ಖಜಾನೆ ಖಾಲಿಯಾಗಿರುವ ಸಂಕೇತವೇ ಪೆಟ್ರೋಲ್ ದರ ಏರಿಕೆ

Saturday, June 15th, 2024
Bharath-Shetty-Y

ಕಾವೂರು: ಪೆಟ್ರೋಲ್ ಬೆಲೆ ಕಳೆದ ಎರಡು ವರೆ ತಿಂಗಳಿನಿಂದ ಲೀಟರ್ 99 ರೂಪಾಯಿ ಸಿಗುತ್ತಿದ್ದರೆ ಶನಿವಾರ ರಾಜ್ಯ ಸರಕಾರ ಏಕಾಏಕಿ 3.20 ರೂ.ದರ ಏರಿಕೆ ಮಾಡಿದ್ದು 102 ದಾಟಿದೆ.ಇದು ರಾಜ್ಯದ ಖಜಾನೆ ಖಾಲಿಯಾಗಿರುವ ಸಂಕೇತ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ. ಬಡ ಜನರಿಗೆ ಉಚಿತ ಗ್ಯಾರಂಟಿಯೊಂದಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯ ಗ್ಯಾರಂಟಿ ಸಿಗಲಿದೆ. ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲೇ ಬೆಲೆ ಏರಿಕೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರೆ ಜನ […]

ಕೈಗಾರಿಕಾ ಆಸ್ತಿ ತೆರಿಗೆ ಆಕರಣೆಯ ಬಗ್ಗೆ ಶೀಘ್ರದಲ್ಲೇ ಜಂಟಿ ನಿರ್ಧಾರ: ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌

Thursday, July 8th, 2021
Shetter

ಬೆಂಗಳೂರು : ವಸತಿ ಮತ್ತು ವಾಣಿಜ್ಯ ಆಸ್ತಿ ತೆರಿಗೆಯ ಮಧ್ಯಸ್ಥವಾಗಿ ಕೈಗಾರಿಕೆಗಳಿಗೆ ಪ್ರತ್ಯೇಕ ಸ್ಲಾಬನ್ನ ಘೋಷಿಸುವ ಬಗ್ಗೆ ಶೀಘ್ರದಲ್ಲೇ ಕೈಗಾರಿಕಾ, ನಗರಾಭಿವೃದ್ದಿ ಹಾಗೂ ಪೌರಾಡಳಿತ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದರು. ನಗರದ ಎಫ್‌ಕೆಸಿಸಿಐ ನಲ್ಲಿ ನಗರಾಭಿವೃದ್ದಿ ಸಚಿವರು ಹಾಗೂ ಕೈಗಾರಿಕಾ ಸಚಿವರೊಂದಿಗೆ ಆಸ್ತಿ ತೆರಿಗೆ ಪರಿಷ್ಕರಣೆಯ ಕುರಿತಂತೆ ಆಯೋಜಿಸಿದ್ದ ಸಂವಾದ‍ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಆಸ್ತಿ ತೆರಿಗೆಯಲ್ಲಿರುವ ಸಮಸ್ಯೆಗಳನ್ನು […]

ಆಸ್ತಿ ತೆರಿಗೆ ಪಾವತಿಸದೇ ಇದ್ದಲ್ಲಿ ದಂಡ ಹಾಗೂ ಜಫ್ತಿ ಕ್ರಮ ಜಾರಿ

Thursday, December 13th, 2018
BBMP

ಬೆಂಗಳೂರು : ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು ಈವರೆಗೆ ಪಾವತಿಸದೇ ಇರುವ ಕಟ್ಟಡಗಳ ಮಾಲೀಕರು ಕೂಡಲೇ ಆಸ್ತಿ ತೆರಿಗೆ ಪಾವತಿಸದೇ ಇದ್ದಲ್ಲಿ ದಂಡ ಹಾಗೂ ಜಫ್ತಿ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹದೇವಪುರ ವಲಯದ ಜಂಟಿ ಆಯುಕ್ತ ಎನ್. ಸಿ. ಜಗದೀಶ್ ಹಾಗೂ ಉಪ ಆಯುಕ್ತ ಕೆ. ಶಿವೇಗೌಡ ಅವರು ತೆರಿಗೆ ಪಾವತಿಸದೇ ಸುಸ್ತಿದಾರರಾಗಿರುವ ಕಟ್ಟಡ ಮಾಲೀಕರಿಗೆ ಎಚ್ಚರಿಸಿದ್ದಾರೆ. ಮಹದೇವಪುರ ವಲಯದ ಹೂಡಿ, ವೈಟ್‌ಫೀಲ್ಡ್, ಮಾರತ್‌ಹಳ್ಳಿ, ಕೆ.ಆರ್.ಪುರ, ಹೊರಮಾವು ಮತ್ತು ಹೆಚ್.ಎ.ಎಲ್ ಸೇರಿದಂತೆ […]

ತೀವ್ರ ಹಣಕಾಸು ಮುಗ್ಗಟ್ಟು, ಆಸ್ತಿ ತೆರಿಗೆ ಹೆಚ್ಚಿಸಲು ಮುಂದಾದ ಬಿಬಿಎಂಪಿ

Saturday, February 23rd, 2013
BBMP property tax

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಿಸಲು ಉದ್ದೇಶಿಸಿದೆ. ಹಣಕಾಸಿನ ತೀವ್ರ ಮುಗ್ಗಟ್ಟನ್ನು  ಬಿಬಿಎಂಪಿ ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.  ಅಲ್ಲದೆ  `ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ (ಕೆಎಂಸಿ) ಕಾಯ್ದೆ ಪ್ರಕಾರ, ಮೂರು ವರ್ಷದಲ್ಲಿ ಒಂದು ಸಲ ಕನಿಷ್ಠ ಶೇಕಡಾ 15 ಮತ್ತು ಗರಿಷ್ಠ 30ರಷ್ಟು ತೆರಿಗೆ ಹೆಚ್ಚಿಸುವುದು ಕಡ್ಡಾಯವಾಗಿದೆ. ಈ ಹಿಂದೆ 2008ರಲ್ಲಿ ಆಸ್ತಿ ತೆರಿಗೆ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. ಅದಾದ ನಂತರ 2011ರ ಏಪ್ರಿಲ್‌ನಲ್ಲಿ ಬಿಬಿಎಂಪಿ ತೆರಿಗೆ ಹೆಚ್ಚಳಕ್ಕೆ […]