Blog Archive

ಕೊರೋನಾ ಸೋಂಕಿಗೆ ರಾಜ್ಯದಲ್ಲಿ ಮೊದಲ ಬಲಿಯಾಗಿದ್ದು ಆಘಾತಕಾರಿ : ಸಿಎಂ ಯಡಿಯೂರಪ್ಪ ವಿಷಾದ

Friday, March 13th, 2020
bsy

ಬೆಂಗಳೂರು : ಕೊರೋನಾ ಸೋಂಕಿನಿಂದ ಗುರುವಾರ ಕಲಬುರ್ಗಿಯಲ್ಲಿ 76 ವರ್ಷದ ವೃದ್ಧ ಮೃತಪಟ್ಟಿರುವುದು ದುರಾದೃಷ್ಟಕರ ಬೆಳವಣಿಗೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಷಾಧ ವ್ಯಕ್ತಪಡಿಸಿದ್ದಾರೆ. ಇಡೀ ವಿಶ್ವಕ್ಕೆ ಇಂದು ಬೆದರಿಕೆ ಒಡ್ಡಿರುವ ಕೊರೋನಾ ಭಾರತದಕ್ಕೂ ತನ್ನ ಕಬಂದಬಾಹುವನ್ನು ವಿಸ್ತರಿಸಿದೆ. ದೇಶದಲ್ಲಿ ಈವರೆಗೆ 75 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ರಾಜ್ಯದಲ್ಲೂ 6 ಜನರಿಗೆ ಈ ಸೋಂಕು ತಗುಲಿದೆ. ಈ ಪೈಕಿ ಗುರುವಾರ ಕಲಬುರ್ಗಿಯ ವ್ಯಕ್ತಿ ನಿನ್ನೆ ಮೃತರಾಗಿದ್ದರು. ಈ ಕುರಿತು ಇಂದು ವಿಧಾನಮಂಡಲ ಕಲಾಪದಲ್ಲಿ ಚರ್ಚೆಯ ಸಂದರ್ಭದಲ್ಲಿ ಮಾತನಾಡಿರುವ […]

ಬೆಂಗಳೂರು: ಮತ್ತೊಂದು ಕೊರೋನಾ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 5 ಏರಿಕೆ, 1 ಬಲಿ

Thursday, March 12th, 2020
Mohammad-Hussain-Siddiqui

ಬೆಂಗಳೂರು: ರಾಜಧಾನಿಯಲ್ಲಿ ಬುಧವಾರ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಮೂಲಕ ಬೆಂಗಳೂರಿನಲ್ಲಿ ಕೊರೋನಾ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ 5 ಏರಿಕೆಯಾಗಿದೆ. ಸೌದಿ ಅರೇಬಿಯಾದಿಂದ ಕೆಲ ದಿನಗಳ ಹಿಂದೆ  ಆಗಮಿಸಿದ್ದ ಕಲಬುರಗಿಯ 76 ವರ್ಷದ ವೃದ್ಧ ಕೊರೋನಾ ವೈರಸ್ ನಿಂದಲೇ ಸಾವನ್ನಪ್ಪಿರುವುದು ಇದೀಗ ದೃಢಪಟ್ಟಿದೆ. ವೃದ್ದ ಕೊರೋನಾದಿಂದಲೇ ಮೃತಪಟ್ಟಿರುವುದು ಹೌದೆಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಮೃತಪಟ್ಟವರು ಮೊಹಮ್ಮದ್ ಹುಸೈನ್ ಸಿದ್ದಿಕಿ ಕಲಬುರಗಿ ಎಂದು ಗುರುತಿಸಲಾಗಿದೆ. ರಾಜಧಾನಿಯಲ್ಲಿ ಕೊರೋನಾ ವೈರಸ್ ಸೋಂಕಿತ ವ್ಯಕ್ತಿಗೆ ಐಸೋಲೇಟೆಡ್ ವಾರ್ಡ್ ನಲ್ಲಿ ಸೂಕ್ತ […]

‘ಕೊರೋನಾ’ದಂತಹ ರೋಗಾಣುಗಳ ಸೋಂಕನ್ನು ತಡೆಗಟ್ಟಲು ನಿತ್ಯ ಅಗ್ನಿಹೋತ್ರ ಮಾಡಿ !

Wednesday, March 11th, 2020
coronavirus

ಮಂಗಳೂರು : ಭಾರತದಲ್ಲಿ ವೇದಕಾಲದಿಂದಲೂ ಯಜ್ಞಕರ್ಮಗಳನ್ನು ಮಾಡಲಾಗುತ್ತಿತ್ತು. ಭಾರತೀಯ ಸಂಸ್ಕೃತಿಯಲ್ಲಿರುವ ಯಜ್ಞಯಾಗಗಳಿಂದ ಆಧ್ಯಾತ್ಮಿಕ ಲಾಭ ಇರುವುದರೊಂದಿಗೆ ವೈಜ್ಞಾನಿಕ ಸ್ತರದಲ್ಲಿಯೂ ಅನೇಕ ಲಾಭಗಳಿವೆ, ಎಂಬುದು ಇಂದು ವಿಜ್ಞಾನದಲ್ಲಿ ಸಾಬೀತಾಗುತ್ತಿದೆ. ಇದರಲ್ಲಿ ಒಂದು ಸುಲಭ ಹಾಗೂ ಪ್ರತಿದಿನ ಮಾಡುವ ಯಜ್ಞ ಎಂದರೆ ‘ಅಗ್ನಿಹೋತ್ರ’! ಹಿಂದೂ ಧರ್ಮವು ಮನುಕುಲಕ್ಕೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಅಗ್ನಿಹೋತ್ರವನ್ನು ನಿಯಮಿತವಾಗಿ ಮಾಡಿದರೆ ದೊಡ್ಡಪ್ರಮಾಣದಲ್ಲಿ ವಾತಾವರಣದ ಶುದ್ಧೀಯಾಗುತ್ತದೆ. ಅಲ್ಲದೇ ಅದನ್ನು ಮಾಡುವ ವ್ಯಕ್ತಿಯ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿಯೂ ಶುದ್ಧಿಯಾಗುತ್ತದೆ. ಇದರೊಂದಿಗೆ ವಾಸ್ತು ಹಾಗೂ ವಾತಾವರಣದ ರಕ್ಷಣೆಯೂ […]