ಆಗ ತಾನೇ ಹುಟ್ಟಿದ್ದ ಮಗುವನ್ನು ಕಾರಿನ ಅಡಿಯಲ್ಲಿ ಬಿಟ್ಟು ಹೋದ ತಾಯಿ

Friday, October 7th, 2022
baby

ಮಂಗಳೂರು : ತಾಯಿಯೊಬ್ಬಳು ರಸ್ತೆ ಬದಿಯಲ್ಲಿ ಆಗ ತಾನೇ ಹುಟ್ಟಿದ ಮಗುವನ್ನು ಬಿಟ್ಟು ಹೋಗಿರುವ ಘಟನೆ ತೊಕ್ಕೊಟ್ಟು ಕಾಪಿಕಾಡು ಅಂಬಿಕಾರೋಡಿನ ಗೇರು ಅಭಿವೃದ್ಧಿ ಕೇಂದ್ರದ ಬಳಿ ಗುರುವಾರ ನಡೆದಿದೆ. ತೊಕ್ಕೊಟ್ಟು ಕಾಪಿಕಾಡ್ ನಿವಾಸಿ ಅಮರ್ ಅವರ ಮನೆಯ ಸಮೀಪ ಮಗು ಕೂಗುವುದು ಕೇಳಿಸಿದ್ದು, ಹುಡುಕಾಡಿದಾಗ ಅವರ ಮನೆಯ ಸಮೀಪ ನಿಲ್ಲಿಸಿದ್ದ ಕಾರಿನ ಅಡಿಯಲ್ಲಿ ಮಗು ಪತ್ತೆಯಾಗಿದೆ. ಕಾರಿನ ಕೆಳಗಡೆ ಬಿಳಿ ಬಟ್ಟೆಯಲ್ಲಿ ಸುತ್ತಿದ ಸ್ಥಿತಿಯಲ್ಲಿ ಮಗು ಪತ್ತೆಯಾಗಿದ್ದು ಸ್ಥಳೀಯ ಜನರಿಗೂ ಮಗು ಯಾರದ್ದು ಎಂದು ಪತ್ತೆ ಹಚ್ಚಲು […]

ಚಿಟ್‌ಫಂಡ್ ಹಣ ಪಡೆದು ವಂಚನೆ, ಮನನೊಂದು ನೇಣು ಬಿಗಿದು ಆತ್ಮಹತ್ಯೆ

Saturday, June 4th, 2022
jayarama shetty

ಮಂಗಳೂರು : ಚಿಟ್‌ಫಂಡ್ ಇಟ್ಟಿದ್ದ ವ್ಯಕ್ತಿಯೊಬ್ಬರಿಗೆ ಹಣವನ್ನು ಪಡೆದವರು ಮರಳಿ ನೀಡದೇ ಇದ್ದದ್ದರಿಂದ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲದ ಮಾಡೂರಿನಲ್ಲಿ ನಡೆದಿದೆ. ಕೋಟೆಕಾರು ಗ್ರಾಮದ ಮಾಡೂರು ಸರ್ಕಾರಿ ಶಾಲೆ ಬಳಿಯ ನಿವಾಸಿ ಜಯರಾಮ ಶೆಟ್ಟಿ (71) ಆತ್ಮಹತ್ಯೆಗೆ ಶರಣಾದವರು. ಶನಿವಾರ ಬೆಳಗ್ಗೆ ಮನೆಯ ಕೋಣೆಯೊಳಗೆ ಫ್ಯಾನ್‌ಗೆ ನೈಲಾನ್‌ ಹಗ್ಗದಿಂದ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಗೆ ಚಹಾ ನೀಡಲೆಂದು ಪತ್ನಿ ಲೀನಾ ಜೆ. ಶೆಟ್ಟಿ ಅವರು ಕೋಣೆಯೊಳಗೆ ಹೋದಾಗ ಆತ್ಮಹತ್ಯೆ ಮಾಡಿರುಕೊಂಡಿರುವುದು […]

