ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ ಸಿ.ಎಲ್. ಅವರಿಗೆ ಸೇರಿದ ಆರು ಸ್ಥಳಗಳಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ

Saturday, July 20th, 2024
cl Anand

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ ಸಿ.ಎಲ್. ಅವರಿಗೆ ಸೇರಿದ ಆರು ಸ್ಥಳಗಳಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮ ಆಸ್ತಿಯ ಬಗ್ಗೆ ಪರಿಶೀಲನೆ ನಡೆಸಿದೆ. ಈ ವೇಳೆ, ಮೂರು ವಾಸದ ಮನೆಗಳು ಸೇರಿದಂತೆ ಚಿನ್ನಾಭರಣ, ಜಮೀನು ಮಾಡಿಕೊಂಡಿರುವುದು ಪತ್ತೆಯಾಗಿದೆ. ಮೈಸೂರು, ಬೆಂಗಳೂರು ಸೇರಿದಂತೆ ಮೂರು ಮನೆಗಳಿವೆ. ಇದಲ್ಲದೆ, ನಾಲ್ಕು ಎಕರೆ 27 ಗುಂಟೆ ಕೃಷಿ ಜಮೀನು ಹೊಂದಿದ್ದಾರೆ. ಇದರ ಆಸ್ತಿ ಮೌಲ್ಯ 2.12 ಕೋಟಿ ಆಗಿರುತ್ತದೆ. 19.40 ಲಕ್ಷ ಮೌಲ್ಯದ ಚಿನ್ನಾಭರಣಗಳು, 20.50 ಲಕ್ಷ […]

ಪತ್ನಿಯಿಂದ ಕಿರುಕುಳ ಕೊಲೆಯತ್ನ ದೂರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ನಾಪತ್ತೆ

Sunday, January 24th, 2021
GT Dinesh Kumar

ಮಂಗಳೂರು :  ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಆಯುಕ್ತ ಜಿ.ಟಿ. ದಿನೇಶ್ ಕುಮಾರ್ (38) ಅವರ ವಿರುದ್ಧ ಪತ್ನಿ ಕಿರುಕುಳ ನೀಡಿದ ಹಾಗೂ ಕೊಲೆಯತ್ನ ದೂರು ನೀಡಿದ್ದಾರೆ. ದಿನೇಶ್ ಕುಮಾರ್ ಮೂಡ ಆಯುಕ್ತರಾಗಿ ತಿಂಗಳ ಹಿಂದೆಯಷ್ಟೇ ನೇಮಕಗೊಂಡಿದ್ದರು. ಮಂಗಳೂರಿನ ಉರ್ವ ಮಾರ್ಕೆಟ್ ಬಳಿಯ ಅಗ್ರಜ ವಿವಾಂಟ ಫ್ಲಾಟ್‌ನಲ್ಲಿ ಇವರು ವಾಸವಿದ್ದರು. ಪತ್ನಿ ಬೆಂಗಳೂರಿನಲ್ಲಿ ಇದ್ದುದರಿಂದ ಇವರು ಒಬ್ಬರೇ ಇಲ್ಲಿ ವಾಸವಿದ್ದರು ಎಂದು ಹೇಳಲಾಗಿದೆ. ಬೆಂಗಳೂರಿನ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪತ್ನಿ ದೀಪ್ತಿ ಅವರು ಕೊಲೆಯತ್ನ ಹಾಗೂ ವರದಕ್ಷಿಣೆ ಕಿರುಕುಳ ದೂರು […]

ಮಂಗಳೂರು ಸ್ಮಾರ್ಟ್ ಸಿಟಿ ಲಿ.ನ ಆಡಳಿತ ನಿರ್ದೇಶಕ ಮುಹಮ್ಮದ್ ನಝೀರ್ ವರ್ಗಾವಣೆ

Tuesday, October 20th, 2020
Mohammed Nazir

ಮಂಗಳೂರು : ಮಂಗಳೂರು ಸ್ಮಾರ್ಟ್ ಸಿಟಿ ಲಿ.ನ ಆಡಳಿತ ನಿರ್ದೇಶಕ ಮುಹಮ್ಮದ್ ನಝೀರ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ನಝೀರ್ ಅವರನ್ನು ಒಂದು ವರ್ಷದಿಂದ ಸ್ಮಾರ್ಟ್ ಸಿಟಿ ಲಿ.ಇದರ ನಿರ್ದೇಶಕರಾಗಿ ನಿಯುಕ್ತಿಗೊಳಿಸಲಾಗಿತ್ತು. ಮುಹಮ್ಮದ್ ನಝೀರ್ ಅವರಿಗೆ ಹೊಸ ಹುದ್ದೆ ಇನ್ನೂ ನಿಗದಿಯಾಗಿಲ್ಲ. ಅವರ ಸ್ಥಾನಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಅವರನ್ನು ನೇಮಿಸಲಾಗಿದೆ.

