ ಮಾವುಗಳನ್ನು‌ ಕೊಳ್ಳುವವರಿಲ್ಲದೆ ನಷ್ಟಕ್ಕೆ ಸಿಲುಕಿದ್ದಾರೆ. ಮಾವು ಬೆಳೆಗಾರರ ಸಮಸ್ಯೆಯನ್ನು ಮನಗಂಡಿರುವ ಮುಖ್ಯಮಂತ್ರಿಯವರು ಮಾವಿಗೆ ಬೆಂಬಲ ಬೆಲೆ ನೀಡುವ ಕುರಿತು ಚಿಂತನೆ ನಡೆಸಿದ್ದಾರೆ. ಮಾವು ಬೆಳೆಯನ್ನು ಆಂಧ್ರಪ್ರದೇಶ ಹಾಗೂ ಮಹರಾಷ್ಟ್ರ ರಾಜ್ಯಗಳಿಗೆ ರವಾನಿಸಲು ಆಯಾ […]