ಉಪ್ಪು ಹಾಕಿದಾಗ ಆಹಾರದ ಬಣ್ಣ ಬದಲಾವಣೆ: ಗ್ರಾಹಕರಲ್ಲಿ ಆತಂಕ
Wednesday, November 30th, 2016ಸುಳ್ಯ: ಉಪ್ಪು ಹಾಕಿದಾಗ ಆಹಾರದ ಬಣ್ಣ ಬದಲಾಗುತ್ತಿರುವ ಪ್ರಸಂಗ ಗ್ರಾಹಕರಲ್ಲಿ ಆತಂಕ ಮತ್ತು ಗೊಂದಲ ಸೃಷ್ಠಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ. ಅನ್ನಭಾಗ್ಯ ಯೋಜನೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾದ ಉಪ್ಪಿನ ಪ್ಯಾಕೇಟ್‍ನಲ್ಲಿ ಬರುವ ಉಪ್ಪನ್ನು ಬಳಸಿದಾಗ ಆಹಾರದ ಬಣ್ಣ ಬದಲಾಗಿದೆ. ದ್ವಿಗುಣ ಬಲವರ್ಧಿತ ಕಬ್ಬಿಣಾಂಶಯುಕ್ತ ಅಯೋಡಿನ್‍ಯುಕ್ತ ಉಪ್ಪನ್ನು ಬಳಸಿದಾಗ ಆಹಾರ ವಸ್ತುಗಳ ಬಣ್ಣ ಕೆಲವೇ ಕ್ಷಣದಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತಿದೆ. ಸುಳ್ಯ ಸಹಕಾರಿ ವ್ಯವಸಾಯಿಕ ಬ್ಯಾಂಕಿನ ಅಜ್ಜಾವರ ಶಾಖೆಯ ನ್ಯಾಯಬೆಲೆ ಅಂಗಡಿಯಿಂದ ಉಪ್ಪಿನ ಪೊಟ್ಟಣ ಖರೀದಿಸಿದ್ದ ಗೋಪಾಲ […]