ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿ ವಿಫಲವಾದ ಮಹಿಳೆ, ಸಮುದ್ರಕ್ಕೆ ಹಾರಿ ಆತ್ಮಹತ್ಯೆ

Friday, October 30th, 2020
Usha

ಮಂಗಳೂರು : ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರು ಶುಕ್ರವಾರ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಚ್ಚಿಲದಲ್ಲಿ‌ ನಡೆದಿದೆ. ಇಲ್ಲಿನ ಸಂಕೊಳಿಗೆ ನಿವಾಸಿಯಾಗಿರುವ ಉಷಾ (60) ಎಂಬಾಕೆಯ ಮೃತದೇಹ ಉಚ್ಚಿಲ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಮಾನಸಿಕವಾಗಿ ನೊಂದಿದ್ದ ಮಹಿಳೆ ಈ ಹಿಂದೆಯೂ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಡಲ್ಕೊರೆತಕ್ಕೆ ಉಳ್ಳಾಲ ಉಚ್ಚಿಲದಲ್ಲಿ ಕೊಚ್ಚಿ ಹೋದ ಸಂಪರ್ಕ ರಸ್ತೆ : ಯು.ಟಿ. ಖಾದರ್ ಭೇಟಿ

Monday, August 10th, 2020
utk

ಉಳ್ಳಾಲ: ತೀವ್ರ ಕಡಲ್ಕೊರೆತದ ಪರಿಣಾಮ  ಉಚ್ಚಿಲ ಭಾಗದಲ್ಲಿ ಸಂಪರ್ಕ ರಸ್ತೆ ಕೊಚ್ಚಿ ಹೋಗಿದೆ. ಇದಕ್ಕೆ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣವೆಂದು ಮಾಜಿ ಸಚಿವ ಹಾಗೂ ಶಾಸಕ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಳ್ಳಾಲದ ಸೋಮೇಶ್ವರ, ಉಚ್ಚಿಲ, ಬಟ್ಟಂಪಾಡಿ ಹಾಗೂ ಇನ್ನಿತರ ಕಡಲ್ಕೊರೆತ ಪ್ರದೇಶಗಳಿಗೆ ಶಾಸಕ ಯು.ಟಿ.ಖಾದರ್ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಪ್ರತಿ ವರ್ಷ ಕಡಲು ಕೊರೆತದಿಂದ ಸಾರ್ವಜನಿಕರ ಆಸ್ತಿಪಾಸ್ತಿ ಹಾಗೂ ಪ್ರಾಣಿ, ಪಕ್ಷಿಗಳ ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದೆವು. ಎರಡು ತಿಂಗಳಿಂದ ಸಮಸ್ಯೆಗಳ […]

ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರಕ್ಕೆ ಜಾರುತ್ತಿರುವ ಕಲ್ಲಿನ ತಡೆಗೋಡೆ

Tuesday, August 6th, 2019
Someshwara

ಮಂಗಳೂರು : ಮಂಗಳೂರು ಹೊರವಲಯದ ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಬಳಿ ಅಪಾಯದಲ್ಲಿರುವ ರಸ್ತೆಗೆ ಹಾಕಲಾಗಿರುವ ಕಲ್ಲುಗಳು ಕೊರೆತಕ್ಕೆ ಕುಸಿತ ಕಂಡರೆ, ನ್ಯೂ ಉಚ್ಚಿಲದಲ್ಲಿ ಸಮುದ್ರ ಕೊರೆತವಾಗಿದ್ದು ಕಲ್ಲುಗಳು ಸಮುದ್ರಪಾಲಾಗಿವೆ. ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಹೀಗಾಗಿ ಕಡಲು ಪ್ರಕ್ಷುಬ್ಧಗೊಂಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಕೆಲ ಭಾಗದಲ್ಲಿ ಕಡಲ ಕೊರೆತ ಉಂಟಾಗುತ್ತಿದೆ. ಕಡಲ ತಡಿಯಲ್ಲಿ ವಾಸಿಸುವ ಜನರು ಆತಂಕಗೊಂಡಿದ್ದಾರೆ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ […]

ವಂಚನೆ ಪ್ರಕರಣ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Saturday, December 8th, 2018
arrested

ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2008 ರಲ್ಲಿ ನಡೆದ ವಂಚನೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ 10 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಹಳೆ ಆರೋಪಿಯೋರ್ವನನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಉಚ್ಚಿಲ ಉಡುಪಿಯ ಮೊಹಮ್ಮದ್ ರಫೀಕ್ ಬ್ಯಾರಿ (38) ದಸ್ತಗಿರಿಯಾದ ಆರೋಪಿ. ಮಂಗಳೂರು ನಗರದ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ ಶೆಟ್ಟಿಯವರ ನೇತೃತ್ವದಲ್ಲಿ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ. ಮತ್ತು ಸಿಬ್ಬಂದಿ, ಪಣಂಬೂರು […]

