ಮೀನುಗಾರರಿಗೆ ಭಯ ಹುಟ್ಟಿಸುವ `ಅಳಿವೆ ಬಾಗಿಲು’ ಸಂಪೂರ್ಣ ಡ್ರೆಜ್ಜಿಂಗ್ಗಾಗಿ ಕಾಯುತ್ತಿದ್ದಾರೆ ಮೀನುಗಾರರು…
Saturday, October 20th, 2012ಮಂಗಳೂರು : ಕರಾವಳಿಯಲ್ಲಿ ಮೀನುಗಾರಿಕೆಯೇ ಆರ್ಥಿಕ ಸಂಪತ್ತಿನ ಪ್ರಮುಖ ಕೇಂದ್ರ. ಲಕ್ಷಾಂತರ ಮೊತ್ತದ ವಹಿವಾಟು ಮೀನುಗಾರಿಕೆ ಮೂಲಕ ನಡೆಯುತ್ತದೆ. ದೇಶ ವಿದೇಶಗಳಿಗೆ ಇಲ್ಲಿನ ಮತ್ಸ್ಯ ಸಂಪತ್ತು ರವಾನೆಯಾಗುತ್ತಿದೆ. ಆದರೆ ಮೀನುಗಾರಿಕೆಯನ್ನೇ ಕಾಯಕವನ್ನಾಗಿಸಿಕೊಂಡಿರುವ ಮೀನುಗಾರರು ಮಾತ್ರ ಜೀವ ಭಯದಿಂದಲೇ ಸಮುದ್ರಕ್ಕಿಳಿಯುವ ಸನ್ನಿವೇಶವಿದೆ. ಕಡಲ ಒಡಲಿಗಿಳಿದು ಮೀನುಗಾರಿಕೆ ನಡೆಸುತ್ತಿರುವ ಮೀನುಗಾರರ ಜೀವಕ್ಕೆ ನಿರಂತರ ಆಪತ್ತು ಎದುರಾಗುತ್ತಿದೆ. ಆಳಸಮುದ್ರಕ್ಕೆ ತೆರಳಿ ಲಕ್ಷಾಂತರ ಮೊತ್ತದ ಮೀನುಗಳನ್ನು ಹೊತ್ತು ವಾಪಾಸು ಬರುತ್ತಿದ್ದರೂ ನೆಮ್ಮದಿಯಿಂದ ದಡ ಸೇರುತ್ತೇವೆ ಎಂಬ ನಂಬಿಕೆ ಅವರಲ್ಲಿರುವುದಿಲ್ಲ. ಮಂಗಳೂರಿನ ಬಂದರು(ಧಕ್ಕೆ) ಪ್ರವೇಶಿಸುವ […]