ಬಿದಿರಿನ ಒಳಗೆ ಗಾಂಜಾವನ್ನು ತುಂಬಿಸಿ ಅಕ್ರಮವಾಗಿ ಸಾಗಾಟ, ಇಬ್ಬರು ಆರೋಪಿಗಳ ಸೆರೆ

Saturday, August 22nd, 2020
ganja

ಉಡುಪಿ : ಕಂಟೈನರ್ ಲಾರಿಯಲ್ಲಿ ಉತ್ತರಪ್ರದೇಶದಿಂದ ಮಂಗಳೂರಿಗೆ ಬಿದಿರು ತುಂಬಿಸಿಕೊಂಡು ಅದರೊಳಗೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 49 ಕೆಜಿ ಗಾಂಜಾವನ್ನು ಉಡುಪಿ ಡಿಸಿಐಬಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬ್ರಹ್ಮಾವರ ತಾಲೂಕು ಹೇರೂರು ಬಳಿ ಪೊಲೀಸರು ತಡೆದು ತಪಾಸಣೆ ನಡೆಸಿ ಸುಮಾರು 49 ಕೆಜಿ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರು ತಮಿಳುನಾಡಿನ ತಿರುವನ್ ವೆಲ್ಲಿ ಜಿಲ್ಲೆಯ ಕರುತಪಾಂಡಿ (40) ಮತ್ತು ಪಶ್ಚಿಮ ಬಂಗಾಳದ ವಾನು ಹಲ್ ದಾರ್ (30) ಎಂದು ಗುರುತಿಸಲಾಗಿದೆ. ಆರೋಪಿಗಳು  ಬಿದಿರಿನ ಒಳಗೆ ಗಾಂಜಾವನ್ನು ತುಂಬಿಸಿ ಅಕ್ರಮವಾಗಿ […]

ಉತ್ತರಪ್ರದೇಶ : ಗೋಹತ್ಯೆಯನ್ನು ಮಾಡುವವರಿಗೆ 10 ವರ್ಷ ಶಿಕ್ಷೆ ಮತ್ತು5 ಲಕ್ಷ ರೂಪಾಯಿ ವರೆಗೆ ದಂಡ

Wednesday, June 10th, 2020
adityanath

ಮಂಗಳೂರು  : ಉತ್ತರಪ್ರದೇಶದ ‘ಯೋಗಿ ಸರ್ಕಾರ’ವು ಗೋಹತ್ಯೆಯನ್ನು ತಡೆಗಟ್ಟಲು ಹೊಸ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಅದರಂತೆ ಗೋಹತ್ಯೆಯನ್ನು ಮಾಡುವವರಿಗೆ 10 ವರ್ಷ ಶಿಕ್ಷೆ ಮತ್ತು 5 ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಲಾಗುವುದು. ‘ಯೋಗಿ ಸರ್ಕಾರ’ ತೆಗೆದುಕೊಂಡ ಈ ನಿರ್ಧಾರ ಅತ್ಯಂತ ಶ್ಲಾಘನೀಯವಾಗಿದ್ದು ಹಿಂದೂ ಜನಜಾಗೃತಿ ಸಮಿತಿ ಅದನ್ನು ಸ್ವಾಗತಿಸಿದೆ. ಇತ್ತೀಚೆಗೆ ಕೇರಳದಲ್ಲಿ ಗರ್ಭಿಣಿ ಆನೆಗೆ ಪಟಾಕಿ ಇರುವ ಅನಾನಸ್‌ಅನ್ನು ತಿನ್ನಲು ನೀಡಲಾಗಿತ್ತು, ಅದರಲ್ಲಿ ಗರ್ಭಿಣಿ ಆನೆ ಗಂಭೀರವಾಗಿ ಗಾಯಗೊಂಡು ದುರದೃಷ್ಟಕರವಾಗಿ ಸಾವನ್ನಪ್ಪಿತು; ಘಟನೆ ನಡೆದ ಎರಡು ದಿನಗಳು […]

