ಮುಖ್ಯಮಂತ್ರಿಯಾಗ ಬೇಕು ಎಂದು ಗೆಳೆಯರಲ್ಲಿ ಹೇಳಿಕೊಂಡಿದ್ದ ಯುವಕ, ಆತ್ಮಹತ್ಯೆಗೆ ಶರಣು

Thursday, October 8th, 2020
Youth Hangs

ಬೆಂಗಳೂರು : ಮುಖ್ಯಮಂತ್ರಿಯಾಗ ಬೇಕು ಎಂದು ಗೆಳೆಯರಲ್ಲಿ ಹೇಳಿಕೊಂಡಿದ್ದ ಯುವಕನೊರ್ವ ಕನಸು ಈಡೇರುವುದಿಲ್ಲ ಎಂದು ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಜಯನಗರದ 4ನೇ ಹಂತದಲ್ಲಿ ಬುಧವಾರ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಶಶಾಂಕ್‌ (22) ಮೃತ ದುರ್ದೈವಿ. ತನ್ನ ಬಾಡಿಗೆ ಕೊಠಡಿಯಲ್ಲಿ ಬೆಳಗ್ಗೆ ಶಶಾಂಕ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ಹೊತ್ತಿನ ಬಳಿಕ ಆತನ ಸ್ನೇಹಿತರು ಕೊಠಡಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದೂವರೆ ತಿಂಗಳ ಹಿಂದೆ ತನ್ನೂರಿನಿಂದ ಉದ್ಯೋಗ […]

ಸ್ಕೂಟರ್ ಮತ್ತು ಟ್ಯಾಂಕರ್ ಡಿಕ್ಕಿ- ತಂದೆ ಮಗಳು ಸಾವು

Tuesday, September 29th, 2020
Karawar Accident

ಕಾರವಾರ: ಸ್ಕೂಟರ್ ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ತಂದೆ ಹಾಗೂ ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಮಂಗಳವಾರ  ನಡೆದಿದೆ. ಯಲ್ಲಾಪುರದ ಅರೆಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಘಟನೆ ನಡೆದಿದೆ. ವಿನೋದ್ ಕಿಂದಳಕರ್ (56) ಹಾಗೂ ಅವರ ಮಗಳು ಸುನೇಹಾ ಕಿಂದಳಕರ್ (12) ಮೃತ ದುರ್ದೈವಿಗಳು. ವಿನೋದ್ ಕಿಂದಳಕರ್ ಯಲ್ಲಾಪುರದ ಅಗ್ನಿಶಾಮಕ ದಳ ಠಾಣೆಯಲ್ಲಿ ಪ್ರಮುಖ ಅಗ್ನಿಶಾಮಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಗಳನ್ನು ಯಲ್ಲಾಪುರದಿಂದ ತಮ್ಮ […]

ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

Friday, July 17th, 2020
Raviteja

ಶಿರಸಿ  : ತಾಯಿ ಮತ್ತು ಮಗ ಇಬ್ಬರೇ ಇದ್ದು ಮನೆಯಲ್ಲಿನ ಕಷ್ಟ ನೋಡಲಾಗದೇ ಕಾಲೇಜು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ‌ನೀರ್ನಳ್ಳಿಯಲ್ಲಿ‌ ನಡೆದಿದೆ. ನಿರ್ನಳ್ಳಿಯ ರವಿತೇಜ ಗಣಪತಿ ಭಟ್ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರೇ ಇದ್ದು ಮನೆಯ ನಿರ್ವಹಣೆ ಕಷ್ಟ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮೊದಲು ತಿಮಿಟ್ ಸೇವಿಸಿ ನಂತರ ‌ನೇಣು‌ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ […]

