ಬೀಚ್‌ನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಲಾರಿ ಚಾಲಕ

Monday, August 1st, 2022
Munaz-Ahemmad

ಮಂಗಳೂರು : ಬೀಚ್‌ನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಮೀನು ಲಾರಿ ಚಾಲಕ ಮುನಾಝ್ ಅಹ್ಮದ್ (30) ಬಂಧಿತ ಆರೋಪಿ. ಜುಲೈ 27ರಂದು ನಗರದ ಎನ್‌ಐಟಿಕೆ ಬೀಚ್‌ನಲ್ಲಿ ತನ್ನ ಸ್ನೇಹಿತನ ಜತೆಯಲ್ಲಿದ್ದ ವೇಳೆ ಅಲ್ಲಿಗೆ ಆಗಮಿಸಿದ ಆರೋಪಿ ಸಹಪಾಠಿಯನ್ನು ಬೆದರಿಸಿ ಓಡಿಸಿ ಅತ್ಯಾಚಾರ ಎಸಗಿರುವುದಾಗಿ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಾರೆ. ವಿದ್ಯಾರ್ಥಿನಿ ಜತೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಅದನ್ನು ವೀಡಿಯೋ ಕೂಡಾ ಮಾಡಿದ್ದು, ಆ ಮೂಲಕ ಬೆದರಿಕೆ ಒಡ್ಡಿರುವುದಾಗಿ […]

ಬಾಲಕಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿದ ಸರಕಾರಿ ಆಸ್ಪತ್ರೆ ವೈದ್ಯ

Monday, July 11th, 2022
Dr Anush Naik

ವಿಟ್ಲ : ಮಾಣಿ ಸರಕಾರಿ ಆಸ್ಪತ್ರೆಯ ವೈದ್ಯನೊಬ್ಬ ಅಪ್ರಾಪ್ತ ಬಾಲಕಿಯೊಂದಿಗೆ ಪ್ರೀತಿಯ ನಾಟಕವಾಡಿ, ಲೈಂಗಿಕ ಕಿರುಕುಳ ನೀಡಿ ಬಳಿಕ ಜೀವಬೆದರಿಕೆಯೊಡ್ದಿದ ಘಟನೆ ವಿಟ್ಲ ದಲ್ಲಿ ನಡೆದಿದೆ. ಬಾಲಕಿಯ ತಾಯಿ ನೀಡಿದ ದೂರಿನಂತೆ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದ್ದು ಆರೋಪಿ ವೈದ್ಯನನ್ನು ಪೊಲೀಸರು ಜು.11 ರ ಸೋಮವಾರ ವಶಕ್ಕೆ ಪಡೆದಿದ್ದಾರೆ. ವಿಟ್ಲ ಠಾಣೆಯಲ್ಲಿ ಅ. ಕ್ರ. 116/2020 ಕಲಂ: 8, 12 Pocso act & 506 IPC ಯಂತೆ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯನ್ನು ಮಾಣಿ ನಿವಾಸಿ, […]

ಬಟ್ಟೆ ಅಂಗಡಿಯಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿ ಗರ್ಭಿಣಿಯಾನ್ನಾಗಿಸಿದ ಆರೋಪಿಗೆ 10 ವರ್ಷ ಕಠಿಣ ಸಜೆ