ಉಳ್ಳಾಲ,ಸೋಮೇಶ್ವರ,ಉಚ್ಚಿಲದಲ್ಲಿ ತೀವ್ರಗೊಂಡ ಕಡಲಿನಬ್ಬರ

Monday, April 23rd, 2018
ullal-beach

ಉಳ್ಳಾಲ: ಹವಾಮಾನ ವೈಪರಿತ್ಯದಿಂದಾಗಿ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಪದೇಶಗಳಲ್ಲಿ ಕಡಲಿನ ಅಬ್ಬರ ತೀವ್ರಗೊಂಡಿದ್ದು, ಬೃಹತಾಕರಾದ ಅಲೆಗಳು ಸಮುದ್ರ ತೀರಕ್ಕೆ ಅಪ್ಪಳಿಸುತ್ತಿವೆ. ಕಡಲ್ಕೊರೆತ ತೀವ್ರಗೊಂಡ ಪರಿಣಾಮ ಉಚ್ಚಿಲ ಪ್ರದೇಶದ ಕೆಲವು ಮನೆಗಳಿಗೆ ಹಾನಿಯಾಗಿದೆ. ಶನಿವಾರ ರಾತ್ರಿಯಿಂದಲೇ ಈ ಭಾಗದಲ್ಲಿ ಕಡಲ್ಕೊರೆತದ ತೀವ್ರತೆ ವೀಪರೀತವಾಗಿದ್ದು, ಕಡಲ ತಡಿಯ ಜನರು ಭಯಭೀತರಾಗಿದ್ದಾರೆ. ಸೋಮೇಶ್ವರ, ಉಚ್ಚಿಲದಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿದ್ದು, ರವಿವಾರ ಮಧ್ಯಾಹ್ನವೇ ಉಳ್ಳಾಲ ಸೋಮೇಶ್ವರ ಪ್ರದೇಶದಲ್ಲಿ ಕಡಲು ಪ್ರಕ್ಷುಬ್ದಗೊಂಡಿದ್ದು, ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಪ್ರತಿ ವರ್ಷ ಮಳೆಗಾಲ ಆರಂಭದ ಬಳಿಕವಷ್ಟೇ […]

ಉಚ್ಚಿಲ: ವೃದ್ಧ ಕಾಮುಕನೋರ್ವ, ಬಾಲಕಿ ಮೇಲೆ ಅತ್ಯಾಚಾರ

Thursday, November 2nd, 2017
rape case

ಮಂಗಳೂರು:  60 ವರ್ಷದ ವೃದ್ಧ ಕಾಮುಕನೋರ್ವ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ದುಷ್ಕೃತ್ಯ ಸೋಮೇಶ್ವರ ಉಚ್ಚಿಲದಲ್ಲಿ ನಡೆದಿದೆ. ರಝಾಕ್ (60) ಅತ್ಯಾಚಾರವೆಸಗಿರುವ ಆರೋಪಿ. ಉಳ್ಳಾಲ ಪೊಲೀಸರು ಈತನನ್ನು ಬಂಧಿಸಿ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಚ್ಚಿಲ: ದುಷ್ಕರ್ಮಿ ಗಳಿಂದ ದನ ಕಳ್ಳತನ, ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ

Friday, May 10th, 2013
Cattle theft uchil

ಮಂಗಳೂರು : ಉಚ್ಚಿಲ ಸೇತುವೆ ಬಳಿಯ ನಿವಾಸಿ ಗಣೇಶ್ ವಾಸುದೇವ ಮಯ್ಯ ಎಂಬುವವರ ಮನೆಯಿಂದ ದನ ಮತ್ತು ಕರುವನ್ನು ಕದ್ದೊಯ್ದು ಬಳಿಕ ದನದ ಕಾಲನ್ನು ದುಷ್ಕರ್ಮಿಗಳು ಮನೆಯ ಎದುರಿನ ತುಳಸಿಕಟ್ಟೆ ಬಳಿ ಇರಿಸಿದ ಘಟನೆ ನಡೆದಿದೆ. ಗಣೇಶ್‌ ವಾಸುದೇವ ಮಯ್ಯ ರ ಮನೆಯ ಹಟ್ಟಿಯ ಹೊರಗೆ ಕಟ್ಟಿದ್ದ ಹಸು ಮತ್ತು ಕರುವನ್ನು ದುಷ್ಕರ್ಮಿಗಳು  ಕಳವು ಗೈದು ಬಳಿಕ ಅದೇ ಮನೆಯ ತುಳಸಿಕಟ್ಟೆಯ ಬಳಿ ದನದ ಕಾಲೊಂದನ್ನು ಇರಿಸಿದ್ದಾರೆ. ಬೆಳಗ್ಗೆ ಹಾಲು ಕರೆಯಲು ಗಣೇಶ್ ರವರ ಪತ್ನಿ ಹೊರಗೆ […]