Blog Archive

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಅಧ್ಯಕ್ಷರಾಗಿ ರೋನ್ಸ್ ಬಂಟ್ವಾಳ್

Monday, April 8th, 2019
Maharastra-Patrakartaru

ಮುಂಬಯಿ : ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) 2019-2021 ರ ಸಾಲಿನ ಪದಾಧಿಕಾರಿಗಳ ಆಯ್ಕೆ ಇಂದಿಲ್ಲಿ ಶನಿವಾರ ಪೂರ್ವಾಹ್ನ ನಗರದ ಬಾಂದ್ರಾ ಪೂರ್ವದ ಖೇರ್‌ವಾಡಿ ಅಲ್ಲಿನ ರಾಜಯೋಗ್ ಹೊಟೇಲು ಸಭಾಗೃಹದಲ್ಲಿ ನಡೆದಿದ್ದು ನೂತನ ಅಧ್ಯಕ್ಷರಾಗಿ ರೋನ್ಸ್ ಬಂಟ್ವಾಳ್ (ವಿಜಯ ಕರ್ನಾಟಕ), ಗೌರವ ಪ್ರಧಾನ ಕಾರ್ಯದರ್ಶಿ ಆಗಿ ಅಶೋಕ್ ಎಸ್.ಸುವರ್ಣ (ಮೊಗವೀರ) ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆ ಗೊಳಿಸಿತು. ಉಪಾಧ್ಯಕ್ಷ ರಂಗ ಎಸ್.ಪೂಜಾರಿ, (ಚಿಗುರು ಚಂದನ), ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ (ಕರ್ನಾಟಕ ಮಲ್ಲ), ಗೌರವ […]

ಮಕ್ಕಳ ಕಳ್ಳ ಎಂದು ಭಾವಿಸಿ ಮಗುವಿನ ಅಪ್ಪನ ಮೇಲೆ ಹಲ್ಲೆ..!

Friday, July 6th, 2018
mangaluru

ಮಂಗಳೂರು: ಮಕ್ಕಳ ಕಳ್ಳ ಎಂದು ಭಾವಿಸಿ ಮಗುವಿನ ಅಪ್ಪನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಈ ಘಟನೆ ಸಂಭವಿಸಿದೆ. ಮಗುವಿನ ಜೊತೆ ಹೋಟೆಲ್ ನಲ್ಲಿ ಕೂತಿದ್ದ ವ್ಯಕ್ತಿಯನ್ನು ನೋಡಿದ ಸ್ಥಳೀಯರು ಅನುಮಾನಗೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಅನುಮಾನಸ್ಪದವಾಗಿ ಉತ್ತರಿಸಿದ್ದಾನೆ. ಅಷ್ಟೇ ಅಲ್ಲ ಆತ ವಿಪರೀತವಾಗಿ ಕುಡಿದಿದ್ದ. ಇದನ್ನೆಲ್ಲಾ ಗಮನಿಸಿದ ಸಾರ್ವಜನಿಕರು ಈತ ಮಕ್ಕಳ ಕಳ್ಳನಿರಬೇಕೆಂದು ಭಾವಿಸಿ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ […]

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೊಸ ಜವಾಬ್ದಾರಿ, ಮಹಾರಾಷ್ಟ್ರದ ಉಸ್ತುವಾರಿ ಆಗಿ ಖರ್ಗೆ ಅವರು ನೇಮಕ..!

Friday, June 22nd, 2018
mallikarjun-karge

ನವದೆಹಲಿ: ಕಾಂಗ್ರೆಸ್‌‌ನ ಹಿರಿಯ ಮುಖಂಡ, ಲೋಕಸಭೆಯ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಮಹಾರಾಷ್ಟ್ರದ ಉಸ್ತುವಾರಿ ಆಗಿ ಖರ್ಗೆ ಅವರನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಮಹಾರಾಷ್ಟ್ರದ ಉಸ್ತುವಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಕುರಿತ ಅಧಿಕೃತ ಪ್ರಕಟಣೆಯನ್ನು ಪಕ್ಷದ ಟ್ವಿಟ್ಟರ್‌ ಖಾತೆಯಲ್ಲಿ ಹಾಕಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ ಖರ್ಗೆ ಮಹಾರಾಷ್ಟ್ರದ ಉಸ್ತುವಾರಿ ನೇಮಕಗೊಳಿಸಲಾಗಿದ್ದು, ಹಾಲಿ ಉಸ್ತುವಾರಿ […]