ಉಡುಪಿಯಲ್ಲಿ ಪೊಲೀಸರ ಕಾರ್ಯಾಚರಣೆ : ಗಾಂಜಾ ಸಹಿತ ಇಬ್ಬರು ಆರೋಪಿಗಳ ಬಂಧನ

Wednesday, September 25th, 2019
udupi

ಉಡುಪಿ : ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಉಡುಪಿ ಜಿಲ್ಲಾ ಪೊಲೀಸರು, ಅಕ್ರಮವಾಗಿ ದಾಸ್ತಾನು ಇರಿಸಿದ್ದ ಗಾಂಜಾ ಸೇರಿದಂತೆ ಅಂದಾಜು 6 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಉತ್ತರಪ್ರದೇಶ ಮೂಲದ ಪಿಯೂಷ್ ಅಗರ್‌ವಾಲ್(20 ವರ್ಷ), ರಿಷಬ್ ರಾಜ್‌ಸಿಂಗ್ (21 ವರ್ಷ) ಎಂದು ಗುರುತಿಸಲಾಗಿದೆ. ಆರೋಪಿಗಳು ಹೆರ್ಗಾ ಗ್ರಾಮದ ಸರಳಬೆಟ್ಟು ಸಮೀಪದ ಮನೆಯೊಂದರಲ್ಲಿ ಕಾನೂನು ಬಾಹಿರವಾಗಿ 3,50,000/- ಮೌಲ್ಯದ ಗಾಂಜಾ ಮಾರಾಟ ಮಾಡಲು ದಾಸ್ತಾನು ಇರಿಸಿದ್ದರು. ಅಂದಾಜು 300 ರೂಪಾಯಿ ಮೌಲ್ಯದ ತೂಕ […]

ಗೋ ಹಂತಕರ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳುವ ಜರೂರಿದೆ: ಯೋಗಿ ಆದಿತ್ಯನಾಥ

Wednesday, December 5th, 2018
yogi-adityanath

ಉತ್ತರಪ್ರದೇಶ: ಅಕ್ರಮ ಕಸಾಯಿಖಾನೆ ವಿರುದ್ಧ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಇನ್ಸ್ಪೆಕ್ಟರ್ವೋರ್ವರನ್ನು ಬಲಿಪಡೆದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಈ ಬಗ್ಗೆ ದೃಢ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ಪ್ರಧಾನ ಕಾರ್ಯದರ್ಶಿ, ಡಿಜಿಪಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಎಡಿಜಿಪಿ ಅವರೊಂದಿಗೆ ಮಂಗಳವಾರ ರಾತ್ರಿ ಸಭೆ ನಡೆಸಿದ ಅವರು, ಗೋ ಹತ್ಯೆ ಮಾಡುವವರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಿ ಎಂದು ಪೊಲೀಸರಿಗೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಮೂಲಕ ಮಾಹಿತಿ ನೀಡಿರುವ […]

ಉತ್ತರಪ್ರದೇಶ ಹಾಗೂ ಬಿಹಾರ್ ಲೋಕಸಭೆ ಉಪ ಚುನಾವಣೆ ಬಿಜೆಪಿಗೆ ಭಾರೀ ಹಿನ್ನಡೆ

Wednesday, March 14th, 2018
yogi-adithyanath

ನವದೆಹಲಿ: ಉತ್ತರಪ್ರದೇಶ ಹಾಗೂ ಬಿಹಾರದ ಲೋಕಸಭೆ ಉಪ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ ಭಾರೀ ಹಿನ್ನಡೆ ಅನುಭವಿಸುತ್ತಿದೆ. ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲೇ ಹಿನ್ನಡೆ ಅನುಭವಿಸುತ್ತಿರುವುದು ಕೇಸರಿ ನಾಯಕರಿಗೆ ಮುಖಭಂಗವಾಗುವ ಸಾಧ್ಯತೆಗಳಿವೆ. ಉತ್ತರ ಪ್ರದೇಶದ ಗೋರಖ್‌ಪುರ ಹಾಗೂ ಫುಲ್ಪುರ್ ಲೋಕಸಭೆ ಕ್ಷೇತ್ರಗಳಲ್ಲಿ ಎಸ್‌ಪಿ ಮುನ್ನಡೆ ಕಾಯ್ದುಕೊಂಡಿದೆ. ಬಿಎಸ್‌ಪಿ ಬೆಂಬಲದೊಂದಿಗೆ ಚುನಾವಣೆ ಎದುರಿಸಿರುವ ಎಸ್‌ಪಿ ಮತ ಎಣಿಕೆಯಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಬಿಹಾರದ ಅರಾರಿಯ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಹಿನ್ನಡೆ ಅನುಭವಿಸುತ್ತಿದ್ದು, ಆರ್‌ಜೆಡಿ ಮುನ್ನಡೆ ಕಾಯ್ದುಕೊಂಡಿದೆ. ಆರ್‌ಜೆಡಿ […]