ಮುಖ್ಯಮಂತ್ರಿಗಳಿಂದ ಪುತ್ತೂರಿನಲ್ಲಿ ನಾಳೆ ಭಾಗ್ಯಲಕ್ಷ್ಮಿ ಮತ್ತು ಇತರ ಯೋಜನೆಗಳಿಗೆ ಚಾಲನೆ
Tuesday, November 16th, 2010ಮಂಗಳೂರು: ಪುತ್ತೂರಿನಲ್ಲಿ ನಾಳೆ ನಡೆಯಲಿರುವ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳ ಉಚಿತ ಆರೋಗ್ಯ ತಪಾಸಣೆ, ಬಾಂಡ್ ವಿತರಣೆ, ತಾಯಂದಿರಿಗೆ ಸೀರೆ ವಿತರಣೆ ಕಾರ್ಯಕ್ರಮದ ಪತ್ರಿಕಾಗೋಷ್ಠಿ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ನಲ್ಲಿ ನಡೆಯಿತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತವಾರಿ ಸಚಿವ ಕೃಷ್ಣ ಜೆ ಪಾಲೆಮಾರ್ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ನೊಂದಾಯಿತ ಮಕ್ಕಳ ವಿಶೇಷ ಆರೋಗ್ಯ ತಪಾಸಣೆ ಮಾಡಿಸಿಕೊಂಡ ತಾಯಂದಿರಿಗೆ ಪ್ರೋತ್ಸಾಹ ನೀಡಲು ಮಾನ್ಯ ಮುಖ್ಯ ಮಂತ್ರಿಗಳು ಮಕ್ಕಳ ತಾಯಂದಿರಿಗೆ ಸೀರೆ ಹಂಚುವ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಾಕಿಕೊಂಡಿದ್ದು, ದಿನಾಂಕ 17-11-2010 ರಂದು […]