ಪ್ರತೀ ಜಿಲ್ಲೆಯಲ್ಲಿಯೂ ಬ್ಲ್ಯಾಕ್ ಫಂಗಸ್ಗೆ ಉಚಿತ ಚಿಕಿತ್ಸೆಗೆ ಕ್ರಮ : ಕೋಟ ಶ್ರೀನಿವಾಸ ಪೂಜಾರಿ
Wednesday, May 26th, 2021ಬೈಂದೂರು : ಪ್ರತೀ ಜಿಲ್ಲೆಯಲ್ಲಿಯೂ ಬ್ಲ್ಯಾಕ್ ಫಂಗಸ್ಗೆ ಆಸ್ಪತ್ರೆ ವ್ಯವಸ್ಥೆಗೊಳಿಸಿ ಅಲ್ಲಿ ಉಚಿತ ಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶ ಮಾಡಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಬುಧವಾರ ಅವರು ಬೈಂದೂರು ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣ ಕಾರ್ಯಪಡೆಯ ಕಾರ್ಯನಿರ್ವಹಣೆಯ ಬಗ್ಗೆ ಪ್ರವಾಸ ಕೈಗೊಂಡು ಉಪ್ಪುಂದದಲ್ಲಿ ಸಭೆಯ ಬಳಿಕ ಮಾತನಾಡಿದರು. ಕೊರೊನಾ ನಿಯಂತ್ರಣದಲ್ಲಿ ಗ್ರಾಮ ಪಂಚಾಯತ್ಗಳಿಗೂ ಜವಾಬ್ದಾರಿ ನೀಡಿದೆ. ಕೊರೊನಾ ಸೋಂಕಿತರನ್ನು ಕರೆತರಲು ವಾಹನ ಖರೀದಿಸಲು ಪಂಚಾಯತ್ಗಳಿಗೂ ಅವಕಾಶ ನೀಡಿದೆ ಎಂದರು. ಪಂಚಾಯತ್ ಸದಸ್ಯರು ಟಾಸ್ಕ್ಫೋರ್ಸ್ ಸಮಿತಿ ಸದಸ್ಯರಾಗಿರುತ್ತಾರೆ. […]