ಪಾಣೆಮಂಗಳೂರಿನ ನೇತ್ರಾವತಿ ಹಳೆಯ ಸೇತುವೆಯಲ್ಲಿ ಬಿರುಕು, ಸ್ಥಳೀಯರಲ್ಲಿ ಆತಂಕ

Monday, October 9th, 2023
ಪಾಣೆಮಂಗಳೂರಿನ ನೇತ್ರಾವತಿ ಹಳೆಯ ಸೇತುವೆಯಲ್ಲಿ ಬಿರುಕು, ಸ್ಥಳೀಯರಲ್ಲಿ ಆತಂಕ

ಬಂಟ್ವಾಳ : ಪಾಣೆಮಂಗಳೂರಿನ ನೇತ್ರಾವತಿ ಹಳೆಯ ಉಕ್ಕಿನ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ರವಿವಾರ ರಾತ್ರಿ ದ್ವಿಚಕ್ರ ವಾಹನ ಸವ್ವಾರರೊಬ್ಬರು ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಾಣೆಮಂಗಳೂರು ಕಡೆಯಿಂದ ನಾಲ್ಕನೇ ಪಿಲ್ಲರ್ ಬಳಿ ಬಿರುಕು ಕಾಣಿಸಿಕೊಂಡಿದೆ. ರಸ್ತೆಯ ಡಾಮರು ಎದ್ದು ಹೋಗಿದ್ದು, ಬಿರುಕು ಗೋಚರಿಸುತ್ತಿದೆ. ಆದರೆ ಇದು ಸೇತುವೆ ಬಿರುಕು ಬಿಟ್ಟಿರುವುದೋ ಅಥವಾ ಮೇಲಿನ ರಸ್ತೆಯ ಭಾಗದಲ್ಲಿ ಮಾತ್ರ ಬಿರುಕು ಕಂಡುಬಂದಿದೆಯೇ ಎಂಬುದು ಖಚಿತಗೊಂಡಿಲ್ಲ. ಈ ಕುರಿತು ಸಂಬಂಧಪಟ್ಟ ತಜ್ಞರು ಪರಿಶೀಲನೆ ನಡೆಸಿ ವರದಿ ನೀಡಬೇಕಿದೆ […]

ಬಾಂಜಾರು ಮಲೆ ಉಕ್ಕಿನ ಸೇತುವೆ ಪೂರ್ಣ

Saturday, September 7th, 2019
banjaru-male

ಬೆಳ್ತಂಗಡಿ : ಪ್ರವಾಹದಿಂದ ಸಂಪರ್ಕ ಕಳೆದುಕೊಂಡಿದ್ದ ಬಾಂಜಾರು ಮಲೆಗೆ ಯೇನಪೊಯ ಸಂಸ್ಥೆಯಿಂದ ನಿರ್ಮಾಣಗೊಳ್ಳುತ್ತಿದ್ದ 30 ಟನ್‌ ಸಾಮರ್ಥ್ಯದ ಉಕ್ಕಿನ ಸೇತುವೆ ಪೂರ್ಣಗೊಂಡಿದೆ. ಆ.9ರ ಪ್ರವಾಹಕ್ಕೆ ಇಲ್ಲಿದ್ದ 65 ವರ್ಷಗಳಷ್ಟು ಹಳೆಯ ಸೇತು ಕೊಚ್ಚಿಹೋಗಿತ್ತು. ಬಳಿಕ ಜಿಲ್ಲಾಡಳಿತ ತಾತ್ಕಾಲಿಕ ಉಕ್ಕಿನ ಕಾಲು ಸಂಕ ನಿರ್ಮಿಸಿತ್ತು. ಆದರೆ ವಾಹನ ಸಂಪರ್ಕ ಇಲ್ಲದಿದ್ದ ಹಿನ್ನೆಲೆಯಲ್ಲಿ ಯೇನಪೊಯ ಸಂಸ್ಥೆ ಜಿಲ್ಲಾಡಳಿತ ಮತ್ತು ಶಾಸಕ ಹರೀಶ್‌ ಪೂಂಜ ಅವರ ಮನವಿಗೆ ಸ್ಪಂದಿಸಿ 30 ಟನ್‌ ಸಾಮರ್ಥ್ಯದ ವಾಹನ ಸಂಚರಿಸಲು ಸಾಧ್ಯವಾಗುವಂತಹ ಉಕ್ಕಿನ ಸೇತುವೆ ನಿರ್ಮಿಸಿದೆ. […]