ತುಳುನಾಡಿನ ದೈವ ದೇವರ ನಿಂದನೆ, ಉತ್ತರ ಕನ್ನಡದ ವ್ಯಕ್ತಿಯ ಬಂಧನ

Tuesday, October 29th, 2019
Mudduraj

ಮಂಗಳೂರು: ತುಳುನಾಡಿನ ದೈವ ದೇವರು ಮತ್ತು ಇತರ ಪವಿತ್ರ ಸಂಪ್ರದಾಯಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಸೈಬರ್ ಅಪರಾಧ ಪೊಲೀಸರು ಭಾನುವಾರ ಉತ್ತರ ಕನ್ನಡದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಿದ್ದಾಪುರ ನಿವಾಸಿ ದೇಸಾಯಿ ಗೌಡರ ಮಗ ಮುದುರಾಜ್ ಕನ್ನಡಿಗ  ಎಂದು ಗುರುತಿಸಲಾಗಿದೆ. ಈ ಆರೋಪದ ವಿರುದ್ಧ ಅರ್ನಾಲ್ಡ್ ತುಲುವೆ (29)  ದೂರು ದಾಖಲಿಸಿದ್ದು, ‘ಟ್ರೋಲ್ ಕನ್ನಡಿಗ’, ಫೇಸ್‌ಬುಕ್‌ ಪುಟದ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಲಾಗಿದೆ.  ದೈವರದೇನ ಬಗ್ಗೆ ಅಗೌರವದ ಮಾತುಗಳನ್ನು ರವಾನಿಸಿ, ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ದೂರಲಾಗಿದೆ. […]

ರಾಜ್ಯದಲ್ಲಿ ಭಾರಿ ಮಳೆ…13 ವರ್ಷಗಳ ಹಿಂದಿನ ದಾಖಲೆ ಮುರಿದ ವರುಣ

Monday, June 18th, 2018
heavy-rain

ಬೆಂಗಳೂರು: ರಾಜ್ಯದೆಲ್ಲೆಡೆ ಮುಂಗಾರು ಚುರುಕಾಗಿದ್ದು, ಕಳೆದ ಹತ್ತು ದಿನದಲ್ಲಿ ಸುರಿದ ಮಳೆ ಕಳೆದ 13 ವರ್ಷಗಳಲ್ಲೇ ಇದು ಅತ್ಯಧಿಕ ಪ್ರಮಾಣದ್ದಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್‌ಡಿಎಂಸಿ) ಮಾಹಿತಿ ನೀಡಿದೆ. ಕೆಎಸ್ಎನ್‌ಡಿಎಂಸಿ ಪ್ರಕಟಿಸಿದ ಮುಂಗಾರು ಅವಧಿಯ ಮೊದಲ 10 ದಿನಗಳ ಮಳೆಯ ವರದಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. ವರದಿ ಪ್ರಕಾರ ಜೂ.1ರಿಂದ ಜೂ.10ರವರೆಗೆ ವಾಡಿಕೆಯಂತೆ ರಾಜ್ಯಾದ್ಯಂತ ಸರಾಸರಿ 51 ಮಿ.ಮೀ. ಮಳೆ ದಾಖಲಾಗಬೇಕು. ಆದರೆ ಈ ವರ್ಷ 92 ಮಿ.ಮೀ. ದಾಖಲಾಗಿದ್ದು, 2004ರ ನಂತರದಲ್ಲಿ […]

ಕೇಂದ್ರ ಗೃಹ ಮಂತ್ರಾಲಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ‘ಪೌರ ರಕ್ಷಣಾ ಘಟಕ’ ಸ್ಥಾಪನೆ: ಶಿವಕುಮಾರ್‌

Wednesday, August 24th, 2016
Home-Guard-

ಮಂಗಳೂರು: ಕೇಂದ್ರ ಗೃಹ ಮಂತ್ರಾಲಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ‘ಪೌರ ರಕ್ಷಣಾ ಘಟಕ’ ಸ್ಥಾಪಿಸಲು ಆದೇಶ ನೀಡಿದ್ದು, ಮುಂದಿನ 5-6 ತಿಂಗಳಲ್ಲಿ ಇದರ ಸ್ಥಾಪನೆಯಾಗಲಿದೆ ಎಂದು ಗೃಹರಕ್ಷಕ ದಳದ ಎಡಿಜಿಪಿ ಎನ್‌. ಶಿವಕುಮಾರ್‌ ಹೇಳಿದರು. ಮಂಗಳೂರಿನ ಮೇರಿಹಿಲ್‌ನಲ್ಲಿರುವ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಮಂಗಳವಾರ ಘಟಕಾಧಿಧಿಕಾರಿಗಳ ಸಭೆ ಬಳಿಕ ಅವರು ಮಾತನಾಡಿದರು. ಪೌರ ರಕ್ಷಣಾ ದಳ ಬೆಂಗಳೂರು ನಗರ, ಉತ್ತರ ಕನ್ನಡದ ಕೈಗಾ ಹಾಗೂ ರಾಯಚೂರಿನ ಶಕ್ತಿನಗರದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ದೇಶದ ಯುದ್ಧ […]