Blog Archive

ನೇತ್ರಾವತಿ ತೀರದಲ್ಲಿ ಕಣ್ಣೂರುವರೆಗೆ ಪರ್ಯಾಯ ರಸ್ತೆ

Wednesday, December 13th, 2017
nethravathi

ಮಂಗಳೂರು: ನೇತ್ರಾವತಿ ಸೇತುವೆ ನದಿ ತೀರದಿಂದ ಕಣ್ಣೂರು ಮಸೀದಿಯವರೆಗೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪರ್ಯಾಯ ಹೆದ್ದಾರಿ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜೆ. ಆರ್‌. ಲೋಬೋ ಹೇಳಿದರು. ಇಲ್ಲಿ 50 ಮೀ. ಅಗಲದ ಚತುಷ್ಪಥ ಅಗತ್ಯವಿದೆ. ಇದರಿಂದ ಪ್ರವಾಸೋದ್ಯ ಮಕ್ಕೂ ಒತ್ತು ಸಿಗಲಿದ್ದು, ಮಂಗಳೂರಿನ ಬೆಳವಣಿಗೆಗೂ ಪೂರಕ ಎಂದರು. ಯಾವುದೇ ಮನೆ ತೆರವು ಮಾಡದೆ ಯಾವ ರೀತಿಯಲ್ಲಿ ರಸ್ತೆ ನಿರ್ಮಿಸಲು ಸಾಧ್ಯ ಎಂಬ ಬಗ್ಗೆ ಸರ್ವೆ ಮಾಡಬೇಕು. ಸಾಧ್ಯವಿದ್ದಷ್ಟು ನದಿಗೆ ಸೇರಿಕೊಂಡಿರುವ ಭೂಮಿಯನ್ನೇ ಬಳಸಿ ರಸ್ತೆ […]

ಕೋಟ ರಸ್ತೆ ಅಪಘಾತ: ಇಬ್ಬರು ಮೃತ್ಯು

Tuesday, December 12th, 2017
kota-accident

ಕೋಟ:ಇಲ್ಲಿಗೆ ಸಮೀಪದ ಕೋಟ ಮೂರುಕೈ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆ ಸಹಿತ ಇಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಆಲ್ಟೋ ಕಾರು ಹಾಗೂ ಲಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬಾರಕೂರು ಬೆಣ್ಣೆಕುದ್ರುವಿನ ಅವಿನಾಶ್ ಹಾಗೂ ಗಿರಿಜಾ ಎಂಬವರು ಮೃತ ಪಟ್ಟಿದ್ದಾರೆ. ಉಳಿದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ […]

ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಸ್ಥಳೀಯ ಸಂಸದರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ

Saturday, December 2nd, 2017
Ivan d souza

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ನ್ನು ಸ್ಥಳೀಯ ಸಂಸದರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ.ಸೋಜ ಆರೋಪಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳೂರು-ಕಾರ್ಕಳ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿಯಾಗಿದ್ದ ಈ ರಸ್ತೆಯನ್ನು 20 ವರ್ಷಗಳ ಹಿಂದೆಯೇ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ರಾ.ಹೆ. ಪ್ರಾಧಿಕಾರವು ಇದಕ್ಕೆ ಸಂಬಂಧಿಸಿದಂತೆ ಬೋರ್ಡ್‌ ಬದಲಾಯಿಸಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಈ ಹೆದ್ದಾರಿಯಲ್ಲಿ ಸಿಗುವ ಗುರುಪುರ ಸೇತುವೆಯು ಶಿಥಿಲಾವಸ್ಥೆಗೆ ತಲುಪಿದೆ. ವಾಹನಗಳ ಓಡಾಟಕ್ಕೆ ಇದು ಅಯೋಗ್ಯ […]

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ ಅಡಿಭಾಗದಲ್ಲಿ ಮೃತ್ಯು ಕೂಪ!

Thursday, October 5th, 2017
mulki

ಮಂಗಳೂರು: ಮೂಲ್ಕಿ ರಾಷ್ಟ್ರೀಯ ಹೆದ್ದಾರಿಯ ಅಡಿಭಾಗದಲ್ಲಿ ಭಾರೀ ಗಾತ್ರದ ಹೊಂಡವೊಂದು ಸೃಷ್ಟಿಯಾಗಿ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್‌ ನಿಲ್ದಾಣದಿಂದ ಕೇವಲ ಹತ್ತು ಮೀಟರ್‌ ದೂರದಲ್ಲಿ ಉಡುಪಿ ಕಡೆಗೆ ಸಂಚರಿಸುವಾಗ ಈ ಹೊಂಡ ಸೃಷ್ಟಿಯಾಗಿದ್ದು, ಅದರ ಮೇಲೆ ವಾಹನ ಸಾಗಿದರೆ ಉರುಳಿ ಬೀಳುವ ಅಪಾಯ ಎದುರಾಗಿದೆ. ರಸ್ತೆಯಿಂದ ಸ್ವಲ್ಪ ಬದಿಗೆ ಸರಿದರೂ ದೊಡ್ಡ ಅಪಘಾತ ಸಂಭವಿಸಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ, ಅದೂ ಕೂಡ ನಗರ ಭಾಗದಲ್ಲೇ ಇಂಥ ಹೊಂಡ ಸೃಷ್ಟಿಯಾಗಿದ್ದರೂ ಇಲಾಖೆಯ ಅಧಿಕಾರಿಗಳು ಮೌನ ವಹಿಸುತ್ತಿರುವುದು ಆಶ್ಚರ್ಯ ಮೂಡಿಸುತ್ತಿದೆ. ಈ ಬಗ್ಗೆ ಜನರು […]

