ತುಳುನಾಡಿನ ಜಾನಪದ ಸಾಂಸ್ಕೃತಿಕ ಆಚರಣೆಗಳಲ್ಲಿ ಆಟಿ ತಿಂಗಳಿಗೆ ವಿಶಿಷ್ಟ ರೀತಿಯ ಮಾನ್ಯತೆ

Tuesday, August 2nd, 2016
Aati-Amavasye

ಮಂಗಳೂರು: ಆಟಿ ತಿಂಗಳು ಎಂದಾಕ್ಷಣ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ ಎಂಬ ವಾಡಿಕೆ ಇದೆ. ತುಳುನಾಡಿನ ಜಾನಪದ ಸಾಂಸ್ಕೃತಿಕ ಆಚರಣೆಗಳಲ್ಲಿ ಆಟಿ (ಆಷಾಢ) ತಿಂಗಳಿಗೆ ವಿಶಿಷ್ಟ ರೀತಿಯ ಮಾನ್ಯತೆ ಇದೆ. ಆಟಿ ಕಷಾಯಕ್ಕೂ ಅಗ್ರ ಸ್ಥಾನ ದೊರೆತಿದೆ. ಕೃಷಿ ಅವಲಂಭಿತ ಪ್ರಾಚೀನ ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ಯಾವುದೇ ಬೆಳೆಯ ಫಸಲು ಕೊಯ್ಲಿಗೆ ಬರುವುದಿಲ್ಲ. ಈ ತಿಂಗಳಿನಲ್ಲಿ ಬದಲಾಗುವ ಭೂ ವಾತಾವಾರಣ, ನಿರಂತರ ಸುರಿಯುವ ಮಳೆಯನ್ನು ಕಾಣಬಹುದು. ಈ ಕಾರಣದಿಂದಾಗಿ ಈ ಮಾಸದಲ್ಲಿ ಶರೀರದಲ್ಲಿ ಕಂಡು ಬರುವ ರೋಗಗಳು […]

ರಾಷ್ಟ್ರಕವಿ ಎಂ.ಗೋವಿಂದ ಪೈ ಸ್ಮಾರಕ ಕೇಂದ್ರ ಉದ್ಘಾಟನೆಗೆ ಸಜ್ಜು

Tuesday, February 16th, 2016
Govinda pai

ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮರಣೆಗಾಗಿ ನಿರ್ಮಿಸಲಾಗಿರುವ ಗಿಳಿವಿಂಡನ್ನು ಕೇರಳ ಹಾಗೂ ಕರ್ನಾಟಕ ಸರಕಾರಗಳ ಸಹಕಾರದೊಂದಿಗೆ ಮಾ.5 ರಂದು ಉದ್ಘಾಟಿಸಲಾಗುವುದು. ಗಿಳಿವಿಂಡಿನ ಉದ್ಘಾಟನೆ ಮಾ.5 ಹಾಗೂ 6ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಉದ್ಘಾಟಿಸಲಾಗುವುದೆಂದು ಮಾಜಿ ಕೇಂದ್ರ ಸಚಿವ ಎಂ ವೀರಪ್ಪ ಮೊಯಿಲಿ ನೇನೃತ್ವದ ಸ್ಮಾರಕ ನಿರ್ಮಾಣ ಸಮಿತಿ ಮಂಜೇಶ್ವರದಲ್ಲಿ ಸೇರಿದ ಸಭೆಯಲ್ಲಿ ತೀರ್ಮಾನಿಸಿದೆ. ಗೋವಿಂದ ಪೈಗಳ ಸ್ಮರಣಾರ್ಥವಾಗಿ ಪೈಗಳ ನಿವಾಸದ ಸನಿಹ ಭವನಿಕಾ ಅಡಿಟೋರಿಯಂ ನ್ನು ನೂತನವಾಗಿ ನಿರ್ಮಿಸಲಾಗಿದ್ದು,ಇದರ ಉದ್ಘಾಟನೆಯೂ ಈ […]