ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ನಿರ್ದೇಶಕರ ಮನೆಗೆ ಎಸಿಬಿ ದಾಳಿ

Tuesday, February 2nd, 2021
Jayaraj

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆಗಳ ವಿಭಾಗದ ಜಂಟಿ ನಿರ್ದೇಶಕರೊಬ್ಬರ ಮೇಲೆ ಎಸಿಬಿ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಮನಪಾ ನಗರ ಯೋಜನೆಗಳ ವಿಭಾಗದ ಕೆ.ವಿ. ಜಯರಾಜ್ ಎಂಬವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜಯರಾಜ್ ಅವರ ಬಿಜೈ ಬಳಿ ಇರುವ ಮನೆ ಮೇಲೆ ಮಂಗಳವಾರ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ಮುಂದುವರಿದಿದೆ. ಇದರ ಜೊತೆಗೆ ಅವರ ಕಚೇರಿ, ನಗರದ ಪಡೀಲ್ ಬಳಿಯ ಜಯರಾಜ್ ತಂದೆಯ ಮನೆ, ಕೇರಳದಲ್ಲಿರುವ ಜಯರಾಜ್ […]

ಅಕ್ರಮ ಗಳಿಕೆ – ಕೆಐಎಡಿಬಿ ವಿಶೇಷ ಅಧಿಕಾರಿಯ ಮೂರು ಮನೆಗಳ ಮೇಲೆ ಎಸಿಬಿ ದಾಳಿ

Friday, June 12th, 2020
acb raid

ಮಂಗಳೂರು : ಎಸಿಬಿ ಅಧಿಕಾರಿಗಳು ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಕೆಐಎಡಿಬಿ ವಿಶೇಷ ಅಧಿಕಾರಿ ದಾಸೇಗೌಡ ಅವರ ಮಂಗಳೂರು, ಬೆಂಗಳೂರು ಹಾಗೂ ಮಂಡ್ಯದಲ್ಲಿರುವ ಮನೆಗಳ ಮೇಲೆ ಶುಕ್ರವಾರ ದಾಳಿ ನಡೆಸಿದ್ದಾರೆ. ಕೆಐಎಡಿಬಿ ವಿಶೇಷ ಅಧಿಕಾರಿಯಾಗಿದ್ದ ದಾಸೇಗೌಡ ಭೂಸ್ವಾಧೀನದ ಪರಿಹಾರ ಮೊತ್ತದಲ್ಲಿ ಕಮಿಷನ್ ಪಡೆದು 2019ರ ಡಿಸೆಂಬರ್ ನಲ್ಲಿ ಸಿಕ್ಕಿಬಿದ್ದಿದ್ದರು. ಸದ್ಯ ಲಂಚ ಸ್ವೀಕಾರ ಆರೋಪದಡಿ ಅಮಾನತ್ತಿನಲ್ಲಿದ್ದಾರೆ. ಆದುದರಿಂದ ವಿಶೇಷ ಅಧಿಕಾರಿಗಳು ದಾಸೇಗೌಡನಿಗೆ ಸೇರಿದ ಮಂಗಳೂರು, ಮಂಡ್ಯ ಮತ್ತು ಬೆಂಗಳೂರು ನಿವಾಸಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. […]

ಭ್ರಷ್ಟಾಚಾರ ಆರೋಪ : ಕುಂದಾಪುರ ಡಾ.ಮಧುಕೇಶ್ವರ್ ಅವರ ಮನೆ ಮೇಲೆ ಎಸಿಬಿ ದಾಳಿ

Friday, September 20th, 2019
Madhukeshwar

ಉಡುಪಿ : ಎರಡು ದಿನಗಳ ಹಿಂದಷ್ಟೇ ವರ್ಗಾವಣೆಗೊಂಡಿರುವ ಕುಂದಾಪುರ ಉಪವಿಭಾಗಾಧಿಕಾರಿ ಡಾ.ಎಸ್.ಎಸ್.ಮಧುಕೇಶ್ವರ್ ಅವರ ಸರ್ಕಾರಿ ವಸತಿಗೃಹದ ಮೇಲೆ ಎಸಿಬಿ ದಾಳಿ ನಡೆಸಿದೆ. ಹಿರಿಯ ಕೆಎಎಸ್ ಶ್ರೇಣಿಯ ಅಧಿಕಾರಿಯಾಗಿ ಕೆಲವು ತಿಂಗಳ ಹಿಂದಷ್ಟೇ ಕುಂದಾಪುರದ ಎಸಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಡಾ. ಮಧುಕೇಶ್ವರ ಕುಂದಾಪುರ ಅಸಿಸ್ಟೆಂಟ್ ಕಮಿಷನರ್ ಆಗಿ ಪ್ರತಿಯೊಂದು ಕಡತ ವಿಲೇವಾರಿಗೂ ಲಂಚಕ್ಕಾಗಿ ಕೈಚಾಚುತ್ತಿದ್ದರು ಅನ್ನುವುದು ಸಾರ್ವಜನಿಕರ ಆರೋಪವಾಗಿತ್ತು. ಅವರ ಮೇಲೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಾ. ಮಧುಕೇಶ್ವರ ಮಂಗಳವಾರವಷ್ಟೇ […]