ಅಕ್ರಮ-ಸಕ್ರಮ ಶೀಘ್ರ ವಿಲೇವಾರಿ- ಶಾಸಕಿ ಶಕುಂತಳಾ ಶೆಟ್ಟಿ
Friday, August 22nd, 2014ವಿಟ್ಲ : ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಿಕೊಂಡು ಬಂದಿರುವ ರೈತರ ಜಮೀನನ್ನು ಅಕ್ರಮ-ಸಕ್ರಮ ಕಾರ್ಯಕ್ರಮದಡಿ ಶೀಘ್ರ ವಿಲೇವಾರಿ ಮಾಡಲಾಗುವುದು. ಆದರೆ, ಕುಮ್ಕಿ ಜಮೀನು, ಬನ, ಕಾನ, ಅರಣ್ಯ ಪ್ರದೇಶಗಳನ್ನು ಸಕ್ರಮ ಮಾಡಲಾಗುವುದಿಲ್ಲ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದ್ದಾರೆ. ಶಾಸಕಿ ಗುರುವಾರ ವಿಟ್ಲ ಪ್ರವಾಸಿ ಮಂದಿರದಲ್ಲಿ ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿಯ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಅಕ್ರಮ ಸಕ್ರಮ ವಿಚಾರಣೆ ನಡೆಸಿದರು. ಕರ್ನಾಟಕ ಭೂಕಂದಾಯ ಕಾಯಿದೆ ಪ್ರಕಾರ […]