7 ಮಕ್ಕಳಿದ್ದರೂ, ಅನಾಥಾಶ್ರಮ ದಲ್ಲೇ ಪ್ರಾಣಕಳ್ಕೊಂಡ ವೃದ್ದೆ

Monday, January 8th, 2024
lakshmi-hegde

ಉಪ್ಪಿನಂಗಡಿ : ತನ್ನ ಇಳಿವಯಸ್ಸಿನಲ್ಲಿ ಮಕ್ಕಳಿಗೆ ಬೇಡವಾಗಿ ಅನಾಥಾಶ್ರಮ ಸೇರಿದ್ದ ವೃದ್ಧೆಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಭಾನುವಾರ ವರದಿಯಾಗಿದೆ. ಉಪ್ಪಿನಂಗಡಿ ಬಳಿಯ ಇಳಂತಿಲದ ಲಕ್ಷ್ಮೀ ಹೆಗ್ಡೆ (90) ನಿಧನ ಹೊಂದಿದ ವೃದ್ಧೆ. ಲಕ್ಷ್ಮೀ ಅವರಿಗೆ 7 ಮಕ್ಕಳಿದ್ದು, ಅವರ್‍ಯಾರೂ ಪಾರ್ಥಿವ ಶರೀರದ ಅಂತಿಮ ಕಾರ್ಯಕ್ಕೆ, ಅಂತಿಮ ದರ್ಶನಕ್ಕೆ ಆಗಮಿಸಿಲ್ಲ. ಆದ್ದರಿಂದ ಅನಾಥಾಶ್ರಮದವರೇ ಲಕ್ಷ್ಮೀ ಅವರ ಅಂತ್ಯಸಂಸ್ಕಾರ ಮಾಡಿರುವುದಾಗಿ ತಿಳಿದುಬಂದಿದೆ. ಲಕ್ಷ್ಮೀ ಅವರು ಉಪ್ಪಿನಂಗಡಿ ಬಳಿಯ ಇಳಂತಿಲದಲ್ಲಿ ಸ್ವಂತ ಮನೆ ಹೊಂದಿದ್ದರು. ವೃದ್ಧಾಪ್ಯದಲ್ಲಿ ಮಕ್ಕಳಿಗೆ ಬೇಡವಾಗಿ, ನ್ಯಾಯ ದೊರಕಿಸಿ […]

ಬೆಂಗಳೂರಿನ ಯತೀಂ ಖಾನಾ ವೊಂದರಲ್ಲಿ 200 ಅನಾಥ ಮಕ್ಕಳು ಮೌಲ್ವಿಗಳನ್ನು ಕಂಡರೆ ಭಯ ಪಡುತ್ತಾರೆ

Tuesday, November 21st, 2023
Yatim-khana

ಬೆಂಗಳೂರು : ಬೆಂಗಳೂರಿನ ಕಾವಲ್ ಬೈರಸಂದ್ರದಲ್ಲಿರೋ ಮುಸ್ಲಿಂ ಸಮುದಾಯದ ದಾರುಲ್ ಉಲೂಮ್ ಸಾದಿಯಾ ಅನಾಥಾಶ್ರಮದಲ್ಲಿ ಮಕ್ಕಳಿಗೆ ಇಸ್ಲಾಂ ಧಾರ್ಮಿಕ ಶಿಕ್ಷಣ ಮಾತ್ರ ನೀಡುತ್ತಿದೆ, ಅನಾಥಾಶ್ರಮದಲ್ಲಿರುವ 200 ಮಕ್ಕಳನ್ನು ಶಾಲೆಗೂ ಕಳುಹಿಸಲಾಗುತ್ತಿಲ್ಲ, ಇಸ್ಲಾಂ ಧಾರ್ಮಿಕ ಶಿಕ್ಷಣ ಮಾತ್ರ ನೀಡಲಾಗುತ್ತಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂನ್​ಗೊ ಹೇಳಿದ್ದಾರೆ. ಇಲ್ಲಿನ ಮಕ್ಕಳು ಮಧ್ಯಯುಗದ ತಾಲಿಬಾನ್ ರೀತಿಯಲ್ಲಿ ಬದುಕುತ್ತಿದ್ದಾರೆ. ಇಲ್ಲಿ ಸುಮಾರು 200 ಅನಾಥ ಮಕ್ಕಳಿದ್ದಾರೆ. ಮಸೀದಿಯ ನಮಾಜ್ ಮಾಡುವ ಎರಡು ಹಾಲ್‌ಗಳಲ್ಲಿ ಮಲಗುತ್ತಾರೆ. ಅವರಿಗೆ […]

ಅನಾಥಾಶ್ರಮಕ್ಕೆ ದೇಣಿಗೆ ನೀಡಲು ಹೊರಟ ಮಹಿಳೆ ನಿಗೂಢ ನಾಪತ್ತೆ !

