ಕಾಂಪ್ಕೋ 2019-20ನೇ ಸಾಲಿನಲ್ಲಿ32.10 ಕೋಟಿ ರೂ.ಗಳ ನಿವ್ವಳ ಲಾಭ

Thursday, November 26th, 2020
campco

ಮಂಗಳೂರು : ಕಾಂಪ್ಕೋ  2019-20ನೇ ಸಾಲಿನಲ್ಲಿ1,848 ಕೋಟಿ ರೂ.ಗಳ ವಹಿವಾಟು ನಡೆಸಿದ್ದು, 32.10 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ಕೊರೋನ ಹಿನ್ನೆಲೆಯಲ್ಲಿ ಆಗಸ್ಟ್‌ನಲ್ಲಿ ನಡೆಯಬೇಕಾಗಿದ್ದ ಸರ್ವ ಸದಸ್ಯರ ಮಹಾಸಭೆ ಡಿಸೆಂಬರ್ 13ರಂದು ನಿಗದಿಪಡಿಸಲಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದ್ದಾರೆ. ಗ್ರಾಹಕರಿಗೆ  ಸುಲಭವಾಗಿಸುವ ದೃಷ್ಟಿಯಿಂದ ಬೆಂಗಳೂರು ಮತ್ತು ಪುತ್ತೂರಿನಲ್ಲಿ ವಿಶೇಷ ಚಾಕಲೇಟು ಕಿಯೋಸ್ಕ್‌ಗಳು ಕಾರ್ಯಪ್ರವೃತ್ತವಾಗಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸ್ಪೈಸ್ ಟೋಫಿ ಎಂಬ ಹೊಸ ಚಾಕಲೇಟು ಉತ್ಪನ್ನ ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಉತ್ತಮ ಬೇಡಿಕೆ ಇದೆ. […]

ಎ.9 ರಿಂದ ಕ್ಯಾಂಪ್ಕೋದಿಂದ ಕೊಕ್ಕೋ ಖರೀದಿ ಆರಂಭ

Tuesday, April 7th, 2020
coco

ಮಂಗಳೂರು  :  ಕ್ಯಾಂಪ್ಕೋ ವತಿಯಿಂದ ಏ.9 ರಿಂದ ಕೊಕ್ಕೋ ಖರೀದಿ ಆರಂಭವಾಗಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ. ಏ.9 ರಿಂದ ಪ್ರತೀ ಗುರುವಾರ ಸುಳ್ಯ, ವಿಟ್ಲ, ಅಡ್ಯನಡ್ಕ, ಕಡಬ ದ ಕ್ಯಾಂಪ್ಕೋ ಶಾಖೆಗಳಲ್ಲಿ ಕೊಕ್ಕೋ ಖರೀದಿ. ಏ.10 ರಿಂದ ಪ್ರತೀ ಶುಕ್ರವಾರ ಪುತ್ತೂರು ಶಾಖೆಯಲ್ಲಿ ಕೊಕ್ಕೋ ಖರೀದಿ , ಏ.13 ರಿಂದ ಪ್ರತೀ ಸೋಮವಾರ ಬೆಳ್ತಂಗಡಿ ಶಾಖೆಯಲ್ಲಿ ಕೊಕ್ಕೋ ಖರೀದಿ ಮಾಡಲಾಗುತ್ತದೆ. ಬೆಳಗ್ಗೆ 9 ರಿಂದ 12 ಗಂಟೆಯವರೆಗೆ ಕೊಕ್ಕೋ ಖರೀದಿ ನಡೆಯುತ್ತದೆ ಎಂದು ಕ್ಯಾಂಪ್ಕೋ […]

ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಾಯಿ ವನಿತಾದೇವಿ ನಿಧನ

Tuesday, October 29th, 2019
Vanithadevi

ಮಂಗಳೂರು : ಕ್ಯಾಂಪ್ಕೋ ಸಹಕಾರಿ ಸಂಸ್ಥೆಯ ಮಾಜಿ ಅಧ್ಯಕ್ಷ, ಕೆಪಿಎಸ್‌ಸಿ ಮಾಜಿ ಸದಸ್ಯ ಎಸ್. ಆರ್. ರಂಗಮೂರ್ತಿ, ಕ್ಯಾಂಪ್ಕೋ ಸಂಸ್ಥೆಯ ಹಾಲಿ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಅವರ ಮಾತೃಶ್ರೀ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿರಿಯ ಕಾರ್ಯಕರ್ತರಾಗಿದ್ದ ಪುಣಚ ದಿ. ರಮೇಶ್ವಂದ್ರ ನಾಯಕ್ ಅವರ ಧರ್ಮಪತ್ನಿ ವನಿತಾದೇವಿ ಎಸ್.ಆರ್.(83) ಅವರು ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ಪರಿಸ್ಥಿಯ ಸಮಯದಲ್ಲಿ ಪತಿ ಬಂಧನಕ್ಕೊಳಗಾಗಿದ್ದರೂ, ಊರಲ್ಲಿ ಎದುರಾದ ಪರಿಸ್ಥಿತಿಗಳನ್ನು ದಿಟ್ಟತನದಿಂದ […]