ಹುತಾತ್ಮ ಯೋಧರ ಕುಟುಂಬಗಳ ಪರಿಹಾರವನ್ನು 25 ಲಕ್ಷಕ್ಕೆ ಹೆಚ್ಚಿಸಿದ ‘ಮಹಾ’ ಸರ್ಕಾರ

Thursday, February 1st, 2018
devendra-fadnavis

ಮುಂಬೈ: ಹುತಾತ್ಮ ಯೋಧರ ಕುಟುಂಬಗಳಿಗೆ ಮಹಾರಾಷ್ಟ್ರ ಸರ್ಕಾರ ನೀಡುತ್ತಿದ್ದ ಪರಿಹಾರ ಮೊತ್ತದಲ್ಲಿ ಹೆಚ್ಚಳ ಮಾಡಲಾಗಿದೆ. ಗಡಿಯಲ್ಲಿ ಮಡಿದ ಸೈನಿಕರ ಕುಟುಂಬಗಳಿಗೆ ಇನ್ಮುಂದೆ 25 ಲಕ್ಷ ರೂಪಾಯಿ ಪರಿಹಾರ ನೀಡಲಾವುದು ಎಂದು ಸಿಎಂ ದೇವೇಂದ್ರ ಫಡ್ನವಿಸ್‌ ಘೋಷಿಸಿದ್ದಾರೆ. ಬುಧವಾರ ನಡೆದ ಹುತಾತ್ಮರಿಗೆ ಗೌರವ ಅರ್ಪಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಫಡ್ನವಿಸ್‌ ಈ ಘೋಷಣೆ ಮಾಡಿದ್ದಾರೆ. ಮೊದಲು ಹುತಾತ್ಮ ಯೋಧರ ಕುಟುಂಬಗಳಿಗೆ 8.5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ಇದನ್ನು 8.5 ಲಕ್ಷದಿಂದ 20 […]

ರಾಷ್ಟ್ರಧ್ವಜದ ಅವಮಾನವನ್ನು ತಡೆಯಲು ಪ್ಲಾಸ್ಟಿಕ್ ಧ್ವಜದ ಬಳಕೆಯ ಮೇಲೆ ನಿರ್ಬಂಧವನ್ನು ಹೇರುವಂತೆ ಮನವಿ

Wednesday, January 17th, 2018
jagathikarana

ಮಂಗಳೂರು : ಪ್ರಜಾಪ್ರಭುತ್ವ ದಿನದಂದು ರಾಷ್ಟ್ರ ಧ್ವಜಕ್ಕೆ ಆಗುವ ಅಪಮಾನ ತಡೆಗಟ್ಟುವಂತೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದ.ಕ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು. ರಾಷ್ಟ್ರಧ್ವಜವು ದೇಶಭಕ್ತಿಯ ಪ್ರತೀಕವಾಗಿದ್ದು ಸಮಸ್ತ ಭಾರತೀಯರಿಗೆ ಪೂಜನೀಯವಾಗಿದೆ. ಆದರೆ ಇದರ ಬಳಕೆಯ ಮೇಲೆ ನಿಯಂತ್ರಣವಿಲ್ಲ. ಇದರಿಂದ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಅಥವಾ ಕಾಗದದ ಧ್ವಜಗಳು ರಸ್ತೆಯ ಮೇಲೆ, ಸಣ್ಣ ಅಂಗಡಿಗಳಲ್ಲಿ ಮಾರಾಟಕ್ಕೆ ಕಂಡು ಬರುತ್ತವೆ. ಜನವರಿ 26 ಅಥವಾ ಆಗಸ್ಟ 15 ಕ್ಕೆ ಮುಂಚಿತವಾಗಿ ಮಕ್ಕಳು ಅಥವಾ ಹಿರಿಯರು ಪ್ಲಾಸ್ಟಿಕ್ ಧ್ವಜಗಳನ್ನು ಖರೀದಿಸುತ್ತಾರೆ […]

ಶಿವಸೇನೆ ವರಿಷ್ಠ ಬಾಳಾ ಸಾಹೇಬ್ ಠಾಕ್ರೆ ಅವರ ಅಂತಿಮಯಾತ್ರೆ ಹರಿದು ಬಂದ ಜನಸಾಗರ

Monday, November 19th, 2012
Bal Thackeray

ಮುಂಬಯಿ :ಮಹಾರಾಷ್ಟ್ರದ ಹುಲಿ ಎಂದೇ ಪ್ರಸಿದ್ಧರಾದ, ಮಹಾರಾಷ್ಟ್ರದ್ಲಲಿ ಶಿವಸೇನೆಯನ್ನು ಅಧಿಕಾರಕ್ಕೆ ತಂದ ಬಾಳ ಠಾಕ್ರೆ ದೇಹಕ್ಕೆ ಹಲವಾರು ಜನರ ಸಮ್ಮಖದಲ್ಲಿ ದೇಹಕ್ಕೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಠಾಕ್ರೆಯವರ ದೇಹ ಪಂಚಭೂತಗಳಲ್ಲಿ ಲೀನವಾಯಿತು. ಶಿವಸೇನೆ ವರಿಷ್ಠ ಬಾಳಾ ಸಾಹೇಬ್ ಠಾಕ್ರೆ ಅವರ ಅಂತಿಮಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. ಠಾಕ್ರೆ ಶವವನ್ನು ಬೆಳಗ್ಗೆ 9 ಗಂಟೆಗೆ ಅವರ ನಿವಾಸ ‘ಮಾತೋಶ್ರೀ’ ಯಿಂದ ಹೊರಕ್ಕೆ ತರಲಾಯಿತು. ಗಾಜಿನ ಪೆಟ್ಟಿಗೆಯಲ್ಲಿ ಇರಿಸಿದ್ದ ದೇಹವನ್ನು ಪುಷ್ಪಾಲಂಕೃತ ವಾಹನದಲ್ಲಿ […]