ಗೆಳತಿಯ ಜೊತೆ ತೆರಳಿ ನಾಪತ್ತೆಯಾಗಿದ್ದ ಯುವತಿ ಪ್ರಿಯಕರನೊಂದಿಗೆ ಪತ್ತೆ

Monday, June 15th, 2020
kiran

ವಿಟ್ಲ : ಇತ್ತೀಚೆಗೆ ಪೆರುವಾಯಿ ಗ್ರಾಮದ ಕಂಬಕೋಡಿ ಮನೆಯಿಂದ ತನ್ನ ಸ್ನೇಹಿತೆಯೊಂದಿಗೆ ತೆರಳಿ ನಾಪತ್ತೆಯಾಗಿದ್ದ ಯುವತಿ  ಪ್ರಿಯಕರನ ಜತೆ ಬೆಂಗಳೂರಿನಲ್ಲಿ ಮದುವೆಯಾಗಿದ್ದಾಳೆ ಎಂಬ ಮಾಹಿತಿ ವಿಟ್ಲ ಪೊಲೀಸರಿಗೆ ಲಭ್ಯವಾಗಿದೆ. ಪೆರುವಾಯಿ ಗ್ರಾಮದ ಕಂಬಕೋಡಿ ನಿವಾಸಿಯಾಗಿರುವ ಯುವತಿಯನ್ನು ಮೇ 29ರಂದು ಆಕೆಯ ಸ್ನೇಹಿತೆ ಕರೆದುಕೊಂಡು ತೆರಳಿದ್ದಳು. ಬಳಿಕ ಆಕೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ತಂದೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ನಾಪತ್ತೆ ಪ್ರಕರಣದ ಬೆನ್ನು ಬಿದ್ದಿದ್ದರು. ನಿರಂತರ ಸೋಧ ನಡೆಸಿದ ಬಳಿಕ ಇದೀಗ […]

ಸ್ನೇಹಿತೆ ಜೊತೆ ಹೊರಟ 23 ವರ್ಷದ ಯುವತಿ ನಾಪತ್ತೆ

Tuesday, June 9th, 2020
Vitla

ವಿಟ್ಲ : ಸ್ನೇಹಿತೆ ಜೊತೆ ಹೊರಟ 23 ವರ್ಷದ ಯುವತಿಯೊಬ್ಬಳು ಮನೆಗೆ ಬಾರದೇ ನಾಪತ್ತೆಯಾಗಿರುವ  ಘಟನೆ  ವಿಟ್ಲ ಪೊಲೀಸ್ ಠಾಣೆ ಯ ವ್ಯಾಪ್ತಿಯಲ್ಲಿ ನಡೆದಿದೆ . ಪೆರುವಾಯಿ ಗ್ರಾಮದ ಕಂಬಕೋಡಿ ನಿವಾಸಿ 23 ವರ್ಷದ ಯುವತಿ ನಾಪತ್ತೆಯಾದವಳು. ಮೇ 29ರಂದು ಆಕೆಯ ಸ್ನೇಹಿತೆ ಕರೆದುಕೊಂಡು ಹೋಗಿದ್ದಳು ಎನ್ನಲಾಗಿದೆ. ಬಳಿಕ ಮಧ್ಯಾಹ್ನ ಮನೆಗೆ ಕರೆ ಮಾಡಿ ಸ್ನೇಹಿತೆ ನನ್ನ ಜತೆ ಬಂದಿದ್ದಾಳೆ. ಮೂರು ದಿನದ ಬಳಿಕ ಕಳುಹಿಸಿಕೊಡುತ್ತೇನೆ ಎಂದು ತಿಳಿಸಿದ್ದಳು. ಆಕೆ ಮನೆಗೆ ಹಿಂದಿರುಗಿ ಬಂದಿಲ್ಲ ಎಂದು ಆಕೆಯ ತಂದೆ […]