Thursday, June 23rd, 2022
Abdul Lathif Icha

ಮಂಗಳೂರು : ತನ್ನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಸತ್ರ ಹಾಗೂ ಎಫ್‌ಟಿಎಸ್‌ಸಿ-2 ನ್ಯಾಯಾಲಯ ಅಪರಾಧಿಗೆ 10 ವರ್ಷ ಕಠಿಣ ಸಜೆ, 60 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಮಂಗಳೂರು ತಾಲೂಕು ಕಂದಾವರ ಗ್ರಾಮದ ಅಬ್ದುಲ್ ಲತೀಫ್ ಆಲಿಯಾಸ್ ಇಚ್ಚಾ(42) ಶಿಕ್ಷೆಗೊಳಗಾದ ಅಪರಾಧಿ. ಅಬ್ದುಲ್ ಲತೀಫ್ ತೆಂಕ ಉಳೆಪಾಡಿ ಗ್ರಾಮದ ಕೈಕಂಬದಲ್ಲಿ ಬಟ್ಟೆ ಅಂಗಡಿ ಹೊಂದಿದ್ದ. ಅಂಗಡಿಗೆ ಅಪ್ರಾಪ್ತೆ ಕೆಲಸಕ್ಕೆ ಸೇರಿದ್ದಳು. 2017ರ […]

ಕೋಳಿ ಫಾರ್ಮ್‌ನಲ್ಲಿ ಮಹಿಳೆಯನ್ನು ಅತ್ಯಾಚಾರಗೈದು ಪತಿಗೆ ವಿಡಿಯೋ ಕಳುಹಿಸಿದ ರೈಟರ್

Wednesday, June 15th, 2022
poultry rape

ಪುತ್ತೂರು: ಕೋಳಿ ಫಾರ್ಮ್‌ನಲ್ಲಿ ಮಹಿಳೆಯ ಮೇಲೆ ಫಾರ್ಮ್ ನೋಡಿಕೊಳುತಿದ್ದ ರೈಟರ್ ಅತ್ಯಾಚಾರಗೈದು ವಿಡಿಯೋ ಚಿತ್ರೀಕರಿಸಿ ಪತಿಗೆ ಕಳುಹಿಸಿದ ಘಟನೆ ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅರಿಯಡ್ಕ ಗ್ರಾಮದ ಮಡ್ಯಂಗಳ ಸೆರೆನ್ ಕೋಳಿ ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೈಟರ್, ಉಮ್ಮರ್ ವಿರುದ್ಧ ದೂರು ನೀಡಲಾಗಿದೆ. ಅತ್ಯಾಚಾರ ನಡೆಸಿದ ಬಳಿಕ ವಿಡಿಯೋ ಚಿತ್ರಿಕರಿಸಿ ಆರೋಪಿಯು ಮಹಿಳೆಯ ಪತಿಗೆ ಕಳುಹಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಂತ್ರಸ್ತ ಮಹಿಳೆಯು ಪತಿ ಹಾಗೂ ಮಗುವಿನೊಂದಿಗೆ ಅರಿಯಡ್ಕದ ಮಡ್ಯಂಗಳದಲ್ಲಿ ವಾಸಿಸುತ್ತಿದ್ದಾರೆ. ಕೃತ್ಯವು ಮೇ 5 ರಂದು ನಡೆದಿದ್ದು ಜೀವ […]

ಶಾಲೆಗೆ ಬಿಡುತ್ತೇನೆಂದು ಬಾಲಕಿಯನ್ನು ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಮಾಡಿದ ಯುವಕ

Wednesday, June 8th, 2022
uppinangady Rape

ಉಪ್ಪಿನಂಗಡಿ: ಬಾಲಕಿಯೋರ್ವಳನ್ನು ಕಾರಿನಲ್ಲಿ ಶಾಲೆಗೆ ಬಿಡುವ ಆಮಿಷವೊಡ್ಡಿ, ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಮಾಡಿರುವುದಾಗಿ ಆರೋಪಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಮುನಾಸೀರ್ ಎಂದು ಗುರುತಿಸಲಾಗಿದೆ. ಹದಿಮೂರು ವರ್ಷ ಹರೆಯದ ಬಾಲಕಿಯ ನೆರೆಮನೆಯವನಾದ ಯುವಕ ಮುನಾಸೀರ್ ಎಂಬಾತ ಮೇ 30 ರಂದು ಕಾರಿನಲ್ಲಿ ಶಾಲೆಗೆ ಬಿಟ್ಟು ಬರುತ್ತೇನೆಂದು ನೆಪ ಹೇಳಿ ಕಾರಿನಲ್ಲಿಯೇ ಉಪ್ಪಿನಂಗಡಿ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ. ಮಂಗಳವಾರ ಕೂಡಾ ಬಾಲಕಿ ಮನೆಯಿಂದ ಹೊರಟು ಶಾಲೆಯತ್ತ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿ […]