ಮಂಗಳೂರು ಪಾಲಿಕೆ ಆಯುಕ್ತ ಶಾನಾಡಿ ಕೃಷ್ಣಭಾಗ್ಯ ಜಲ ನಿಗಮ ಕ್ಕೆ ವರ್ಗ

Wednesday, August 5th, 2020
ಮಂಗಳೂರು ಪಾಲಿಕೆ ಆಯುಕ್ತ ಶಾನಾಡಿ ಕೃಷ್ಣಭಾಗ್ಯ ಜಲ ನಿಗಮ ಕ್ಕೆ ವರ್ಗ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರಿಗೆ ಬುಧವಾರ ದಿಢೀರ್ ವರ್ಗಾವಣೆಯಾಗಿದೆ. ಅವರ ಸ್ಥಾನಕ್ಕೆ ಯಾರನ್ನೂ ನೇಮಿಸಿಲ್ಲ. ಅಜಿತ್ ಕುಮಾರ್ ಹೆಗ್ಡೆ ಅವರಿಗೆ ಆಲಮಟ್ಟಿ ಕೃಷ್ಣಭಾಗ್ಯ ಜಲ ನಿಗಮದ ಪ್ರಭಾರ ಮುಖ್ಯ ಲೆಕ್ಕಾಧಿಕಾರಿ ಹುದ್ದೆಗೆ ವರ್ಗಾಯಿಸಲಾಗಿದೆ. ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರಿಗೆ ಕೊರೋನ ಪಾಸಿಟಿವ್ ಕಾಣಿಸಿಕೊಂಡ ಬಳಿಕ ವಿಶ್ರಾಂತಿಯಲ್ಲಿದ್ದರು. ಮುಡಾ ಆಯುಕ್ತ ದಿನೇಶ್ ಅವರು ಮನಪಾ ಆಯುಕ್ತ ಹುದ್ದೆಯ ಪ್ರಭಾರ ವಹಿಸಿದ್ದರು. ದಿಢೀರ್ ವರ್ಗಾವಣೆಯ ಬೆನ್ನಿಗೆ […]

ಹುಬ್ಬಳ್ಳಿ : ಕೋರೊನಾ ನಿಯಂತ್ರಣಕ್ಕೆ ಸ್ವಯಂ ಸೇವಕರ ನೇಮಕಾತಿ

Monday, July 20th, 2020
corona warriors

ಹುಬ್ಬಳ್ಳಿ : ಕೊರೊನಾ ಮಹಾಮಾರಿ ತಡೆಗೆ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಹೊಸ ತಂತ್ರ ಕಂಡುಕೊಂಡಿದೆ. ನಗರದ ಯುವ ಹಾಗೂ ಉತ್ಸಾಹಿ ಸ್ವಯಂ ಸೇವಕರ ತಂಡ ಕಟ್ಟಿಕೊಂಡು ಕೋವಿಡ್-19 ನಿಯಂತ್ರಣಕ್ಕೆ ಮುಂದಾಗಿದೆ. ಸೋಂಕು ತಡೆ ಸಲುವಾಗಿ ಧಾರವಾಡ ಜಿಲ್ಲಾಡಳಿತ ಹಾಗೂ ಪಾಲಿಕೆಯೊಂದಿಗೆ ಕೈಜೋಡಿಸುವ ಸಲುವಾಗಿ ಕೋವಿಡ್ ನಿಯಂತ್ರಣಕ್ಕೆ ಸ್ವಯಂ ಸೇವಕರ ತಂಡ ರಚಿಸಲಾಗುತ್ತಿದೆ. ಪಾಲಿಕೆಯ ಎಲ್ಲ ವಾರ್ಡ್ ಮಟ್ಟದ ಕಾರ್ಯಪಡೆಗಳನ್ನು ರಚಿಸಿ, ಜನರಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ, ಜೈವಿಕ ತ್ಯಾಜ್ಯ ವಿಲೇವಾರಿ ಕುರಿತು […]

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ಡಾ ಪಿ ಎಸ್ ಹರ್ಷ ಅಧಿಕಾರ ಸ್ವೀಕಾರ

Monday, June 29th, 2020
psHarsha

ಬೆಂಗಳೂರು, : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ಮಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಹಿರಿಯ ಪೊಲೀಸ್ ಅಧಿಕಾರಿ ಡಾ ಪಿ ಎಸ್ ಹರ್ಷ ಅವರು ಸೋಮವಾರ ಇಲ್ಲಿ ಅಧಿಕಾರ ಸ್ವೀಕರಿಸಿದರು. ಡಾ ಪಿ ಎಸ್ ಹರ್ಷ ಅವರು ಈ ಹಿಂದೆಯೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಎಸ್ ಎನ್ ಸಿದ್ದರಾಮಪ್ಪ ಅವರು ಡಾ ಪಿ ಎಸ್ ಹರ್ಷ ಅವರಿಗೆ ಅಧಿಕಾರ […]