Wednesday, March 3rd, 2021
Hinaj

ಉಳ್ಳಾಲ : ವಿದೇಶದಿಂದ ಬಂದ ಗರ್ಭಿಣಿ ಮಹಿಳೆಯೊಬ್ಬರು ಕಲ್ಲಾಪುವಿನಲ್ಲಿರುವ ಅನಾಥಾಶ್ರಮ ಶಾಲೆಗೆ ದೇಣಿಗೆ ಹಣವನ್ನು ನೀಡಲು ಹೋಗಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ. ಮಾರ್ಚ್ 2 ರ ಮಂಗಳವಾರ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲಾಪು ಎಂಬಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಗರ್ಭಿಣಿಯನ್ನು ಸೋಮೇಶ್ವರ ಒಂಬತ್ತುಕೆರೆ ನಿವಾಸಿ ಇಬ್ರಾಹಿಂ ಎಂಬವರ ಪತ್ನಿ ಹಿನಾಜ್(25) ಎಂದು ಗುರುತಿಸಲಾಗಿದೆ. ಹಿನಾಜ್ ಪತಿಯೊಂದಿಗೆ ವಿದೇಶದಲ್ಲಿದ್ದರು ಮತ್ತು ಕೆಲವು ವಾರಗಳ ಹಿಂದೆ ತಮ್ಮ ತವರೂರಿಗೆ ಮರಳಿದ್ದರು. ಪ್ರತಿಜ್ಞೆಯನ್ನು ಪೂರೈಸಲು ಹಣವನ್ನು ಹಸ್ತಾಂತರಿಸಲು […]

ಅನಾಥಾಶ್ರಮ, ವೃದ್ಧಾಶ್ರಮದಂತಹ ಸಂಘ ಸಂಸ್ಥೆಗೂ ಒಕ್ಕೂಟ ರಚಿಸುವಂತೆ ತುಳುನಾಡ ರಕ್ಷಣಾ ವೇದಿಕೆಯಿಂದ ಒತ್ತಾಯ

Wednesday, November 30th, 2016
Thulu Nadu rakshana vedike

ಮಂಗಳೂರು: ಅನಾಥಾಶ್ರಮ, ವೃದ್ಧಾಶ್ರಮದಂತಹ ಸಂಘ ಸಂಸ್ಥೆಗೂ ಒಕ್ಕೂಟ ರಚಿಸುವಂತೆ ತುಳುನಾಡ ರಕ್ಷಣಾ ವೇದಿಕೆ ದ. ಕ. ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ, ಅನಾಥಾಶ್ರಮ ಮತ್ತು ವೃದ್ಧಾಶ್ರಮ ಇನ್ನಿತರ ಸಮಾಜಮುಖಿ ಸೇವೆಗೆ ಸರ್ಕಾರದಿಂದ ಸಿಗುವ ಸವಲತ್ತು ದುರ್ಬಳಕೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಅನಾಥಾಶ್ರಮ, ವೃದ್ಧಾಶ್ರಮದಂತಹ ಸಂಘಸಂಸ್ಥೆಗಳು ಒಕ್ಕೂಟ ರಚಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಬೇಕೆಂದರು. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಸಂಘ ಸಂಸ್ಥೆಗಳಿಗೆ ಸರ್ಕಾರದ ಸವಲತ್ತುಗಳು ದೊರೆಯುತ್ತಿಲ್ಲ. ಕೆಲವು ಸರಕಾರೇತರ ಸಂಘಸಂಸ್ಥೆಗಳು ನೆಪಮಾತ್ರಕ್ಕೆ ಆಶ್ರಮ, ಅನಾಥಶ್ರಮ, ವೃದ್ಧಾಶ್ರಮಗಳನ್ನು ಕಟ್ಟಿ, ಭೂಕಬಳಿಕೆ, […]