ಆಸ್ಪತ್ರೆ ಬಳಿ ನಿಲ್ಲಿಸಿದ್ದ ಬೈಕ್ ಕಳವು, ಇಬ್ಬರು ಆರೋಪಿಗಳ ಬಂಧನ

Thursday, June 2nd, 2022
bike-thieves

ಉಳ್ಳಾಲ : ನಿಲ್ಲಿಸಿದ್ದ ಬೈಕ್ ಕಳವು ನಡೆಸಿದ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬುಧವಾರ ಬಂಧಿಸಿ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಸರಗೋಡಿನ ಚೆರ್ಕಳ ನಿವಾಸಿ ಅಬ್ದುಲ್ ರಶೀದ್ (23) ಕುಂಜಾರುಪ್ಪಾರ ನಿವಾಸಿ ಅಬ್ದುಲ್ ಶಬೀರ್ (21) ಬಂಧಿತರು. ಎ.25 ರಂದು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ಬಗಂಬಿಲ ನಿವಾಸಿ ರಂಜಿತ್ ಎಂಬವರ ಎಫ್ ಝಡ್ ಬೈಕ್ ಕಳವು ನಡೆದಿತ್ತು. ಈ ಕುರಿತು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜೂ.1 ರಂದು ಉಚ್ಚಿಲ ಬ್ರಿಡ್ಜ್ ಬಳಿ […]

ಗಾಂಜಾ ಸಾಗಿಸುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ಬಂಧನ

Monday, December 13th, 2021
Ganja students

ಮಂಗಳೂರು : ತೊಕ್ಕೊಟ್ಟು ಸಮೀಪದ ಬಗಂಬಿಲ ಎಂಬಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಉಳ್ಳಾಲ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಂಧಿತರನ್ನು ಕೇರಳ ತ್ರಿಶ್ಶೂರ್‌ನ ಆದರ್ಶ್ ಜ್ಯೋತಿ (22) ಮತ್ತು ಕೊಟ್ಟಾಯಂನ ಯೋಯಲ್ ಜೋಯ್ಸ್ (22) ಎಂದು ಗುರುತಿಸಲಾಗಿದೆ. ಆದರ್ಶ್ ಬಿಡಿಎಸ್ ಮತ್ತು ಯೋಯಲ್ ನರ್ಸಿಂಗ್ ವಿದ್ಯಾರ್ಥಿಗಳು ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ. ಸೋಮವಾರ ಬಗಂಬಿಲ ಪರಿಸರದಲ್ಲಿ ಇವರು ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಪೊಲೀಸರು ತಪಾಸಣೆ ನಡೆಸಿದರು. ಈ ವೇಳೆ ಸುಮಾರು 220 ಗ್ರಾಂ ತೂಕದ ಗಾಂಜಾ ಇವರ […]

ಉಳ್ಳಾಲ : ತೋಟಕ್ಕೆ ಬಂದ ಕೋಣದ ಕತ್ತು ಕೊಯ್ದು ಹತ್ಯೆ ನಡೆಸಿದ ದುಷ್ಕರ್ಮಿಗಳು

Sunday, August 29th, 2021
buffalo

ಉಳ್ಳಾಲ : ತೋಟಕ್ಕೆ ಬಂದ ಕೋಣದ ಕತ್ತು ಕೊಯ್ದು ಹತ್ಯೆ ನಡೆಸಿರುವ ಅಮಾನವೀಯ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಬಳಿಯ ಬಲ್ಯ ಎಂಬಲ್ಲಿ ರವಿವಾರ ಸಂಜೆ ನಡೆದಿದೆ. ಹಿಂದೂ ಸಂಘಟನೆ ಕಾರ್ಯಕರ್ತರು ತೋಟದ ಮಾಲೀಕನೇ ಕೋಣವನ್ನು ಬೇರೆಯವರ ಮೂಲಕ ಹತ್ಯೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಬಲ್ಯ ಎಂಬಲ್ಲಿರುವ ಜಯರಾಮ ಶೆಟ್ಟಿ ಎಂಬವರ ತೋಟದ ಬಳಿ ಕೃತ್ಯ ನಡೆದಿದೆ. ಕೋಣದ ಕುತ್ತಿಗೆಯನ್ನು ಹರಿತವಾದ ಆಯುಧದಿಂದ ಕಡಿದ ಸ್ಥಿತಿಯಲ್ಲಿದ್ದು, ರಕ್ತಸ್ರಾವ ಆಗಿ ಕೋಣ ಸತ್ತು ಬಿದ್ದಿದೆ. ಈ ಬಗ್ಗೆ ಸ್ಥಳೀಯರು […]

