ಗಾಂಜಾ ಮಾರಾಟ, ಸಿಸಿಬಿ ಪೊಲೀಸರಿಂದ ಆರೋಪಿ ಬಂಧನ

Monday, October 23rd, 2017
ganja

ಮಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಗರದ ನೀರುಮಾರ್ಗ ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನೀರುಮಾರ್ಗ ಎಂಬಲ್ಲಿ ಒಳಬೈಲು ಬಳಿಯ ಕರಾವಳಿ ಇನ್ಸಿಟ್ಯೂಟ್ ಆಫ್ ಟೆಕ್ನೋಲಾಜಿ ಕಾಲೇಜು ಎದುರುಗಡೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವ್ಯಕ್ತಿಯಬ್ಬ ಗಾಂಜಾ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದ ಸ್ಥಳಿಯ ನಿವಾಸಿ ಮೊಹಮ್ಮದ್ ರಿಯಾಸ್ ಎಂಬವರನ್ನು […]

ಮಂಗಳೂರಿನಲ್ಲಿ ಗಾಂಜಾ ಸಾಗಣೆಯ ಜಾಲ ಪತ್ತೆ: ಆರೋಪಿ ಬಂಧನ

Friday, August 5th, 2016
Moidin-Navaz

ಮಂಗಳೂರು: ಮಂಗಳೂರಿನಲ್ಲಿ ಗಾಂಜಾ ಸಾಗಣೆಯ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, 10.50 ಲಕ್ಷ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರು ಈ ಕುರಿತು ಮಾಹಿತಿ ನೀಡಿದರು. ಗಾಂಜಾ ಸಾಗಣೆ ಮಾಡುತ್ತಿದ್ದ ಕಾಸರಗೋಡಿನ ಉಪ್ಪಳದ ನಿವಾಸಿ ಮೊಯಿದ್ದೀನ್ ನವಾಜ್ (29) ಬಂಧಿಸಲಾಗಿದ್ದು, ಆತನಿಂದ 10.50 ಲಕ್ಷ ಮೌಲ್ಯದ ಸುಮಾರು 51 ಕೆಜಿ ಗಾಂಜಾ ಮತ್ತು ಇನ್ನೋವಾ ಕಾರನ್ನು ವಶಕ್ಕೆ ಪಡೆಯಲಾಗಿದೆ. ಆಂಧ್ರ ಪ್ರದೇಶದ ವಿಶಾಖ ಪಟ್ಟಣದಿಂದ ಮಂಗಳೂರು, […]

ತಲೆಮರೆಸಿಕೊಂಡ ಗಾಂಜಾ ಪ್ರಕರಣದ ಆರೋಪಿ ಬಂಧನ

Saturday, July 30th, 2016
Ambachu

ಮಂಜೇಶ್ವರ: ಪೊಲೀಸರ ಕಾರ್ಯಾಚರಣೆಯ ಸಂದಭದಲ್ಲಿ ಗಾಂಜಾ ಹಾಗೂ ಆಟೋ ರಿಕ್ಷಾ ಉಪೇಕ್ಷಿಸಿ ಪರಾರಿಯಾಗಿದ್ದ ಆರೋಪಿ ಮಳ್ಳಂಗೈ ನಿವಾಸಿ ಅಬ್ಬಾಸ್ ಯಾನೆ ಅಂಬಾಚು(42) ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಜೂನ್ 4 ರಂದು ಉಪ್ಪಳ ಬಳಿಯ ಪತ್ವಾಡಿಯಲ್ಲಿ ಅಬ್ಬಾಸ್ ಯಾನೆ ಅಂಬಾಚು ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಸಂದಭದಲ್ಲಿ ಗಾಂಜಾ ಹಾಗು ಆಟೋ ರಿಕ್ಷಾ ಉಪೇಕ್ಷಿಸಿ ಪರಾರಿಯಾಗಿದ್ದ. ರಿಕ್ಷಾದಿಂದ 200 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು.

ಗಾಂಜಾ ಮಾರಾಟ ಯತ್ನ, ವ್ಯಕ್ತಿಯ ಬಂಧನ

Tuesday, March 5th, 2013
ಗಾಂಜಾ ಮಾರಾಟ ಯತ್ನ, ವ್ಯಕ್ತಿಯ ಬಂಧನ

ಮಂಗಳೂರು : ಸೋಮವಾರ ರಾತ್ರಿ ನಗರದ ಪಂಪ್ ವೆಲ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಮಾಡೂರು ನಜೀರ್  ಬಂಧಿತ ಆರೋಪಿ. ನಗರದಲ್ಲಿ ಗಾಂಜಾ ಹಾಗೂ ಇತರ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಈತ ಸೋಮವಾರ ರಾತ್ರಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವೀಶ್ ನಾಯ್ಕ್ ಮತ್ತು ಎಸ್.ಐ ಸುಧಾಕರ್ ಕೈಗೆ ಸಿಕ್ಕಿ ಬಿದ್ದಿದಾನೆ. ಈತನಿಂದ 1.1 ಕೆ.ಜಿ. ಗಾಂಜಾ, 12000ರೂ ಹಾಗೂ ಆಲ್ಟೋ ಕಾರನ್ನು […]