ಪಿಲಿಕುಳ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ 9 ವರ್ಷ ಪ್ರಾಯದ ಹುಲಿ ಸಾವು

Tuesday, January 4th, 2022
Tiger oliver

ಮಂಗಳೂರು: ಆರೋಗ್ಯವಂತ ಹಾಗೂ ಸದೃಢವಾಗಿದ್ದ 9 ವರ್ಷ ಪ್ರಾಯದ ಹುಲಿಯೊಂದು ಮಂಗಳವಾರ ಮುಂಜಾನೆ ಪಿಲಿಕುಳದ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ಮೃತಪಟ್ಟಿದೆ. ಮುಂಜಾನೆವರೆಗೂ ಚುರುಕಾಗಿಯೇ ಇದ್ದು ಒಮ್ಮಿಂದೊಮ್ಮೆಲೇ ಕುಸಿದು ಬಿದ್ದಿದೆ. ಜೀವ ಉಳಿಸಲು ಮೃಗಾಲಯದ ವೈದ್ಯಾಧಿಕಾರಿಗಳು ಮಾಡಿದ ಪ್ರಯತ್ನ ಫಲಪ್ರದವಾಗಲಿಲ್ಲ.   ಈ ಹುಲಿಯ ಹೆಸರು ಒಲಿವರ್‌. ಇದು ವಿಕ್ರಂ ಹಾಗೂ ಶಾಂಭವಿ ಹುಲಿ ಜೋಡಿಗೆ ಜನಿಸಿದ್ದ ಎರಡು ಮರಿಗಳಲ್ಲೊಂದು. ಇದರ ಪ್ರಾಯ 9 ವರ್ಷ ಆಗಿತ್ತು. ಮೃತಪಟ್ಟ ಹುಲಿಯ ಅಂಗಾಂಗಗಳ ಮಾದರಿಯನ್ನು ಬೆಂಗಳೂರಿನ ಪ್ರಾಣಿ ಆರೋಗ್ಯ […]

ಪಿಲಿಕುಳ ಮೃಗಾಲಯಕ್ಕೆ ಆಧುನಿಕ ಬ್ಯಾಟರಿ ಚಾಲಿತ ವಾಹನಗಳ ಆಗಮನ

Saturday, December 30th, 2017
pilikula

ಮಂಗಳೂರು: ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಲು ಸುಮಾರು ಎರಡು ಕಿ.ಮೀ. ದೂರ ಕ್ರಮಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಆಸಕ್ತ ವೀಕ್ಷಕರಿಗೆ ಆರಾಮವಾಗಿ ಕುಳಿತುಕೊಂಡು ಪ್ರಯಾಣಿಸಲು ನಾಲ್ಕು ಗಾಲಿಯ ಆಕರ್ಷಕ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ವಾಹನಗಳು ಜೈವಿಕ ಉದ್ಯಾನವನಕ್ಕೆ ಆಗಮಿಸಿವೆ. ಈ ಹಿಂದೆ ಇದ್ದ ಮೂರು ಗಾಲಿಗಳ ಹಳೇ ವಾಹನಗಳ ಬದಲಿಗೆ ಹೊಸ ವಿನ್ಯಾಸದ ಆರಾಮವಾಗಿ ಸಂಚರಿಸುವ ವಾಹನಗಳನ್ನು ತರಲಾಗಿದೆ. ಈಗಾಗಲೇ 4 ರಿಂದ 10 ಆಸನಗಳ ನಾಲ್ಕು ವಾಹನಗಳು ಆಗಮಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಇನ್ನಷ್ಟು […]

ಪಿಲಿಕುಳದ ‘ರಾಜ’ ಹುಲಿ ಹೃದಯಾಘಾತದಿಂದ ಸಾವು

Saturday, May 23rd, 2015
Tiger Raja

ಮಂಗಳೂರು: ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿನ 21 ವರ್ಷ ಪ್ರಾಯದ ಹಿರಿಯ ‘ರಾಜ’ ಎಂಬ ಹುಲಿ ಶುಕ್ರವಾರ ಮುಂಜಾನೆ 5 ಗಂಟೆಗೆ ಹೃದಯಾಘಾತದಿಂದ ಸಹಜವಾಗಿ ಮೃತಪಟ್ಟಿದೆ. 2003ರಲ್ಲಿ ಶಿವಮೊಗ್ಗದ ಪ್ರಾಣಿ ಸಂಗ್ರಹಾಲಯದಿಂದ ಕರೆತರಲಾಗಿರುವ ರಾಜ ಹುಲಿಗೆ ವಯಸ್ಸಾದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಬಳಲಿದ್ದು, ನಾಲ್ಕು ತಿಂಗಳಿಂದ ಆಹಾರ ಸೇವನೆಯ ಪ್ರಮಾಣ ಮಾತ್ರವಲ್ಲದೆ ಚಲನವಲನವನ್ನು ತುಸು ಕಡಿಮೆ ಮಾಡಿದ್ದ. ಪಿಲಿಕುಳಕ್ಕೆ ಆಗಮಿಸಿದ್ದ ಸಂದರ್ಭ ಸುಮಾರು 280 ಕೆ.ಜಿ. ತೂಕವಿದ್ದ ರಾಜ ದಿನಕ್ಕೆ 10 ಕೆಜಿ […]