ತುಂಬೆಯಿಂದ ಸರಬರಾಜಗುತ್ತಿರುವ ಕಲುಷಿತ ನೀರಿನ ಪರೀಕ್ಷೆಗೆ ತುಂಬೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮನಪಾ ನಿರ್ಧಾರ

Monday, January 30th, 2017
MCC

ಮಂಗಳೂರು : ನಗರಕ್ಕೆ ತುಂಬೆಯಿಂದ ಸರಬರಾಜು ಆಗುತ್ತಿರುವ ಕಲುಷಿತ ನೀರಿನ ಪರೀಕ್ಷೆಗೆ ಎರಡು ಪಕ್ಷದ ಕಾರ್ಪೊರೇಟರ್‌ಗಳು ತುಂಬೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ನಿನ್ನೆ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದರು. ಬಂಟ್ವಾಳ ತಾಲೂಕಿನ 18 ಕಡೆಗಳಲ್ಲಿ ಕಲುಷಿತ ನೀರುಗಳನ್ನು ನೇತ್ರಾವತಿ ನದಿಗೆ ಹರಿದು ಬಿಡಲಾಗುತ್ತದೆ ಎಂದು ಮನಪಾ ಸಭೆಯಲ್ಲಿ ಧ್ವನಿಯೆತ್ತಿದ್ದ ಪ್ರತಿಪಕ್ಷದ ಸದಸ್ಯರ ಆರೋಪದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.. ಈ ಆರೋಪಕ್ಕೆ ಉತ್ತರಿಸಿದ ಆಡಳಿತ ಪಕ್ಷ, ಕುಡಿಯಲು ಶುದ್ಧೀಕರಿಸಿದ ನೀರನ್ನೇ ಮಂಗಳೂರಿಗೆ ಪೂರೈಕೆ […]

ಜೆಡಿಎಸ್‌ ಆಡಳಿತ ಪಕ್ಷವಾಗಿ ಮೂಡಿಬರಲಿದೆ: ಎಚ್‌.ಡಿ. ದೇವೇಗೌಡ

Monday, October 17th, 2016
Deve-gowda

ಮಂಗಳೂರು: ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬ ವಿಶ್ಲೇಷಣೆಗಳು ಸರಿಯಲ್ಲ. ಅಧಿಕಾರವನ್ನು ಪಡೆಯುವ ಮೂಲಕ ಆಡಳಿತ ಪಕ್ಷವಾಗಿ ಮೂಡಿಬರಲಿದೆ ಎಂದು ಪಕ್ಷದ ರಾಷ್ಟ್ರೀಯಾಧ್ಯಕ್ಷ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದರು. ಪಕ್ಷ ಸಂಘಟನೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪ್ರವಾಸಕ್ಕೆ ಶನಿವಾರ ಆಗಮಿಸಿದ ಸಂದರ್ಭದಲ್ಲಿ ನಗರದ ಸಕೀìಟ್‌ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೇವೇಗೌಡ ಅವರು, ಮುಂದಿನ ಚುನಾವಣೆಯಲ್ಲಿ ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಜೆಡಿಎಸ್‌ ನಿರ್ಣಾಯಕ ಶಕ್ತಿಯಾಗಲಿದೆ ಎಂಬ […]

ಮಂಗಳೂರು ಪಾಲಿಕೆ : ವಿರೋಧ ಪಕ್ಷಕ್ಕೆ ಮೇಯರ್, ಆಡಳಿತ ಪಕ್ಷಕ್ಕೆ ಉಪಮೇಯರ್

Thursday, March 8th, 2012
Mayor GulZar

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 5ನೇ ಅವಧಿಯ ಕೊನೆಯ ಮೇಯರ್‌ ಆಯ್ಕೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗುಲ್ಜಾರ್‌ ಬಾನು ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ, ಪಾಲಿಕೆಯಲ್ಲಿ ಬಹುಮತವಿರುವ ಬಿಜೆಪಿ ಅಭ್ಯರ್ಥಿ ಇದ್ದರೂ ವಿರೋಧ ಪಕ್ಷದ ಅಭ್ಯರ್ಥಿಯೊಬ್ಬರು ಮೇಯರ್ ಆಗಿರುವುದು ಅಚ್ಚರಿ ಮೂಡಿಸಿತು. ರೂಪಾ ಡಿ. ಬಂಗೇರ ಅವರು ಆಡಳಿತ ಪಕ್ಷ ಬಿಜೆಪಿಯ ಮೇಯರ್ ಅಭ್ಯರ್ಥಿಯಾಗಿದ್ದರು. ಅವರು ಮೀಸಲಾತಿಗೆ ಸಂಬಂಧಿಸಿದ ಜಾತಿ ಪ್ರಮಾಣ ಪತ್ರವನ್ನು ಸರಿಯಾಗಿ ಹಾಜರು ಪಡಿಸಿಲ್ಲ ಎಂಬ ನೆಪಯೊಡ್ಡಿ ಅವರ ನಾಮ ಪತ್ರವನ್ನು ತಿರಷ್ಕರಿಸಲಾಯಿತು. ಆಡಳಿತ […]