ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಎನ್‌ಬಿಎ ಮಾನ್ಯತೆ

Tuesday, February 18th, 2020
alvas-collage

ಮೂಡುಬಿದಿರೆ : ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ಹಾಗೂ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನೀಕೆಷನ್ ಇಂಜಿನಿಯರಿಂಗ್ ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತಾ ಮಂಡಳಿಯ (ಎನ್‌ಬಿಎ) ಮಾನ್ಯತೆ ಲಭಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಶೈಕ್ಷಣಿಕ ಸಂಸ್ಥೆಯು ನಿರ್ದಿಷ್ಟಗುಣ ಮಟ್ಟವನ್ನು ಹೊಂದಿದೆಯೇ ಅಥವಾ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುತ್ತದೆಯೇ ಎನ್ನುವುದನ್ನು ವೃತ್ತಿಪರ ಪರಿಶೀಲನೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ದೃಢೀಕರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಮಾನ್ಯತೆಯ ಪರಿಣಾಮವಾಗಿ ಸಂಸ್ಥೆಗಳಿಂದ […]

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಮಣಿಪುರ ರಾಜ್ಯಪಾಲರ ಭೇಟಿ

Wednesday, July 31st, 2019
Manipura-Governer

ಮೂಡುಬಿದಿರೆ: ಶಿಕ್ಷಣದಿಂದ ಜ್ಞಾನದ ವೃದ್ಧಿಯಾಗುತ್ತದೆ. ಸಾಮಾಜಿಕ ಶಕ್ತಿಯ ಬಲವರ್ಧನೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗದ ಸೃಷ್ಟಿಕರ್ತರಾಗಬೇಕೇ ಹೊರತು ಉದ್ಯೋಗಾಂಕ್ಷಿಗಳಾಗಬಾರದು. ಸರ್ವ ಧರ್ಮ ಸಮ ಭಾವನಾ ತತ್ವ ಮುಖೇನ ಒಗ್ಗಟ್ಟಿನಿಂದ ದೇಶದ ಸೇವೆ ಮಾಡಬೇಕು. ಶಿಕ್ಷಣ ಪಡೆಯುವುದರೊಂದಿಗೆ ಸಶಕ್ತ ಭಾರತದ ನಿರ್ಮಾಣವಾಗಬೇಕೆಂದು ಮಣಿಪುರದ ರಾಜ್ಯಪಾಲ ಡಾ. ಪಿ.ಬಿ ಆಚಾರ್ಯ ಹೇಳಿದರು. ಮೂಡುಬಿದಿರೆಯ ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ ಅವರು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. […]

ಆಳ್ವಾಸ್ ಇಂಜಿನಿಯರಿಂಗ್ ನ ಪ್ರೊ.ಪ್ರವೀಣ್‍ಗೆ ಡಾಕ್ಟರೇಟ್ ಪದವಿ

Wednesday, April 12th, 2017
Dr praveen

ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಶೈಕ್ಷಣಿಕ ವಿಭಾಗದ ಡೀನ್ ಪ್ರೊ.ಪ್ರವೀಣ್ ಜೆ ಮಂಡಿಸಿದ ಎಲೆಕ್ಟ್ರಾನಿಕ್ಸ್ ವಿಷಯಾಧಾರಿತ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. `ಬಿಸ್ಟ್ ಬೇಸ್ಡ್ ಲೋಪವರ್ ಟ್ರಾನ್ಸಿಷನ್ ಟೆಸ್ಟ್ ಪ್ಯಾಟ್ರನ್ ಜನರೇಷನ್ ಫಾರ್ ಮಿನಿಮೈಸಿಂಗ್ ಟೆಸ್ಟ್ ಪವರ್ ಇನ್ ವೆರಿಲಾರ್ಜ್ ಸ್ಕೇಲ್ ಇಂಟಿಗ್ರೇಷನ್ ಸಕ್ರ್ಯೂಟ್ ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದರು. ಪ್ರವೀಣ್ ಅವರು ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ […]

ಸಮಾಜಕ್ಕೆ ಸಿವಿಲ್ ಇಂಜಿನಿಯರುಗಳ ಪಾತ್ರ ಅಪಾರ: ಜಯಂತ್ ಸಾಹ

Tuesday, January 31st, 2017
Alwas

ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಸ್ಟೀಲ್ ಡೆವಲಪ್ಮೆಂಟ್, ಕೋಲ್ಕತ್ತ ಇವುಗಳ ಜಂಟಿ ಸಹಭಾಗಿತ್ವದಲ್ಲಿ ಜನವರಿ ಇಂದಿನಿಂದ ಐದು ದಿನಗಳ ಕಾರ್ಯಾಗಾರ ಪ್ರಾರಂಭಿಸಲಾಯಿತು. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕೋಲ್ಕತ್ತದ ಇನ್ಸ್‌ಟಿಟ್ಯೂಟ್ ಆಫ್ ಸ್ಟೀಲ್ ಡೆವಲಪ್ಮೆಂಟ್‍ನ ಅಧಿಕಾರಿ ಡಾ. ಜಯಂತ್ ಸಾಹ, ಸಮಾಜಕ್ಕೆ ಸಿವಿಲ್ ಇಂಜಿನಿಯರುಗಳ ಪಾತ್ರ ಅಪಾರ. ಮೇಕ್ ಇನ್ ಇಂಡಿಯಾದ ಜೊತೆಗೆ ಸ್ಕಿಲ್ ಇಂಡಿಯಾದ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿಗೆ ಬೇಕಾದ ತರಬೇತಿಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು. […]