ಕ್ಯಾಂಪ್ಕೋ  ವತಿಯಿಂದ “ಅಡಿಕೆ ಕೌಶಲ್ಯ ಪಡೆ” ಅರ್ಜಿ ಆಹ್ವಾನ

Friday, November 2nd, 2018
Areca-nut

ಪುತ್ತೂರು: ಅಡಿಕೆ ಮರ ಏರುವ ಕುಶಲಕರ್ಮಿಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ  ಕ್ಯಾಂಪ್ಕೋ   ನೇತೃತ್ವದಲ್ಲಿ “ಅಡಿಕೆ ಕೌಶಲ್ಯ ಪಡೆ” ತರಬೇತಿ ಶಿಬಿರ ನಡೆಯಲಿದೆ. ಡಿ.5 ರಿಂದ  ನಡೆಯುವ ಈ ಶಿಬಿರಕ್ಕೆ  ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಿಕೊಳ್ಳಬಹುದು ಎಂದು  ಕ್ಯಾಂಪ್ಕೋ   ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಿಪಿಸಿಆರ್‍ಐ , ಎ ಆರ್ ಡಿ ಎಫ್ , ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ ಶಿವಮೊಗ್ಗ , ತೋಟಗಾರಿಕಾ ಇಲಾಖೆ, ಅಡಿಕೆ ಪತ್ರಿಕೆ ಮತ್ತು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಹಾಗೂ ಇತರ ಸಂಘಟನೆಗಳು ಈ […]

ಗುಜರಾತಿನ ಸೂರತ್‌ನಲ್ಲಿ ಕ್ಯಾಂಪ್ಕೊ ಮಾರಾಟ ಕೇಂದ್ರ ಆರಂಭ

Tuesday, May 22nd, 2018
campco

ಮಂಗಳೂರು: ಕರ್ನಾಟಕ ಮತ್ತು ಕೇರಳದಲ್ಲಿ ಕೃಷಿಕರು ಬೆಳೆಯುವ ಅಡಿಕೆ ಉತ್ತರ ಭಾರತದಲ್ಲಿ ಬಹುಬೇಡಿಕೆಯ ವಸ್ತುವಾಗಿದೆ. ವಿಶೇಷವಾಗಿ, ಉತ್ತಮ ಗುಣಮಟ್ಟದ ಚಾಲಿ (ಬಿಳಿ) ಅಡಿಕೆಗೆ ಗುಜರಾತ್ ರಾಜ್ಯ ಯೋಗ್ಯ ಮಾರುಕಟ್ಟೆಯನ್ನು ಒದಗಿಸುತ್ತಿದೆ. ಗುಜರಾತಿನ ಅಹಮದಾಬಾದ್ ಮತ್ತು ರಾಜಕೋಟ್ ನಗರಗಳಲ್ಲಿ ಈಗಾಗಲೇ ಮಾರಟ ಕೇಂದ್ರಗಳನ್ನು ಹೊಂದಿರುವ ಕ್ಯಾಂಪ್ಕೊ, ಗ್ರಾಹಕರ ಬೇಡಿಕೆಗನುಸಾರವಾಗಿ ಇದೀಗ ಆ ರಾಜ್ಯದಲ್ಲಿ ಮೂರನೇ ಮಾರಾಟ ಕೇಂದ್ರವನ್ನು ಸೂರತ್ ನಗರದಲ್ಲಿ ಆರಂಭಿಸಿದೆ. ಗುಜರಾತಿನ ಎರಡನೇ ದೊಡ್ಡ ನಗರವಾಗಿರುವ ಸೂರತ್, ವಜ್ರ ಹಾಗೂ ಜವಳಿ ಉದ್ಯಮಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಕ್ಯಾಂಪ್ಕೊ […]

ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆ ಜ.21ರಂದು ಉದ್ಘಾಟನೆಗೊಳ್ಳಲಿದೆ

Wednesday, January 17th, 2018
campo-ltd

ಮಂಗಳೂರು: ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆ ಆವರಣದಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಎಮಿನಿಟಿ ಕಟ್ಟಡ (ಸೌಲಭ್ಯ ಸೌಧ) ಜ.21ರಂದು ಉದ್ಘಾಟನೆಗೊಳ್ಳಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದರು. ಮಂಗಳೂರಿನ ಕ್ಯಾಂಪ್ಕೋ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಬೆಳಗ್ಗೆ 10 ಗಂಟೆಗೆ ನೂತನ ಕಟ್ಟಡವನ್ನು ಉದ್ಘಾಟಿಸುವರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಸ್ಥಾಪಕಾಧ್ಯಕ್ಷ ವಾರಣಾಶಿ ಸುಬ್ರಾಯ ಭಟ್ಟರ ಪ್ರತಿಮೆಯನ್ನು ಕೇಂದ್ರದ ಅಂಕಿ ಅಂಶಗಳು […]