ಉಳ್ಳಾಲದ ಕೊಡಿ ಎಂಬಲ್ಲಿ ಮೀನುಗಾರಿಕಾ ದೋಣಿ ಅಫಘಾತ, 10 ಮಂದಿ ರಕ್ಷಣೆ

Sunday, May 23rd, 2021
Fishing Boat

ಮಂಗಳೂರು : ಉಳ್ಳಾಲ ಕೋಟೆಪುರ ದ ವ್ಯಕ್ತಿಯೊಬ್ಬರಿಗೆ ಸೇರಿದ ಮೀನುಗಾರಿಕಾ ದೋಣಿಯೊಂದು  ಉಳ್ಳಾಲದ  ಕೊಡಿ ಎಂಬಲ್ಲಿ ಅಪಘಾತಕ್ಕೀಡಾಗಿದ್ದು, ದೋಣಿಯಲ್ಲಿದ್ದ 10 ಮಂದಿಯನ್ನು ರಕ್ಷಿಸಲಾಗಿದೆ. ಬೊಟ್ ಶನಿವಾರ ತಡರಾತ್ರಿ ಮಂಗಳೂರಿನ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ಹೊರಟಿದ್ದು ಮೇ 23ರ ರವಿವಾರ ಮುಂಜಾನೆ ಇಲ್ಲಿನ ಕೋಡಿಯಲ್ಲಿ ಮೀನುಗಾರಿಕಾ ದೋಣಿ ಅಪಘಾತಕ್ಕೀಡಾಗಿದೆ. ಉಳ್ಳಾಲ ಮೂಲದ ಅಶ್ರಫ್‌‌ ಅವರಿಗೆ ಸೇರಿದ್ದ ಅಜಾನ್‌ ಎಂಬ ಮೀನುಗಾರಿಕಾ ದೋಣಿ ರವಿವಾರ ಮುಂಜಾನೆ 1.30ರ ವೇಳೆಗೆ ದಡದಿಂದ ಹೊರಟಿತ್ತು. ಕನ್ಯಾಕುಮಾರಿಯ ಐವರು ಮೀನುಗಾರರು ಮದ್ಯದ ಅಮಲಿನಲ್ಲಿದ್ದರು ಎಂದು ತಿಳಿದುಬಂದಿದೆ. ದೋಣಿ ನಡೆಸಲು […]

ಹಿಂದೂ ದೇವರುಗಳ ನಿಂದಿಸಿದ ತೊಕ್ಕೊಟ್ಟು ನಿವಾಸಿ, ಉದ್ಯಮಿಯ ಬಂಧನ

Saturday, May 15th, 2021
Iqbal

ಉಳ್ಳಾಲ : ರಾಮ ಕೃಷ್ಣ, ಬಸವಣ್ಣ ರಾಮ ದೇವರು ಅಲ್ಲ ಅವರೆಲ್ಲ ಮಾನವರಂತೆ. ನಾವು ಯಾತಕ್ಕೆ ಹಿಂದೂ ಹಬ್ಬಗಳಿಗೆ ಶುಭ ಕೋರಬೇಕು ಎಂದೆಲ್ಲಾ ಹೇಳಿ  ಹಿಂದೂ ದೇವರುಗಳ ನಿಂದಿಸಿದ ತೊಕ್ಕೊಟ್ಟು ನಿವಾಸಿ, ಉದ್ಯಮಿಯನ್ನು ಉಳ್ಳಾಲ ಪೊಲೀಸರು ಮೇ. 15 ರ ಶನಿವಾರ ಬಂಧಿಸಿದ್ದಾರೆ. ಬಂಧಿತನನ್ನು ತೊಕ್ಕೊಟ್ಟು ಸ್ಮಾರ್ಟ್ ಸಿಟಿ ವಸತಿ ಸಂಕೀರ್ಣದಲ್ಲಿ ಇರುವ ಅಂಗಡಿ ಹೊಂದಿರುವ ಉದ್ಯಮಿ ಸ್ವಾಲಿಝ್ ಇಕ್ಬಾಲ್ (45) ಎಂದು ಗುರುತಿಸಲಾಗಿದೆ. ಆರೋಪಿ ಹಿಂದೂ ದೇವರುಗಳ ವಿರುದ್ಧ ನಿಂದನೆಯ ಮಾತುಗಳನ್ನು ಆಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ […]

