ಪುತ್ತೂರು ರಾಮಕೃಷ್ಣ ಹತ್ಯಾ ಅರೋಪಿಗಳು ನ್ಯಾಯಾಂಗ ವಶಕ್ಕೆ

Monday, May 9th, 2011
ಅಲೋಕ್ ಮೋಹನ್ ಪತ್ರಿಕಾಗೋಷ್ಟಿ

ಮಂಗಳೂರು : ಎಪ್ರಿಲ್ 28ರಂದು ಸುಳ್ಯ ನಗರದಲ್ಲಿ ನಡೆದ ಕೆ.ವಿ.ಜಿ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಶ್ರೀ ರಾಮಕೃಷ್ಣ ಎಂಬವರ ಹತ್ಯಾ ಪ್ರಕರಣದ ಪ್ರಮುಖ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಇಂದು ಸಂಜೆ ಸುಳ್ಯದಲ್ಲಿ  ನ್ಯಾಯಾಂಗ ವಶಕ್ಕೆ ನೀಡಲಾಯಿತು ಎಂದು ಐಜಿಪಿ ಅಲೋಕ್ ಮೋಹನ್ ಇಂದು ಮಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಪುತ್ತೂರು  ಎಸ್ಪಿ ಯವರ ನೇತೃತ್ವದ ಡಿ.ಸಿ.ಐ.ಬಿ ತಂಡವನ್ನು ಒಳಗೊಂಡಂತೆ 5 ತಂಡವನ್ನು ರಚಿಸಿ, ನಿನ್ನೆ ಡಿ.ಸಿ.ಐ.ಬಿ.  ಪೊಲೀಸರಿಗೆ ಬಂದ ಮಾಹಿತೆಯಂತೆ […]

ಕರಾವಳಿ ಕರ್ನಾಟಕದ ಪ್ರಥಮ ಪ್ರವಾಸಿ ವಸ್ತು ಪ್ರದರ್ಶನ ಉದ್ಘಾಟನೆ

Thursday, December 2nd, 2010
ಪ್ರಥಮ ಪ್ರವಾಸ ವಸ್ತು ಪ್ರದರ್ಶನ ಉದ್ಘಾಟನೆ

ಮಂಗಳೂರು: ಕರಾವಳಿ ಕರ್ನಾಟಕದ ಪ್ರಥಮ ಪ್ರವಾಸಿ ಮತ್ತು ಪ್ರದರ್ಶನ ಮಂಗಳೂರು ಟ್ರಾವೆಲ್ ಮಾರ್ಟ್ ನ್ನು ಇಂದು ಬೆಳಿಗ್ಗೆ ಮಿಲಾಗ್ರಿಸ್ ಹಾಲ್ ಪಳ್ನೀರ್ , ಮಂಗಳೂರು ಇಲ್ಲಿ ಉದ್ಘಾಟಿಸಲಾಯಿತು. ಪ್ರವಾಸಿ ವಸ್ತು ಪ್ರದರ್ಶನ ಮಳಿಗೆಯನ್ನು ಮಂಗಳೂರು ಪಶ್ಚಿಮ ವಲಯ ಐಜಿಪಿ ಅಲೋಕ್ ಮೋಹನ್ (ಐಪಿಎಸ್) ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಂಗಳೂರು ದೇಶದಲ್ಲಿ ಪ್ರಮುಖವಾಗಿ ಬೆಳೆಯುತ್ತಿರುವ ಪ್ರದೇಶ ಇಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 25 ಕ್ಕಿಂತಲೂ ಹೆಚ್ಚು ಪಂಚತಾರ ಹೊಟೇಲುಗಳಿವೆ. ಇದರಿಂದಾಗಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ. ನಾವು […]

ಮಂಗಳೂರು ಪೊಲೀಸ್ ಪ್ರಧಾನ ಕಛೇರಿಯಲ್ಲಿ ಆಯುಧ ಪೂಜೆ.

Saturday, October 16th, 2010
ಪೊಲೀಸ್ ಪ್ರಧಾನ ಕಛೇರಿಯಲ್ಲಿ ಆಯುಧ ಪೂಜೆ

ಮಂಗಳೂರು: ನಗರದ ಪೊಲೀಸ್ ಪ್ರಧಾನ ಕಛೇರಿಯಲ್ಲಿ ಇಂದು ಬೆಳಿಗ್ಗೆ ಇಲಾಖೆಯ ತುಪಾಕಿಗಳಿಗೆ ಮತ್ತು ವಾಹನಗಳಿಗೆ ಆಯುಧ ಪೂಜೆಯನ್ನು ಮಾಡಲಾಯಿತು. ಐಜಿಪಿ ಅಲೋಕ್ ಮೋಹನ್, ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಎಸ್.ಪಿ ಸುಬ್ರಹ್ಮಣ್ಯೇಶ್ವರ ರಾವ್ ಆಯುಧ ಪೂಜೆಯಲ್ಲಿ ಭಾಗವಹಿಸಿದ್ದರು. ಎಡಬಿಡದೆ ಕೆಲಸ ನಿರ್ವಹಿಸುತ್ತಿದ್ದ ಪೊಲೀಸ್ ವಾಹನಗಳು, ಪೊಲೀಸರ ಹೆಗಲೇರುತ್ತಿದ್ದ ತುಪಾಕಿಗಳು ಇಂದು ಸ್ವಚ್ಚವಾಗಿ ಸುಂದರವಾಗಿ ಅಲಂಕರಿಸಲ್ಪಟ್ಟಿದ್ದವು ಪೂಜೆಯಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.