16 ಅನರ್ಹ ಶಾಸಕರನ್ನು ತನ್ನ ಬಳಿ ಸೆಳೆದುಕೊಂಡ ಬಿಜೆಪಿ

Thursday, November 14th, 2019
Shasakaru

ಬೆಂಗಳೂರು : ಕಾಂಗ್ರೆಸ್- ಜೆಡಿಎಸ್ ನ ಹದಿನಾರು ಅನರ್ಹ ಶಾಸಕರು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಕರ್ನಾಟಕದ ಅನರ್ಹ ಶಾಸಕರಾದ ಮಹೇಶ್ ಕುಮಟಹಳ್ಳಿ, ರಮೇಶ್ ಜಾರಕಿಹೊಳಿ, ಹೆಚ್.ವಿಶ್ವನಾಥ್, ಶಂಕರ್, ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್, ಶಿವರಾಮ್ ಹೆಬ್ಬಾರ್, ನಾರಾಯಣ ಗೌಡ, ಎಚ್.ಟಿ.ಸೋಮಶೇಖರ್, ಗೋಪಾಲಯ್ಯ, ಭೈರತಿ ಬಸವರಾಜು, ಮುನಿರತ್ನ, ಎಂಟಿವಿ ನಾಗರಾಜ್,ಡಾ.ಸುಧಾಕರ್, ಶ್ರೀಮಂತ್ ಪಾಟೀಲ್, ಬಿ.ಸಿ. ಪಾಟೀಲ್ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಸರಿ ಶಾಲು ಹೊದ್ದು, ಬಿಜೆಪಿ ಬಾವುಟ ಹಿಡಿಯುವ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡರು. ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ, […]

ಸುಪ್ರೀಂಕೋರ್ಟಿನಲ್ಲಿ ಇಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ

Wednesday, November 13th, 2019
Anarha-shasakaru

ನವದೆಹಲಿ : ಇಂದು ಸುಪ್ರೀಂ ಕೋರ್ಟಿನಲ್ಲಿ ಅನರ್ಹ 17 ಮಂದಿ ಶಾಸಕರ ಅರ್ಜಿ ವಿಚಾರಣೆ ನಡೆಯಲಿದೆ. ರಾಷ್ಟ್ರ ರಾಜಕಾರಣಕ್ಕೆ ಮಹತ್ವದ ದಿನವಾಗಿದೆ. ರಾಜಕೀಯ ಇತಿಹಾಸದಲ್ಲಿಯೂ ಮೈಲುಗಲ್ಲಾಗಿ ಉಳಿಯುವ ದಿನ. ಅನರ್ಹತೆ ಪಟ್ಟ ಹೊತ್ತ 17 ಮಂದಿ ಶಾಸಕರ ಭವಿಷ್ಯ ನಿರ್ಧಾರ ಆಗುವ ದಿನ. ಅನರ್ಹ ಶಾಸಕರ ಅಂತಿಮ ತೀರ್ಪಿಗೆ ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಇಂದು 17 ಮಂದಿ ಅನರ್ಹ ಶಾಸಕರ ಭವಿಷ್ಯ ನಿರ್ಧಾರ ಆಗಲಿದೆ. ಸ್ಪೀಕರ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ತೀರ್ಪು ಪ್ರಕಟ ಆಗಲಿದೆ. […]

ಅನರ್ಹ ಶಾಸಕರ ಅರ್ಜಿ ವಿಚಾರಣೆ ಮುಂದೂಡಿಕೆ

Monday, September 23rd, 2019
suprrem-court

ನವದೆಹಲಿ : ಕರ್ನಾಟಕ ವಿಧಾನಸಭೆಯಿಂದ ತಮ್ಮ ಶಾಸಕತ್ವ ಅನರ್ಹಗೊಂಡಿದ್ದ 17 ಶಾಸಕರ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ಬುಧವಾರಕ್ಕೆ ಮುಂದೂಡಿದೆ. ನ್ಯಾಯಮೂರ್ತಿ ಎಸ್.ವಿ. ರಮಣ, ನ್ಯಾಯಮುರ್ತಿಗಳಾದ ಸಂಜೀವ ಖನ್ನಾ ಹಾಗೂ ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ಪೀಠದಿಂದ ಅನರ್ಹ ಶಾಸಕರ ಅರ್ಜಿಯ ವಿಚಾರಣೆ ಇಂದು ನಡೆಯುತ್ತಿತ್ತು. ಅನರ್ಹ ಶಾಸಕರ ಪರವಾಗಿ ಮುಕುಲ್ ರೊಹಟಗಿ ವಾದ ಮಂಡಿಸಿದ್ದರು. ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ವಾದ ಮಂಡಿಸಿದರು ಮತ್ತು ಸ್ಪೀಕರ್ ಪರ ತುಷಾರ್ […]