ಕರ್ನಾಟಕ ಗಡಿನಾಡು ರಕ್ಷಣಾ ವೇದಿಕೆಯಿಂದ ಟೋಲ್ ಸಂಗ್ರಹಕ್ಕೆ ವಿರೋಧ

Tuesday, February 7th, 2017
Tolgate

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ನಂತೂರು-ತಲಪಾಡಿ ಚತುಷ್ಪಥ ಅಗಲೀಕರಣ ಯೋಜನೆಯಲ್ಲಿ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿದ್ದರೂ ಟೋಲ್ ಶುಲ್ಕ ಸಂಗ್ರಹಕ್ಕೆ ಮಾತ್ರ ಮುಂದಾಗಿದ್ದು, ಸಾರ್ವಜನಿಕರು ಸಮರ್ಪಕವಾದ ರಸ್ತೆಯ ಪ್ರಯೋಜನ ಪಡೆಯದಿದ್ದರೂ ಟೋಲ್ ಸಂಗ್ರಹಿಸುವುದನ್ನು ಕರ್ನಾಟಕ ಗಡಿನಾಡು ರಕ್ಷಣಾ ವೇದಿಕೆ ವಿರೋಧಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಸಿದ್ದಿಕ್ ತಲಪಾಡಿ, ತಲಪಾಡಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಸಾರ್ವಜನಿಕರು, ವಾಹನಗಳು, ತಳ್ಳುಗಾಡಿ, ಜಾನುವಾರು ಸಂಚರಿಸಲು ಸಮರ್ಪಕ ಸರ್ವಿಸ್ ರಸ್ತೆ ನಿರ್ಮಾಣವಾಗಬೇಕು. ಮಳೆ ನೀರು ಹರಿದು ಹೋಗಲು ರಸ್ತೆಯ ಇಕ್ಕೆಲಗಳಲ್ಲಿಯೂ […]

ವಿಶೇಷ ಭೂ ಸ್ವಾಧೀನಾಧಿಕಾರಿಯೋರ್ವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಪೊಲೀಸರ ಬಲೆಗೆ

Thursday, January 5th, 2017
Gayathri-n-nayak

ಮಂಗಳೂರು: ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂ ಸ್ವಾಧೀನಾಧಿಕಾರಿಯೋರ್ವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಗಾಯತ್ರಿ ನಾಯಕ್ ಎಸಿಬಿ ಬಲೆಗೆ ಸಿಕ್ಕಿಬಿದ್ದ ಅಧಿಕಾರಿ. ಇವರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಯೋಗೀಶ್ ಎಂಬವರಿಂದ ತಮ್ಮ ಕಚೇರಿಯಲ್ಲಿ 20 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಗಾಯತ್ರಿಯನ್ನು ವಶಕ್ಕೆ ಪಡೆದರು. ಯೋಗೀಶ್ ಅವರಿಗೆ ದೊರೆತ ಭೂ ಪರಿಹಾರದ ಮೊತ್ತದಲ್ಲಿ 1.6 ಲಕ್ಷ ರೂ. ಲಂಚ ನೀಡಬೇಕೆಂದು ಗಾಯತ್ರಿ […]

ಕಾರು ಹಾಗೂ ಟ್ರಕ್ ಡಿಕ್ಕಿ: ನಾಲ್ವರು ಸ್ಥಳದಲ್ಲೇ ದಾರುಣ ಸಾವು

Wednesday, January 4th, 2017
Car-truck-collision

ಮಂಗಳೂರು: ಬೆಳ್ಳಂಬೆಳಗ್ಗೆ ಕಾರು ಹಾಗೂ ಟ್ರಕ್ ನಡುವೆ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ತಂದೆ, ತಾಯಿ, ಮಗ ಹಾಗೂ ಓರ್ವ ಯುವಕ ಸೇರಿದಂತೆ ಒಟ್ಟು ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಇಲ್ಲಿನ ಮಂಜೇಶ್ವರದ ಎ.ಜೆ ಆಂಗ್ಲ ಮಾಧ್ಯಮ ಶಾಲಾ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ 4ರ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೇರಳದ ತ್ರಿಶೂರು ನಿವಾಸಿಗರಾದ ಡಾ. ರಾಮನಾರಾಯಣ ಸಿಕೆ (52) ಪತ್ನಿ ವತ್ಸಲ, ಮಗ ರಂಜಿತ್‌ (20) ಮತ್ತು […]

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿಯಲ್ಲಿ ಗ್ಯಾಸ್ ಟ್ಯಾಂಕರ್‌ ಪಲ್ಟಿ