ತೊಕ್ಕೊಟ್ಟು ಕೊರಗಜ್ಜನ ಕೋಲದಲ್ಲಿ ಕಲ್ಲೆಸೆದು ಗಲಭೆ ಸೃಷ್ಟಿಸಲು ಯತ್ನ, ಓರ್ವನ ಬಂಧನ

Tuesday, April 13th, 2021
Hafiz

ಮಂಗಳೂರು  : ತೊಕ್ಕೊಟ್ಟು ಜಂಕ್ಷನ್ ಬಳಿ ಕೊರಗಜ್ಜನ ಕೋಲ ನಡೆಯುತ್ತಿದ್ದ ಪಕ್ಕದ ಕಟ್ಟಡದ ಮೇಲಿಂದ ಕಲ್ಲೆಸೆದು ಗಲಭೆ ಸೃಷ್ಟಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಪೊಲೀಸರೊಂದಿಗೆ ಸ್ಥಳೀಯರು ಸೇರಿ ಆರೋಪಿ ಮಹಮ್ಮದ್ ಹಫೀಝ್  ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಡಿ ನಿವಾಸಿ ಮಹಮ್ಮದ್ ಹಫೀಝ್ ತೊಕ್ಕೊಟ್ಟು ಜಂಕ್ಷನ್ ಬಳಿ ಕೊರಗಜ್ಜನ ಕೋಲ ನಡೆಯುತ್ತಿದ್ದು ಅಲ್ಲೇ ಇರುವ ವಾಣಿಜ್ಯ ಸಂಕೀರ್ಣ ದ ಮೇಲಿನಿಂದ ಕಲ್ಲೆಸೆದಿದ್ದು ಈ ಸಂದರ್ಭದಲ್ಲಿ‌ಪೊಲೀಸರು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು ಆರೋಪಿಯನ್ಬು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. […]

ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಎಸ್‌ಡಿಪಿಐ ಮುಖಂಡನ ಬಂಧನ

Sunday, January 24th, 2021
sdpi

ಉಳ್ಳಾಲ : ಅಪ್ರಾಪ್ತ ಬಾಲಕಿಯ ಮೇಲೆ  ಅತ್ಯಾಚಾರ ಯತ್ನ ನಡೆಸಿದ್ದಕ್ಕಾಗಿ ಉಳ್ಳಾಲ ವಲಯದ  ಎಸ್‌ಡಿಪಿಐ ಅಧ್ಯಕ್ಷ ನೊಬ್ಬನನ್ನು ಪೋಕ್ಸೊ ಕಾಯಿದೆಯಡಿ ಉಳ್ಳಾಲ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿ ತಲೆಮರೆಸಿಕೊಂಡಿದ್ದ ಎಸ್‌ಡಿಪಿಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಸಿದ್ದೀಖ್ ಉಳ್ಳಾಲ್ (43)  ಬಂಧಿತ ಆರೋಪಿ. ಸಹಾಯದ ನೆಪದಲ್ಲಿ ಮಹಿಳೆಯ  ಮನೆಗೆ ಭೇಟಿ ನೀಡುತ್ತಿದ್ದ ಸಿದ್ದೀಖ್ 15ರ ಹರೆಯದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ. ಮಹಿಳೆಯ ಪತಿ ತೊರೆದಿದ್ದು, ಆಕೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ಬಗ್ಗೆ ಮಹಿಳೆ ಜ.19 ರಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ […]

ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿ ವಿಫಲವಾದ ಮಹಿಳೆ, ಸಮುದ್ರಕ್ಕೆ ಹಾರಿ ಆತ್ಮಹತ್ಯೆ

Friday, October 30th, 2020
Usha

ಮಂಗಳೂರು : ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರು ಶುಕ್ರವಾರ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಚ್ಚಿಲದಲ್ಲಿ‌ ನಡೆದಿದೆ. ಇಲ್ಲಿನ ಸಂಕೊಳಿಗೆ ನಿವಾಸಿಯಾಗಿರುವ ಉಷಾ (60) ಎಂಬಾಕೆಯ ಮೃತದೇಹ ಉಚ್ಚಿಲ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಮಾನಸಿಕವಾಗಿ ನೊಂದಿದ್ದ ಮಹಿಳೆ ಈ ಹಿಂದೆಯೂ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.