ಏಪ್ರಿಲ್ 19 : ದ.ಕ. ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್, ಪೀಡಿತರ ಸಂಖ್ಯೆ ಒಟ್ಟು15 ಕ್ಕೆ ಏರಿಕೆ

Sunday, April 19th, 2020
uppinangady

ಮಂಗಳೂರು :  ಜಿಲ್ಲೆಯಲ್ಲಿ ಮತ್ತೆ ಕೊರೊನಾ  ಆತಂಕ ಹೆಚ್ಚಾಗಿದೆ.  ಕಳೆದ 12 ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ ಯಾವುದೇ ಕೊರೊನಾ ಸೋಂಕು ಪತ್ತೆಯಾಗಿರಲಿಲ್ಲ. ಅದರ ಬಳಿಕ ಏಪ್ರಿಲ್ 17ರಂದು ಉಪ್ಪಿನಂಗಡಿ ಮೂಲದ ವ್ಯಕ್ತಿಯಲ್ಲಿ ಪಾಸಿಟಿವ್ ಪತ್ತೆಯಾಗಿತ್ತು. ಬಳಿಕ ವೆನ್ಲಾಕ್ ಆಸ್ಪತ್ರೆಯಲ್ಲಿ ಅವರಿಗೆ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದ ವ್ಯಕ್ತಿಯ ಪತ್ನಿಯಲ್ಲಿ ಏಪ್ರಿಲ್ 19ರಂದು ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ದ.ಕ. ಜಿಲ್ಲೆಯಲ್ಲಿ ಈಗ ಕೊರೊನಾ ಪೀಡಿತರ ಸಂಖ್ಯೆ 15 ಕ್ಕೆ ಏರಿದೆ.  12 ಮಂದಿ ಡಿಸ್ಚಾರ್ಜ್ ಆಗಿದ್ದಾರೆ

ದ.ಕ. ಜಿಲ್ಲೆಯ ಮೊದಲ ಕೊರೊನಾ ಪ್ರಕರಣದ ಯುವಕ, ಡಿಸ್ಚಾರ್ಜ್ ಆಗಿ ಮನೆಗೆ  

Monday, April 6th, 2020
Corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮ ಕರೋನಾ ಪ್ರಕರಣ ವರದಿಯಾಗಿದ್ದ ಭಟ್ಕಳದ ಯುವಕ ಸಂಪೂರ್ಣಗುಣಮುಖನಾಗಿ ಸೋಮವಾರ ಮುಂಜಾನೆ ತನ್ನ ಊರಿಗೆ ತೆರಳಿದರು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಈ ಯುವಕನು ಮಾರ್ಚ್ 19 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದನು. ಅಲ್ಲಿತಪಾಸಣೆ ಸಂದರ್ಭರೋಗ ಲಕ್ಷಣಗಳಿರುವುದು ಪತ್ತೆಯಾದ ಹಿನ್ನೆಲೆಯಲ್ಲಿಅಲ್ಲಿಂದಲೇ ಆಂಬುಲೆನ್ಸ್  ನಲ್ಲಿ  ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವಕನ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿ, ಮಾ.22 ರಂದು ಕರೋನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಬಳಿಕ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಷನ್ ವಾರ್ಡ್ ಮಾಡಿ […]