ಮಾದಕ ದ್ರವ್ಯ ನೀಡಿ ಯುವತಿಯ ಅತ್ಯಾಚಾರ, ಆರೋಪಿಯ ಬಂಧನ

Friday, May 13th, 2022
ಮಾದಕ ದ್ರವ್ಯ ನೀಡಿ ಯುವತಿಯ ಅತ್ಯಾಚಾರ, ಆರೋಪಿಯ ಬಂಧನ

ಮಂಗಳೂರು : ಯುವತಿಯೊಬ್ಬಳನ್ನು ಮದುವೆಯಾಗುವ ಅಮಿಷವೊಡ್ಡಿ ಅತ್ಯಾಚಾರ ನಡೆಸಿ ಆಕೆಯಿಂದ ಹಣವನ್ನು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತೊಕ್ಕೊಟ್ಟು ಸಮೀಪದ ಹಿದಾಯತ್ ನಗರದ ಶಾನ್ ನವಾಝ್ (36) ಎಂದು ಗುರುತಿಸಲಾಗಿದೆ. ಮೂಡುಬಿದಿರೆಯ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿದ ಆರೋಪಿ ಅತ್ಯಾಚಾರ ಎಸಗಿ ಆಕೆಯ ನಗ್ನ ಚಿತ್ರಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿ ನಂತರ ಹಣವನ್ನು ನೀಡಬೇಕೆಂದು ಬೆದರಿಕೆ ಹಾಕಿ 1.50 ಲಕ್ಷ ರೂ.ಸುಲಿಗೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ […]

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭವತಿ ಮಾಡಿದ ಆರೋಪಿಗೆ 10 ವರ್ಷ ಜೈಲು

Friday, April 1st, 2022
Pregnant

ಮಂಗಳೂರು: ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭವತಿಯಾಗಿ ಮಗುವಿಗೆ ಜನ್ಮ ನೀಡಲು ಕಾರಣನಾದ ಆರೋಪಿಗೆ 10 ವರ್ಷ ಜೈಲು ಮತ್ತು 30,000 ರೂ. ದಂಡ ವಿಧಿಸಿ ಮಂಗಳೂರಿನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಹಾಗೂ 2ನೇ ತ್ವರಿತಗತಿ ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಸುರತ್ಕಲ್‌ ಸಮೀಪದ ಸಸಿಹಿತ್ಲು ನಿವಾಸಿ ವಾಮನ ಪೂಜಾರಿ (59) ಶಿಕ್ಷೆಗೊಳಗಾದ  ಆರೋಪಿ. 2016ರ ಸೆಪ್ಟಂಬರ್‌ ತಿಂಗಳಲ್ಲಿ  ಹಗಲು ಹೊತ್ತಿನಲ್ಲಿ 16 ವರ್ಷ ಪ್ರಾಯದ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ […]

ಪುತ್ತೂರು : ಮಗನಿಂದಲೇ ತಾಯಿಯ ಮೇಲೆ ಎರಡು ಬಾರಿ ಅತ್ಯಾಚಾರ

Friday, January 14th, 2022
rape

ಪುತ್ತೂರು : ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರದಲ್ಲಿ ಮಗನೇ ತಾಯಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಬುಧವಾರ  ತಡರಾತ್ರಿ ನಡೆದಿದ್ದು, ಈ ಬಗ್ಗೆ ಸಂತ್ರಸ್ತ ತಾಯಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 376(2)(N)506ರಂತೆ ಪ್ರಕರಣ ದಾಖಲಾಗಿದೆ.  ಮಗನ ಈ ದುಷ್ಕೃತ್ಯದಿಂದ ತಾಯಿಯೂ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಯಿ ಮತ್ತು ಮಗ ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ಜ.12ರಂದು ಎಂದಿನಂತೆ […]

ಬಾಲಕಿಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ ರೌಡಿಶೀಟರ್

Monday, November 8th, 2021
ಬಾಲಕಿಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ ರೌಡಿಶೀಟರ್

ಮಂಗಳೂರು : ಬಾಲಕಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾವೆಸಗಿರುವ ಆರೋಪದ ಮೇಲೆ ರೌಡಿಶೀಟರ್ನನ್ನು ನಗರದ ಪಾಂಡೇಶ್ವರ ಮಹಿಳಾ ಪೊಲೀಸರು ಪೋಕ್ಸೋ ಪ್ರಕರಣದಡಿ ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೆಯ ರೌಡಿಶೀಟರ್ ನವೀನ್ ಸಿಕ್ವೇರ (34) ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ನವೀನ್ ಸಿಕ್ವೇರ ಸಂತ್ರಸ್ತ ಬಾಲಕಿಯ ಸಹೋದರನೊಂದಿಗೆ ಗೆಳೆತನವಿತ್ತು. ಈ ಹಿನ್ನೆಲೆ ಆರೋಪಿ ಬಾಲಕಿಯ ಮನೆಗೆ ಕೆಲವೊಮ್ಮೆ ಬಂದು ಹೋಗುತ್ತಿದ್ದ. ಇತ್ತೀಚೆಗೆ ಆರೋಪಿ ಬಾಲಕಿಯ ಮನೆಗೆ ಯಾರೂ ಇಲ್ಲದ ಸಂದರ್ಭ ಬಂದಿದ್ದು, ಈ ಸಂದರ್ಭ ಜ್ಯೂಸ್‌ನಲ್ಲಿ ಅಮಲು ಪದಾರ್ಥ […]

ತೋಟದ ಕೆಲಸಕ್ಕೆ ಬಂದ ದಲಿತ ಬಾಲಕಿಯ ಅತ್ಯಾಚಾರ, ಬಂಧನಕ್ಕೊಳಗಾದ ಆರೋಪಿ ಆಸ್ಪತ್ರೆಗೆ ದಾಖಲು

Thursday, October 28th, 2021
Kudkadi Narayana Rai

ಪುತ್ತೂರು : ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆ ಮಗುವಿಗೆ ಜನ್ಮ ನೀಡಿದ ಪ್ರಕರಣದ ಆರೋಪಿ  ಕುದ್ಕಾಡಿ ನಾರಾಯಣ ರೈ ಬಂಧನದ ಬೆನ್ನಲ್ಲೇ  ಅನಾರೋಗ್ಯ ಕಾರಣ ನೀಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೋಟದ ಕೆಲಸಕ್ಕೆ ಹೋಗುತ್ತಿದ್ದಾಗ ಅತ್ಯಾಚಾರ ನಡೆಸಿದ್ದಾರೆ ಎಂದು ಬಾಲಕಿ ಆರೋಪಿಸಿರುವ ನಾರಾಯಣ ರೈ ಅವರನ್ನು ಎರಡು ದಿನ ಪೊಲೀಸರ ವಶಕ್ಕೆ ಒಪ್ಪಿಸಿ ಪುತ್ತೂರು ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಆದೇಶದ ಬೆನ್ನಲ್ಲೇ ಅನಾರೋಗ್ಯದ ಹಿನ್ನೆಲೆ ನ್ಯಾಯಾಲಯದ ಅನುಮತಿಯೊಂದಿಗೆ ನಾರಾಯಣ ರೈ ಪುತ್ತೂರು ಸರ್ಕಾರಿ ಆಸ್ಪತ್ರೆಗೆ […]