Tuesday, December 13th, 2016
Lpg-bullet-tanker

ಪುತ್ತೂರು: ಗ್ಯಾಸ್ ಟ್ಯಾಂಕರ್‌ವೊಂದು ಪಲ್ಟಿಯಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪದ ನೀರಕಟ್ಟೆ ಎಂಬಲ್ಲಿ ನಡೆದಿದೆ. ಗ್ಯಾಸ್ ಟ್ಯಾಂಕರ್‌ ಪಲ್ಟಿಯಾದ ಪರಿಣಾಮ ಗ್ಯಾಸ್‌‌ ಸೋರಿಕೆಯಾಗುತ್ತಿದೆ. ಇದರಿಂದ ಕೆಲಹೊತ್ತು ಆತಂಕಕ್ಕೆ ಕಾರಣವಾಗಿತ್ತು. ಆದ್ರೆ, ಹೆಚ್.ಪಿ.ಸಿ.ಎಲ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಗ್ಯಾಸ್ ಶಿಫ್ಟ್ ಮಾಡುವ ಕಾರ್ಯ ಆರಂಭಿಸಿದ್ದಾರೆ. ಯಾವುದೇ ಅನಾಹುತ ಸಂಭವಿಸಿದಂತೆ ಮುನ್ನೆಚ್ಚೆರಿಕ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೆದ್ದಾರಿಯಲ್ಲಿ ತೆರಳುವ ವಾಹನಗಳಿಗೆ ಪೊಲೀಸರು ಪರ್ಯಾಯ ಮಾರ್ಗ ಕಲ್ಪಿಸಿದ್ದಾರೆ. ಬೆಂಗಳೂರಿನಿಂದ ಮಂಗಳೂರು […]

ಅಡುಗೆ ಅನಿಲ ಸಾಗಾಟದ ಟ್ಯಾಂಕರೊಂದು ರಸ್ತೆ ಬದಿ ಮಗುಚಿ ಬಿದ್ದು ತಪ್ಪಿದ ಬಾರೀ ಅನಾಹುತ

Tuesday, December 6th, 2016
Tanker

ಪುತ್ತೂರು: ಪೆರ್ನೆ ಗ್ರಾಮದ ಕಡಂಬು ಬಳಿಯ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಅಡುಗೆ ಅನಿಲ ಸಾಗಾಟದ ಟ್ಯಾಂಕರೊಂದು ರಸ್ತೆ ಬದಿ ಮಗುಚಿ ಬಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿನತ್ತ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ಹೆದ್ದಾರಿ ಬದಿಗೆ ಮಗುಚಿ ಬಿದ್ದಿದೆ. ತಮಿಳುನಾಡು ಮೂಲದ ಚಾಲಕ ಅಲಗುರು ಸ್ವಾಮಿ(30) ಗಾಯಗೊಂಡಿದ್ದು, ಈತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯಾಂಕರ್‌ನಲ್ಲಿದ್ದ ತಮಿಳುನಾಡು ಮೂಲದ ಕ್ಲೀನರ್ ವೇಲುಗೆ ಯಾವುದೇ ಗಾಯಗಳಾಗಿಲ್ಲ. ಘಟನೆಯಲ್ಲಿ […]

ಕುಂಬಳೆಯಲ್ಲಿ ಸಂಭ್ರಮದ ಗಣಪತಿ ವಿಸರ್ಜನಾ ಮೆರವಣಿಗೆ

Friday, September 9th, 2016
ganeshothsav

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿಗ್ರಹ ವಿಸರ್ಜನಾ ಮೆರವಣಿಗೆ ಬುಧವಾರ ಸಂಜೆ ಸಂಭ್ರಮದದಿಂದ ನಡೆಯಿತು. ಮೂರು ದಿನಗಳ ಕಾಲ ಶ್ರೀ ಕ್ಷೇತ್ರದ ವಠಾರದಲ್ಲಿ ಪೂಜಿಸಲ್ಪಟ್ಟ ಶ್ರೀ ಗಣೇಶನನ್ನು ಆಕರ್ಷಕ ಮೆರವಣಿಗೆ ಮೂಲಕ ಕುಂಬಳೆ ಪೇಟೆ, ಕೃಷ್ಣ ನಗರ ಶಾಂತಿಪಳ್ಳ ದಾರಿಯಾಗಿ ಕುಂಟಗೇರಡ್ಕದ ಮೂಲಕ ಮರಳಿ ಪೇಟೆಗೆ ಬಂದು ರಾಷ್ಟ್ರೀಯ ಹೆದ್ದಾರಿಯಿಂದ ಕುಂಬಳೆ ರೈಲು ನಿಲ್ದಾಣದ ಮೂಲಕ ಸಾಗಿ ಕಡಲಿನಲ್ಲಿ ವಿಸರ್ಜಿಸಲಾಯಿತು. ಪೇಟೆ ಸಹಿತ ಅನೇಕ ಕಡೆಗಳಲ್ಲಿ ಭಕ್ತಾದಿಗಳಿಂದ ವಿಶೇಷ ಪೂಜೆ ನಡೆಸಲಾಯಿತು. […]