ಮಂಜೇಶ್ವರ-ಕನ್ನಡ ಭಾಷಾ ಪ್ರದೇಶ ಸ್ಥಾನಮಾನ ಸ್ವಾಗತಾರ್ಹ – ಎಸ್. ಪ್ರದೀಪಕುಮಾರ ಕಲ್ಕೂರ
Saturday, May 16th, 2020ಮಂಗಳೂರು : ಕನ್ನಡ ಭಾಷಿಕರ ಪ್ರದೇಶವಾದ ಗಡಿನಾಡು ಕಾಸರಗೋಡು, ಭಾಷಾ ಅಲ್ಪಸಂಖ್ಯಾತ ನೆಲೆಯಲ್ಲಿ ಕನ್ನಡ ಭಾಷಾ ಪ್ರದೇಶವೆಂದೇ ಕೇರಳ ರಾಜ್ಯ ಸರಕಾರದ ಆಡಳಿತಾತ್ಮಕ ನೆಲೆಯಲ್ಲಿ ಪರಿಗಣಿಸಲಾಗಿತ್ತು. ಭಾಷಾ ಅಲ್ಪಸಂಖ್ಯಾತ ನೆಲೆಯಲ್ಲಿ ಕೇರಳ ರಾಜ್ಯ ಸರಕಾರವು ಒದಗಿಸಿರುವ ವಿಶೇಷ ಸ್ಥಾನಮಾನವು ಸ್ವಾಗತಾರ್ಹವಾಗಿದೆ ಎಂದು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಪ್ರದೀಪಕುಮಾರಕಲ್ಕೂರ ತಿಳಿಸಿದ್ದಾರೆ. ಕನ್ನಡ ಪರ ಹೋರಾಟಗಾರರ ಹೋರಾಟದ ಫಲಶ್ರುತಿಯಾಗಿ ಆ ಪ್ರದೇಶದ ಎಲ್ಲಾ ಕನ್ನಡಿಗರಿಗೆ ಆಡಳಿತಾತ್ಮಕವಾಗಿ ಕನ್ನಡ ಭಾಷಾ ಅನುಷ್ಠಾನ ಕನ್ನಡ ಭಾಷಾ ನೆಲೆಯಲ್ಲಿ ಶೈಕ್ಷಣಿಕ ಸವಲತ್ತುಗಳು, […]