ಬಿಜೆಪಿ ಮತ್ತು ಆರ್‌ಎಸ್‌ಎಸ್ ಮುಕ್ತ ಭಾರತ ನಿರ್ಮಾಣ : ಮಾಜಿ ಕಾನೂನು ಸಚಿವ ಎಂ.ಸಿ.ನಾಣಯ್ಯ ಕರೆ

Friday, January 31st, 2020
upavasa

ಮಡಿಕೇರಿ : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧವಾಗಿ ಪ್ರಗತಿಪರ ಜನಾಂದೋಲನ ವೇದಿಕೆ ವತಿಯಿಂದ ನಗರದ ಗಾಂಧಿ ಮಂಟಪದ ಮುಂಭಾಗ ಐದು ದಿನಗಳ ಕಾಲ ನಡೆದ ಉಪವಾಸ ಸತ್ಯಾಗ್ರಹವನ್ನು, ಮಾನವ ಪ್ರೀತಿಯ ಸಂದೇಶದೊಂದಿಗೆ ಮಾನವ ಸರಪಳಿ ನಿರ್ಮಿಸಿ ಕೊನೆಹಾಡಲಾಯಿತು. ಗಣರಾಜ್ಯೋತ್ಸವದ ದಿನವಾದ ಜ.26 ರಿಂದ ಆರಂಭಗೊಂಡ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡ ವೇದಿಕೆಯ ಸಂಚಾಲಕ ವಿ.ಪಿ. ಶಶಿಧರ್, ಕಾರ್ಮಿಕ ಮುಖಂಡ ಪಿ.ಆರ್. ಭರತ್, ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್ ಮತ್ತು ವೆಲ್‌ಫೇರ್ […]

ಮಾಜಿ ಸಚಿವ ಎಂ.ಸಿ.ನಾಣಯ್ಯ ಮನೆಯಲ್ಲಿ ನಾಗರಹಾವು

Sunday, November 3rd, 2019
pious pirera

ಮಡಿಕೇರಿ : ಹಾಕತ್ತೂರಿನಲ್ಲಿರುವ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರ ತೋಟದ ಮನೆಯ ಅಂಗಳದಲ್ಲಿ ಪ್ರತ್ಯಕ್ಷವಾದ ನಾಗರಹಾವನ್ನು ಹಾಕತ್ತೂರಿನ ಗ್ರಾ.ಪಂ ಸದಸ್ಯ, ಉರಗ ರಕ್ಷಕ ಸ್ನೇಕ್ ಪಿಯೂಷ್ ಪೆರೇರಾ ಅವರು ಸೆರೆ ಹಿಡಿದು ರಕ್ಷಿಸಿದ್ದಾರೆ. ಮತ್ತೊಂದೆಡೆ ಮೇಕೇರಿಯ ರಾಧಾ ಎಂಬುವವರ ಮನೆಯಲ್ಲಿ ಪತ್ತೆಯಾದ ಚೆಟ್ಟಮಂಡಲ ಹಾವನ್ನು ಕೂಡ ಪೆರೇರಾ ಸೆರೆ ಹಿಡಿದಿದ್ದಾರೆ. ಎರಡೂ ಹಾವುಗಳನ್ನು ಅವರು ಸಂಪಾಜೆಯ ಅರಣ್ಯ ಭಾಗಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಪಿಯೂಷ್ ಪೆರೇರಾ ಅವರು ಇಲ್ಲಿಯವರೆಗೆ 72 ನಾಗರಹಾವು ಹಾಗೂ 38 ವಿವಿಧ ಜಾತಿಯ ಹಾವುಗಳು ಸೇರಿದಂತೆ […]

ಕೊಡಗಿನ ಮೂಲ ಸಂಸ್ಕೃತಿಯನ್ನು ಉಳಿಸುವುದು ಆದ್ಯ ಕರ್ತವ್ಯವಾಗಬೇಕು : ಮಾಜಿ ಸಚಿವ ಎಂ.ಸಿ.ನಾಣಯ್ಯ ಕಿವಿಮಾತು

Wednesday, October 30th, 2019
Kodava

ಮಡಿಕೇರಿ : ಕೊಡಗಿನ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕೊಡವನ ಆದ್ಯ ಕರ್ತವ್ಯವಾಗಬೇಕು ಎಂದು ಮಾಜಿ ಎಂ.ಸಿ.ನಾಣಯ್ಯ ಕಿವಿಮಾತು ಹೇಳಿದ್ದಾರೆ. ನಗರದ ಕೊಡವ ಸಮಾಜದಲ್ಲಿ ನಡೆದ 12 ಕೊಡವ ಕೇರಿಗಳ ನಡುವಿನ 6ನೇ ಕೊಡವ ಅಂತರಕೇರಿ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡವಕೇರಿ ಎನ್ನುವುದು ಒಂದು ಕುಟುಂಬವಿದ್ದಂತೆ, ಪರಸ್ಪರ ಕಷ್ಟ ಸುಖಗಳಿಗೆ ಸ್ಪಂದಿಸುವ ವೇದಿಕೆ ಇದಾಗಿದ್ದು, ಸ್ವಾಭಿಮಾನಿ ಕೊಡವರು ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಒಗ್ಗೂಡಬೇಕು ಎಂದರು. ಮೂಲ ನಿವಾಸಿ ಕೊಡವ ಯುವ ಸಮೂಹ ಉದ್ಯೋಗ […]