ಜಿಲ್ಲಾಧಿಕಾರಿಗಳ ಕಚೇರಿಯೆದುರು ಅಖಿಲ ಭಾರತ ಮಹಾಮುಷ್ಕರ ಪ್ರದರ್ಶನ

Tuesday, January 8th, 2019
CITU

ಮಂಗಳೂರು  : ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ(JCTU) ನೇತ್ರತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರದ ಅಂಗವಾಗಿ ಮಂಗಳವಾರ ಬೆಳಿಗ್ಗೆ ದ.ಕ.ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ಜರುಗಿತು. ಪ್ರತಿಭಟನೆಯಲ್ಲಿ INTUC ಜಿಲ್ಲಾ ನಾಯಕರಾದ ಮನೋಹರ್ ಶೆಟ್ಟಿ, ಬೊಂಡಾಲ ಚಿತ್ತರಂಜನ್ ಶೆಟ್ಟಿ,CITU ಜಿಲ್ಲಾ ನಾಯಕರಾದ ವಸಂತ ಆಚಾರಿ,ಜೆ.ಬಾಲಕ್ರಷ್ಣ ಶೆಟ್ಟಿ,ಸುನಿಲ್ ಕುಮಾರ್ ಬಜಾಲ್,AITUC ಜಿಲ್ಲಾ ನಾಯಕರಾದ ಎಚ್.ವಿ.ರಾವ್,ವಿ.ಕುಕ್ಯಾನ್,ಕರುಣಾಕರ್ ಸೇರಿದಂತೆ ಬ್ಯಾಂಕ್, ವಿಮೆ, BSNL, RMS, ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಅಖಿಲ ಭಾರತ ಅಂತರ್ ವಿವಿ ಭಾರ ಎತ್ತುವ ಸ್ಪರ್ಧೆ: ಆಳ್ವಾಸ್‍ನ ಭವಿಷ್ಯ ಪೂಜಾರಿಗೆ ಬೆಳ್ಳಿ!

Saturday, December 8th, 2018
gold-medal

ಮೂಡುಬಿದಿರೆ: ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಭಾರ ಎತ್ತುವ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ಭವಿಷ್ಯ ಪೂಜಾರಿ ಬೆಳ್ಳಿ ಪದಕ ಹಾಗೂ ಲಾವಣ್ಯ ರೈ ಕಂಚಿನ ಪದಕ ಪಡೆದಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯದಲ್ಲಿ ನಡೆದ ಸ್ಪರ್ಧೆಯಲ್ಲಿ ದ್ವಿತೀಯ ಬಿಎ ವಿದ್ಯಾರ್ಥಿಗಳಾದ ಇವರಿಬ್ಬರು ಮಂಗಳೂರು ವಿವಿಯನ್ನು ಪ್ರತಿನಿಧಿಸಿ ಪದಕ ಗೆದ್ದಿದ್ದಾರೆ. ಭವಿಷ್ಯ ಪೂಜಾರಿ ಮಂಗಳೂರು ತಾಲೂಕಿನ ಮೂಡುಶೆಡ್ಡೆ ಶಿವನಗರದ ಪ್ರೇಮಾ-ನವೀನ್ ಪೂಜಾರಿ ದಂಪತಿಯ ಪುತ್ರಿ. ಲಾವಣ್ಯ ರೈ ಅರಂಗೋಡು ಜಲಜಾಕ್ಷಿ ರೈ ಹಾಗೂ ರತ್ನಾಕರ ರೈ ದಂಪತಿಯ […]

ಅಖಿಲ ಭಾರತ ಅಂತರ್ ವಿ.ವಿ. ಕ್ರಾಸ್‍ಕಂಟ್ರಿ: ಆಳ್ವಾಸ್ ಕ್ರೀಡಾಪಟುಗಳ ಅಮೋಘ ಸಾಧನೆ

Friday, October 5th, 2018
alwas-clg

ಮೂಡುಬಿದಿರೆ: ಗುಲ್ಬರ್ಗಾ ವಿ.ವಿಯಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕ್ರಾಸ್‍ಕಂಟ್ರಿ ಚಾಂಪಿಯನ್‍ಶಿಪ್‍ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಆಳ್ವಾಸ್‍ನ ಕ್ರೀಡಾಪಟುಗಳ ಅಮೋಘ ಸಾಧನೆಯಿಂದ ಮಂಗಳೂರು ವಿಶ್ವವಿದ್ಯಾನಿಲಯ ನಾಲ್ಕನೇ ಬಾರಿಗೆ ಸಮಗ್ರ ಚಾಂಪಿಯನ್‍ಶಿಪ್‍ನ್ನು ಪಡೆದುಕೊಂಡಿತು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿ ತಿಳಿಸಿದ್ದಾರೆ. ಪುರುಷರ ವಿಭಾಗದಲ್ಲಿ 15 ಅಂಕದೊಂದಿಗೆ ಚಾಂಪಿಯನ್ ಆಗಿ ಹಾಗೂ ಮಹಿಳೆಯರ ವಿಭಾಗದಲ್ಲಿ 50 ಅಂಕಗಳನ್ನು ಪಡೆಯುವುದರೊಂದಿಗೆ ರನ್ನರ್ಸ್‍ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಪುರುಷರ ವಿಭಾಗದ […]

ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಸೆ.2ರಂದು ಅಖಿಲ ಭಾರತ ಮಹಾಮುಷ್ಕರ

Wednesday, August 31st, 2016
Bike-Rally

ಮಂಗಳೂರು: ಕಾರ್ಮಿಕ ವರ್ಗದ ಪ್ರಮುಖ ಬೇಡಿಕೆಗಳನ್ನುಈಡೇರಿಸುವಂತೆ ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಸೆ.2ರಂದು ಅಖಿಲ ಭಾರತ ಮಹಾಮುಷ್ಕರ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಸಿಐಟಿಯು ಹಾಗೂ ಡಿವೈಎಫ್ಐ ನೇತೃತ್ವದಲ್ಲಿ ಬೈಕ್ ರ‍್ಯಾಲಿ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ರ‍್ಯಾಲಿ ಉದ್ಘಾಟಿಸಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ಕೇಂದ್ರ ಸರ್ಕಾರದ ಆರ್ಥಿಕ ನೀತಿ ನಿರುದ್ಯೋಗ ಸಮಸ್ಯೆ ಹೆಚ್ಚಿಸಿದೆ. ದೊಡ್ಡ ಬಂಡವಾಳಗಾರರ ಹಿತಾಸಕ್ತಿಗೆ ಅನುಗುಣವಾಗಿ ಆರ್ಥಿಕ ನೀತಿ, ಕೈಗಾರಿಕಾ ನೀತಿ ಜಾರಿಗೊಳಿಸುತ್ತಿದೆ. ಅವರಿಗಾಗಿ ದೇಶದ ಕಾರ್ಮಿಕ ವರ್ಗ […]