ಆಂಧ್ರ ಪ್ರದೇಶದ ಮುಖ್ಯಮಂತ್ರಿ ಪರಿಹಾರ ನಿಧಿಗೆ 117 ಕೋಟಿ ರೂ. ವಂಚಿಸಲು ಪ್ಲಾನ್, ದಕ್ಷಿಣ ಕನ್ನಡದ ಆರು ಮಂದಿ ವಶ

Tuesday, October 6th, 2020
Andra police

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆರು ಮಂದಿಯನ್ನು ಆಂಧ್ರ ಪ್ರದೇಶದ ಪೊಲೀಸರು ಅಲ್ಲಿನ  ಮುಖ್ಯಮಂತ್ರಿ ಪರಿಹಾರ ನಿಧಿಗೆ ವಂಚಿಸಲು ಯೋಜನೆ ರೂಪಿಸಿದ ಹಿನ್ನಲೆಯಲ್ಲಿ ಬಂಧಿಸಿದ್ದಾರೆ. ಮೂಡಬಿದ್ರೆ ನಿವಾಸಿಗಳಾದ ಯೋಗೀಶ್ ಆಚಾರ್ಯ (40), ಉದಯ ಶೆಟ್ಟಿ ಕಾಂತಾವರ( 35), ಮಂಗಳೂರಿನ ಬ್ರಿಜೆಶ್ ರೈ(35) ಬೆಳ್ತಂಗಡಿಯ ಗಂಗಾಧರ ಸುವರ್ಣ (45) ಸೇರಿದಂತೆ ಆರು ಮಂದಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ. ಆಂಧ್ರದ ಕಂದಾಯ ಇಲಾಖೆಯ ಸಹಾಯಕ ಕಾರ್ಯದರ್ಶಿ ಪಿ.ಮುರಳೀಕೃಷ್ಣ ರಾವ್ ನೀಡಿದ ದೂರಿನ ಆಧಾರ ಮೇರೆಗೆ ಸೆ. 21ರಂದು ಆಂಧ್ರ ಪ್ರದೇಶದ ತುಲ್ಲೂರು ಪೊಲೀಸ್ ಠಾಣೆಯಲ್ಲಿ […]

ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಅರೆಸ್ಟ್​ ವಾರಂಟ್!

Friday, September 14th, 2018
chandra-bahu

ಅಮರಾವತಿ: ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. 2010ರಲ್ಲಿ ಗೋಧಾವರಿ ನದಿಗೆ ಬಾಬ್ಲಿ ಅಣೆಕಟ್ಟು ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಹಾಗೂ ಇತರೆ 15 ಮಂದಿ ವಿರುದ್ಧ ಮಹಾರಾಷ್ಟ್ರ ಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿದೆ. ನಾಂದೇಡ್ ಜಿಲ್ಲೆಯ ಧರ್ಮಾಬಾದ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್, ಆಂಧ್ರ ಸಿಎಂ ಹಾಗೂ ಇತರರ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿದೆ. ಅಲ್ಲದೆ […]

ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಿಜಯಭಾಸ್ಕರ್ ನೇಮಕ

Saturday, June 30th, 2018
vijay-bhaskar

ಬೆಂಗಳೂರು: ಸೇವಾ ಹಿರಿತನದಲ್ಲಿ 1983 ನೇ ಬ್ಯಾಚ್ನ ಟಿ.ಎಂ. ವಿಜಯಭಾಸ್ಕರ್ ಅವರನ್ನು ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನ ಮುಖ್ಯಕಾರ್ಯದರ್ಶಿ ಆಯ್ಕೆ ಕುರಿತಂತೆ ಸುದೀರ್ಘ ಪರಾಮರ್ಶೆ ನಂತರ ರಾಜ್ಯದ ಹಿರಿಯ ಅಧಿಕಾರಿಯನ್ನು ನೇಮಕ ಮಾಡಲು ಹಲವು ಸಲಹೆಗಳು ಬಂದಿತ್ತು. ಬಳಿಕ ಸಚಿವ ಸಂಪುಟ, ಆಯ್ಕೆ ವಿಚಾರವನ್ನು ಮುಖ್ಯಮಂತ್ರಿಯವರಿಗೆ ಬಿಟ್ಟುಕೊಟ್ಟಿತ್ತು. ಇಂದು ಟಿ.ಎಂ. ವಿಜಯಭಾಸ್ಕರ್ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಮುಖ್ಯ […]

ರೈಲ್ವೆ ನಿಲ್ದಾಣಗಳಲ್ಲಿ ರೈಲ್ವೆ ಇಲಾಖೆ ಪ್ಲಾಸ್ಟಿಕ್ ಬಾಟಲ್ ಎಸೆಯಲು ಕ್ರಷರ್ ಯಂತ್ರ..!

Friday, June 29th, 2018
railway

ಆಂಧ್ರ ಪ್ರದೇಶ: ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಮಹತ್ವದ ಕಾರ್ಯ ಕೈಗೊಂಡಿದೆ. ರೈಲ್ವೆ ನಿಲ್ದಾಣಗಳಲ್ಲಿ ರೈಲ್ವೆ ಇಲಾಖೆ ಪ್ಲಾಸ್ಟಿಕ್ ಬಾಟಲ್ ಎಸೆಯಲು ಕ್ರಷರ್ ಯಂತ್ರಗಳನ್ನು ಸ್ಥಾಪಿಸಲಾಗಿದೆ. ತೆಲಂಗಾಣದ ಸಿಕಿಂದರಾಬಾದ್, ಕಾಚಿಗುಡ ಮತ್ತು ನಿಜಾಮಾಬಾದ್ ಹಾಗೂ ಆಂಧ್ರ ಪ್ರದೇಶದ ವಿಜಯವಾಡ ರೈಲ್ವೆ ನಿಲ್ದಾಣಗಳಲ್ಲಿ ದಕ್ಷಿಣ ಮಧ್ಯ ರೈಲ್ವೆ ಈ ಬಾಟಲ್ ಕ್ರಷರ್ ಯಂತ್ರಗಳನ್ನು ಅಳವಡಿಸಿದೆ. ಪ್ಲಾಸ್ಟಿಕ್ಗಳ ಮರು ಉತ್ಪನ್ನ ಮತ್ತು ಮರುಬಳಕೆ ಮಾಡಲೆಂದು ಯಂತ್ರಗಳನ್ನು ಸ್ಥಾಪಿಸಲಾಗಿದೆ. ಫ್ರಿಡ್ಜ್ ಮಾದರಿಯಲ್ಲಿ ಈ ಯಂತ್ರಗಳಿದ್ದು, ಒಂದು ದಿನದಲ್ಲಿ ಸುಮಾರು 5,000 […]