ಗಾಯಗೊಂಡ ರಿಕ್ಷಾ ಚಾಲಕನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ : ಗೃಹ ಸಚಿವ

Wednesday, November 23rd, 2022
Araga-Jnanedra

ಮಂಗಳೂರು : ಕುಕ್ಕರ್ ಬಾಂಬ್ ಘಟನೆಯಿಂದ ಗಾಯಗೊಂಡ ರಿಕ್ಷಾ ಚಾಲಕರ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರ ಭರಿಸಲಿದೆ. ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವ ಬಗ್ಗೆ ಮುಂದೆ ನಿರ್ಣಯಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಆರೋಪಿ ಶಾರೀಕ್ ಆರೋಗ್ಯ ಸುಧಾರಣೆಯಾದ ಬಳಿಕವಷ್ಟೇ ಆತನ ವಿಚಾರಣೆ ಸಾಧ್ಯವಾಗಲಿದೆ. ಎಂಟು ಮಂದಿ ತಜ್ಞ ವೈದ್ಯರು ಆತನಿಗೆ ಚಿಕಿತ್ಸೆ ನೀಡುತ್ತಿದ್ದು, ಎಲ್ಲಾ ವೈದ್ಯರೊಂದಿಗೆ ಮಾತನಾಡಿದ್ದೇನೆ ಎಂದವರು ಹೇಳಿದರು ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, […]

ಮನೆ-ಮನ ಬೆಳಗುವ ಜ್ಯೋತಿಯಾದ ಗುರುಬೆಳದಿಂಗಳು

Friday, June 4th, 2021
Guru Beladingalu

ಮಂಗಳೂರು: ಲಾಕ್‌ಡೌನ್‌ನಲ್ಲಿ ಯಾವುದೇ ಸದ್ದು ಗದ್ದಲ ಇಲ್ಲದೆ ಹಸಿದವರು, ಅಸಹಾಯಕರ ಸೇವೆಯಲ್ಲಿ ತೊಡಗುತ್ತಾ ನೊಂದವರ ಪಾಲಿಗೆ ಬದುಕು ಬೆಳಗಿಸುವ ಬೆಳಕಾಗಿದೆ ‘ಗುರುಬೆಳದಿಂಗಳು’. ಕೋವಿಡ್ ಆರೋಗ್ಯ ವಿಷಮ ಸ್ಥಿತಿಯಲ್ಲಿ ಸಂಕಷ್ಟದಲ್ಲಿರುವ ಸೇವೆಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾದ್ಯಂತ ಆರಂಭಿಸಿದ ಸಹಾಯವಾಣಿಗೆ ಈಗಾಗಲೇ ನೂರಾರು ವಿನಂತಿಗಳು ಬಂದಿದ್ದು, ಒಂದು ತಿಂಗಳಿಗೆ ಬೇಕಾಗುವಷ್ಟು ಅಕ್ಕಿ ಸಹಿತ ದಿನಸಿ ಸಾಮಗ್ರಿ, ಅನಾರೋಗ್ಯ ಪೀಡಿತರಿಗೆ ಸಾವಿರಾರು ಮೌಲ್ಯದ ಮೆಡಿಸಿಸ್, ವೈದ್ಯಕೀಯ ನೇರವು, ಕೆಲವು ಮಂದಿಗೆ ಆರ್ಥಿಕ ಸಹಾಯ ನೀಡಲಾಗಿದೆ. ಮಾತ್ರವಲ್ಲದೆ ಅನೇಕ ಮಂದಿಗೆ […]

ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ 03 ವರುಷದ ಹೆಣ್ಣು ಮಗಳಿಗೆ ಆರ್ಥಿಕ ಸಹಾಯ ಮಾಡಿ

Tuesday, May 19th, 2015
samna

ಸುಳ್ಯ : ರಕ್ತದ ಕ್ಯಾನ್ಸರ್ (Leukemia) ನಿಂದ ಬಳಲುತ್ತಿರುವ ಸುಮಾರು 03 ವರುಷದ ಪ್ರಾಯದ ಶಮ್ನಾಳ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ಸಹಾಯ ಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯ ತಾಲೂಕು, ಕೇರ್ಪಲ ಗ್ರಾಮದಲ್ಲಿರುವ ಸುಮಾರು 03 ವರುಷ ಪ್ರಾಯದ ಶಮ್ನಾಳು ರಕ್ತದ ಕ್ಯಾನ್ಸರ್ (Leukemia) ನಿಂದ ಬಳಲುತ್ತಿದ್ದಾಳೆ. ಹುಟ್ಟಿನಿಂದ ಈ ಮಗುವು ಅನಾರೋಗ್ಯದಿಂದಲೇ ದಿನಕಳೆಯುತ್ತಿದ್ದು, ಹಲವು ಆಸ್ಪತ್ರೆಗಳಲ್ಲಿ ತೋರಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿ ಆಗಿರಲಿಲ್ಲ. ಇತ್ತೀಚೆಗೆ ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ ಮಂಗಳೂರು ಹಾಗೂ ಮೈಸೂರು […]